wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


Joelಅಧ್ಯಾಯ 1
  • 1 ಪೆತೂವೇಲನ ಮಗನಾದ ಯೋವೇಲನಿಗೆ ಬಂದ ಕರ್ತನ ವಾಕ್ಯವು.
  • 2 ವೃದ್ಧರೇ, ಕೇಳಿರಿ! ದೇಶನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ; ಇದು ನಿಮ್ಮ ದಿವಸಗಳಲ್ಲಾದರೂ ನಿಮ್ಮ ತಂದೆಗಳ ದಿವಸಗಳಲ್ಲಾದರೂ ಉಂಟಾಯಿತೋ?
  • 3 ಇದರ ವಿಷಯವನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, ನಿಮ್ಮ ಮಕ್ಕಳು ತಮ್ಮ ಮಕ್ಕಳಿಗೂ ಅವರ ಮಕ್ಕಳು ಮತ್ತೊಂದು ತಲಾಂತರಕ್ಕೂ ತಿಳಿಸಲಿ.
  • 4 ಹುಳವು ಉಳಿಸಿದ್ದನ್ನು ಮಿಡತೆ ತಿಂದುಬಿಟ್ಟಿದೆ; ಮಿಡತೆ ಉಳಿಸಿದ್ದನ್ನು ಒಳಗೆ ನಾಶ ಮಾಡುವ ಹುಳವು ತಿಂದುಬಿಟ್ಟಿದೆ; ಅದು ಉಳಿಸಿದ್ದನ್ನು ಕಂಬಳಿ ಹುಳವು ತಿಂದುಬಿಟ್ಟಿದೆ.
  • 5 ಅಮಲೇರಿದವರೇ, ನೀವು ಎಚ್ಚತ್ತು ಅಳಿರಿ; ದ್ರಾಕ್ಷಾರಸ ಕುಡಿಯುವವರೆಲ್ಲರೇ, ಹೊಸ ದ್ರಾಕ್ಷಾ ರಸದ ನಿಮಿತ್ತ ಗೋಳಾಡಿರಿ; ಅದು ನಿಮ್ಮ ಬಾಯಿ ಯೊಳಗಿಂದ ತೆಗೆಯಲ್ಪಟ್ಟಿದೆ.
  • 6 ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು; ಅದು ಬಲವಾದದ್ದೂ ಲೆಕ್ಕವಿಲ್ಲದ್ದೂ; ಅದರ ಹಲ್ಲುಗಳು ಸಿಂಹದ ಹಲ್ಲುಗಳು, ದೊಡ್ಡ ಸಿಂಹದ ದವಡೆ ಹಲ್ಲುಗಳು ಅದಕ್ಕೆ ಉಂಟು.
  • 7 ಅದು ನನ್ನ ದ್ರಾಕ್ಷೇ ಬಳ್ಳಿಯನ್ನು ಹಾಳುಮಾಡಿ ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ; ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ; ಅದರ ಕೊಂಬೆ ಗಳು ಬಿಳುಪಾದವು.
  • 8 ಯೌವನದ ಗಂಡನಿಗೋಸ್ಕರ ಗೋಣೀತಟ್ಟು ಧರಿಸಿದ ಕನ್ಯೆಯ ಹಾಗೆ ಪ್ರಲಾಪಿಸು.
  • 9 ಆಹಾರ ದರ್ಪಣೆಯೂ ಪಾನಾರ್ಪಣೆಯೂ ಕರ್ತನ ಆಲಯದೊಳಗಿಂದ ತೆಗೆಯಲ್ಪಟ್ಟಿವೆ; ಕರ್ತನ ಸೇವಕ ರಾದ ಯಾಜಕರು ಗೋಳಾಡುತ್ತಾರೆ.
  • 10 ಹೊಲವು ಹಾಳಾಗಿದೆ; ಭೂಮಿಯು ಗೋಳಾಡುತ್ತದೆ; ಧಾನ್ಯವು ಹಾಳಾಗಿದೆ; ಹೊಸ ದ್ರಾಕ್ಷಾರಸವು ಒಣಗಿದೆ; ಎಣ್ಣೆ ಬಾಡಿಹೋಗಿದೆ.
  • 11 ಓ ಒಕ್ಕಲಿಗರೇ, ನಾಚಿಕೆಪಡಿರಿ; ಗೋಧಿ, ಜವೆ ಗೋಧಿಗಳ ನಿಮಿತ್ತ ದ್ರಾಕ್ಷೇ ತೋಟದವರೇ, ಗೋಳಾ ಡಿರಿ; ಹೊಲದ ಪೈರು ನಾಶವಾಯಿತು.
  • 12 ದ್ರಾಕ್ಷೇ ಬಳ್ಳಿ ಒಣಗಿಹೋಗಿದೆ; ಅಂಜೂರದಮರ ಬಾಡಿ ಹೋಗಿದೆ; ದಾಳಿಂಬರದಗಿಡವೂ ಖರ್ಜೂರದ ಗಿಡವೂ ಸೇಬು ಗಿಡವೂ ಹೊಲದ ಮರಗಳೆಲ್ಲವೂ ಒಣಗಿಹೋಗಿವೆ; ಸಂತೋಷವು ಮನುಷ್ಯರ ಪುತ್ರರನ್ನು ಬಿಟ್ಟು ಒಣಗಿಹೋಗಿದೆ.
  • 13 ಯಾಜಕರೇ, ನಿಮ್ಮ ನಡುಕಟ್ಟಿಕೊಂಡು ಗೋಳಾ ಡಿರಿ; ಬಲಿಪೀಠದ ಸೇವಕರೇ, ಗೋಳಾಡಿರಿ; ನನ್ನ ದೇವರ ಸೇವಕರೇ, ಬಂದು ಗೋಣೀತಟ್ಟಿನಲ್ಲಿ ರಾತ್ರಿ ಯೆಲ್ಲಾ ಮಲಗಿರಿ, ಯಾಕಂದರೆ ಆಹಾರದರ್ಪಣೆಯೂ ಪಾನ ದರ್ಪಣೆಯೂ ನಿಮ್ಮ ದೇವರ ಆಲಯದಿಂದ ಹಿಂತೆಗೆಯಲ್ಪಟ್ಟಿವೆ.
  • 14 ಉಪವಾಸವನ್ನು ಪರಿಶುದ್ಧ ಮಾಡಿರಿ; ಪವಿತ್ರ ಸಂಘವನ್ನು ಕರೆಯಿರಿ; ಹಿರಿಯ ರನ್ನೂ ದೇಶದ ನಿವಾಸಿಗಳೆಲ್ಲರನ್ನೂ ನಿಮ್ಮ ದೇವರಾದ ಕರ್ತನ ಆಲಯದಲ್ಲಿ ಕೂಡಿಸಿ ಕರ್ತನಿಗೆ ಮೊರೆಯಿ ಡಿರಿ.
  • 15 ಆ ದಿನಕ್ಕಾಗಿ ಅಯ್ಯೋ, ಯಾಕಂದರೆ ಕರ್ತನ ದಿನವು ಸವಿಾಪವಾಗಿದೆ; ಸರ್ವಶಕ್ತನ ಕಡೆಯಿಂದ ನಾಶದಂತೆ ಬರುತ್ತದೆ.
  • 16 ನಮ್ಮ ಕಣ್ಣುಗಳ ಮುಂದೆ ಆಹಾರವೂ ನಮ್ಮ ದೇವರ ಆಲಯದಿಂದ ಸಂತೋ ಷವೂ ಉಲ್ಲಾಸವೂ ತೆಗೆಯಲ್ಪಟ್ಟಿವೆಯಲ್ಲವೋ?
  • 17 ಬೀಜವು ಅವರ ಹೆಂಟೆಗಳ ಕೆಳಗೆ ಕೆಟ್ಟುಹೋಗಿದೆ; ಉಗ್ರಾಣಗಳು ನಾಶವಾಗಿವೆ; ಕಣಜಗಳು ಕೆಡವಲ್ಪ ಟ್ಟಿವೆ; ಧಾನ್ಯವು ಒಣಗಿದೆ.
  • 18 ಪಶುಗಳು ಎಷ್ಟೋ ಮುಲುಗುತ್ತವೆ; ದನದ ಹಿಂಡುಗಳು ಕಳವಳಗೊಂಡಿವೆ; ಅವಕ್ಕೆ ಮೇವು ಇಲ್ಲ; ಕುರಿಮಂದೆಗಳು ಸಹ ನಾಶ ವಾಗುತ್ತವೆ.
  • 19 ಓ ಕರ್ತನೇ, ನಿನಗೆ ನಾನು ಮೊರೆಯಿಡುತ್ತೇನೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ನುಂಗಿಬಿಟ್ಟಿದೆ; ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿದೆ.
  • 20 ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ಹೂಂಕರಿಸುತ್ತವೆ; ನೀರಿನ ಹೊಳೆಗಳು ಬತ್ತಿ ಹೋಗಿವೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ದಹಿಸಿಬಿಟ್ಟಿದೆ.