wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಙ್ಞಾನೋಕ್ತಿಗಳುಅಧ್ಯಾಯ 29
  • 1 ಅನೇಕ ಸಲ ಗದರಿಸಲ್ಪಟ್ಟರೂ ಬಗ್ಗದಕುತ್ತಿಗೆಯವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.
  • 2 ನೀತಿವಂತರು ಅಧಿಕಾರದಲ್ಲಿ ದ್ದಾಗ ಜನರು ಹರ್ಷಿಸುತ್ತಾರೆ; ದುಷ್ಟನು ಆಳಿದರೆ ಜನರು ಶೋಕಿಸುತ್ತಾರೆ.
  • 3 ಜ್ಞಾನವನ್ನು ಪ್ರೀತಿಸುವವನು ತನ್ನ ತಂದೆಯನ್ನು ಹರ್ಷಗೊಳಿಸುತ್ತಾನೆ; ವೇಶ್ಯೆಯ ರೊಂದಿಗೆ ಸಹವಾಸ ಮಾಡುವವನು ತನ್ನ ಆಸ್ತಿಯನ್ನು ವೆಚ್ಚಮಾಡುತ್ತಾನೆ.
  • 4 ನ್ಯಾಯತೀರ್ಪಿನಿಂದ ಅರಸನು ದೇಶವನ್ನು ಸ್ಥಿರಗೊಳಿಸುತ್ತಾನೆ; ಲಂಚಗಳನ್ನು ಸ್ವೀಕರಿಸು ವವನು ಅದನ್ನು ಕೆಡವಿಹಾಕುತ್ತಾನೆ.
  • 5 ತನ್ನ ನೆರೆಯವ ನನ್ನು ಮುಖಸ್ತುತಿ ಮಾಡುವವನು ಅವನ ಪಾದಗಳಿಗೆ ಬಲೆಯನ್ನು ಒಡ್ಡುತ್ತಾನೆ.
  • 6 ಕೆಟ್ಟವನ ದೋಷದಲ್ಲಿ ಉರ್ಲು ಇದೆ; ನೀತಿವಂತನು ಹಾಡಿ ಹರ್ಷಿಸುತ್ತಾನೆ.
  • 7 ಬಡವರ ನಿಮಿತ್ತ ನೀತಿವಂತನು ಯೋಚಿಸುತ್ತಾನೆ; ದುಷ್ಟನು ಅದನ್ನು ತಿಳುಕೊಳ್ಳುವಂತೆ ಲಕ್ಷ್ಯಕ್ಕೆ ತರುವ ದಿಲ್ಲ.
  • 8 ಪರಿಹಾಸ್ಯಗಾರರು ಪಟ್ಟಣಕ್ಕೆ ಉರ್ಲನ್ನು ಒಡ್ಡು ತ್ತಾರೆ; ಜ್ಞಾನಿಗಳು ಕೋಪವನ್ನು ತಿರುಗಿಸುವರು.
  • 9 ಜ್ಞಾನಿಯು ಬುದ್ಧಿಹೀನನೊಂದಿಗೆ ವ್ಯಾಜ್ಯ ಮಾಡಿ ದರೆ ಅವನು ರೇಗಿದರೂ ನಕ್ಕರೂ ಶಮನವಾಗುವು ದಿಲ್ಲ.
  • 10 ಕೊಲೆಪಾತಕರು ನೀತಿವಂತರನ್ನು ದ್ವೇಷಿಸು ತ್ತಾರೆ; ಯಥಾರ್ಥವಂತರು ಅವನ ಪ್ರಾಣವನ್ನು ಹುಡು ಕುತ್ತಾರೆ.
  • 11 ಮೂಢನು ತನ್ನ ಮನಸ್ಸನ್ನೆಲ್ಲಾ ಹೊರ ಪಡಿಸುತ್ತಾನೆ; ಜ್ಞಾನಿಯು ಅದನ್ನು ಕಾಯುತ್ತಾನೆ.
  • 12 ಸುಳ್ಳಿಗೆ ಕಿವಿಗೊಡುವ ಅಧಿಕಾರಿಗೆ ಕಿವಿಗೊಟ್ಟರೆ ಅವನ ಸೇವಕರೆಲ್ಲರೂ ದುಷ್ಟರೇ.
  • 13 ಬಡವರೂ ಮೋಸಗಾರರೂ ಒಟ್ಟಾಗಿ ಸಂಧಿಸುತ್ತಾರೆ; ಕರ್ತನು ಅವರಿಬ್ಬರ ಕಣ್ಣುಗಳನ್ನು ಬೆಳಗಿಸುತ್ತಾನೆ.
  • 14 ಬಡವರಿಗೆ ನಂಬಿಕೆಯಿಂದ ನ್ಯಾಯತೀರಿಸುವ ಅರಸನ ಸಿಂಹಾ ಸನವು ಎಂದೆಂದಿಗೂ ಸ್ಥಿರಗೊಳ್ಳುವದು.
  • 15 ಬೆತ್ತ ಬೆದ ರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.
  • 16 ದುಷ್ಟರು ವೃದ್ಧಿಯಾದಾಗ ದೋಷವು ಹೆಚ್ಚುತ್ತದೆ; ನೀತಿವಂತರು ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
  • 17 ನಿನ್ನ ಮಗನನ್ನು ಶಿಕ್ಷಿಸಿದರೆ ಅವ ನಿಂದ ನಿನಗೆ ನೆಮ್ಮದಿಯಾಗುವದು; ಹೌದು, ಅವನು ನಿನ್ನ ಪ್ರಾಣಕ್ಕೆ ಆನಂದವನ್ನುಂಟು ಮಾಡುವನು.
  • 18 ದರ್ಶನವಿಲ್ಲದಿರುವಲ್ಲಿ ಜನರು ನಾಶವಾಗುತ್ತಾರೆ; ನ್ಯಾಯಪ್ರಮಾಣವನ್ನು ಕೈಕೊಳ್ಳುವವನು ಧನ್ಯನು.
  • 19 ಮಾತುಗಳಿಂದ ಸೇವಕನು ಶಿಕ್ಷಿಸಲ್ಪಡುವದಿಲ್ಲ; ಅವನು ತಿಳಿದುಕೊಂಡರೂ ಉತ್ತರಿಸುವದಿಲ್ಲ.
  • 20 ತನ್ನ ಮಾತುಗಳಲ್ಲಿ ದುಡುಕುವವನನ್ನು ನೀನು ನೋಡಿದ್ದೀಯೋ? ಅವನಿಗಿಂತಲೂ ಬುದ್ದಿಹೀನನ ವಿಷಯ ದಲ್ಲಿ ಹೆಚ್ಚು ನಿರೀಕ್ಷೆ ಇದೆ.
  • 21 ಬಾಲ್ಯದಿಂದ ತನ್ನ ಸೇವಕನನ್ನು ಕೋಮಲವಾಗಿ ಸಾಕುವವನು ತರುವಾಯ ತನಗೆ ಮಗನಂತೆ ಆಗುವನು.
  • 22 ಕೋಪಿಷ್ಠನು ಜಗಳ ವನ್ನೆಬ್ಬಿಸುತ್ತಾನೆ; ರೋಷಗೊಂಡವನು ದೋಷದಲ್ಲಿ ತುಂಬಿರುತ್ತಾನೆ.
  • 23 ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು.
  • 24 ಕಳ್ಳರೊಂದಿಗೆ ಪಾಲು ಗಾರನು ತನ್ನನ್ನು ತಾನೇ ಹಗೆಮಾಡುತ್ತಾನೆ; ಅವನು ಶಾಪವನ್ನು ಕೇಳಿತಿಳಿಸುವದಿಲ್ಲ.
  • 25 ಮನುಷ್ಯನ ಭಯವು ಉರುಲನ್ನು ತರುತ್ತದೆ; ಕರ್ತನಲ್ಲಿ ಭರವಸ ವಿಡುವವನು ಕ್ಷೇಮದಿಂದಿರುವನು.
  • 26 ಅನೇಕರು ಅಧಿ ಪತಿಯ ದಯೆಯನ್ನು ಹುಡುಕುತ್ತಾರೆ; ಕರ್ತನಿಂದಲೇ ಪ್ರತಿಯೊಬ್ಬನ ನ್ಯಾಯತೀರ್ಪು ಬರುತ್ತದೆ.
  • 27 ಅನೀತಿ ವಂತನು ನೀತಿವಂತರಿಗೆ ಅಸಹ್ಯ; ತನ್ನ ಮಾರ್ಗದಲ್ಲಿ ಯಥಾರ್ಥವಾಗಿರುವವನು ದುಷ್ಟರಿಗೆ ಅಸಹ್ಯ.