- 1 ಆಗ ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟು ಹೇಳಿದ್ದೇನಂದರೆ--
- 2 ಜ್ಞಾನಿಯು ವ್ಯರ್ಥ ತಿಳುವಳಿಕೆಯನ್ನು ನುಡಿದು ಮೂಡಣದ ಗಾಳಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವದು ಉಂಟೋ?
- 3 ನಿಷ್ಪ್ರಯೋಜನವಾದ ನುಡಿಗಳಿಂದಲೂ ಕೆಲಸಕ್ಕೆ ಬಾರದ ಮಾತುಗಳಿಂದಲೂ ವಾದಿಸುವನೋ?
- 4 ಹೌದು, ನೀನು ಭಯವನ್ನು ವಿಸರ್ಜಿಸಿ ದೇವರ ಮುಂದಿನ ಧ್ಯಾನವನ್ನು ಕಡಿಮೆಮಾಡುತ್ತೀ.
- 5 ನಿನ್ನ ಬಾಯಿ ನಿನ್ನ ಅಕ್ರಮವನ್ನು ಬೋಧಿಸುತ್ತದೆ; ನೀನು ಕುಯುಕ್ತಿಯುಳ್ಳವರ ನಾಲಿಗೆಯನ್ನು ಆದುಕೊಳ್ಳುತ್ತೀ.
- 6 ನಾನಲ್ಲ, ನಿನ್ನ ಬಾಯಿ ಖಂಡಿಸುತ್ತದೆ; ಹೌದು, ನಿನ್ನ ತುಟಿಗಳು ನಿನಗೆ ವಿರೋಧವಾಗಿ ಸಾಕ್ಷಿ ಕೊಡುತ್ತವೆ.
- 7 ನೀನು ಮೊದಲನೆಯ ಮನುಷ್ಯನಾಗಿ ಹುಟ್ಟಿ ದ್ದೀಯೋ? ಗುಡ್ಡಗಳಿಗಿಂತ ಮುಂಚೆ ಉಂಟಾದಿಯೋ?
- 8 ದೇವರ ಗುಟ್ಟನ್ನು ಕೇಳಿದ್ದೀಯೋ? ಜ್ಞಾನವನ್ನು ನಿನಗೆ ನೀನೇ ಇಟ್ಟುಕೊಂಡಿದ್ದೀಯೋ?
- 9 ನಮಗೆ ತಿಳಿಯದೆ ಇರುವದನ್ನು ನೀನು ಏನು ತಿಳುಕೊಂಡಿರುವಿ? ನಮ್ಮಲ್ಲಿ ಇಲ್ಲದ್ದೇನು ಗ್ರಹಿಸಿದಿ?
- 10 ನೆರೆಯವರೂ ಬಹಳ ಮುದುಕರೂ ನಿನ್ನ ತಂದೆಗಿಂತ ಬಹಳ ದೊಡ್ಡವರೂ ನಮ್ಮಲ್ಲಿದ್ದಾರೆ.
- 11 ದೇವರ ಆದರಣೆಗಳು ನಿನಗೆ ಅಲ್ಪವೋ? ಗುಪ್ತವಾದದ್ದು ನಿನಗೆ ಏನಾದರೂ ಇದೆಯೋ?
- 12 ನಿನ್ನ ಹೃದಯವು ನಿನ್ನನ್ನು ಒಯ್ಯುವದು ಯಾಕೆ? ಯಾಕೆ ನಿನ್ನ ಕಣ್ಣುಗಳು ಮಿಟಿಕಿಸುವದು?
- 13 ದೇವರಿಗೆ ವಿರೋಧವಾಗಿ ನಿನ್ನ ಆತ್ಮವನ್ನು ತಿರುಗಿಸಿ ನಿನ್ನ ಬಾಯೊಳಗಿಂದ ಮಾತುಗಳನ್ನು ಹೊರಡಿಸುತ್ತೀ ಯಲ್ಲಾ.
- 14 ನಿರ್ಮಲನಾಗುವ ಹಾಗೆ ಮನುಷ್ಯನು ಎಷ್ಟರವನು? ನೀತಿವಂತನಾಗಿರುವ ಹಾಗೆ ಸ್ತ್ರೀಯಿಂದ ಹುಟ್ಟಿದವನು ಯಾರು?
- 15 ಇಗೋ, ತನ್ನ ಪರಿಶುದ್ಧರಲ್ಲಿ ಆತನು ನಂಬಿಕೆ ಇಡುವದಿಲ್ಲ; ಹೌದು, ಆಕಾಶಗಳು ಆತನ ದೃಷ್ಟಿಯಲ್ಲಿ ನಿರ್ಮಲವಲ್ಲ.
- 16 ನೀರಿನಂತೆ ಅನ್ಯಾಯವನ್ನು ಕುಡಿಯುವ ಮನುಷ್ಯನು ಎಷ್ಟು ಹೆಚ್ಚಾಗಿ ಕೆಟ್ಟು ಅಸಹ್ಯವಾಗಿಯೂ ಮಲೀನನಾದವನಾಗಿಯೂ ಇದ್ದಾನಲ್ಲಾ!
- 17 ನಾನು ನಿನಗೆ ತೋರಿಸುತ್ತೇನೆ, ನನ್ನನ್ನು ಕೇಳು; ನಾನು ನೋಡಿದ್ದನ್ನು ನಿನಗೆ ವಿವರಿಸುತ್ತೇನೆ.
- 18 ಜ್ಞಾನಿಗಳು ತಮ್ಮ ಹಿರಿಯರ ಕಾಲದಿಂದ ಅದನ್ನು ಮರೆ ಮಾಡದೆ ತಿಳಿಸಿದರು.
- 19 ಅವರಿಗೆ ಮಾತ್ರ ಭೂಮಿಯು ಕೊಡಲ್ಪಟ್ಟಿತು; ಅವರ ಮಧ್ಯದಲ್ಲಿ ಪರನು ದಾಟಲಿಲ್ಲ.
- 20 ದುಷ್ಟನು ತನ್ನ ದಿವಸಗಳಲ್ಲೆಲ್ಲಾ ವೇದನೆ ಪಡು ತ್ತಾನೆ; ವರುಷಗಳ ಲೆಕ್ಕವು ಬಲಾತ್ಕಾರಿಗೆ ಮರೆಯಾಗಿದೆ.
- 21 ಭಯಂಕರವಾದ ಶಬ್ದ ಅವನ ಕಿವಿಗಳಲ್ಲಿ ಅದೆ; ವೃದ್ಧಿಯಲ್ಲಿರುವಾಗ ಹಾಳುಮಾಡುವವನು ಅವನ ಮೇಲೆ ಬರುತ್ತಾನೆ.
- 22 ಕತ್ತಲೆಯೊಳಗಿಂದ ಹಿಂದಿರುಗು ತ್ತೇನೆಂದು ಅವನು ನಂಬುವದಿಲ್ಲ; ಅವನ ಕತ್ತಿಯು ಅವನಿಗಾಗಿ ಕಾದಿದೆ.
- 23 ಅವನು ರೊಟ್ಟಿಗೊಸ್ಕರ ಅದು ಎಲ್ಲಿ ಎಂದು ಅಲೆಯುತ್ತಾನೆ; ಕತ್ತಲೆಯ ದಿನ ತನ್ನ ಕೈ ಹತ್ತಿರ ಸಿದ್ಧವಾಗಿದೆ ಎಂದು ತಿಳಿದಿದ್ದಾನೆ.
- 24 ಇಕ್ಕಟ್ಟೂ ಸಂಕಟವೂ ಅವನನ್ನು ಹೆದರಿಸಿ, ಯುದ್ದಕ್ಕೆ ಸಿದ್ಧವಾದ ಅರಸನಂತೆ ಅವನ ಮೇಲೆ ಬೀಳುತ್ತವೆ.
- 25 ದೇವ ರಿಗೆ ವಿರೋಧವಾಗಿ ತನ್ನ ಕೈಚಾಚಿ, ಸರ್ವಶಕ್ತನಿಗೆ ವಿರೋಧವಾಗಿ ಬಲಗೊಂಡಿದ್ದಾನೆ.
- 26 ಅವನೆದುರಿಗೆ ಕುತ್ತಿಗೆಯಿಂದಲೂ ತನ್ನ ಗುರಾಣಿಯ ದಪ್ಪವಾದ ಗುಬ್ಬಿಯಿಂದಲೂ ಓಡುತ್ತಾನೆ.
- 27 ತನ್ನ ಮುಖವನ್ನು ಕೊಬ್ಬಿನಿಂದ ಮುಚ್ಚಿಕೊಂಡು, ತನ್ನ ನಡುವಿನ ಮೇಲೆ ಬೊಜ್ಜನ್ನು ಕಟ್ಟಿಕೊಂಡಿದ್ದಾನೆ.
- 28 ಹಾಳಾದ ಪಟ್ಟಣ ಗಳಲ್ಲಿಯೂ ನಿವಾಸಿಗಳು ಇಲ್ಲದಂಥ ದಿಬ್ಬೆಗಳಾ ಗುವದಕ್ಕೆ ಸಿದ್ಧವಾದಂಥ ಮನೆಗಳಲ್ಲಿಯೂ ವಾಸ ಮಾಡುತ್ತಾನೆ.
- 29 ಅವನು ಐಶ್ವರ್ಯವಂತನಾಗುವದಿಲ್ಲ; ಅವನ ಆಸ್ತಿ ನಿಲ್ಲುವದಿಲ್ಲ; ಅವನ ಸ್ವಾಸ್ಥ್ಯವು ಭೂಮಿಯ ಮೇಲೆ ವಿಸ್ತಾರವಾಗುವದಿಲ್ಲ.
- 30 ಕತ್ತಲೆಯೊಳಗಿಂದ ಅವನು ತೊಲಗುವದಿಲ್ಲ; ಅವನ ಕೊಂಬೆಗಳನ್ನು ಜ್ವಾಲೆಯು ಬಾಡಿಸುವದು; ಅವನ ಬಾಯಿಯ ಶ್ವಾಸ ದಿಂದ ತೊಲಗಿ ಹೋಗುತ್ತಾನೆ.
- 31 ಮೋಸ ಹೋದ ವನು ವ್ಯರ್ಥತ್ವವನ್ನು ನಂಬದೇ ಇರಲಿ; ವ್ಯರ್ಥತ್ವವೇ ಅವನ ಪ್ರತಿಫಲವಾಗಿರುವದು.
- 32 ಅವನ ಸಮಯಕ್ಕೆ ಮುಂಚೆಯೇ ಅದು ತೀರುವದು; ಅವನ ಕೊಂಬೆಯು ಹಸಿರಾಗುವದಿಲ್ಲ.
- 33 ಹಣ್ಣಾಗದ ದ್ರಾಕ್ಷೆಯ ಗಿಡದಂತೆ ತನ್ನ ಕಾಯಿ ಉದುರಿಸಿ ಎಣ್ಣೆಯ ಮರದಂತೆ ತನ್ನ ಹೂವನ್ನು ಚದರಿಸುವನು.
- 34 ಕಪಟಿಗಳ ಸಭೆಯು ಹಾಳಾಗುವದು; ಲಂಚದ ಗುಡಾರಗಳನ್ನು ಬೆಂಕಿಯು ಸುಡುವದು.
- 35 ಅವರು ಕೇಡಿನಿಂದ ಬಸುರಾಗಿ ವ್ಯರ್ಥತ್ವ ವನ್ನು ಹೆರುವರು; ಅವರ ಗರ್ಭವು ಮೋಸವನ್ನು ಸಿದ್ಧಮಾಡುವದು.
Job 15
- Details
- Parent Category: Old Testament
- Category: Job
ಯೋಬನು ಅಧ್ಯಾಯ 15