wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಯೆಹೋಶುವಅಧ್ಯಾಯ 12
  • 1 ಯೊರ್ದನಿಗೆ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್‌ ನದಿಯಿಂದ ಹೆರ್ಮೋನ್‌ ಬೆಟ್ಟದ ವರೆಗೂ ಮೂಡಣ ಬೈಲಿನ ಎಲ್ಲಾದರಲ್ಲಿಯೂ ಇಸ್ರಾಯೇಲ್‌ ಮಕ್ಕಳು ಅವರನ್ನು ಹೊಡೆದು ಸ್ವಾಧೀನ ಪಡಿಸಿಕೊಂಡ ದೇಶಗಳ ಅರಸರು ಯಾರಂದರೆ:
  • 2 ಅರ್ನೋನ್‌ ನದಿಯ ಮಧ್ಯಭಾಗ, ದಡದ ಬಳಿಯಲ್ಲಿ ಇರುವ ಅರೋಯೇರಿ ನಿಂದಲೂ ಅರ್ಧ ಗಿಲ್ಯಾದಿನಿಂದಲೂ ಅಮ್ಮೋನನ ಮಕ್ಕಳ ಮೇರೆಯಾದ ಯಬ್ಬೋಕ್‌ ನದಿಯ ವರೆಗೆ
  • 3 ಬೈಲಿನಿಂದ ಮೂಡಣದಲ್ಲಿರುವ ಕಿನ್ನೆರೋತ್‌ ಸಮುದ್ರದ ಪರಿಯಂತರ ವರೆಗೂ ಬೇತ್‌ಯೊಷಿ ಮೋತಿನ ಮಾರ್ಗವಾಗಿ ಮೂಡಣದಲ್ಲಿರುವ ಬೈಲಿನ ಉಪ್ಪು ಸಮುದ್ರದ ವರೆಗೂ ಅಷ್ಡೋದ್‌ ಪಿಸ್ಗಾಕ್ಕೆ ಕೆಳಗಾದ ದಕ್ಷಿಣದಿಂದ ಇರುವ ದೇಶವನ್ನು ಆಳಿ ಕೊಂಡಿದ್ದ ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನೂ
  • 4 ಅಷ್ಟರೋತಿನಲ್ಲಿಯೂ ಎದ್ರೈಯಲ್ಲಿ ವಾಸಮಾಡಿ
  • 5 ಹೆರ್ಮೋನ್‌ ಬೆಟ್ಟವನ್ನೂ ಸಲ್ಕಾವನ್ನೂ ಗೆಷೂರ್ಯರ ಮಾಕತೀಯರ ಮೇರೆಯ ವರೆಗೂ ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯಾಗಿದ್ದ ಗಿಲ್ಯಾದಿನ ಅರ್ಧದ ವರೆಗೂ ಇರುವ ಬಾಷಾನೆಲ್ಲಾ ಆಳಿಕೊಂಡಿದ್ದ ರಾಕ್ಷಸರಲ್ಲಿ ಮಿಕ್ಕ ಬಾಷಾನಿನ ಅರಸನಾದ ಓಗನೂ ಇವರೇ.
  • 6 ಇವರನ್ನು ಕರ್ತನ ಸೇವಕನಾದ ಮೋಶೆಯೂ ಇಸ್ರಾಯೇಲ್‌ ಮಕ್ಕಳೂ ಹೊಡೆದು ಬಿಟ್ಟು ಅವರ ದೇಶವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವಾಸ್ತ್ಯವಾಗಿ ಕೊಟ್ಟನು.
  • 7 ಆದರೆ ಯೊರ್ದನಿಗೆ ಪಶ್ಚಿಮದಲ್ಲಿ ಲೆಬನೋ ನಿನ ತಗ್ಗಿನಲ್ಲಿರುವ ಬಾಲಾದ್‌ ಮೊದಲುಗೊಂಡು ಸೇಯಾರಿಗೆ ಏರಿಹೋಗುವ ಹಾಲಾಕ್‌ ಬೆಟ್ಟದ ವರೆಗೆ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಬೈಲಿನಲ್ಲಿಯೂ ನೀರು ಬುಗ್ಗೆಗಳ ಸ್ಥಳಗಳಲ್ಲಿಯೂ
  • 8 ಅರಣ್ಯದಲ್ಲಿಯೂ ದಕ್ಷಿಣದಲ್ಲಿಯೂ ಯೆಹೋಶುವನು ಇಸ್ರಾಯೇಲಿನ ಗೋತ್ರಗಳಿಗೆ ಸ್ವಾಸ್ತ್ಯವಾಗಿ ಪಾಲು ಇಟ್ಟ ದೇಶವಾದಂಥ ಹಿತ್ತಿಯರ ಅಮೋರಿಯರ ಕಾನಾನ್ಯರ ಪೆರಿಜ್ಜೀಯರ ಹಿವ್ವೀಯರ ಯೆಬೂಸಿಯರ ದೇಶದಲ್ಲಿದ್ದ ಯೆಹೋಶು ವನೂ ಇಸ್ರಾಯೇಲ್‌ ಮಕ್ಕಳೂ ಹೊಡೆದುಬಿಟ್ಟ ಅರಸರು ಯಾರಂದರೆ--
  • 9 ಯೆರಿಕೋವಿನ ಅರಸನು ಒಬ್ಬನು; ಬೇತೇಲ್‌ ಬಳಿಯಲ್ಲಿರುವ ಆಯಿಯ ಅರಸನು ಒಬ್ಬನು;
  • 10 ಯೆರೂಸಲೇಮಿನ ಅರಸನು ಒಬ್ಬನು; ಹೆಬ್ರೋನಿನ ಅರಸನು ಒಬ್ಬನು;
  • 11 ಯರ್ಮೂತಿನ ಅರಸನು ಒಬ್ಬನು; ಲಾಕೀಷಿನ ಅರಸನು ಒಬ್ಬನು;
  • 12 ಎಗ್ಲೋನಿನ ಅರಸನು ಒಬ್ಬನು; ಗೆಜೆರಿನ ಅರಸನು ಒಬ್ಬನು;
  • 13 ದೆಬೀರಿನ ಅರಸನು ಒಬ್ಬನು; ಗೆದೆರಿನ ಅರಸನು ಒಬ್ಬನು;
  • 14 ಹೊರ್ಮದ ಅರಸನು ಒಬ್ಬನು; ಅರಾದಿನ ಅರಸನು ಒಬ್ಬನು;
  • 15 ಲಿಬ್ನದ ಅರಸನು ಒಬ್ಬನು; ಅದುಲ್ಲಾಮದ ಅರಸನು ಒಬ್ಬನು;
  • 16 ಮಕ್ಕೇದದ ಅರಸನು ಒಬ್ಬನು; ಬೇತೇಲಿನ ಅರಸನು ಒಬ್ಬನು;
  • 17 ತಪ್ಪೂಹದ ಅರಸನು ಒಬ್ಬನು; ಹೇಫೆರಿನ ಅರಸನು ಒಬ್ಬನು;
  • 18 ಅಫೇಕದ ಅರಸನು ಒಬ್ಬನು; ಲಷ್ಷಾರೋನಿನ ಅರಸನು ಒಬ್ಬನು;
  • 19 ಮಾದೋನಿನ ಅರಸನು ಒಬ್ಬನು; ಹಾಚೋರಿನ ಅರಸನು ಒಬ್ಬನು;
  • 20 ಶಿಮ್ರೋನ್ಮೆರೋನಿನ ಅರಸನು ಒಬ್ಬನು; ಅಕ್ಷಾಫಿನ ಅರಸನು ಒಬ್ಬನು;
  • 21 ತಾನಕದ ಅರಸನು ಒಬ್ಬನು; ಮೆಗಿದ್ದೋವಿನ ಅರಸನು ಒಬ್ಬನು;
  • 22 ಕೆದೆಷಿನ ಅರಸನು ಒಬ್ಬನು; ಕರ್ಮೆಲ್‌ ಬೆಟ್ಟದ ಯೊಕ್ನೆಯಾಮದ ಅರಸನು ಒಬ್ಬನು;
  • 23 ದೋರ್‌ ಪ್ರಾಂತ್ಯದಲ್ಲಿರುವ ದೋರಿನ ಅರಸನು ಒಬ್ಬನು; ಗಿಲ್ಗಾಲಿನ ಜನಾಂಗಗಳ ಅರಸನು ಒಬ್ಬನು;
  • 24 ತಿರ್ಚದ ಅರಸನು ಒಬ್ಬನು; ಒಟ್ಟು ಮೂವತ್ತೊಂದು ಅರಸರುಗಳು.