- 1 ಆಗ ಎಫ್ರಾಯಾಮನ ಮನುಷ್ಯರು ಅವನಿಗೆ--ನೀನು ಮಿದ್ಯಾನ್ಯರ ಮೇಲೆ ಯುದ್ಧ ಮಾಡುವದಕ್ಕೆ ಹೋಗುವಾಗ ನಮ್ಮನ್ನು ಕರೆ ಯದೆ ಹೋದದ್ದೇನೆಂದು ಹೇಳಿ ಅವನ ಸಂಗಡ ತೀಕ್ಷ್ಣವಾಗಿ ವಿವಾದ ಮಾಡಿದರು.
- 2 ಅವನು ಅವರಿಗೆನೀವು ಮಾಡಿದ್ದಕ್ಕೆ ಸಮಾನವಾಗಿ ನಾನೇನು ಮಾಡಿ ದೆನು? ಅಬೀಯೆಜೆರನ ದ್ರಾಕ್ಷೇ ಫಲ ಕೂಡಿಸುವ ದಕ್ಕಿಂತ ಎಫ್ರಾಯಾಮನ ದ್ರಾಕ್ಷೇ ಹಕ್ಕಲು ಉತ್ತಮ ವಲ್ಲವೇ?
- 3 ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ಪ್ರಧಾನರಾದ ಓರೇಬನ್ನೂ ಜೇಬನ್ನೂ ಒಪ್ಪಿಸಿ ಕೊಡ ಲಿಲ್ಲವೇ? ನೀವು ಮಾಡಿದ್ದಕ್ಕೆ ನಾನು ಮಾಡಿದ್ದು ಎಷ್ಟು ಅಂದನು. ಅವನು ಈ ಮಾತು ಹೇಳಿದಾಗ ಅವನ ವಿಷಯವಾಗಿ ಅವರ ಕೋಪವು ಶಾಂತವಾಯಿತು.
- 4 ಗಿದ್ಯೋನನು ಯೊರ್ದನಿಗೆ ಬಂದು ಅದನ್ನು ದಾಟಿ ಅವನೂ ಅವನ ಸಂಗಡ ಇದ್ದ ಮುನ್ನೂರು ಜನರೂ ದಣಿದವರಾಗಿಯೂ ಹಿಂದಟ್ಟುವವರಾಗಿಯೂ ಇದ್ದರು.
- 5 ಅವನು ಸುಖೋತಿನ ಮನುಷ್ಯರಿಗೆ--ದಯಮಾಡಿ ನನ್ನ ಕೂಡ ಇರುವ ಜನರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ. ಅವರು ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸುಗಳಾದ ಜೆಬಹನನ್ನೂ ಚಲ್ಮುನ್ನನನ್ನೂ ಹಿಂದಟ್ಟು ತ್ತೇನೆ ಅಂದನು.
- 6 ಆದರೆ ಸುಖೋತಿನ ಪ್ರಧಾನರು ಅವನಿಗೆ--ನಿನ್ನ ಸೈನ್ಯಕ್ಕೆ ನಾವು ರೊಟ್ಟಿ ಕೊಡುವಂತೆ ಜೆಬಹ ಚಲ್ಮುನ್ನರ ಕೈ ನಿನ್ನ ಕೈ ವಶವಾಗಿದೆಯೋ ಅಂದರು.
- 7 ಆಗ ಗಿದ್ಯೋನನು--ಹಾಗಾದರೆ ಕರ್ತನು ಜೆಬಹನನ್ನೂ ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟ ತರುವಾಯ ನಿಮ್ಮ ಮಾಂಸವನ್ನು ಅರಣ್ಯದ ಮುಳ್ಳುಗಳಿಂದಲೂ ನೆಗ್ಗಿಲು ಮುಳ್ಳುಗಳಿಂದಲೂ ಹರಿದುಬಿಡುವೆನು ಅಂದನು.
- 8 ಅಲ್ಲಿಂದ ಪೆನೂವೇ ಲಿಗೆ ಹೋಗಿ ಆ ಊರಿನವರ ಸಂಗಡ ಆ ಪ್ರಕಾರವೇ ಮಾತನಾಡಿದನು. ಅವರು ಸುಖೋತಿನ ಮನುಷ್ಯರು ಪ್ರತ್ಯುತ್ತರಕೊಟ್ಟ ಹಾಗೆಯೇ ಪ್ರತ್ಯುತ್ತರಕೊಟ್ಟರು.
- 9 ಆಗ ಅವನು ಪೆನೂವೇಲಿನ ಮನುಷ್ಯರಿಗೆ ಸಹ--ನಾನು ಸಮಾಧಾನವಾಗಿ ತಿರಿಗಿ ಬರುವಾಗ ಈ ಗೋಪು ರವನ್ನು ಕೆಡವಿಬಿಡುವೆನು ಅಂದನು.
- 10 ಆದರೆ ಜೆಬಹನೂ ಚಲ್ಮುನ್ನನೂ ತಮ್ಮ ಸೈನ್ಯವಾದ ಹೆಚ್ಚುಕಡಿಮೆ ಹದಿನೈದು ಸಾವಿರ ಜನರ ಸಂಗಡ ಕರ್ಕೋರಿನಲ್ಲಿ ಇದ್ದರು. ಇವರೆಲ್ಲಾ ಕತ್ತಿ ಹಿಡಿಯತಕ್ಕ ಲಕ್ಷದ ಇಪ್ಪತ್ತು ಸಾವಿರ ಜನ ಬಿದ್ದುಹೋದಾಗ ಮೂಡಣದ ಸಮಸ್ತ ಮಕ್ಕಳು ಅಲ್ಲಿ ಉಳಿದರು.
- 11 ಗಿದ್ಯೋನನು ನೋಬಹ, ಯೊಗ್ಬೆಹಾ ಇವುಗಳ ಮೂಡಣದಲ್ಲಿದ್ದ ಡೇರೆಗಳಲ್ಲಿ ವಾಸಿಸಿರುವವರ ಮಾರ್ಗವಾಗಿ ಹೋಗಿ ಆ ದಂಡನ್ನು ಹೊಡೆದು ಬಿಟ್ಟನು. ಯಾಕಂದರೆ ಆ ದಂಡು ಭದ್ರವಾಗಿತ್ತು.
- 12 ಜೆಬಹನೂ ಚಲ್ಮುನ್ನನೂ ಓಡಿಹೋದದರಿಂದ ಅವನು ಮಿದ್ಯಾನ್ಯರ ಇಬ್ಬರು ಅರಸುಗಳಾದ ಜೆಬಹ ನನ್ನೂ ಚಲ್ಮುನ್ನನನ್ನೂ ಹಿಂದಟ್ಟಿ ಹಿಡಿದು ದಂಡನ್ನೆಲ್ಲಾ ಚದರಿಸಿಬಿಟ್ಟರು.
- 13 ಯೋವಾಷನ ಮಗನಾದ ಗಿದ್ಯೋನನು ಸೂರ್ಯೋದಯಕ್ಕೆ ಮುಂಚೆ ಯುದ್ಧ ತೀರಿಸಿಕೊಂಡು ತಿರಿಗಿಬಂದು
- 14 ಸುಖೋತಿನ ಮನುಷ್ಯರಲ್ಲಿ ಒಬ್ಬ ಯೌವನಸ್ಥನನ್ನು ಹಿಡಿದು ಅವನನ್ನು ಕೇಳಿದಾಗ ಅವನು--ಸುಖೋತಿನ ಪ್ರಧಾನರೂ ಹಿರಿಯರೂ ಆದ ಎಪ್ಪತ್ತೇಳು ಜನರನ್ನು ಅವನಿಗೆ ವಿವರಿಸಿದನು.
- 15 ಗಿದ್ಯೋನನು ಸುಖೋತಿನ ಮನುಷ್ಯರ ಬಳಿಗೆ ಬಂದು--ಇಗೋ, ದಣಿದಿರುವ ನಿನ್ನ ಮನುಷ್ಯರಿಗೆ ನಾವು ರೊಟ್ಟಿಯನ್ನು ಕೊಡುವ ಹಾಗೆ ಜೆಬಹ ಚಲ್ಮು ನ್ನರ ಕೈ ಈಗಲೇ ನಿನ್ನ ಕೈವಶವಾಗಿದೆಯೋ ಎಂದು ನೀವು ನನ್ನನ್ನು ನಿಂದಿಸಿದ ಜೆಬಹನನ್ನೂ ಚಲ್ಮುನ್ನನನ್ನೂ ನೋಡಿರಿ ಎಂದು ಹೇಳಿ
- 16 ಪಟ್ಟಣದ ಹಿರಿಯರನ್ನು ಹಿಡಿದು ಅರಣ್ಯದ ಮುಳ್ಳುಗಳನ್ನೂ ನೆಗ್ಗಿಲು ಮುಳ್ಳು ಗಳನ್ನೂ ತಕ್ಕೊಂಡು ಅವುಗಳಿಂದ ಸುಖೋತಿನ ಮನು ಷ್ಯರಿಗೆ ಬುದ್ದಿಕಲಿಸಿದನು.
- 17 ಪೆನೂವೇಲಿನ ಗೋಪುರ ವನ್ನು ಕೆಡವಿ ಆ ಪಟ್ಟಣದ ಮನುಷ್ಯರನ್ನು ಕೊಂದು ಹಾಕಿದನು.
- 18 ಅವನು ಜೆಬಹನಿಗೂ ಚಲ್ಮುನ್ನನಿಗೂ--ನೀವು ತಾಬೋರದಲ್ಲಿ ಕೊಂದುಹಾಕಿದ ಆ ಮನುಷ್ಯರು ಹೇಗಿದ್ದರು ಅಂದನು. ಅದಕ್ಕವರು--ನಿನ್ನ ಹಾಗೆಯೇ; ಅವರು ಒಬ್ಬೊಬ್ಬರು ರೂಪದಲ್ಲಿ ಅರಸನ ಮಕ್ಕಳಾ ಗಿದ್ದರು ಅಂದರು.
- 19 ಅದಕ್ಕವನು--ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು; ಕರ್ತನ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುವದಿಲ್ಲ ಅಂದನು.
- 20 ತನ್ನ ಚೊಚ್ಚಲ ಮಗನಾದ ಎತೆರನಿಗೆ--ನೀನೆದ್ದು ಅವರನ್ನು ಕೊಂದುಹಾಕು ಅಂದನು. ಆದರೆ ಆ ಯುವಕನು ತನ್ನ ಕತ್ತಿಯನ್ನು ಬಿಚ್ಚದೆ ಹೋದನು; ಯಾಕಂದರೆ ಅವನು ಇನ್ನೂ ಹುಡುಗನಾದದರಿಂದ ಭಯಪಟ್ಟನು.
- 21 ಆಗ ಜೆಬ ಹನೂ ಚಲ್ಮುನ್ನನೂ--ನೀನು ಎದ್ದು ನಮ್ಮ ಮೇಲೆ ಬೀಳು; ಮನುಷ್ಯನು ಹೇಗೋ ಹಾಗೆಯೇ ಅವನ ಬಲವು ಇರುವದು ಅಂದರು.
- 22 ಗಿದ್ಯೋನನು ಎದ್ದು ಜೆಬಹನನ್ನೂ ಚಲ್ಮುನ್ನನನ್ನೂ ಕೊಂದುಹಾಕಿ ಅವರ ಒಂಟೆಗಳ ಕುತ್ತಿಗೆಗಳಲ್ಲಿ ಇದ್ದ ಆಭರಣಗಳನ್ನು ತೆಗೆದು ಕೊಂಡನು.
- 23 ಆಗ ಇಸ್ರಾಯೇಲ್ ಜನರು ಗಿದ್ಯೋನನಿಗೆನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ತಪ್ಪಿಸಿ ರಕ್ಷಿಸಿದ್ದರಿಂದ ನೀನೂ ನಿನ್ನ ಕುಮಾರನೂ ಕುಮಾರನ ಕುಮಾರನೂ ನಮ್ಮನ್ನು ಆಳಬೇಕು ಅಂದರು. ಗಿದ್ಯೋ ನನು ಅವರಿಗೆ ನಾನು ನಿಮ್ಮನ್ನು ಆಳುವದಿಲ್ಲ, ನನ್ನ ಮಗನೂ ನಿಮ್ಮನ್ನು ಆಳುವದಿಲ್ಲ, ಕರ್ತನೇ ನಿಮ್ಮನ್ನು ಆಳುವನು ಅಂದನು.
- 24 ಗಿದ್ಯೋನನು--ಒಂದು ಬಿನ್ನಹವನ್ನು ನಾನು ನಿಮಗೆ ಮಾಡುತ್ತೇನೆ. ಪ್ರತಿ ಯೊಬ್ಬನು ಕೊಳ್ಳೆ ಹೊಡೆದ ವಾಲೆಗಳನ್ನು ನನಗೆ ಕೊಡಿರಿ ಅಂದನು. (ಯಾಕಂದರೆ ಅವರು ಇಷ್ಮಾಯೇ ಲ್ಯರಾಗಿದ್ದದರಿಂದ ಅವರಿಗೆ ಬಂಗಾರದ ಮುರುವು ಗಳಿದ್ದವು).
- 25 ಅವರು--ನಾವು ಇಷ್ಟಪೂರ್ವಕವಾಗಿ ಕೊಡುವೆವು ಎಂದು ಹೇಳಿ ಒಂದು ವಸ್ತ್ರವನ್ನು ಹಾಸಿ ಅಲ್ಲಿ ಅವರವರು ಕೊಳ್ಳೆ ಹೊಡೆದ ವಾಲೆಗಳನ್ನು ಹಾಕಿದರು.
- 26 ಆದರೆ ಆಭರಣಗಳೂ ಕಂಠಮಾಲೆ ಗಳೂ ಮಿದ್ಯಾನ್ಯರ ಅರಸುಗಳು ಹೊದ್ದುಕೊಂಡಿದ್ದ ರಕ್ತಾಂಬರ ವಸ್ತ್ರಗಳೂ ಅವರ ಒಂಟೆಗಳ ಕೊರಳಿಗೆ ಇದ್ದ ಸರಪಣಿಗಳೂ ಹೊರತು ಅವನು ಕೇಳಿ ತೆಗೆದು ಕೊಂಡ ಬಂಗಾರದ ವಾಲೆಗಳ ತೂಕವು ಸಾವಿರದ ಏಳು ನೂರು ಶೆಕೆಲ್ ತೂಕವಾಗಿತ್ತು.
- 27 ಆ ಬಂಗಾರ ದಿಂದ ಗಿದ್ಯೋನನು ಒಂದು ಏಫೋದನ್ನು ಮಾಡಿಸಿ ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲ್ಯರೆಲ್ಲಾ ಅದರ ಹಿಂದೆ ಜಾರರಾಗಿ ಹೋದರು. ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು.
- 28 ಮಿದ್ಯಾನ್ಯರು ತಮ್ಮ ತಲೆಯನ್ನು ತಿರಿಗಿ ಎತ್ತಕೂಡದ ಹಾಗೆ ಇಸ್ರಾಯೇಲ್ಯರ ಮಕ್ಕಳ ಮುಂದೆ ತಗ್ಗಿಸಲ್ಪಟ್ಟರು. ದೇಶವು ಗಿದ್ಯೋನನ ದಿವಸ ಗಳಲ್ಲಿ ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.
- 29 ಯೋವಾಷನ ಮಗನಾದ ಯೆರುಬ್ಬಾಳನು ಹೋಗಿ ತನ್ನ ಸ್ವಂತ ಮನೆಯಲ್ಲಿ ವಾಸವಾಗಿದ್ದನು.
- 30 ಗಿದ್ಯೋನ ನಿಗೆ ಅನೇಕ ಮಂದಿ ಹೆಂಡತಿಯರು ಇದ್ದದರಿಂದ ಅವನಿಗೆ ಎಪ್ಪತ್ತು ಮಂದಿ ಮಕ್ಕಳು ಹುಟ್ಟಿದರು.
- 31 ಶೆಕೆ ಮಿನಲ್ಲಿದ್ದ ಅವನ ಉಪಪತ್ನಿಯು ಅವನಿಗೆ ಒಬ್ಬ ಮಗನನ್ನು ಹೆತ್ತಳು. ಅವನು ಆ ಮಗನಿಗೆ ಅಬೀಮೆಲೆಕ ನೆಂದು ಹೆಸರಿಟ್ಟನು.
- 32 ಯೋವಾಷನ ಮಗನಾದ ಗಿದ್ಯೋನನು ಒಳ್ಳೇ ವೃಧ್ಧಾಪ್ಯದಲ್ಲಿ ಸತ್ತು ಅಬೀಯೆಜೆರೀ ಯರಿಗೆ ಸೇರಿದ ಒಫ್ರದಲ್ಲಿ ತನ್ನ ತಂದೆಯಾದ ಯೋವಾಷನ ಸಮಾಧಿಯಲ್ಲಿ ಹೂಣಿಡಲ್ಪಟ್ಟನು.
- 33 ಗಿದ್ಯೋನನು ಸತ್ತತರುವಾಯ ಆದದ್ದೇನಂದರೆ, ಇಸ್ರಾಯೇಲ್ ಮಕ್ಕಳು ತಿರುಗಿಕೊಂಡು ಬಾಳನ ಹಿಂದೆ ಜಾರರಾಗಿ ಹೋಗಿ ಬಾಳ್‌ಬೆರೀತನನ್ನು ತಮಗೆ ದೇವರಾಗಿ ಮಾಡಿಕೊಂಡರು.
- 34 ಸುತ್ತಲೂ ಇದ್ದ ತಮ್ಮ ಎಲ್ಲಾ ಶತ್ರುಗಳ ಕೈಯಿಂದ ತಮ್ಮನ್ನು ತಪ್ಪಿಸಿಬಿಟ್ಟ ತಮ್ಮ ದೇವರಾದ ಕರ್ತನನ್ನು ಜ್ಞಾಪಕಮಾಡಿಕೊಳ್ಳ ಲಿಲ್ಲ.
- 35 ಇಲ್ಲವೆ ಗಿದ್ಯೋನನೆಂಬ ಯೆರುಬ್ಬಾಳ್ ಇಸ್ರಾಯೇಲಿಗೆ ಮಾಡಿದ ಸಕಲ ಉಪಕಾರಗಳಿಗೆ ತಕ್ಕ ಹಾಗೆ ಅವರು ಅವನ ಮನೆಯವರಿಗೆ ದಯೆ ತೋರಿಸಲಿಲ್ಲ.
Judges 08
- Details
- Parent Category: Old Testament
- Category: Judges
ನ್ಯಾಯಸ್ಥಾಪಕರು ಅಧ್ಯಾಯ 8