- 1 ಕರ್ತನು ಹೇಳುವದನ್ನು ಈಗ ಕೇಳಿರಿ--ಎದ್ದೇಳು,ಬೆಟ್ಟಗಳ ಮುಂದೆ ವ್ಯಾಜ್ಯವಾಡು; ಗುಡ್ಡಗಳು ನಿನ್ನ ಶಬ್ದವನ್ನು ಕೇಳಲಿ.
- 2 ಓ ಬೆಟ್ಟಗಳೇ, ಭೂಮಿಯ ಬಲವಾದ ಅಸ್ತಿವಾರಗಳಾದ ಬಂಡೆಗಳೇ, ಕರ್ತನ ವ್ಯಾಜ್ಯವನ್ನು ಕೇಳಿರಿ; ಕರ್ತನಿಗೆ ತನ್ನ ಜನರ ಸಂಗಡ ವ್ಯಾಜ್ಯ ಉಂಟು, ಇಸ್ರಾಯೇಲಿನ ಸಂಗಡ ಆತನು ತರ್ಕಿಸುತ್ತಾನೆ.
- 3 ನನ್ನ ಜನರೇ, ನಾನು ನಿನಗೆ ಏನು ಮಾಡಿದ್ದೇನೆ? ಯಾವದರಿಂದ ನಿನಗೆ ಬೇಸರ ಮಾಡಿದ್ದೇನೆ? ನನಗೆ ವಿರೋಧವಾಗಿ ಸಾಕ್ಷಿಕೊಡು.
- 4 ನಾನು ಐಗುಪ್ತದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ, ದಾಸರ ಮನೆಯೊಳಗಿಂದ ನಿನ್ನನ್ನು ವಿಮೋ ಚಿಸಿ, ಮೋಶೆಯನ್ನೂ ಆರೋನನನ್ನೂ ಮಿರಿಯಾಮ ಳನ್ನೂ ನಿನ್ನ ಮುಂದೆ ಕಳುಹಿಸಿದೆನು.
- 5 ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಯೋಚಿಸಿ ದ್ದನ್ನೂ ಬೆಯೋರನ ಮಗನಾದ ಬಿಳಾಮನು ಅವನಿಗೆ ಉತ್ತರವಾಗಿ ಹೇಳಿದ್ದನ್ನೂ ಶಿಟ್ಟೀಮು ಮೊದಲು ಗೊಂಡು ಗಿಲ್ಗಾಲಿನ ವರೆಗೂ ಆದದ್ದನ್ನೂ ಈಗ ಜ್ಞಾಪಕ ಮಾಡಿಕೊಳ್ಳಿರಿ. ಆಗ ಕರ್ತನ ನೀತಿಯನ್ನು ತಿಳುಕೊಳ್ಳು ವಿರಿ.
- 6 ನಾನು ಯಾವದರೊಂದಿಗೆ ಕರ್ತನ ಮುಂದೆ ಬರಲಿ? ಯಾವದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಸಂಗಡವೂ ಒಂದು ವರುಷದ ಕರುಗಳ ಸಂಗಡವೂ ಆತನ ಮುಂದೆ ಬರಲೋ?
- 7 ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಕರ್ತನು ಮೆಚ್ಚು ವನೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗ ನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲ ವನ್ನೂ ಕೊಡಲೋ?
- 8 ಮನುಷ್ಯನೇ, ಉತ್ತಮವಾದ ದ್ದನ್ನು ನಿನಗೆ ಆತನು ತಿಳಿಸಿದ್ದಾನೆ; ಹೌದು, ನ್ಯಾಯ ವನ್ನು ಮಾಡುವದೂ ಕರುಣೆಯನ್ನು ಪ್ರೀತಿಮಾಡು ವದೂ ನಿನ್ನ ದೇವರ ಸಂಗಡ ವಿನಯವಾಗಿ ನಡ ಕೊಳ್ಳುವದೂ ಇದನ್ನೇ ಹೊರತು ಕರ್ತನು ಇನ್ನೇನು ನಿನ್ನಿಂದ ಕೇಳುತ್ತಾನೆ.
- 9 ಕರ್ತನ ಸ್ವರವು ಪಟ್ಟಣಕ್ಕೆ ಕೂಗುತ್ತದೆ, ಮತ್ತು ಬುದ್ಧಿವಂತನು ನಿನ್ನ ಹೆಸರನ್ನು ನೋಡುವನು; ಬೆತ್ತ ವನ್ನೂ ಅದನ್ನು ನೇಮಿಸಿದವನನ್ನೂ ಕೇಳಿರಿ.
- 10 ದುಷ್ಟರ ಮನೆಯಲ್ಲಿ ದುಷ್ಟತ್ವದ ಬೊಕ್ಕಸಗಳೂ ಅಸಹ್ಯವಾದಂಥ ಕಡಿಮೆಯಾದ ಅಳತೆಯೂ ಉಂಟೋ?
- 11 ನಾನು ದುಷ್ಟತ್ವದ ತ್ರಾಸುಗಳುಳ್ಳವರನ್ನು ಮೋಸವಾದ ಕಲ್ಲು ಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?
- 12 ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿ ದ್ದಾರೆ, ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವ ರಾಗಿದ್ದಾರೆ; ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.
- 13 ಆದದರಿಂದ ನಾನು ಸಹ ನಿನ್ನನ್ನು ಹೊಡೆದು ನಿನಗೆ ರೋಗವನ್ನು ಬರಮಾಡುವೆನು; ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.
- 14 ನೀನು ಉಂಡು ತೃಪ್ತಿಯಾಗದೆ ಇರುವಿ; ನಿನ್ನೊಳಗೆ ನಿನ್ನ ಬೀಳ್ವಿಕೆಯು ಇರುವದು; ನೀನು ಹಿಡಿದು ತಪ್ಪಿಸದೆ ಇರುವಿ; ನೀನು ತಪ್ಪಿಸುವಂಥದ್ದನ್ನು ನಾನು ಕತ್ತಿಗೆ ಒಪ್ಪಿಸುವೆನು.
- 15 ನೀನು ಬೀಜ ಬಿತ್ತಿ ಕೊಯ್ಯದೆ ಇರುವಿ; ಇಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವಿ; ದ್ರಾಕ್ಷಾರಸ ಮಾಡಿ ಕುಡಿಯದೆ ಇರುವಿ.
- 16 ಒಮ್ರಿಯ ನಿಯಮಗಳನ್ನೂ ಅಹಾಬನ ಮನೆಯ ಸಮಸ್ತ ಕ್ರಿಯೆಗಳನ್ನೂ ಕೈಕೊಳ್ಳುತ್ತೀರಿ; ನಾನು ನಿನ್ನನ್ನು ಹಾಳಾ ಗಿಯೂ ಅದರ ನಿವಾಸಿಗಳನ್ನು ಸಿಳ್ಳಿಡುವಿಕೆಗಾಗಿಯೂ ಮಾಡುವ ಹಾಗೆ ಅವರ ಆಲೋಚನೆಗಳಲ್ಲಿ ನಡ ಕೊಳ್ಳುತ್ತೀರಿ; ಆದದರಿಂದ ನನ್ನ ಜನರ ನಿಂದೆಯನ್ನು ಹೊರುವಿರಿ.
Micah 06
- Details
- Parent Category: Old Testament
- Category: Micah
ಮಿಕ ಅಧ್ಯಾಯ 6