- 1 ಕರ್ತನು ಮೋಶೆ ಆರೋನರೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
- 2 ಇಸ್ರಾ ಯೇಲಿನ ಮಕ್ಕಳೊಂದಿಗೆ ಹೇಳಬೇಕಾದದ್ದೇನಂದರೆಯಾವ ಮನುಷ್ಯನಿಗಾದರೂ ಅವರ ಶರೀರದಲ್ಲಿ ಮೇಹಸ್ರಾವ ಇರುವದಾಗಿದ್ದರೆ ಆ ಸ್ರಾವದ ನಿಮಿತ್ತ ವಾಗಿ ಅವನು ಅಶುದ್ಧನಾಗಿರುವನು.
- 3 ಅವನ ಸ್ರಾವ ದಲ್ಲಿ ಅದು ಅವನ ಅಶುದ್ಧತೆಯಾಗಿರುವದು; ಅವನ ಶರೀರವು ತನ್ನ ಸ್ರಾವದಿಂದ ಹರಿಯುವದಾಗಿದ್ದರೂ ತನ್ನ ಸ್ರಾವವು ಅವನ ಶರೀರದಲ್ಲಿ ನಿಂತುಹೋಗಿದ್ದರೂ ಅದು ಅವನ ಅಶುದ್ಧತೆಯಾಗಿರುವದು.
- 4 ಸ್ರಾವವಿರು ವವನು ಮಲಗುವ ಪ್ರತಿಯೊಂದು ಹಾಸಿಗೆಯು ಅಶುದ್ಧವಾದದ್ದು; ಅವನು ಕೂತುಕೊಳ್ಳುವ ಪ್ರತಿ ಯೊಂದು ವಸ್ತುವು ಅಶುದ್ಧವಾಗಿರುವದು.
- 5 ಅವನ ಹಾಸಿಗೆಯನ್ನು ಮುಟ್ಟುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
- 6 ಇದಲ್ಲದೆ ಸ್ರಾವವಿರುವವನು ಕೂತುಕೊಂಡ ಯಾವುದೇ ವಸ್ತು ವಿನ ಮೇಲೆ ಕೂತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರುವನು.
- 7 ಸ್ರಾವವಿರುವವನ ಶರೀರವನ್ನು ಮುಟ್ಟುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡ ಬೇಕು ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರ ಬೇಕು.
- 8 ಶುದ್ಧನಾಗಿರುವನ ಮೇಲೆ ಸ್ರಾವವಿರುವವನು ಉಗುಳಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
- 9 ಸ್ರಾವವುಳ್ಳವನು ಏರಿಕೂತುಕೊಂಡಿದ್ದ ತಡಿಯು ಅಶುದ್ಧವಾಗಿರುವದು.
- 10 ಇದಲ್ಲದೆ ಅವನ ಕೆಳಗಿರುವ ಯಾವದಾದರೂ ವಸ್ತುವನ್ನು ಮುಟ್ಟಿದವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಅವುಗಳಲ್ಲಿ ಯಾವದನ್ನಾದರೂ ಹೊತ್ತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ನೀರಿನಲ್ಲಿ ಸ್ನಾನಮಾಡಬೇಕು ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರುವನು.
- 11 ಸ್ರಾವವುಳ್ಳ ವನು ತನ್ನ ಕೈಗಳನ್ನು ನೀರಿನಿಂದ ತೊಳೆದುಕೊಳ್ಳದೆ ಯಾರನ್ನಾದರೂ ಮುಟ್ಟಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು; ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
- 12 ಸ್ರಾವವುಳ್ಳವನು ಮುಟ್ಟಿದ ಮಣ್ಣಿನ ಪಾತ್ರೆಯನ್ನು ಒಡೆಯಬೇಕು, ಮರದ ಪ್ರತಿಯೊಂದು ಪಾತ್ರೆಯನ್ನು ನೀರಿನಲ್ಲಿ ಜಾಲಿಸಿ ತೊಳೆಯಬೇಕು.
- 13 ಸ್ರಾವವುಳ್ಳವನು ತನ್ನ ಸ್ರಾವದಿಂದ ಶುದ್ಧನಾದರೆ ತನ್ನ ಶುದ್ಧತೆಗಾಗಿ ಏಳು ದಿನಗಳನ್ನು ಲೆಕ್ಕಮಾಡಿ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಇದಲ್ಲದೆ ಹರಿಯುವ ನೀರಿನಲ್ಲಿ ತನ್ನ ಶರೀರವನ್ನು ತೊಳೆದುಕೊಳ್ಳಬೇಕು; ಆಗ ಅವನು ಶುದ್ಧನಾಗಿರುವನು.
- 14 ಎಂಟನೆಯ ದಿನದಲ್ಲಿ ಅವನು ತನಗಾಗಿ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತೆಗೆದು ಕೊಂಡು ಸಭೆಯ ಗುಡಾರದ ಬಾಗಿಲ ಬಳಿ ಕರ್ತನ ಎದುರಿನಲ್ಲಿ ಬಂದು ಅವುಗಳನ್ನು ಯಾಜಕನಿಗೆ ಕೊಡಬೇಕು.
- 15 ಆಗ ಯಾಜಕನು ಒಂದನ್ನು ಪಾಪಬಲಿ ಗಾಗಿ ಇನ್ನೊಂದನ್ನು ದಹನಬಲಿಗಾಗಿ ಅವುಗಳನ್ನು ಸಮರ್ಪಿಸಬೇಕು; ಯಾಜಕನು ಅವನ ಸ್ರಾವಕ್ಕೋಸ್ಕರ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.
- 16 ಒಬ್ಬನಿಗೆ ವೀರ್ಯವು ಹೊರಟುಹೋದರೆ ಅವನು ತನ್ನ ಶರೀರವನ್ನೆಲ್ಲಾ ನೀರಿನಲ್ಲಿ ತೊಳೆದು ಸಾಯಂಕಾ ಲದ ವರೆಗೆ ಅಶುದ್ಧನಾಗಿರಬೇಕು.
- 17 ವೀರ್ಯವು ಬಿದ್ದ ಪ್ರತಿಯೊಂದು ಬಟ್ಟೆ ಮತ್ತು ಪ್ರತಿಯೊಂದು ಚರ್ಮ ನೀರಿನಿಂದ ತೊಳೆಯಲ್ಪಟ್ಟು ಸಾಯಂಕಾಲದ ವರೆಗೆ ಅಶುದ್ಧವಾಗಿರಬೇಕು.
- 18 ಇದಲ್ಲದೆ ಸ್ತ್ರೀಯೊಂದಿಗೆ ಒಬ್ಬನು ಮಲಗಿ ವೀರ್ಯವನ್ನು ಬಿಟ್ಟಿದ್ದರೆ ಅವರಿಬ್ಬರೂ ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧರಾಗಿರಬೇಕು.
- 19 ಒಬ್ಬ ಸ್ತ್ರೀಗೆ ತನ್ನ ಶರೀರದಲ್ಲಿ ರಕ್ತಸ್ರಾವವಿದ್ದರೆ ಅವಳು ಏಳು ದಿವಸಗಳ ವರೆಗೆ ಪ್ರತ್ಯೇಕಿಸಲ್ಪಡಬೇಕು. ಅವಳನ್ನು ಯಾವನಾದರೂ ಮುಟ್ಟಿದರೆ ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು;
- 20 ಅವಳು ಮುಟ್ಟಾದಾಗ ಅವಳು ಮಲಗುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರಬೇಕು. ಅವಳು ಕೂತುಕೊ ಳ್ಳುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರಬೇಕು.
- 21 ಅವಳ ಹಾಸಿಗೆಯನ್ನು ಮುಟ್ಟುವವನು ತನ್ನ ಬಟ್ಟೆ ಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು; ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
- 22 ಅವಳು ಕೂತುಕೊಂಡಿರುವ ಯಾವದನ್ನಾದರೂ ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಅವನು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು.
- 23 ಇದಲ್ಲದೆ ಅವಳ ಹಾಸಿಗೆಯ ಮೇಲಾಗಲಿ ಇಲ್ಲವೆ ಅವಳು ಕೂತುಕೊಂಡ ಯಾವದರ ಮೇಲಾಗಲಿ ಇರುವದನ್ನು ಮುಟ್ಟಿ ದವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು.
- 24 ಯಾವನಾದರೂ ಅವಳೊಂದಿಗೆ ಮಲಗಿದರೆ ಅವಳ ಸಾರವು (ಹೊಲೆ) ಅವನಿಗೆ ತಗಲಿದರೆ ಅವನು ಏಳು ದಿವಸ ಅಶುದ್ಧನಾಗಿರಬೇಕು; ಅವನು ಮಲಗಿ ಕೊಳ್ಳುವ ಹಾಸಿಗೆಯೆಲ್ಲಾ ಅಶುದ್ಧವಾಗಿರುವದು.
- 25 ಇದಲ್ಲದೆ ಹೆಂಗಸಿಗೆ ಅವಳ ಮುಟ್ಟಿನ ಕಾಲಕ್ಕಿಂತಲೂ ಹೆಚ್ಚು ದಿನ ರಕ್ತಸ್ರಾವವು ಇದ್ದರೆ ಇಲ್ಲವೆ ಮುಟ್ಟಾಗಿದ್ದ ಕಾಲದಲ್ಲಾಗುವ ರಕ್ತಸ್ರಾವಕ್ಕಿಂತ ಹೆಚ್ಚಾಗಿ ಹರಿ ಯುತ್ತಿದ್ದರೆ ಅವಳ ಸ್ರಾವದ ಅಶುದ್ಧತ್ವದ ಎಲ್ಲಾ ದಿನ ಗಳು ಅವಳ ಮುಟ್ಟಿನ ದಿನಗಳಂತೆ ಇರಬೇಕು; ಅವಳು ಅಶುದ್ಧಳಾಗಿರುವಳು.
- 26 ಅವಳ ಸ್ರಾವದ ಎಲ್ಲಾ ದಿನಗಳಲ್ಲಿ ಅವಳು ಮಲಗಿಕೊಳ್ಳುವ ಪ್ರತಿಯೊಂದು ಹಾಸಿಗೆಯೂ ಅವಳ ಮುಟ್ಟಿನ ಹಾಸಿಗೆಯಂತಿರಬೇಕು; ಅವಳು ಕೂತುಕೊಳ್ಳುವದೆಲ್ಲವೂ ಅವಳ ಪ್ರತ್ಯೇಕದ ಮುಟ್ಟಿನ ಅಶುದ್ಧತೆಯಂತೆಯೇ ಅಶುದ್ಧವಾಗಿರುವದು.
- 27 ಯಾವನಾದರು ಆ ವಸ್ತುಗಳನ್ನು ಮುಟ್ಟಿದರೆ ಅಶುದ್ಧ ನಾಗಿರುವನು, ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
- 28 ಅವಳು ತನ್ನ ಸ್ರಾವದಿಂದ ಶುದ್ಧಳಾದ ದಿನದಿಂದ ಏಳು ದಿನ ಲೆಕ್ಕಿಸಬೇಕು ತರು ವಾಯ ಅವಳು ಶುದ್ಧಳಾಗಿರುವಳು.
- 29 ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಿಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಸಭೆಯ ಗುಡಾರದ ಬಾಗಿಲ ಬಳಿ ಯಾಜಕನ ಬಳಿಗೆ ತರ ಬೇಕು.
- 30 ಯಾಜಕನು ಒಂದನ್ನು ಪಾಪಬಲಿಗಾ ಗಿಯೂ ಇನ್ನೊಂದನ್ನು ದಹನಬಲಿಗಾಗಿಯೂ ಸಮ ರ್ಪಿಸಬೇಕು; ಯಾಜಕನು ಅವಳಿಗಾಗಿ ಅವಳ ಅಶುದ್ಧ ತೆಯ ಸ್ರಾವದ ವಿಷಯದಲ್ಲಿ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತಮಾಡಬೇಕು.
- 31 ಹೀಗೆ ನೀವು ಇಸ್ರಾಯೇಲ್ ಮಕ್ಕಳನ್ನು ಅವರ ಅಶುದ್ಧತ್ವದಿಂದ ಪ್ರತ್ಯೇಕಿಸಬೇಕು; ಆಗ ಅವರು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡದೆ ತಮ್ಮ ಅಶುದ್ಧತ್ವದಿಂದ ಸಾಯುವದಿಲ್ಲ.
- 32 ಮೇಹಸ್ರಾವವುಳ್ಳವನಿಗೂ ವೀರ್ಯಸ್ರಾವವುಳ್ಳ ವನಿಗೂ ಅವುಗಳಿಂದ ಅಶುದ್ಧವಾಗುವವರಿಗೂ ಇರುವ ನಿಯಮವು ಇದೇ.
- 33 ಮುಟ್ಟು ಎಂಬ ರೋಗವಿರು ವವಳಿಗೂ ಮೇಹಸ್ರಾವವಿರುವ ಗಂಡಸಿಗೂ ಹೆಂಗಸಿಗೂ ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮವು ಇದೇ.
Leviticus 15
- Details
- Parent Category: Old Testament
- Category: Leviticus
ಯಾಜಕಕಾಂಡ ಅಧ್ಯಾಯ 15