wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಅರಣ್ಯಕಾಂಡಅಧ್ಯಾಯ 25
  • 1 ಆಗ ಇಸ್ರಾಯೇಲ್ಯರು ಶಿಟ್ಟೀಮಿನಲ್ಲಿ ವಾಸವಾಗಿದ್ದಾಗ ಜನರು ಮೋವಾಬಿನ ಕುಮಾರ್ತೆಯರ ಸಂಗಡ ಜಾರತ್ವ ಮಾಡಲಾರಂಭಿ ಸಿದರು.
  • 2 ಇವರು ಜನರನ್ನು ತಮ್ಮ ದೇವರುಗಳ ಬಲಿಗಳಿಗೆ ಕರೆದರು; ಜನರು ತಿಂದು ಅವರ ದೇವರು ಗಳಿಗೆ ಅಡ್ಡಬಿದ್ದರು.
  • 3 ಇಸ್ರಾಯೇಲ್‌ ಬಾಳ್ಪೆಯೋರಿಗೆ ತಾನೇ ಕೂಡಿಕೊಂಡದ್ದರಿಂದ ಕರ್ತನ ಕೋಪವು ಇಸ್ರಾಯೇಲಿನ ಮೇಲೆ ಉರಿಯಿತು.
  • 4 ಆಗ ಕರ್ತನು ಮೋಶೆಗೆ--ಕರ್ತನ ಕೋಪಾಗ್ನಿಯು ಇಸ್ರಾಯೇಲಿ ನಿಂದ ತಿರುಗಿಕೊಳ್ಳುವ ಹಾಗೆ ನೀನು ಜನರ ಮುಖ್ಯಸ್ಥ ರೆಲ್ಲರನ್ನು ತಕ್ಕೊಂಡು ಅವರನ್ನು ಸೂರ್ಯನಿಗೆದುರಾಗಿ ಕರ್ತನ ಮುಂದೆ ತೂಗಹಾಕು.
  • 5 ಮೋಶೆ ಇಸ್ರಾಯೇ ಲಿನ ನ್ಯಾಯಾಧಿಪತಿಗಳಿಗೆ--ನಿಮ್ಮಲ್ಲಿ ಒಬ್ಬೊಬ್ಬನು ಬಾಳ್ಪೆಯೋರಿಗೆ ಕೂಡಿಕೊಂಡಿರುವ ತನ್ನ ಮನುಷ್ಯರನ್ನು ಕೊಲ್ಲಬೇಕು ಅಂದನು.
  • 6 ಇಗೋ, ಇಸ್ರಾಯೇಲ್‌ ಮಕ್ಕಳಲ್ಲಿ ಒಬ್ಬನು ಬಂದು ಮೋಶೆಗೂ ಸಭೆಯ ಗುಡಾರದ ಮುಂದೆ ಅಳುತ್ತಿರುವ ಇಸ್ರಾಯೇಲ್‌ ಮಕ್ಕಳ ಸಮಸ್ತ ಸಭೆಗೂ ಕಾಣುವ ಹಾಗೆ ತನ್ನ ಸಹೋದರರೊಳಗೆ ಒಬ್ಬ ಮಿದ್ಯಾನ್‌ ಸ್ತ್ರೀಯನ್ನು ತಂದನು.
  • 7 ಆರೋನನ ಮಗನಾಗಿದ್ದ ಎಲೀಯಾಜರನ ಮಗನಾದ ಫೀನೆಹಾಸನೆಂಬ ಯಾಜಕನು ಅದನ್ನು ನೋಡಿ ಸಭೆಯ ಮಧ್ಯದಿಂದ ಎದ್ದು ತನ್ನ ಕೈಯಲ್ಲಿ ಭಲ್ಲೆಯನ್ನು ಹಿಡುಕೊಂಡು
  • 8 ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ ಇಸ್ರಾಯೇಲಿನವನನ್ನೂ ಆ ಸ್ತ್ರೀಯನ್ನೂ ಇಬ್ಬರ ಹೊಟ್ಟೆಯನ್ನು ತಿವಿದನು; ಹೀಗೆ ಇಸ್ರಾಯೇಲ್‌ ಮಕ್ಕಳಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.
  • 9 ಆದರೆ ವ್ಯಾಧಿ ಯಿಂದ ಸತ್ತವರು ಇಪ್ಪತ್ತುನಾಲ್ಕು ಸಾವಿರ ಮಂದಿಯಾಗಿದ್ದರು.
  • 10 ಆಗ ಕರ್ತನು ಮೋಶೆಗೆ--
  • 11 ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನಾದ ಯಾಜಕ ನಾಗಿರುವ ಫೀನೆಹಾಸನು ಇಸ್ರಾಯೇಲಿನ ಮಕ್ಕಳಲ್ಲಿ ನನಗೋಸ್ಕರ ಆಸಕ್ತನಾಗಿದ್ದು ನಾನು ನನ್ನ ರೋಷದಿಂದ ಅವರನ್ನು ನಾಶಮಾಡದ ಹಾಗೆ ನನ್ನ ಕೋಪವನ್ನು ಅವರ ಮೇಲಿನಿಂದ ತಿರುಗಿಸಿ ಬಿಟ್ಟಿದ್ದಾನೆ.
  • 12 ಆದ ಕಾರಣ--ಇಗೋ, ನಾನು ಅವನೊಂದಿಗೆ ನನ್ನ ಸಮಾಧಾನದ ಒಡಂಬಡಿಕೆಯನ್ನು ಮಾಡುತ್ತೇನೆ ಎಂದು ಹೇಳು.
  • 13 ಅವನು ತನ್ನ ದೇವರಿಗೋಸ್ಕರ ಆಸಕ್ತನಾಗಿದ್ದು ಇಸ್ರಾಯೇಲಿನ ಮಕ್ಕಳಿಗೋಸ್ಕರ ಪಾಪ ಪ್ರಾಯಶ್ಚಿತ್ತ ಮಾಡಿದ್ದರಿಂದ ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆಯಾಗಿರುವದು ಎಂದು ಹೇಳಿದನು.
  • 14 ಆದರೆ ಮಿದ್ಯಾನ್‌ ಸ್ತ್ರೀಯ ಸಂಗಡ ಕೊಲ್ಲಲ್ಪಟ್ಟ ಆ ಇಸ್ರಾಯೇಲಿನವನ ಹೆಸರು ಜಿವ್ರೆಾ; ಅವನು ಸಾಲೂವಿನ ಮಗನು; ಸಿಮೆಯೋನ್ಯರ ತಂದೆ ಮನೆಯ ಪ್ರಧಾನನು.
  • 15 ಕೊಲ್ಲಲ್ಪಟ್ಟ ಮಿದ್ಯಾನ್‌ ಸ್ತ್ರೀಯ ಹೆಸರು ಕೊಜ್ಬೀ; ಅವಳು ಮಿದ್ಯಾನ್ಯರ ಪ್ರಜೆಯ ಮುಖ್ಯಸ್ಥನೂ ಮನೆಯ ಯಜಮಾನನೂ ಆಗಿರುವ ಚೂರನ ಮಗಳಾಗಿದ್ದಳು.
  • 16 ಕರ್ತನು ಮೋಶೆಗೆ--
  • 17 ಮಿದ್ಯಾನ್ಯರಿಗೆ ಉಪದ್ರ ಕೊಟ್ಟು ಅವರನ್ನು ಹೊಡೆಯಬೇಕು.
  • 18 ಅವರು ಪೆಗೋರಿನ ವಿಷಯದಲ್ಲಿಯೂ ಪೆಗೋರಿಗೋಸ್ಕರ ವ್ಯಾಧಿಯ ದಿವಸದಲ್ಲಿ ಕೊಲ್ಲಲ್ಪಟ್ಟ ತಮ್ಮ ಸಹೋದರಿ ಯಾಗಿಯೂ ಮಿದ್ಯಾನ್ಯರ ಪ್ರಧಾನ ಮಗಳಾಗಿಯೂ ಇದ್ದ ಕೊಜ್ಬೀಯ ವಿಷಯದಲ್ಲಿಯೂ ನಿಮಗೆ ಮಾಡಿದ ಮೋಸಗಳಿಂದ ನಿಮಗೆ ಉಪದ್ರಕೊಡುತ್ತಾರೆ ಎಂದು ಹೇಳಿದನು.