- 1 ತರುವಾಯ ಕರ್ತನು ಮೋಶೆ ಆರೋನರೊಡನೆ ಮಾತನಾಡಿ ಹೇಳಿದ್ದೇನಂದರೆ
- 2 ಒಬ್ಬ ಮನುಷ್ಯನಿಗೆ ತನ್ನ ಶರೀರದ ಚರ್ಮದ ಮೇಲೆ ಬಾವಾಗಲಿ ಕಜ್ಜಿಯಾಗಲಿ ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಶರೀರದ ಚರ್ಮದಲ್ಲಿ ಕುಷ್ಠದ ವ್ಯಾಧಿ ಯಂತಿದ್ದರೆ ಅವನು ಯಾಜಕನಾದ ಆರೋನನ ಬಳಿ ಗಾದರೂ ಇಲ್ಲವೆ ಯಾಜಕರಾದ ಅವನ ಕುಮಾರರಲ್ಲಿ ಒಬ್ಬನ ಬಳಿಗಾದರೂ ತರಲ್ಪಡಬೇಕು.
- 3 ಯಾಜಕನು ಶರೀರದ ಚರ್ಮದ ಮೇಲಿರುವ ವ್ಯಾಧಿಯನ್ನು ನೋಡ ಬೇಕು; ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ ಆ ವ್ಯಾಧಿಯು ಅವನ ಶರೀರದ ಚರ್ಮಕ್ಕಿಂತಲೂ ಆಳ ವಾಗಿ ಕಂಡರೆ ಆ ವ್ಯಾಧಿಯು ಕುಷ್ಠವಾಗಿರುವದು; ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು.
- 4 ಅವನ ಶರೀರದ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು ಅದು ನೋಡುವದಕ್ಕೆ ಚರ್ಮ ಕ್ಕಿಂತಲೂ ಆಳವಾಗಿದ್ದು ಅಲ್ಲಿನ ಕೂದಲು ಬೆಳ್ಳಗಾಗ ದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಮುಚ್ಚಿಡಬೇಕು.
- 5 ಯಾಜಕನು ಏಳನೇ ದಿನದಲ್ಲಿ ಅವ ನನ್ನು ನೋಡಿದಾಗ ಇಗೋ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ ಆ ವ್ಯಾಧಿ ಚರ್ಮದಲ್ಲಿ ಹರಡದಿದ್ದರೆ ಯಾಜಕನು ಅವನನ್ನು ಇನ್ನೂ ಏಳು ದಿನಗಳು ಮುಚ್ಚಿಡ ಬೇಕು.
- 6 ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಇಗೋ, ವ್ಯಾಧಿಯು ಸ್ವಲ್ಪ ಕಪ್ಪಾ ಗಿದ್ದು ಚರ್ಮದಲ್ಲೆಲ್ಲಾ ಹರಡದಿದ್ದರೆ ಯಾಜಕನು ಅವ ನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶುದ್ಧನಾಗಿರುವನು.
- 7 ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ ಅವನು ತಿರಿಗಿ ಯಾಜಕನಿಗೆ ತೋರಿಸಿಕೊಳ್ಳಬೇಕು.
- 8 ಯಾಜ ಕನು ಅದನ್ನು ನೋಡಿದಾಗ ಇಗೋ, ಕಜ್ಜಿಯ ಚರ್ಮವೇ ಹರಡಿರುವದಾದರೆ ಆಗ ಅವನು ಅಶುದ್ಧ ನೆಂದು ಯಾಜಕನು ನಿರ್ಣಯಿಸಬೇಕು. ಅದು ಕುಷ್ಠವಾಗಿರುವದು.
- 9 ಕುಷ್ಠರೋಗವು ಮನುಷ್ಯನಲ್ಲಿ ಇರುವದಾದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರ ಬೇಕು.
- 10 ಆಗ ಯಾಜಕನು ಅವನನ್ನು ನೋಡಬೇಕು; ಇಗೋ, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿಮಾಂಸವು ಇದ್ದರೆ
- 11 ಅದು ಅವನ ಶರೀರದ ಚರ್ಮದಲ್ಲಿ ಒಂದು ಹಳೇ ಕುಷ್ಠವಾಗಿರುವದು. ಆಗ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು ಮತ್ತು ಅವನನ್ನು ಮುಚ್ಚಿಡಬಾರದು, ಅವನು ಅಶುದ್ಧನಾಗಿರುವನು.
- 12 ಕುಷ್ಠವು ಒಡೆದು ಚರ್ಮದ ಹೊರಗೆ ಹರಡಿ ಕೊಂಡಿದ್ದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಅವನ ಪಾದದ ವರೆಗೂ ಹರಡಿರುವದನ್ನು ಯಾಜಕನು ಎಲ್ಲಿಯಾದರೂ ನೋಡಿದರೆ
- 13 ಆಗ ಯಾಜಕನು ಅದನ್ನು ಗಮನಿಸಬೇಕು; ಇಗೋ, ಕುಷ್ಠವು ಅವನ ಮೈಯೆಲ್ಲವನ್ನು ಹರಡಿಕೊಂಡು ಶುದ್ಧನಾಗಿ ರುವನೆಂದು ಯಾಜಕನು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವದರಿಂದ ಅವನು ಶುದ್ಧನಾಗಿರು ವನೆಂದು
- 14 ಆದರೆ ಹಸಿಮಾಂಸವು ಅವನಲ್ಲಿ ಕಾಣಿಸಿ ಕೊಂಡರೆ ಅವನು ಅಶುದ್ಧನಾಗುವನು.
- 15 ಯಾಜ ಕನು ಹಸಿಮಾಂಸವನ್ನು ನೋಡಿ ಅವನು ಅಶುದ್ಧನೆಂದು ನುಡಿಯಬೇಕು; ಹಸಿಮಾಂಸವು ಅಶುದ್ಧವಾದದ್ದು, ಅದು ಕುಷ್ಠವೇ.
- 16 ಇಲ್ಲವೆ ಹಸಿಮಾಂಸವು ಮತ್ತೆ ತಿರಿಗಿ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು.
- 17 ಆಗ ಯಾಜಕನು ಅವನನ್ನು ನೋಡ ಬೇಕು. ಇಗೋ, ಆ ವ್ಯಾಧಿಯು ಬೆಳ್ಳಗಾಗಿದ್ದರೆ ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ಯಾಜಕನು ನುಡಿಯಬೇಕು; ಅವನು ಶುದ್ಧನೇ.
- 18 ಆ ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ
- 19 ಆ ಹುಣ್ಣಿನ ಸ್ಥಳದಲ್ಲಿ ಬಿಳಿಯ ಊತವಾಗಲಿ ಬಿಳುಪಾದ ಮಚ್ಚೆಯಾಗಲಿ ಬಿಳಿಯದಾಗಿ ಸ್ವಲ್ಪ ಕೆಂಪಾದದ್ದಾಗಲಿ ಉಂಟಾದರೆ ಅದನ್ನು ಯಾಜಕ ನಿಗೆ ತೋರಿಸಬೇಕು.
- 20 ಯಾಜಕನು ಅದನ್ನು ನೋಡಿ ದಾಗ ಇಗೋ, ಅದು ಚರ್ಮಕ್ಕಿಂತ ತಗ್ಗಾಗಿ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು; ಅದು ಹುಣ್ಣಿನಿಂದ ಒಡೆದುಹೋದ ಕುಷ್ಠ ವ್ಯಾಧಿಯಾಗಿ ರುವದು.
- 21 ಆದರೆ ಯಾಜಕನು ಅದನ್ನು ನೋಡಲು ಇಗೋ, ಅದರಲ್ಲಿ ಬಿಳಿಯ ಕೂದಲು ಇರದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ತಗ್ಗಾಗದೆ ಸ್ವಲ್ಪ ಮೊಬ್ಬಾಗಿದ್ದರೆ ಆಗ ಯಾಜಕನು ಅವನನ್ನು ಏಳು ದಿನಗಳು ಮುಚ್ಚಿಡಬೇಕು.
- 22 ಅದು ಚರ್ಮದ ಹೊರ ಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು, ಅದು ರೋಗವೇ.
- 23 ಆದರೆ ಆ ಹೊಳಪಾದ ಮಚ್ಚೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
- 24 ಇಲ್ಲವೆ ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಹಸಿಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಮಚ್ಚೆಯಾಗಿದ್ದರೆ
- 25 ಯಾಜಕನು ಆಗ ಅದನ್ನು ನೋಡ ಬೇಕು. ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡು ವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆ ಯಿಂದ ಒಡೆದ ಕುಷ್ಠವಾಗಿರುವದು; ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಕುಷ್ಠವ್ಯಾಧಿಯೇ.
- 26 ಆದರೆ ಯಾಜಕನು ಅದನ್ನು ನೋಡಿದಾಗ ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೊಬ್ಬಾಗಿದ್ದರೆ ಯಾಜಕನು ಆಗ ಅವನನ್ನು ಏಳು ದಿನಗಳು ಮುಚ್ಚಿಡಬೇಕು.
- 27 ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ಹೇಳಬೇಕು, ಅದು ಕುಷ್ಠ ವ್ಯಾಧಿಯೇ.
- 28 ಆ ಹೊಳಪಾದ ಮಚ್ಚೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮೊಬ್ಬಾಗಿದ್ದರೆ ಅದು ಬೊಬ್ಬೆಯ ಊತವೆಂದು ಅವನು ಶುದ್ಧನೆಂದು ಯಾಜಕನು ನುಡಿಯಬೇಕು; ಅದು ಬೆಂಕಿಯ ಬೊಬ್ಬೆಯಾಗಿರುವದು.
- 29 ಒಬ್ಬ ಪುರುಷನಿಗಾಗಲಿ ಸ್ತ್ರೀಗಾಗಲಿ ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ವ್ಯಾಧಿಯು ಇದ್ದರೆ
- 30 ಆಗ ಯಾಜಕನು ಆ ವ್ಯಾಧಿಯನ್ನು ನೋಡಬೇಕು. ಇಗೋ, ಅದು ನೋಡುವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು; ಅದು ಒಣಗಿದ ಇಸಬಾಗಿರುವದು. ಅದು ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ಇರುವ ಕುಷ್ಠವಾಗಿದೆ.
- 31 ಯಾಜಕನು ಈ ಇಸಬಿನ ವ್ಯಾಧಿಯನ್ನು ನೋಡಿದಾಗ ಇಗೋ, ಅದು ನೋಡಲು ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪು ಕೂದಲು ಇರದಿದ್ದರೆ ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳು ಮುಚ್ಚಿಡಬೇಕು.
- 32 ಏಳನೇ ದಿನದಲ್ಲಿ ಯಾಜಕನು ಆ ವ್ಯಾಧಿಯನ್ನು ನೋಡಿದಾಗ ಇಗೋ, ಆ ಇಸಬು ಹರಡದೆ ಅದರಲ್ಲಿ ಹಳದಿ ಕೂದಲು ಇರದೆ ಆ ಇಸಬು ಚರ್ಮಕ್ಕಿಂತಲೂ ಆಳವಾಗಿ ಕಾಣದಿದ್ದರೆ
- 33 ಅವನು ಕ್ಷೌರಮಾಡಿಸಿ ಕೊಳ್ಳಲಿ, ಆದರೆ ಅವನು ಇಸಬನ್ನು ಕ್ಷೌರಮಾಡ ಬಾರದು. ಯಾಜಕನು ಆ ಇಸಬಿನವನನ್ನು ಏಳು ದಿನ ಹೆಚ್ಚಾಗಿ ಮುಚ್ಚಿಡಬೇಕು.
- 34 ಏಳನೆಯ ದಿನದಲ್ಲಿ ಯಾಜಕನು ಆ ಇಸಬನ್ನು ನೋಡಬೇಕು. ಇಗೋ, ಆ ಇಸಬು ಚರ್ಮದಲ್ಲಿ ಹರಡದಿದ್ದರೆ ನೋಡಲು ಅದು ಚರ್ಮಕ್ಕಿಂತಲೂ ತಗ್ಗಾಗಿರದಿದ್ದರೆ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು; ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು.
- 35 ಆದರೆ ಅವನು ಶುದ್ಧನಾದ ಮೇಲೆ ಆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿದರೆ
- 36 ಯಾಜಕನು ಅವನನ್ನು ನೋಡಬೇಕು; ಇಗೋ, ಆ ಇಸಬು ಚರ್ಮ ದಲ್ಲಿ ಹರಡಿದ್ದರೆ ಯಾಜಕನು ಹಳದಿ ಕೂದಲಿಗಾಗಿ ವಿಚಾರಿಸದಿರಲಿ; ಅವನು ಅಶುದ್ಧನೇ.
- 37 ಆದರೆ ಆ ಇಸಬು ಅವನಿಗೆ ನಿಂತ ಹಾಗೆ ಕಂಡರೆ ಅದರಲ್ಲಿ ಕಪ್ಪುಕೂದಲು ಬೆಳೆದರೆ ಇಸಬು ವಾಸಿಯಾಯಿತು ಅವನು ಶುದ್ಧನು; ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
- 38 ಒಬ್ಬ ಪುರುಷನಿಗಾಗಲಿ ಒಬ್ಬ ಸ್ತ್ರೀಗಾಗಲಿ ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಅಂದರೆ ಬಿಳಿಯ ಹೊಳಪಾದ ಮಚ್ಚೆಗಳು ಇದ್ದರೆ
- 39 ಅವುಗಳನ್ನು ಯಾಜಕನು ನೋಡಬೇಕು. ಇಗೋ, ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಮೊಬ್ಬಾಗಿ ಬಿಳು ಪಾಗಿದ್ದರೆ ಅದು ಚರ್ಮದ ಮೇಲೆ ಬಿಸಿಲಿನಿಂದಾದ ಮಚ್ಚೆಯಾಗಿರುವದು. ಅವನು ಶುದ್ಧನಾಗಿರುವನು.
- 40 ಪುರುಷನ ತಲೆಯ ಕೂದಲು ಉದುರಿಹೋದರೆ ಅವನು ಬೋಳು ತಲೆಯವನು, ಆದಾಗ್ಯೂ ಅವನು ಶುದ್ಧನಾಗಿರುವನು.
- 41 ತನ್ನ ಮುಂದಲೆಯ ಕೂದಲು ಉದುರಿಹೋಗಿದ್ದರೂ ಅವನು ಪಟ್ಟೆತಲೆಯವನಾ ದರೂ ಶುದ್ಧನೇ.
- 42 ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪಾದ ಮಚ್ಚೆಯಿದ್ದರೆ ಅದು ಹುಟ್ಟುತ್ತಿರುವ ಕುಷ್ಠವೇ.
- 43 ಆಗ ಯಾಜಕನು ಅವನನ್ನು ನೋಡಬೇಕು ಇಗೋ, ಅವನ ಬೋಳು ತಲೆಯಲ್ಲಾಗಲಿ ಪಟ್ಟೆತಲೆಯಲ್ಲಾಗಲಿ ಏಳುತ್ತಿರುವ ಆ ಮಚ್ಚೆಯು ಬಿಳುಪಾಗಿ ಕೆಂಪಾಗಿದ್ದರೆ ಶರೀರದ ಚರ್ಮ ದಲ್ಲಿ ಇರುವ ಕುಷ್ಠದ ಹಾಗಿದ್ದರೆ ಕುಷ್ಠರೋಗಿ ಎಂದೂ ಅಶುದ್ಧನೆಂದೂ
- 44 ವ್ಯಾಧಿಯು ಅವನ ತಲೆಯಲ್ಲಿದೆ ಯೆಂದೂ ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು.
- 45 ಆ ವ್ಯಾಧಿ ಇರುವ ಕುಷ್ಠರೋಗಿಯು ತನ್ನ ಬಟ್ಟೆ ಗಳನ್ನು ಹರಿದುಕೊಂಡು ಬರೀ ತಲೆಯಲ್ಲಿ ಮೇಲ್ತುಟಿ ಯನ್ನು ಮುಚ್ಚಿಕೊಂಡು--ನಾನು ಅಶುದ್ಧನು, ಅಶು ದ್ಧನು ಎಂದು ಕೂಗಬೇಕು.
- 46 ಆ ವ್ಯಾಧಿಯು ಅವನಲ್ಲಿ ಇರುವಷ್ಟು ದಿನಗಳು ಹೊಲೆಯಾಗಿರುವನು; ಅವನು ಅಶುದ್ಧನು; ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.
- 47 ಕುಷ್ಠವ್ಯಾಧಿಯು ಅವನ ಉಡುಪಿನಲ್ಲಿದ್ದರೆ ಅದು ಉಣ್ಣೆಯ ಉಡುಪಾಗಲಿ ನಾರಿನ ಉಡುಪಾಗಲಿ
- 48 ಉಣ್ಣೆಯ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ಚರ್ಮ ದಲ್ಲಾಗಲಿ ಚರ್ಮದಿಂದ ಮಾಡಿದ ಯಾವ ವಸ್ತುವಿನ ಲ್ಲಾಗಲಿ
- 49 ವ್ಯಾಧಿಯು ಚರ್ಮದಲ್ಲಾಗಲಿ ಹಾಸಿನಲ್ಲಾ ಗಲಿ ಹೊಕ್ಕಿನಲ್ಲಾಗಲಿ ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ ಹಸುರಾಗಿ ಇಲ್ಲವೆ ಕೆಂಪಾಗಿ ಇದ್ದರೆ ಅದು ಕುಷ್ಠರೋಗವು; ಅದನ್ನು ಯಾಜಕನಿಗೆ ತೋರಿಸ ಬೇಕು.
- 50 ಯಾಜಕನು ವ್ಯಾಧಿಯನ್ನು ನೋಡಿ ಅದನ್ನು ಏಳು ದಿನಗಳು ಮುಚ್ಚಿಡಬೇಕು:
- 51 ಅವನು ಏಳನೆಯ ದಿನದಲ್ಲಿ ವ್ಯಾಧಿಯನ್ನು ನೋಡಬೇಕು. ಆ ವ್ಯಾಧಿಯು ಅವನ ಉಡುಪಿನಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನ ಲ್ಲಾಗಲಿ ಚರ್ಮದಲ್ಲಾಗಲಿ ಚರ್ಮದಿಂದ ಮಾಡಿದ ಯಾವ ಕೆಲಸದಲ್ಲಾಗಲಿ ಹರಡಿದ್ದರೆ ಅದು ಕೆಟ್ಟಕುಷ್ಠವೇ, ಅದು ಅಶುದ್ಧವು.
- 52 ಆದದರಿಂದ ಅವನು ವ್ಯಾಧಿಯಿ ರುವ ಆ ಉಡುಪುಗಳನ್ನು ಅಂದರೆ ಅದು ಹಾಸಿನಲ್ಲಾ ಗಲಿ ಹೊಕ್ಕಿನಲ್ಲಾಗಲಿ ಉಣ್ಣೆಯಲ್ಲಾಗಲಿ ನಾರಿನ ಲ್ಲಾಗಲಿ ಚರ್ಮದ ಯಾವ ವಸ್ತುವಿನಲ್ಲಾಗಲಿ ವ್ಯಾಧಿ ಯಿದೆಯೋ ಅದನ್ನು ಬೆಂಕಿಯಿಂದ ಸುಡಬೇಕು; ಅದು ಕೆಟ್ಟ ಕುಷ್ಠವು,
- 53 ಯಾಜಕನು ನೋಡಿದಾಗ ಇಗೋ, ಆ ವ್ಯಾಧಿಯು ಉಡುಪಿನಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ಚರ್ಮದ ವಸ್ತುಗಳಲ್ಲಾಗಲಿ ಹರಡ ದಿದ್ದರೆ
- 54 ಯಾಜಕನು ಆ ವ್ಯಾಧಿಯಿರುವವನನ್ನು ತೊಳೆದುಕೊಳ್ಳುವಂತೆ ಆಜ್ಞಾಪಿಸಿ ಅದನ್ನು ಏಳು ದಿನ ಗಳು ಹೆಚ್ಚಾಗಿ ಮುಚ್ಚಿಡಬೇಕು.
- 55 ಅದನ್ನು ತೊಳೆದಾದ ಮೇಲೆ ಯಾಜಕನು ಆ ವ್ಯಾಧಿಯನ್ನು ನೋಡಬೇಕು: ಇಗೋ, ವ್ಯಾಧಿಯು ತನ್ನ ಬಣ್ಣವನ್ನು ಬದಲಾಯಿಸದೆ ಹರಡದಿದ್ದರೆ ಅದು ಅಶುದ್ಧವಾಗಿರುವದು: ಅದು ಒಳಗಿನಿಂದಾಗಲಿ ಹೊರಗಿನಿಂದಾಗಲಿ ಒಳಗೆ ಕೊರೆ ಯುವದು. ನೀನು ಅದನ್ನು ಬೆಂಕಿಯಿಂದ ಸುಡಬೇಕು.
- 56 ಯಾಜಕನು ಅದನ್ನು ನೋಡಿದರೆ ಇಗೋ, ವ್ಯಾಧಿಯು ತೊಳೆಯಲ್ಪಟ್ಟ ನಂತರ ಸ್ವಲ್ಪ ಮೊಬ್ಬಾ ಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ ಚರ್ಮ ದಿಂದಾಗಲಿ ಹಾಸಿನಿಂದಾಗಲಿ ಹೊಕ್ಕಿನಿಂದಾಗಲಿ ಹರಿ ದುಹಾಕಬೇಕು.
- 57 ಅದು ಬಟ್ಟೆಯಲ್ಲಾಗಲಿ ಹಾಸಿ ನಲ್ಲಾಗಲಿ ಹೊಕ್ಕಿನಲ್ಲಾಗಲಿ ಇಲ್ಲವೆ ಚರ್ಮದ ಯಾವದರಲ್ಲಿಯಾಗಲಿ ಇನ್ನೂ ಕಂಡುಬಂದರೆ ಅದು ಹರಡುವ ವ್ಯಾಧಿ ಮತ್ತು ವ್ಯಾಧಿಯುಳ್ಳದ್ದನ್ನು ನೀನು ಬೆಂಕಿಯಿಂದ ಸುಡಬೇಕು.
- 58 ನೀನು ತೊಳೆದ ಮೇಲೆ ಆ ವ್ಯಾಧಿಯು ಯಾವದರಿಂದ ಹೊರಟು ಹೋಯಿತೋ ಆ ಬಟ್ಟೆಯನ್ನೂ ಹಾಸನ್ನೂ ಹೊಕ್ಕನ್ನೂ ಇಲ್ಲವೆ ಚರ್ಮದ ಯಾವದೇ ವಸ್ತುವನ್ನೂ ಎರಡನೆಯ ಸಾರಿ ತೊಳೆಯಬೇಕು, ಆಗ ಅದು ಶುದ್ಧವಾಗಿರುವದು.
- 59 ಉಣ್ಣೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ ಹಾಸಿನ ಹೊಕ್ಕಿನ ಮತ್ತು ಚರ್ಮದಿಂದಾದ ಯಾವದ ರಿಂದಾಗಲಿ ಕುಷ್ಠವ್ಯಾಧಿಯವಿಷಯದಲ್ಲಿ ಅದನ್ನು ಶುದ್ಧವೆಂದು ಅಶುದ್ಧವೆಂದು ನುಡಿಯುವದಕ್ಕೆ ನ್ಯಾಯ ವಿಧಿಯು ಇದೇ.
Leviticus 13
- Details
- Parent Category: Old Testament
- Category: Leviticus
ಯಾಜಕಕಾಂಡ ಅಧ್ಯಾಯ 13