- 1 ಮೊಸಳೆಯನ್ನು ಗಾಳದಿಂದ ಎಳೆಯುವಿಯೋ? ಇಲ್ಲವೆ ಹಗ್ಗದಿಂದ ಅದರ ನಾಲಿಗೆಯನ್ನು ಅದುಮುತ್ತೀಯೋ?
- 2 ಅದರ ಮೂಗಿ ನಲ್ಲಿ ಗಾಳಿ ಇಡುವಿಯೋ? ಅದರ ದವಡೆಯನ್ನು ಮುಳ್ಳಿನಿಂದ ಚುಚ್ಚುವಿಯೋ?
- 3 ಅದು ನಿನಗೆ ಬಹಳ ಬಿನ್ನಹಗಳನ್ನು ಮಾಡುವದೋ? ನಿನ್ನ ಸಂಗಡ ಮೃದು ವಾದ ಮಾತು ಆಡುವದೋ?
- 4 ನಿನ್ನ ಸಂಗಡ ಒಡಂಬಡಿಕೆ ಮಾಡುವದೋ? ಅದನ್ನು ಎಂದೆಂದಿಗೂ ದಾಸನಾಗಿ ತಕ್ಕೊಳ್ಳುವಿಯೋ?
- 5 ಪಕ್ಷಿಯ ಹಾಗೆ ಅದರ ಸಂಗಡ ಆಡುವಿಯೋ ? ನಿನ್ನ ಹುಡುಗಿಯರಿಗೋಸ್ಕರ ಅದನ್ನು ಕಟ್ಟಿಹಾಕುವಿಯೋ?
- 6 ಜತೆಯವರು ಅದನ್ನು ಔತಣ ಮಾಡುವರೋ? ಅವರು ಅದನ್ನು ವರ್ತಕ ರಲ್ಲಿ ಪಾಲಿಡುವರೋ?
- 7 ಅದರ ತೊಗಲನ್ನು ಮುಳ್ಳು ಗಳಿಂದ, ಅದರ ತಲೆಯನ್ನು ವಿಾನುಗಾರರ ಬಲೆ ಯಿಂದ ತುಂಬುವಿಯೋ?
- 8 ಅದರ ಮೇಲೆ ನಿನ್ನ ಕೈಹಾಕು; ಯುದ್ಧವನ್ನು ನೆನಸಿಕೋ, ಹೆಚ್ಚಿನದೇನೂ ಮಾಡಬೇಡ.
- 9 ಇಗೋ, ಅದರ ವಿಷಯವಾದ ನಿರೀ ಕ್ಷೆಯು ವ್ಯರ್ಥವಾದದ್ದು. ಅದನ್ನು ನೋಡುತ್ತಲೇ ಕೆಡವಲ್ಪಡುತ್ತಾನಲ್ಲಾ.
- 10 ಅದನ್ನು ಕದಲಿಸುವ ಹಾಗೆ ಕಠಿಣನು ಇಲ್ಲ. ಹಾಗಾದರೆ ನನ್ನ ಮುಂದೆ ನಿಂತು ಕೊಳ್ಳುವ ಹಾಗೆ ಯಾರು ಶಕ್ತರು?
- 11 ನಾನು ತಿರುಗಿ ಕೊಡುವ ಹಾಗೆ ಮೊದಲು ನನಗೆ ಕೊಟ್ಟವನಾರು? ಆಕಾಶದ ಕೆಳಗೆ ಇರುವಂಥದೆಲ್ಲಾ ನನ್ನದೇ.
- 12 ನಾನು ಅದರ ಭಾಗಗಳನ್ನೂ ತ್ರಾಣವನ್ನೂ ಸನ್ನಾಹದ ಸೊಬಗನ್ನೂ ಮುಚ್ಚುವದಿಲ್ಲ.
- 13 ಅದರ ಮೇಲಿನ ವಸ್ತ್ರವನ್ನು ತೆರೆಯುವವನಾರು? ಅದರ ಎರಡರಷ್ಟು ಕಡಿವಾಣದೊಂದಿಗೆ ಅದರ ಬಳಿಗೆ ಬರು ವದಕ್ಕೆ ಯಾರು ಶಕ್ತರು?
- 14 ಅದರ ಮುಖದ ಕದ ಗಳನ್ನು ತೆಗೆಯುವವನಾರು? ಅದರ ಹಲ್ಲುಗಳು ಸುತ್ತಲೂ ಭಯಂಕರವಾಗಿವೆ.
- 15 ಬಲವಾದ ಅದರ ಗುರಾಣಿಗಳು ಅದರ ಗರ್ವವಾಗಿವೆ; ಬತ್ತಿದ ಮುದ್ರೆಯ ಹಾಗೆ ಬಿಗಿದವೆ.
- 16 ಅವು ಒಂದಕ್ಕೊಂದು ಹೊಂದಿ ಕೊಂಡಿವೆ; ಗಾಳಿಯಾದರೂ ಅವುಗಳ ಮಧ್ಯದಲ್ಲಿ ಸೇರುವದಿಲ್ಲ.
- 17 ಒಂದಕ್ಕೊಂದು ಅಂಟುತ್ತವೆ; ಹಿಡು ಕೊಂಡು ಪ್ರತ್ಯೇಕವಾಗುವದಿಲ್ಲ;
- 18 ಅದರ ಸೀನು ವಿಕೆಯಿಂದ ಬೆಳಕು ಹುಟ್ಟುವದು; ಅದರ ಕಣ್ಣುಗಳು ಉದಯದ ರೆಪ್ಪೆಗಳ ಹಾಗೆ ಇವೆ.
- 19 ಅದರ ಬಾಯಿಂದ ಉರಿಯುವ ದೀಪಗಳು ಹೊರಡುತ್ತವೆ; ಬೆಂಕಿಯ ಕಿಡಿಗಳು ಹಾರುತ್ತವೆ.
- 20 ಕುದಿಯುವ ಗಡಿಗೆಯೊಳ ಗಿಂದಲೂ ಕೊಪ್ಪರಿಗೆಯೊಳಗಿಂದಲೂ ಆದ ಹಾಗೆ ಅದರ ಮೂಗಿನೊಳಗಿಂದ ಹೊಗೆ ಹಾಯುವದು.
- 21 ಅದರ ಶ್ವಾಸವು ಕೆಂಡಗಳನ್ನು ಹೊತ್ತಿಸುವದು; ಜ್ವಾಲೆಯು ಅದರ ಬಾಯಿಯೊಳಗಿಂದ ಹೊರಡು ವದು.
- 22 ಅದರ ಕುತ್ತಿಗೆಯಲ್ಲಿ ಬಲವು ವಾಸಿಸುವದು; ಅದರ ಮುಂದೆ ದುಃಖವು ಸಂತೋಷಕ್ಕೆ ಮಾರ್ಪ ಡುವದು.
- 23 ಅದರ ಮಾಂಸದ ಖಂಡಗಳು ಒಟ್ಟಾಗಿ ಕೂಡಿಕೊಂಡಿವೆ; ಅವು ಸ್ಥಿರವಾಗಿದ್ದು ಕದಲಲಾರವು.
- 24 ಅದರ ಹೃದಯವು ಕಲ್ಲಿನ ಹಾಗೆಯೂ ಹೌದು, ಬೀಸುವ ಕಲ್ಲಿನ ಅಡಿಯ ಹಾಗೆಯೂ ಕಠಿಣವಾಗಿದೆ.
- 25 ಅದು ಏಳುವಾಗ ಹೆದರುತ್ತಾರೆ; ಮುರಿಯುವ ಕಾರಣದಿಂದ ಅವರು ತಮ್ಮನ್ನು ಶುದ್ಧಿಮಾಡಿಕೊಳ್ಳು ತ್ತಾರೆ.
- 26 ಅದರ ಬಳಿಯಲ್ಲಿ ಇಟ್ಟಿರುವ ಅದರ ಖಡ್ಗವು ಹಿಡಿಯಲಾರದು; ಈಟಿಯೂ ಬಾಣವೂ ಕವಚವೂ ನಿಲ್ಲವು,
- 27 ಕಬ್ಬಿಣವು ಹುಲ್ಲೆಂದೂ ಹಿತ್ತಾಳೆಯು ಕೊಳೆತ ಕಟ್ಟಿಗೆ ಎಂದೂ ಅದು ಎಣಿಸುವದು.
- 28 ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಹುಲ್ಲಿನ ಹಾಗೆ ಆಗುತ್ತವೆ.
- 29 ಬಾಣಗಳು ಹುಲ್ಲಿನ ಹಾಗೆ ಎಣಿಸಲ್ಪಟ್ಟಿವೆ; ಭರ್ಚಿ ಕದಲಿದರೆ ಅದು ನಗುವದು.
- 30 ಅದರ ಅಡಿ ಯಲ್ಲಿ ಹದವಾದ ಹರಳುಗಳು ಅವೆ; ಕೆಸರಿನ ಮೇಲೆ ಚೂಪಾದ ಮತ್ತು ಹದವಾದ ಕೋಲನ್ನು ಹರಡಿಸು ತ್ತದೆ.
- 31 ಆಳವಾದ ನೀರನ್ನು ಗಡಿಗೆಯ ಹಾಗೆ ಕುದಿಯ ಮಾಡುತ್ತದೆ, ಸಮುದ್ರವನ್ನು ತೈಲದ ಪಾತ್ರೆಯ ಹಾಗೆ ಮಾಡುತ್ತದೆ.
- 32 ತನ್ನ ಹಿಂದೆ ಹಾದಿ ಬೆಳಗುವಂತೆ ಅದು ಮಾಡುತ್ತದೆ. ಅಗಾಧವು ನರೆ ಕೂದಲಿನ ಹಾಗೆ ಇರುವದೆಂದು ಒಬ್ಬನು ಯೋಚಿಸುತ್ತಾನೆ.
- 33 ಭೂಮಿ ಯ ಮೇಲೆ ಅದಕ್ಕೆ ಸಮಾನವಾದದ್ದು ಇಲ್ಲ; ಅದು ಭಯವಿಲ್ಲದೆ ಇರುವದಕ್ಕಾಗಿ ಮಾಡಿದ್ದು.
- 34 ಉನ್ನತ ವಾದದ್ದನ್ನೆಲ್ಲಾ ಅದು ನೋಡುವದು; ಗರ್ವದ ಮಕ್ಕಳೆಲ್ಲರ ಮೇಲೆ ಅದು ಅರಸನಾಗಿದೆ ಅಂದನು.
Job 41
- Details
- Parent Category: Old Testament
- Category: Job
ಯೋಬನು ಅಧ್ಯಾಯ 41