wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಪ್ರಲಾಪಗಳುಅಧ್ಯಾಯ 5
  • 1 ಓ ಕರ್ತನೇ, ನನ್ನ ಮೇಲೆ ಬಂದ ದುರ್ಗತಿಯನ್ನು ಜ್ಞಾಪಕಮಾಡಿಕೋ ಪರಿಗಣಿಸು, ನಮ್ಮ ನಿಂದೆಯನ್ನು ನೋಡು.
  • 2 ನಮ್ಮ ಸ್ವಾಸ್ತ್ಯವು ಅಪರಿಚಿತರಿಗೂ ನಮ್ಮ ಮನೆಗಳು ಅನ್ಯರಿಗೂ ವಶ ವಾದವು.
  • 3 ನಾವು ಅನಾಥರು ತಂದೆ ಇಲ್ಲದವರು, ನಮ್ಮ ತಾಯಿಂದಿರು ವಿಧವೆಯರು.
  • 4 ನಾವು ನಮ್ಮ ನೀರನ್ನು ಹಣ ಕೊಟ್ಟು ಕುಡಿದಿದ್ದೇವೆ, ನಮ್ಮ ಸೌದೆಯು ನಮಗೆ ಮಾರಲ್ಪಟ್ಟಿದೆ.
  • 5 ನಮ್ಮ ಕುತ್ತಿಗೆಗಳು ಹಿಂಸೆಗೊಳ ಗಾದವು; ನಾವು ವಿಶ್ರಾಂತಿಯಿಲ್ಲದೆ ಕಷ್ಟಪಡುತ್ತೇವೆ.
  • 6 ರೊಟ್ಟಿಯಿಂದ ತೃಪ್ತಿಪಡುವದಕ್ಕಾಗಿ ನಮ್ಮ ಕೈಯನ್ನು ಐಗುಪ್ತ್ಯರಿಗೂ ಅಶ್ಶೂರ್ಯರಿಗೂ ಕೊಟ್ಟಿದ್ದೇವೆ.
  • 7 ನಮ್ಮ ತಂದೆಗಳು ಪಾಪ ಮಾಡಿ ಇಲ್ಲದೆ ಹೋದರು; ನಾವು ಅವರ ಅಕ್ರಮಗಳನ್ನು ಹೊರುತ್ತೇವೆ.
  • 8 ಆಳುಗಳು ನಮ್ಮ ಮೇಲೆ ಆಳಿದ್ದಾರೆ; ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವದಿಲ್ಲ.
  • 9 ಅಡವಿ ಕತ್ತಿಯ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.
  • 10 ಭಯಂಕರವಾದ ಕ್ಷಾಮದಿಂದ ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.
  • 11 ಅವರು ಚೀಯೋನಿನಲ್ಲಿ ಹೆಂಗಸರನ್ನೂ ಯೆಹೂದದ ನಗರಗಳಲ್ಲಿ ಕನ್ಯೆಯರನ್ನೂ ಕೆಡಿಸಿದರು.
  • 12 ಪ್ರಭುಗಳು ಅವರ ಕೈಯಿಂದ ಗಲ್ಲಿಗೇರಿಸಲ್ಪಟ್ಟರು; ಹಿರಿಯರ ಮುಖಗಳು ಗೌರವಿ ಸಲ್ಪಡಲಿಲ್ಲ.
  • 13 ಅವರು ಯೌವನಸ್ಥರನ್ನು ಅರೆಯು ವದಕ್ಕೆ ತೆಗೆದುಕೊಂಡರು; ಮಕ್ಕಳು ಕಟ್ಟಿಗೆಯ ಕೆಳಗೆ ಬಿದ್ದರು.
  • 14 ಹಿರಿಯರು ಬಾಗಿಲನ್ನು ಪ್ರವೇಶಿಸುವದೂ ಯೌವನಸ್ಥರು ಸಂಗೀತವನ್ನು ಹಾಡುವದೂ ನಿಂತು ಹೋಯಿತು.
  • 15 ನಮ್ಮ ಹೃದಯದ ಸಂತೋಷವು ನಿಂತುಹೋಯಿತು; ನಮ್ಮ ನಾಟ್ಯವು ದುಃಖದ ಕಡೆಗೆ ತಿರುಗಿತು.
  • 16 ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಯಿತು; ನಮಗೆ ಅಯ್ಯೋ, ನಾವು ಪಾಪಮಾಡಿದ್ದೇವೆ.
  • 17 ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ; ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.
  • 18 ಚೀಯೋನ್‌ ಪರ್ವತವು ಹಾಳಾಗಿರು ವದರಿಂದಲೇ ನರಿಗಳು ಅವುಗಳ ಮೇಲೆ ತಿರುಗಾಡು ವವು.
  • 19 ಓ ಕರ್ತನೇ, ನೀನು ಎಂದೆಂದಿಗೂ ಇರುತ್ತೀ. ನಿನ್ನ ಸಿಂಹಾಸನವು ತಲತಲಾಂತರಗಳ ವರೆಗೂ ಇರು ವದು.
  • 20 ಆದಕಾರಣ ನೀನು ನಮ್ಮನ್ನು ಮರೆಯು ವದೇಕೆ? ಯಾಕೆ ನಮ್ಮನ್ನು ಇಷ್ಟು ಕಾಲ ಕೈಬಿಟ್ಟಿದ್ದೀ?
  • 21 ಕರ್ತನೇ, ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ಆಗ ನಾವು ತಿರುಗಿಕೊಳ್ಳುವೆವು, ಹಳೆಯ ದಿನಗಳ ಹಾಗೆ ನಮ್ಮ ದಿನಗಳನ್ನು ನೂತನಮಾಡು.
  • 22 ಆದರೆ ನಮ್ಮನ್ನು ಪೂರ್ಣವಾಗಿ ತಳ್ಳಿಬಿಟ್ಟಿರುವಿ; ನಮಗೆ ವಿರುದ್ಧವಾಗಿ ನೀನು ಬಹಳ ಕೋಪಗೊಂಡಿರುವಿ.