- 1 ಕೆಲವು ದಿನಗಳ ತರುವಾಯ ಆದದ್ದೇನಂದರೆ, ಗೋಧಿಯ ಸುಗ್ಗೀ ಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡುವದಕ್ಕೆ ಒಂದು ಮೇಕೆಯ ಮರಿಯನ್ನು ತೆಗೆದುಕೊಂಡು ಹೋಗಿ ಅವನು--ನನ್ನ ಹೆಂಡತಿಯ ಬಳಿಗೆ ಕೊಠಡಿಯಲ್ಲಿ ಪ್ರವೇಶಿಸುತ್ತೇನೆ ಅಂದನು.
- 2 ಆದರೆ ಅವಳ ತಂದೆಯು ಅವನನ್ನು ಪ್ರವೇಶಿಸಗೊಡದೆ ಅವನಿಗೆ--ನೀನು ಅವ ಳನ್ನು ಪೂರ್ಣವಾಗಿ ಹಗೆಮಾಡಿದಿ ಎಂದು ನಾನು ನಿಜವಾಗಿ ತಿಳಿದು ಅವಳನ್ನು ನಿನ್ನ ಜೊತೆಯವನಿಗೆ ಕೊಟ್ಟೆನು. ಅವಳ ತಂಗಿ ಅವಳಿಗಿಂತ ಸುಂದರವಾಗಿ ದ್ದಾಳಲ್ಲವೋ? ಅವಳಿಗೆ ಬದಲಾಗಿ ಇವಳನ್ನು ತಕ್ಕೋ ಅಂದನು.
- 3 ಆಗ ಸಂಸೋನನು ಅವರನ್ನು ಕುರಿತುನಾನು ಈ ಸಾರಿ ಫಿಲಿಷ್ಟಿಯರಿಗೆ ಕೇಡನ್ನುಮಾಡಿದರೆ ಅವರಿಗಿಂತ ಹೆಚ್ಚು ನಿರಪರಾಧಿಯಾಗಿರುವೆನು ಎಂದು ಅಂದುಕೊಂಡು ಹೊರಟು ಹೋಗಿ ಮುನ್ನೂರು ನರಿ ಗಳನ್ನು ಹಿಡಿದು
- 4 ಪಂಜುಗಳನ್ನು ತಕ್ಕೊಂಡು ಬಂದು ಬಾಲಕ್ಕೆ ಬಾಲ ಸೇರಿಸಿ ಎರಡು ಬಾಲಗಳ ನಡುವೆ ಒಂದು ಪಂಜನ್ನು ಕಟ್ಟಿ
- 5 ಅದಕ್ಕೆ ಬೆಂಕಿಹಚ್ಚಿ ಅವುಗಳನ್ನು ಫಿಲಿಷ್ಟಿಯರ ಪೈರಿನಲ್ಲಿ ಕಳುಹಿಸಿಬಿಟ್ಟು ತೆನೆ ಗೂಡುಗಳನ್ನೂ ಪೈರುಗಳನ್ನೂ ದ್ರಾಕ್ಷೇತೋಟಗಳನ್ನೂ ಇಪ್ಪೆಯ ತೋಪುಗಳನ್ನೂ ಕೂಡ ಸುಟ್ಟುಬಿಟ್ಟನು.
- 6 ಫಿಲಿಷ್ಟಿಯರು--ಇದನ್ನು ಮಾಡಿದವರು ಯಾರು ಅಂದರು. ಅದಕ್ಕೆ ಅವರು--ತಿಮ್ನಾ ಊರಿನ ಅಳಿಯ ನಾದ ಸಂಸೋನನು ಮಾಡಿದನು; ಯಾಕಂದರೆ ಇವನು ಅವನ ಹೆಂಡತಿಯನ್ನು ತಕ್ಕೊಂಡು ಅವನ ಜೊತೆ ಗಾರನಿಗೆ ಕೊಟ್ಟನು ಅಂದರು. ಆಗ ಫಿಲಿಷ್ಟಿಯರು ಬಂದು ಅವಳನ್ನೂ ಅವಳ ತಂದೆಯನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು.
- 7 ಸಂಸೋನನು ಅವರಿಗೆ--ನೀವು ಈ ಪ್ರಕಾರ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿಗೆ ಮುಯ್ಯಿ ಮಾಡಿಯೇ ಬಿಡುವೆನು ಅಂದನು.
- 8 ಅವನು ಅವರ ತೊಡೆ ಸೊಂಟಗಳನ್ನು ಹೊಡೆದು ದೊಡ್ಡ ಸಂಹಾರಮಾಡಿ ತಾನು ಹೋಗಿ ಏಟಾಮ್ ಬಂಡೆಯ ಮೇಲೆ ವಾಸವಾಗಿದ್ದನು.
- 9 ಫಿಲಿಷ್ಟಿಯರು ಹೊರಟು ಹೋಗಿ ಯೆಹೂದದ ಲೆಹೀಯಲ್ಲಿ ವ್ಯಾಪಿಸಿ ಪಾಳೆಯ ಮಾಡಿಕೊಂಡರು.
- 10 ಯೆಹೂದ ಮನುಷ್ಯರು ಅವರಿಗೆ--ನೀವು ನಮಗೆ ವಿರೋಧವಾಗಿ ಬಂದದ್ದೇನು ಅಂದರು. ಫಿಲಿಷ್ಟಿಯರು--ಸಂಸೋನನು ನಮಗೆ ಮಾಡಿದ ಹಾಗೆ ನಾವು ಅವನಿಗೆ ಪ್ರತಿಯಾಗಿ ಮಾಡುವದಕ್ಕೆ ಅವನನ್ನು ಹಿಡಿದು ಕಟ್ಟುವದಕ್ಕೆ ಬಂದೆವು ಅಂದರು.
- 11 ಆಗ ಯೆಹೂದ ದಲ್ಲಿ ಮೂರು ಸಾವಿರ ಜನವು ಏಟಾಮ್ ಬಂಡೆಯ ಮೇಲಕ್ಕೆ ಹೋಗಿ ಸಂಸೋನನಿಗೆ--ಫಿಲಿಷ್ಟಿಯರು ನಮ್ಮನ್ನು ಆಳುತ್ತಾ ಇದ್ದಾರೆಂದು ನಿನಗೆ ಗೊತ್ತಿಲ್ಲವೋ? ನೀನು ನಮಗೆ ಹೀಗೆ ಯಾಕೆ ಮಾಡಿದಿ? ಅಂದರು.
- 12 ಅದಕ್ಕವನು--ಅವರು ನನಗೆ ಮಾಡಿದ ಪ್ರಕಾ ರವೇ ನಾನು ಅವರಿಗೆ ಮಾಡಿದೆನು ಎಂದು ಅವರಿಗೆ ಹೇಳಿದನು. ಆಗ ಅವರು ಅವನಿಗೆ--ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಿಕೊಡಲು ಬಂದೆವು ಅಂದರು. ಸಂಸೋನನು ಅವರಿಗೆ--ನೀವು ನನ್ನ ಮೇಲೆ ಬೀಳುವದಿಲ್ಲವೆಂದು ನನಗೆ ಆಣೆಇಡಿರಿ ಅಂದನು.
- 13 ಅದಕ್ಕವರು--ಇಲ್ಲ; ಆದರೆ ನಿನ್ನನ್ನು ಭದ್ರವಾಗಿ ಕಟ್ಟಿ ಅವರ ಕೈಯಲ್ಲಿ ಒಪ್ಪಿಸಿಕೊಡುವೆವು; ನಾವು ನಿನ್ನನ್ನು ನಿಜವಾಗಿ ಕೊಲ್ಲುವದೇ ಇಲ್ಲ ಅಂದರು. ಎರಡು ಹೊಸ ಹಗ್ಗಗಳಿಂದ ಅವನನ್ನು ಕಟ್ಟಿ ಬಂಡೆಯ ಮೇಲಿ ನಿಂದ ತಂದರು.
- 14 ಅವನು ಲೆಹೀಗೆ ಬಂದಾಗ ಪಿಲಿಷ್ಟಿ ಯರು ಅವನಿಗೆ ಎದುರಾಗಿ ಬಂದು ಆರ್ಭಟಿಸಿದರು. ಕರ್ತನ ಆತ್ಮನು ಅವನ ಮೇಲೆ ಬಲವಾಗಿ ಬಂದದ್ದರಿಂದ ಅವನ ತೋಳುಗಳಲ್ಲಿ ಕಟ್ಟಿದ್ದ ಹಗ್ಗಗಳು ಬೆಂಕಿಯಿಂದ ಸುಟ್ಟುಹೋದ ದಾರದ ಹಾಗೆ ಆದವು. ಅವನ ಕೈಗಳಲ್ಲಿ ಇದ್ದ ಕಟ್ಟುಗಳು ಬಿಚ್ಚಿಬಿದ್ದವು.
- 15 ಅವನು ಒಂದು ಕತ್ತೆ ದವಡೆಯ ಹೊಸ ಎಲು ಬನ್ನು ಕಂಡುಕೊಂಡು ತನ್ನ ಕೈಯನ್ನು ಚಾಚಿ ಅದನ್ನು ತಕ್ಕೊಂಡು ಅದರಿಂದ ಸಾವಿರ ಜನರನ್ನು ವಧಿಸಿಬಿಟ್ಟನು.
- 16 ಸಂಸೋನನು--ನಾನು ಕತ್ತೆಯ ದವಡೇ ಎಲುಬಿ ನಿಂದ ಕುಪ್ಪೆ ಕುಪ್ಪೆಯಾಗಿ, ಕತ್ತೆಯ ದವಡೇ ಎಲುಬಿ ನಿಂದ ಸಾವಿರ ಜನರನ್ನು ವಧಿಸಿಬಿಟ್ಟಿದ್ದೇನೆ ಅಂದನು.
- 17 ಅವನು ಮಾತನಾಡಿ ತೀರಿಸಿದಾಗ ತನ್ನ ಕೈಯಲ್ಲಿದ್ದ ದವಡೇ ಎಲುಬನ್ನು ಬಿಸಾಟುಬಿಟ್ಟು ಆ ಸ್ಥಳಕ್ಕೆ ರಾಮತ್ ಲೆಹೀ ಎಂಬ ಹೆಸರಿಟ್ಟನು.
- 18 ಆದರೆ ಅವನು ಬಹಳ ದಾಹಗೊಂಡು ಕರ್ತನನ್ನು ಕೂಗಿ--ನೀನು ನಿನ್ನ ಸೇವಕನ ಕೈಯಿಂದ ಈ ದೊಡ್ಡ ರಕ್ಷಣೆಯನ್ನು ಕೊಟ್ಟಿದ್ದೀ; ಈಗ ನಾನು ದಾಹದಿಂದ ಸತ್ತು ಸುನ್ನತಿ ಇಲ್ಲದವರ ಕೈಯಲ್ಲಿ ಬೀಳಬೇಕೋ ಅಂದನು.
- 19 ಆಗ ದೇವರು ದವಡೆ ಟೊಳ್ಳಾದ ಒಂದು ಸ್ಥಳವನ್ನು ಸೀಳಿಬಿಟ್ಟಾಗ ಅದರೊಳಗಿಂದ ನೀರು ಹೊರಟುಬಂತು. ಸಂಸೋನನು ಆ ನೀರನ್ನು ಕುಡಿದ ದ್ದರಿಂದ ಅವನ ಆತ್ಮ ತಿರಿಗಿ ಬಂತು; ಅವನು ಜೀವಿಸಿ ದನು. ಆದದರಿಂದ ಏನ್‌ಹಕ್ಕೋರೇ ಎಂದು ಅದಕ್ಕೆ ಹೆಸರಿಟ್ಟನು. ಈ ದಿನದ ವರೆಗೂ ಲೆಹೀಯಲ್ಲಿ ಅದು ಇದೆ.
- 20 ಅವನು ಫಿಲಿಷ್ಟಿಯರ ದಿವಸಗಳಲ್ಲಿ ಇಪ್ಪತ್ತು ವರುಷ ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದನು.
Judges 15
- Details
- Parent Category: Old Testament
- Category: Judges
ನ್ಯಾಯಸ್ಥಾಪಕರು ಅಧ್ಯಾಯ 15