- 1 ನನ್ನ ಮಗನೇ, ನನ್ನ ಕಟ್ಟಳೆಯನ್ನು ಮರೆಯಬೇಡ. ನಿನ್ನ ಹೃದಯವು ನನ್ನ ಆಜ್ಞೆ ಗಳನ್ನು ಕಾಪಾಡಲಿ:
- 2 ಆಗ ಹೆಚ್ಚಾದ ದಿನಗಳೂ ದೀರ್ಘಾಯುಷ್ಯವೂ ಸಮಾಧಾನವೂ ನಿನಗೆ ಕೂಡಿಸ ಲ್ಪಡುವವು.
- 3 ಕರುಣೆಯೂ ಸತ್ಯವೂ ನಿನ್ನನ್ನು ಬಿಡದಿರಲಿ. ನಿನ್ನ ಕೊರಳಿನ ಸುತ್ತಲೂ ಅವುಗಳನ್ನು ಕಟ್ಟಿಕೋ; ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ.
- 4 ಹೀಗೆ ನೀನು ದೇವರ ಮುಂದೆಯೂ ಮನುಷ್ಯನ ಮುಂದೆಯೂ ದಯೆಯನ್ನೂ ಒಳ್ಳೆಯ ವಿವೇಕವನ್ನೂ ಪಡೆದುಕೊಳ್ಳುವಿ.
- 5 ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು; ನಿನ್ನ ಸ್ವಂತ ಬುದ್ಧಿಯ ಮೇಲೆ ಆಧಾರ ಮಾಡಿಕೊಳ್ಳಬೇಡ.
- 6 ನಿನ್ನ ಎಲ್ಲಾ ಮಾರ್ಗಗಳಲ್ಲಿ ಆತನನ್ನು ಸನ್ಮಾನಿಸು. ಆಗ ಆತನು ನಿನ್ನ ಮಾರ್ಗಗಳನ್ನು ಸರಾಗಮಾಡುವನು.
- 7 ನಿನ್ನ ದೃಷ್ಟಿಯಲ್ಲಿ ಜ್ಞಾನಿಯಂತೆ ನೀನು ಇರಬೇಡ; ಕರ್ತನಿಗೆ ಭಯಪಟ್ಟು ಕೆಟ್ಟತನದಿಂದ ನೀನು ತೊಲಗಿಹೋಗು.
- 8 ಅದು ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಆಗಿರುವದು.
- 9 ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು.
- 10 ಹೀಗೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬಲ್ಪಡುವವು, ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿ ತುಳುಕುವವು.
- 11 ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ;
- 12 ತಾನು ಮೆಚ್ಚುವ ಮಗನನ್ನು ತಂದೆಯು ಶಿಕ್ಷಿಸುವಂತೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವನನ್ನು ಆತನು ತಿದ್ದುವನು.
- 13 ಜ್ಞಾನವನ್ನು ಕಂಡು ಕೊಳ್ಳುವವನೂ ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು.
- 14 ಅದರ ವ್ಯಾಪಾರವೂ ಬೆಳ್ಳಿಯ ವ್ಯಾಪಾರಕ್ಕಿಂತಲೂ ಅದರ ಲಾಭವು ಸೋಸಿದ ಬಂಗಾರಕ್ಕಿಂತಲೂ ಉತ್ತಮವಾಗಿದೆ.
- 15 ಅದು ಮಾಣಿಕ್ಯಗಳಿಗಿಂತಲೂ ಬಹು ಅಮೂಲ್ಯವುಳ್ಳದ್ದಾಗಿದ್ದು ನಿನ್ನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಾಗುವದಿಲ್ಲ.
- 16 ಆಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ ಎಡಗೈಯಲ್ಲಿ ಐಶ್ವರ್ಯವೂ ಘನತೆಯೂ ಇವೆ.
- 17 ಅವಳ ಮಾರ್ಗ ಗಳು ಸಂತೋಷಕರವೂ ಎಲ್ಲಾ ದಾರಿಗಳು ಸಮಾ ಧಾನಕರವೂ ಆಗಿವೆ.
- 18 ತನ್ನನ್ನು ಹಿಡಿದುಕೊಳ್ಳುವ ವರಿಗೆ ಆಕೆಯು ಜೀವದ ವೃಕ್ಷವಾಗಿದ್ದಾಳೆ; ಆಕೆಯನ್ನು ಭದ್ರವಾಗಿ ಇಟ್ಟುಕೊಳ್ಳುವ ಪ್ರತಿಯೊಬ್ಬನೂ ಧನ್ಯನು.
- 19 ಕರ್ತನು ಜ್ಞಾನದಿಂದ ಭೂಮಿಯನ್ನು ಸ್ಥಾಪಿಸಿದನು; ವಿವೇಕದ ಮೂಲಕ ಆತನು ಆಕಾಶಗಳನ್ನು ಸ್ಥಿರಪಡಿಸಿ ದನು.
- 20 ಆತನ ತಿಳುವಳಿಕೆಯಿಂದ ಅಗಾಧಗಳು ಒಡೆದು ಮೇಘಗಳು ಇಬ್ಬನಿಯನ್ನು ಸುರಿಸುತ್ತವೆ.
- 21 ನನ್ನ ಮಗನೇ, ನಿನ್ನ ಕಣ್ಣುಗಳಿಂದ ಅವುಗಳು ತಪ್ಪಿಸಿಕೊಳ್ಳದೆ ಇರಲಿ. ಸುಜ್ಞಾನವನ್ನೂ ವಿವೇಕವನ್ನೂ ಇಟ್ಟುಕೋ.
- 22 ಅವು ನಿನ್ನ ಪ್ರಾಣಕ್ಕೆ ಜೀವವೂ ಕೊರ ಳಿಗೆ ಸೊಬಗೂ ಆಗಿರುವವು.
- 23 ನಿನ್ನ ಮಾರ್ಗದಲ್ಲಿ ನೀನು ನಿರ್ಭಯವಾಗಿ ನಡೆಯುವಿ, ನಿನ್ನ ಪಾದವು ಎಡವುವದಿಲ್ಲ.
- 24 ನೀನು ಮಲಗುವಾಗ ನಿನಗೆ ಹೆದರಿಕೆ ಇರುವದಿಲ್ಲ, ಹೌದು, ನೀನು ಮಲಗಿಕೊಳ್ಳುವಿ. ನಿನ್ನ ನಿದ್ರೆಯು ಸುಖವಾಗಿರುವದು.
- 25 ಆಕಸ್ಮತ್ತಾದ ಭಯ ಕ್ಕಾಗಲಿ ಇಲ್ಲವೆ ಅವರ ಮೇಲೆ ಬರುವ ದುಷ್ಟರ ನಾಶನಕ್ಕಾಗಲಿ ನೀನು ಭಯಪಡದಿರು.
- 26 ಕರ್ತನೇ ನಿನಗೆ ಭರವಸನಾಗಿದ್ದು ನಿನ್ನ ಪಾದವು ತೆಗೆಯಲ್ಪಡ ದಂತೆ ಆತನು ಕಾಪಾಡುವನು.
- 27 ನಿನಗೆ ಸಾಧ್ಯವಿರುವಾಗ ಹೊಂದತಕ್ಕವರಿಗೆ ಒಳ್ಳೆ ಯದು ಮಾಡುವದನ್ನು ತಪ್ಪಿಸಬೇಡ.
- 28 ಕೊಡತಕ್ಕದ್ದು ನಿನ್ನಲ್ಲಿರುವಾಗ--ಹೋಗಿ ಬಾ, ನಾಳೆ ನಿನಗೆ ಕೊಡು ವೆನು ಎಂದು ನಿನ್ನ ನೆರೆಯವನಿಗೆ ಹೇಳಬೇಡ.
- 29 ನಿನ್ನ ನೆರೆಯವನು ಭದ್ರತೆಯಿಂದ ನಿನ್ನ ಪಕ್ಕದಲ್ಲಿ ಜೀವಿ ಸುತ್ತಿರುವಾಗ ಅವನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸ ಬೇಡ.
- 30 ಒಬ್ಬನು ನಿನಗೆ ಯಾವ ಕೇಡನ್ನೂ ಮಾಡ ದಿದ್ದರೆ ಅವನೊಂದಿಗೆ ಯಾವ ಕಾರಣವಿಲ್ಲದೆ ಜಗಳ ವಾಡಬೇಡ.
- 31 ಬಲಾತ್ಕಾರಿಯ ವಿಷಯದಲ್ಲಿ ನೀನು ಹೊಟ್ಟೇಕಿಚ್ಚುಪಡಬೇಡ, ಅವನ ಮಾರ್ಗಗಳಲ್ಲಿ ಯಾವದನ್ನೂ ನೀನು ಆರಿಸಿಕೊಳ್ಳಬೇಡ.
- 32 ವಕ್ರ ಬುದ್ಧಿಯವನು ಕರ್ತನಿಗೆ ಅಸಹ್ಯನಾಗಿದ್ದಾನೆ; ಆದರೆ ಆತನ ಗುಟ್ಟು ನೀತಿವಂತರೊಂದಿಗೆ ಇದೆ.
- 33 ಕರ್ತನ ಶಾಪವು ದುಷ್ಟರ ಮನೆಯಲ್ಲಿದೆ; ಆದರೆ ನ್ಯಾಯಸ್ಥರ ನಿವಾಸವನ್ನು ಆತನು ಆಶೀರ್ವದಿಸುತ್ತಾನೆ.
- 34 ಆತನು ನಿಶ್ಚಯವಾಗಿಯೂ ಪರಿಹಾಸ್ಯಕರನ್ನು ತಿರಸ್ಕರಿಸುತ್ತಾನೆ; ಆದರೆ ದೀನರಿಗೆ ಆತನು ಕೃಪೆಯನ್ನು ಕೊಡುತ್ತಾನೆ.
- 35 ಜ್ಞಾನಿಯು ಮಹಿಮೆಗೆ ಬಾಧ್ಯನಾಗುವನು, ಜ್ಞಾನ ಹೀನರ ಏಳಿಗೆಯು ಅವಮಾನವಾಗುವದು.
Proverbs 03
- Details
- Parent Category: Old Testament
- Category: Proverbs
ಙ್ಞಾನೋಕ್ತಿಗಳು ಅಧ್ಯಾಯ 3