- 1 ಯೋಬನು ಉತ್ತರಕೊಟ್ಟು ಹೇಳಿದ್ದೇನಂದರೆ--
- 2 ಈಹೊತ್ತೇ ನನ್ನ ದೂರು ಕಹಿಯಾಗಿದೆ; ನನ್ನ ಏಟು ನನ್ನ ನಿಟ್ಟುಸುರಿಗಿಂತ ಭಾರವಾಗಿದೆ.
- 3 ನಾನು ತಿಳಿದುಕೊಂಡು ಆತನನ್ನು ಕಂಡುಕೊಂಡರೆ ಎಷ್ಟೋ ಒಳ್ಳೇದು! ಆತನ ಪೀಠದ ತನಕ ಬರುವೆನು.
- 4 ನ್ಯಾಯವನ್ನು ಆತನ ಮುಂದೆ ಸಿದ್ಧಮಾಡುವೆನು; ನನ್ನ ಬಾಯನ್ನು ಪ್ರತಿವಾದಗಳಿಂದ ತುಂಬಿಸುವೆನು.
- 5 ಆತನು ನನಗೆ ಪ್ರತ್ಯುತ್ತರವಾಗಿ ಕೊಡುವ ಮಾತುಗಳನ್ನು ತಿಳಿದು ಆತನು ಹೇಳುವದನ್ನು ಗ್ರಹಿಸುವೆನು.
- 6 ಬಹು ಶಕ್ತಿಯಿಂದ ನನ್ನ ಸಂಗಡ ಆತನು ವಾದಿಸುವನೋ? ಇಲ್ಲ, ನನ್ನಲ್ಲಿ ಆತನು ಶಕ್ತಿ ಇಡುವನು.
- 7 ಅಲ್ಲಿ ನೀತಿವಂತನು ಅವನ ಸಂಗಡ ತರ್ಕ ಮಾಡುವನು; ನಾನು ನಿತ್ಯವಾಗಿ ನನ್ನ ನ್ಯಾಯಾಧಿಪತಿಗೆ ತಪ್ಪಿಸಿಕೊಳ್ಳುವೆನು.
- 8 ಇಗೋ, ನಾನು ಮುಂದೆ ನಡೆದರೆ ಆತನು ಅಲ್ಲಿ ಇರುವದಿಲ್ಲ; ಹಿಂತಿರುಗಿದರೆ ಆತನನ್ನು ಗ್ರಹಿಸುವದಿಲ್ಲ.
- 9 ಎಡಗಡೆಯಲ್ಲಿ, ಆತನು ಕೆಲಸ ಮಾಡು ವಲ್ಲಿ ಆತನನ್ನು ನೋಡುವದಿಲ್ಲ; ಬಲಗಡೆಯಲ್ಲಿ ಆತನು ಅಡಗಿಸಿಕೊಳ್ಳುತ್ತಾನೆ, ನಾನು ಕಾಣುವದಿಲ್ಲ.
- 10 ಆದರೆ ನಾನು ಹಿಡಿಯುವ ಮಾರ್ಗವನ್ನು ಆತನು ತಿಳಿದಿದ್ದಾನೆ, ನನ್ನನ್ನು ಶೋಧಿಸಿದಾಗ ನಾನು ಬಂಗಾರದ ಹಾಗೆ ಹೊರಗೆ ಬರುವೆನು.
- 11 ಆತನ ಹೆಜ್ಜೆಯನ್ನು ನನ್ನ ಕಾಲು ಹಿಡಿಯಿತು; ಆತನ ಮಾರ್ಗವನ್ನು ನಾನು ತೊಲಗದೆ ನೋಡಿಕೊಂಡೆನು.
- 12 ಆತನ ತುಟಿಗಳ ಆಜ್ಞೆಗೆ ನಾನು ಹಿಂಜರಿಯಲಿಲ್ಲ. ನನ್ನ ಅಗತ್ಯದ ಆಹಾರಕ್ಕಿಂತ ಆತನ ಬಾಯಿಯ ಮಾತುಗಳನ್ನು ಹೆಚ್ಚಾಗಿ ಲಕ್ಷಿಸಿದೆನು.
- 13 ಆದರೆ ಆತನು ಒಂದೇ ಮನಸ್ಸುಳ್ಳವನು, ಆತ ನನ್ನು ತಿರುಗಿಸುವವನ್ಯಾರು? ತನ್ನ ಪ್ರಾಣವು ಅಪೇ ಕ್ಷಿಸುವ ಪ್ರಕಾರವೇ ಮಾಡುತ್ತಾನೆ.
- 14 ನನಗೆ ನೇಮಿಸಿ ದ್ದನ್ನು ಆತನು ಈಡೇರಿಸುತ್ತಾನೆ; ಇವುಗಳಂತೆ ಅನೇಕವು ಆತನಲ್ಲಿ ಅವೆ.
- 15 ಆದದರಿಂದ ಆತನ ಮುಂದೆ ತಲ್ಲಣಪಡುತ್ತೇನೆ; ಗ್ರಹಿಸಿಕೊಂಡು ಆತನಿಗೆ ಭಯ ಪಡುತ್ತೇನೆ.
- 16 ದೇವರು ನನ್ನ ಹೃದಯವನ್ನು ಮೆತ್ತಗೆ ಮಾಡಿದ್ದಾನಲ್ಲಾ; ಸರ್ವಶಕ್ತನು ನನ್ನನ್ನು ತಲ್ಲಣಪಡಿಸಿ ದ್ದಾನಲ್ಲಾ.
- 17 ಕತ್ತಲೆಯ ಮುಂದೆ ನಾನು ಕಡಿಯಲ್ಪಡ ಲಿಲ್ಲ; ಅಂಧಕಾರವನ್ನು ನನ್ನ ಮುಂದೆ ಅಡಗಿಸಿದ್ದಾನೆ.
Job 23
- Details
- Parent Category: Old Testament
- Category: Job
ಯೋಬನು ಅಧ್ಯಾಯ 23