- 1 ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
- 2 ಬೆಳಕಿ ಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿ ರುವಂತೆ ಅವರು ಕುಟ್ಟಿದ ಶುದ್ಧವಾದ ಹಿಪ್ಪೇ ಎಣ್ಣೆಯನ್ನು ನಿನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಬೇಕು.
- 3 ಸಭೆಯ ಗುಡಾರದೊಳಗೆ ಸಾಕ್ಷಿಯ ಪರದೆಯ ಹೊರಗಡೆ ಕರ್ತನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಬೆಳಗಿನ ವರೆಗೂ ಇರುವಂತೆ ಆರೋನನು ಅದನ್ನು ಕ್ರಮಪಡಿಸಬೇಕು. ಇದು ನಿಮ್ಮ ಸಂತತಿಯವರೊಳಗೆ ಶಾಶ್ವತವಾದ ನಿಯಮವಾಗಿ ರುವದು.
- 4 ದೀಪಗಳು ಶುದ್ಧವಾದ ದೀಪಸ್ತಂಭದ ಮೇಲೆ ಕರ್ತನ ಸನ್ನಿಧಿಯಲ್ಲಿ ಯಾವಾಗಲೂ ಇರುವಂತೆ ಅವನು ಕ್ರಮಪಡಿಸಬೇಕು.
- 5 ನೀನು ನಯವಾದ ಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಸುಡಬೇಕು; ಹತ್ತರಲ್ಲಿ ಎರಡು ಪಾಲು ಒಂದು ರೊಟ್ಟಿಯಲ್ಲಿ ಇರಬೇಕು.
- 6 ಅವುಗಳನ್ನು ಶುದ್ಧವಾದ ಮೇಜಿನ ಮೇಲೆ ಕರ್ತನ ಸನ್ನಿಧಿಯಲ್ಲಿ ಒಂದು ಸಾಲಿನಲ್ಲಿ ಆರರಂತೆ ಎರಡು ಸಾಲುಗಳನ್ನಾಗಿ ಇಡಬೇಕು.
- 7 ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾ ಗಿರುವಂತೆಯೂ ಬೆಂಕಿಯ ಮೂಲಕ ಕರ್ತನಿಗೆ ಸಮ ರ್ಪಣೆಯಾಗುವಂತೆಯೂ ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು.
- 8 ಪ್ರತಿಯೊಂದು ಸಬ್ಬತ್ತಿನಲ್ಲಿ ಕರ್ತನ ಎದುರಿನಲ್ಲಿ ಯಾವಾಗಲೂ ಅವನು ಅದನ್ನು ಕ್ರಮ ಪಡಿಸಬೇಕು; ಇದು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಿತ್ಯವಾದ ಒಡಂಬಡಿಕೆಯಾಗಿರಬೇಕು.
- 9 ಅದು ಆರೋನನ ಮತ್ತು ಅವನ ಕುಮಾರರದ್ದಾಗಿರಬೇಕು; ಅವರು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು; ಅದು ನಿತ್ಯವಾದ ನಿಯಮವಾಗಿ ಕರ್ತನಿಗೆ ಬೆಂಕಿಯಿಂದ ಮಾಡಿ ಸಮರ್ಪಿಸುವವುಗಳಲ್ಲಿ ಅವನಿಗೆ ಅತಿ ಪರಿಶುದ್ಧವಾಗಿರುವದು.
- 10 ಇದಲ್ಲದೆ ಇಸ್ರಾಯೇಲಿನವಳಾದ ಒಬ್ಬ ಸ್ತ್ರೀಗೂ ಐಗುಪ್ತನಾದ ಪುರುಷನಿಗೂ ಹುಟ್ಟಿದ ಮಗನು ಇಸ್ರಾಯೇಲ್ ಮಕ್ಕಳ ಮಧ್ಯದೊಳಗಿಂದ ಹೊರಗೆ ಬಂದನು; ಇಸ್ರಾಯೇಲಿನವಳಾದ ಸ್ತ್ರೀಯ ಈ ಮಗನು ಇಸ್ರಾಯೇಲಿನ ಒಬ್ಬ ಮನುಷ್ಯನೊಂದಿಗೆ ಪಾಳೆಯದಲ್ಲಿ ಒಬ್ಬರಿಗೊಬ್ಬರು ಜಗಳವಾಡಿದರು.
- 11 ಇಸ್ರಾಯೇಲ್ ಸ್ತ್ರೀಯ ಮಗನು ಕರ್ತನ ನಾಮವನ್ನು ದೂಷಿಸಿ ಶಪಿಸಿ ದನು. ಅವರು ಅವನನ್ನು ಮೋಶೆಯ ಬಳಿಗೆ ತಂದರು; (ಅವನ ತಾಯಿಯ ಹೆಸರು ದಾನನ ಕುಲದವನಾದ ದಿಬ್ರೀಯ ಮಗಳಾದ ಶೆಲೋವಿಾತ್).
- 12 ಅವನ ವಿಷಯವಾಗಿ ಅವರು ಕರ್ತನ ತೀರ್ಪನ್ನು ತಿಳಿದು ಕೊಳ್ಳುವದಕೋಸ್ಕರ ಅವನನ್ನು ಕಾವಲಲ್ಲಿ ಇಟ್ಟರು.
- 13 ಆಗ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
- 14 ಶಪಿಸಿದವನನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿರಿ; ಅವನಿಂದ ಕೇಳಿದ ವರೆಲ್ಲರು ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಡಲಿ, ಸಭೆಯವರೆಲ್ಲರೂ ಅವನಿಗೆ ಕಲ್ಲೆಸೆಯಲಿ.
- 15 ನೀನು ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳಬೇಕು--ತನ್ನ ದೇವರನ್ನು ಶಪಿಸುವವನು ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.
- 16 ಕರ್ತನ ನಾಮವನ್ನು ದೂಷಣೆ ಮಾಡುವವನಿಗೆ ನಿಶ್ಚಯವಾಗಿ ಮರಣವನ್ನು ವಿಧಿಸಬೇಕು ಮತ್ತು ಸಭೆಯವರೆಲ್ಲರು ನಿಶ್ಚಯವಾಗಿ ಅವನಿಗೆ ಕಲ್ಲೆಸೆಯಬೇಕು. ಇದಲ್ಲದೆ ದೇಶದೊಳಗೆ ಹುಟ್ಟಿದ ಪರಕೀಯನು ಕರ್ತನ ಹೆಸರನ್ನು ದೂಷಣೆ ಮಾಡಿದಾಗ ಅವನನ್ನು ಮರಣಕ್ಕೆ ಒಳಪಡಿಸಬೇಕು.
- 17 ಯಾವನಾದರೂ ಮನುಷ್ಯನನ್ನು ಕೊಲ್ಲುವವನು ನಿಶ್ಚಯವಾಗಿ ಮರಣಕ್ಕೆ ಒಳಪಡಬೇಕು.
- 18 ಪಶುವನ್ನು ಕೊಲ್ಲುವವನು ಅದಕ್ಕೆ ಪ್ರತಿಯಾಗಿ ಪಶುವನ್ನು ಕೊಡಬೇಕು.
- 19 ಯಾವನಾದರೂ ತನ್ನ ನೆರೆಯವನಿಗೆ ಊನ ವಾಗುವಂತೆ ಮಾಡಿದರೆ ಅವನು ಮಾಡಿದಂತೆಯೇ ಅವನಿಗೆ ಮಾಡಬೇಕು;
- 20 ಮುರಿತಕ್ಕೆ ಮುರಿತ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಅವನು ಒಬ್ಬನಿಗೆ ಊನಮಾಡಿದ ಹಾಗೆಯೇ ಅವನಿಗೂ ಮಾಡಬೇಕು.
- 21 ಪಶುವನ್ನು ಕೊಲ್ಲುವವನು ಅದಕ್ಕೆ ಬದಲು ಕೊಡಬೇಕು; ಮನುಷ್ಯ ನನ್ನು ಕೊಲ್ಲುವವನನ್ನು ಮರಣಕ್ಕೆ ಒಳಪಡಿಸಬೇಕು.
- 22 ನಿಮಗೆ ಒಂದೇ ವಿಧವಾದ ನ್ಯಾಯಪ್ರಮಾಣವಿರ ಬೇಕು. ಸ್ವದೇಶಸ್ಥನಿಗೆ ಇರುವಂತೆಯೇ ಪರಕೀಯನಿಗೂ ಇರಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.
- 23 ಶಪಿಸಿದವನನ್ನು ಪಾಳೆಯದ ಹೊರಗೆ ತಂದು ಅವನನ್ನು ಕಲ್ಲೆಸೆಯುವಂತೆ ಮೋಶೆಯು ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿದನು. ಆಗ ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ ಮಕ್ಕಳು ಮಾಡಿದರು.
Leviticus 24
- Details
- Parent Category: Old Testament
- Category: Leviticus
ಯಾಜಕಕಾಂಡ ಅಧ್ಯಾಯ 24