- 1 ಆ ದಿವಸಗಳಲ್ಲಿ ಇಸ್ರಾಯೇಲಿನೊಳಗೆ ಅರಸನಿರಲಿಲ್ಲ. ಆ ದಿವಸಗಳಲ್ಲಿ ದಾನನ ಗೋತ್ರದವರು ವಾಸವಾಗಿರುವದಕ್ಕೆ ತಮಗೆ ಬಾಧ್ಯತೆ ಯನ್ನು ಹುಡುಕುತ್ತಿದ್ದರು. ಯಾಕಂದರೆ ಅಂದಿನ ವರೆಗೆ ಅವರಿಗೆ ಇಸ್ರಾಯೇಲ್ ಗೋತ್ರಗಳಲ್ಲಿ ಪೂರ್ಣವಾಗಿ ಬಾಧ್ಯತೆ ದೊರಕಲಿಲ್ಲ.
- 2 ಅವರು ದೇಶವನ್ನು ಪಾಳತಿ ನೋಡಿ ಶೋಧಿಸುವದಕ್ಕಾಗಿ ತಮ್ಮ ಮೇರೆಗಳಲ್ಲಿರುವ ಚೊರ್ಗದಿಂದಲೂ ಎಷ್ಟಾವೋಲಿನಿಂದಲೂ ತಮ್ಮ ಕುಟುಂಬದಲ್ಲಿ ಪರಾಕ್ರಮಶಾಲಿಗಳಾದ ಐದು ಮಂದಿ ಯನ್ನು ಕರೆದು ಅವರಿಗೆ--ನೀವು ಹೋಗಿ ದೇಶವನ್ನು ಶೋಧಿಸಿರಿ ಎಂದು ಹೇಳಿ ಕಳುಹಿಸಿದರು. ಹಾಗೆಯೇ ಇವರು ಎಫ್ರಾಯಾಮ್ ಬೆಟ್ಟದಲ್ಲಿರುವ ವಿಾಕನ ಮನೆಯ ಬಳಿಗೆ ಬಂದು ಅಲ್ಲಿ ಇಳುಕೊಂಡರು.
- 3 ಅವರು ವಿಾಕನ ಮನೆಯ ಬಳಿಯಲ್ಲಿರುವಾಗ ಲೇವಿಯನಾದ ಪ್ರಾಯಸ್ಥನ ಸ್ವರವನ್ನು ತಿಳುಕೊಂಡು ಅವನ ಬಳಿಗೆ ಹೋಗಿ--ನಿನ್ನನ್ನು ಇಲ್ಲಿಗೆ ಕರಕೊಂಡು ಬಂದವರು ಯಾರು? ಇಲ್ಲಿ ಏನು ಮಾಡುತ್ತಿ? ಇಲ್ಲಿ ನಿನಗೆ ಏನು ಇದೆ ಅಂದರು.
- 4 ಅವನು ಅವರಿಗೆವಿಾಕನು ನನಗೆ ಹೀಗೆ ಹೀಗೆ ನಡಿಸುತ್ತಾನೆ; ನನ್ನನ್ನು ಸಂಬಳಕ್ಕೆ ಇಟ್ಟು ಕೊಂಡಿದ್ದಾನೆ; ನಾನು ಅವನಿಗೆ ಯಾಜಕನಾಗಿದ್ದೇನೆ ಅಂದನು.
- 5 ಆಗ ಅವರು ಅವನಿಗೆ--ನಾವು ಹೋಗುವ ನಮ್ಮ ಮಾರ್ಗವು ಸಫಲವಾಗುವದೋ? ಎಂದು ತಿಳಿಯುವ ಹಾಗೆ ದಯಮಾಡಿ ದೇವರನ್ನು ಕೇಳು ಅಂದರು.
- 6 ಆ ಯಾಜಕನು--ಸಮಾಧಾನವಾಗಿ ಹೋಗಿರಿ; ನೀವು ಹೋಗುವ ನಿಮ್ಮ ಮಾರ್ಗವು ಕರ್ತನ ಮುಂದೆ ಅದೆ ಅಂದನು.
- 7 ಆಗ ಆ ಐದು ಮಂದಿಯು ಹೊರಟು ಲಯಿಷಿಗೆ ಹೋಗಿ ಅದರಲ್ಲಿ ವಾಸಿಸಿರುವ ಆ ಜನರನ್ನು ನೋಡು ವಾಗ ಅವರು ನಿಶ್ಚಿಂತರಾಗಿಯೂ ಚೀದೋನ್ಯರ ಹಾಗೆ ನೆಮ್ಮದಿಯಾಗಿಯೂ ಸುರಕ್ಷಿತವಾಗಿಯೂ ಇದ್ದರು; ಯಾವ ಕಾರ್ಯದಲ್ಲಾದರೂ ನಾಚಿಕೆಪಡಿಸುವದಕ್ಕೆ ಬಿಗಿಹಿಡಿಯುವ ನ್ಯಾಯಾಧಿಪತಿಯು ದೇಶದಲ್ಲಿ ಇರ ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದರು; ಯಾವ ಮನುಷ್ಯನ ಸಂಗಡವೂ ಅವರಿಗೆ ಏನೂ ಕೆಲಸವಿರಲಿಲ್ಲ.
- 8 ಅವರು ಚೊರ್ಗಾದಲ್ಲಿಯೂ ಎಷ್ಟಾ ವೋಲಿನಲ್ಲಿಯೂ ಇರುವ ಸಹೋದರರ ಬಳಿಗೆ ತಿರಿಗಿ ಬಂದರು. ಅವರ ಸಹೋದರರು ಅವರಿಗೆ--ನೀವು ಏನು ಹೇಳುತ್ತೀರಿ? ಅಂದರು.
- 9 ಅದಕ್ಕವರು--ಏಳಿರಿ ನಾವು ಅವರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋಗುವ ಹಾಗೆ ಆ ದೇಶವನ್ನು ನೋಡಿದೆವು; ಇಗೋ, ಅದು ಬಹಳ ಚೆನ್ನಾಗಿದೆ; ನೀವು ಸುಮ್ಮನೆ ಇರುವದು ಯಾಕೆ? ಆ ದೇಶದಲ್ಲಿ ಪ್ರವೇಶಿಸಿ ಅದನ್ನು ಸ್ವಾಧೀನಮಾಡಿಕೊಳ್ಳಲು ಹೋಗುವದಕ್ಕೆ ತಾಮಸ ಮಾಡಬೇಡಿರಿ.
- 10 ನೀವು ಅಲ್ಲಿಗೆ ಹೋಗುವಾಗ ಭರವಸವಾಗಿರುವ ಜನರ ಬಳಿಗೆ ಹೋಗುವಿರಿ; ಅದು ವಿಸ್ತಾರವಾದ ದೇಶವಾಗಿದೆ; ದೇವರು ಅದನ್ನು ನಿಮ್ಮ ಕೈಗಳಲ್ಲಿ ಒಪ್ಪಿಸಿಕೊಟ್ಟಿದ್ದಾನೆ. ಆ ಸ್ಥಳದಲ್ಲಿ ಭೂಮಿ ಯಲ್ಲಿರುವ ವಸ್ತುಗಳಲ್ಲಿ ಒಂದಾದರೂ ಕೊರತೆ ಇಲ್ಲ ಅಂದರು.
- 11 ಆಗ ಚೊರ್ಗಾದಲ್ಲಿಯೂ ಎಷ್ಟಾವೋಲಿನ ಲ್ಲಿಯೂ ಇರುವ ದಾನನ ಕುಟುಂಬದವರಲ್ಲಿ ಆರು ನೂರು ಮನುಷ್ಯರು ಯುದ್ಧಕ್ಕೆ ತಕ್ಕ ಆಯುಧಗಳನ್ನು ಕಟ್ಟಿಕೊಂಡು ಅಲ್ಲಿಂದ ಹೊರಟುಹೋಗಿ
- 12 ಯೆಹೂದ ದಲ್ಲಿರುವ ಕಿರ್ಯತ್ಯಾರೀಮಿನಲ್ಲಿ ಇಳುಕೊಂಡರು. ಆದದರಿಂದ ಆ ಸ್ಥಳಕ್ಕೆ ಈ ದಿನದವರೆಗೂ ಮಹನೇ ದಾನ್ ಎಂದು ಕರೆಯಲ್ಪಡುವದು.
- 13 ಇಗೋ, ಅದು ಕಿರ್ಯತ್ಯಾರೀಮಿನ ಹಿಂದೆ ಇರುವದು. ಅಲ್ಲಿಂದ ಅವರು ಎಫ್ರಾಯಾಮ್ ಬೆಟ್ಟಕ್ಕೆ ಹೋಗಿ ವಿಾಕನ ಮನೆಯ ವರೆಗೆ ಬಂದರು.
- 14 ಆಗ ಲಯಿಷಿನ ದೇಶವನ್ನು ಪಾಳತಿ ನೋಡಿಬಂದ ಆ ಐದು ಮಂದಿ ಮನುಷ್ಯರು ತಮ್ಮ ಸಹೋದರರರಿಗೆ ಉತ್ತರ ಕೊಟ್ಟುಈ ಮನೆಗಳಲ್ಲಿ ಏಫೋದೂ ಪ್ರತಿಮೆಗಳೂ ಕೆತ್ತಿದ ವಿಗ್ರಹವೂ ಎರಕದ ವಿಗ್ರಹವೂ ಉಂಟೆಂದು ನೀವು ಅರಿಯಿರಾ? ನೀವು ಈಗ ಮಾಡಬೇಕಾದದ್ದೇನೆಂದು ತಿಳುಕೊಳ್ಳಿರಿ ಅಂದರು.
- 15 ಅವರು ಅಲ್ಲಿಗೆ ಹೋಗಿ ವಿಾಕನ ಮನೆಯಲ್ಲಿರುವ ಯೌವನಸ್ಥನಾದ ಲೇವಿ ಯನ ಬಳಿಗೆ ಬಂದು ಅವನನ್ನು ವಂದಿಸಿದರು.
- 16 ಯುದ್ಧದ ಆಯುಧಗಳನ್ನು ಕಟ್ಟಿಕೊಂಡು ದಾನನ ಗೋತ್ರದವರಾದ ಆರುನೂರು ಮಂದಿಯು ಪ್ರವೇಶ ದ್ವಾರದಲ್ಲಿ ನಿಂತರು.
- 17 ಆದರೆ ದೇಶವನ್ನು ಪಾಳತಿ ನೋಡಿ ಬಂದ ಆ ಐದು ಮಂದಿ ಹೋಗಿ ಒಳಗೆ ಹೊಕ್ಕು ಕೆತ್ತಿದ ವಿಗ್ರಹವನ್ನೂ ಏಫೋದನ್ನೂ ಪ್ರತಿಮೆ ಗಳನ್ನೂ ಎರಕದ ವಿಗ್ರಹವನ್ನೂ ತಕ್ಕೊಂಡರು. ಆಗ ಯಾಜಕನೂ ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ಆರುನೂರು ಜನರೂ ಪ್ರವೇಶ ದ್ವಾರದಲ್ಲಿ ನಿಂತಿದ್ದರು.
- 18 ಅವರು ವಿಾಕನ ಮನಗೆ ಬಂದು ಏಫೋದನ್ನೂ ಪ್ರತಿಮೆಗಳನ್ನೂ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹ ವನ್ನೂ ತಕ್ಕೊಂಡಾಗ ಯಾಜಕನು ಅವರಿಗೆ--ನೀವು ಏನು ಮಾಡುತ್ತೀರಿ ಅಂದನು.
- 19 ಅವರು ಅವನಿಗೆನೀನು ಸುಮ್ಮನೆ ಇರು; ನಿನ್ನ ಬಾಯಿಯ ಮೇಲೆ ನಿನ್ನ ಕೈಹಾಕಿಕೊಂಡು ನಮ್ಮ ಸಂಗಡ ಬಂದು ನಮಗೆ ತಂದೆಯಾಗಿಯೂ ಯಾಜಕನಾಗಿಯೂ ಇರು. ನೀನು ಒಬ್ಬನ ಮನೆಗೆ ಯಾಜಕನಾಗಿರುವದು ಒಳ್ಳೇದೋ ಅಥವಾ ಇಸ್ರಾಯೇಲಿನಲ್ಲಿ ಒಂದು ಗೋತ್ರಕ್ಕೂ ಒಂದು ಕುಟುಂಬಕ್ಕೂ ಯಾಜಕನಾಗಿರುವದು ಒಳ್ಳೇದೋ ಅಂದರು.
- 20 ಆಗ ಯಾಜಕನ ಹೃದಯವು ಸಂತೋಷಪಟ್ಟದ್ದರಿಂದ ಅವನು ಏಫೋದನ್ನೂ ಪ್ರತಿ ಮೆಗಳನ್ನೂ ಕೆತ್ತಿದ ವಿಗ್ರಹವನ್ನೂ ತಕ್ಕೊಂಡು ಜನರ ಮಧ್ಯದಲ್ಲಿ ಹೋದನು.
- 21 ಅವರು ತಿರುಗಿಕೊಂಡು ಹೊರಟು ಚಿಕ್ಕವರನ್ನೂ ಸಾಮಾನುಗಳನ್ನೂ ಪಶು ಗಳನ್ನೂ ತಮಗೆ ಮುಂದಾಗಿ ಕಳುಹಿಸಿದರು.
- 22 ಅವರು ವಿಾಕನ ಮನೆಯಿಂದ ದೂರವಾಗಿ ಹೋದಾಗ ವಿಾಕನ ಮನೆಯ ಸುತ್ತಲೂ ನೆರೆಮನೆ ಗಳಲ್ಲಿರುವ ಮನುಷ್ಯರು ಕೂಡಿಕೊಂಡು ದಾನ್ಯರನ್ನು ಸಂಧಿಸಿ ಅವರನ್ನು ಕೂಗಿದರು;
- 23 ಅವರು ತಮ್ಮ ಮುಖ ತಿರುಗಿಸಿ ವಿಾಕನಿಗೆ--ನೀನು ಗುಂಪನ್ನು ಕೂಡಿಸಿ ಬರುವುದಕ್ಕೆ ನಿನಗೆ ಏನಾಯಿತು ಅಂದರು.
- 24 ಅವನು--ನಾನು ಮಾಡಿಕೊಂಡ ನನ್ನ ದೇವರು ಗಳನ್ನೂ ಯಾಜಕನನ್ನೂ ತಕ್ಕೊಂಡು ಹೋದಿರಿ; ಇನ್ನು ನನಗೆ ಏನದೆ? ನೀವು ನನ್ನನ್ನು--ನಿನಗೆ ಏನಾಯಿತೆಂದು ಕೇಳುವದೇನು? ಅಂದನು.
- 25 ಆದರೆ ದಾನ್ಯರು ಅವ ನಿಗೆ--ಕೋಪಿಷ್ಠರು ನಿನ್ನ ಮೇಲೆ ಬೀಳದ ಹಾಗೆ, ನೀನು ನಿನ್ನ ಪ್ರಾಣವನ್ನೂ ನಿನ್ನ ಮನೆಯವರ ಪ್ರಾಣ ವನ್ನೂ ಕಳಕೊಳ್ಳದ ಹಾಗೆ, ನಿನ್ನ ಸ್ವರ ನಮ್ಮಲ್ಲಿ ಕೇಳಿ ಸದೆ ಇರಲಿ ಅಂದರು.
- 26 ದಾನ್ಯರು ತಮ್ಮ ಮಾರ್ಗ ವಾಗಿ ಹೋದರು. ಆಗ ಅವರು ತನಗಿಂತ ಬಲಿಷ್ಠ ರೆಂದು ವಿಾಕನು ನೋಡಿ ತಿರುಗಿಕೊಂಡು ತನ್ನ ಮನೆಗೆ ಹೋದನು.
- 27 ಆದರೆ ಅವರು ವಿಾಕನು ಮಾಡಿಕೊಂಡವು ಗಳನ್ನೂ ಅವನೊಂದಿಗಿದ್ದ ಯಾಜಕನನ್ನೂ ಅಪಹರಿಸಿ ಕೊಂಡು ವಿಶ್ರಾಂತಿಯಾಗಿಯೂ ಭರವಸವಾಗಿಯೂ ಇದ್ದ ಲಯಿಷಿನ ಜನರ ಮೇಲೆ ಬಂದು ಅವರನ್ನು ಕತ್ತಿಯಿಂದ ಹೊಡೆದು ಆ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
- 28 ಅದು ಚೀದೋನಿಗೆ ದೂರವಾಗಿ ದ್ದದರಿಂದಲೂ ಯಾವ ಮನುಷ್ಯನ ಸಂಗಡವಾದರೂ ಅವರಿಗೆ ಕೆಲಸವಿಲ್ಲದ್ದರಿಂದಲೂ ತಪ್ಪಿಸುವವರು ಯಾರೂ ಇರಲಿಲ್ಲ. ಆ ಪಟ್ಟಣವು ಬೇತ್‌ರೆಹೋಬಿಗೆ ಸವಿಾಪವಾದ ತಗ್ಗಿನಲ್ಲಿ ಇತ್ತು.
- 29 ಅಲ್ಲಿ ಅವರು ಪಟ್ಟಣವನ್ನು ಕಟ್ಟಿ ಅದರಲ್ಲಿ ವಾಸವಾಗಿದ್ದರು. ಆದರೆ ಪಟ್ಟಣಕ್ಕೆ ಇಸ್ರಾಯೇಲಿಗೆ ಹುಟ್ಟಿದ ತಮ್ಮ ತಂದೆಯಾದ ದಾನನ ಹೆಸರಿನ ಹಾಗೆಯೇ ದಾನನು ಎಂದು ಹೆಸರಿಟ್ಟರು.
- 30 ಆದರೆ ಮೊದಲು ಆ ಪಟ್ಟಣಕ್ಕೆ ಲಯಿಷೆಂಬ ಹೆಸರು ಇತ್ತು. ಆಗ ದಾನನ ಮಕ್ಕಳು ಆ ಕೆತ್ತಿದ ವಿಗ್ರಹವನ್ನು ತಮಗೆ ಸ್ಥಾಪಿಸಿಕೊಂಡರು. ಮನಸ್ಸೆಯ ಮೊಮ್ಮಗನೂ ಗೆರ್ಷೋಮನ ಮಗನೂ ಯೋನಾ ತಾನನೂ ಅವನ ಮಕ್ಕಳೂ ಆ ದೇಶದವರು ಸೆರೆಯಾಗಿ ಒಯ್ಯಲ್ಪಡುವ ದಿವಸದ ವರೆಗೂ ದಾನನ ಗೋತ್ರದ ವರಿಗೆ ಯಾಜಕರಾಗಿದ್ದರು.
- 31 ದೇವರ ಮನೆ ಶಿಲೋವಿ ನಲ್ಲಿ ಇರುವ ಮಟ್ಟಿಗೂ ವಿಾಕನು ಮಾಡಿದ ವಿಗ್ರಹ ವನ್ನು ಅವರು ಇಟ್ಟುಕೊಂಡಿದ್ದರು.
Judges 18
- Details
- Parent Category: Old Testament
- Category: Judges
ನ್ಯಾಯಸ್ಥಾಪಕರು ಅಧ್ಯಾಯ 18