- 1 ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ಪ್ರವಾದನೆಯು.
- 2 ನನ್ನ ಮಗನೇ ಏನು? ನನ್ನ ಗರ್ಭಪುತ್ರನೇ ಏನು? ನನ್ನ ಪ್ರತಿಜ್ಞೆಯ ಮಗನೇ ಏನು?
- 3 ನಿನ್ನ ತ್ರಾಣವನ್ನು ಸ್ತ್ರೀಯರಲ್ಲಿ ಒಪ್ಪಿಸದಿರು, ಇಲ್ಲವೆ ಅರಸರನ್ನು ನಾಶಪಡಿಸುವ ದಾರಿಗಳಿಗೆ ತಿರುಗಬೇಡ.
- 4 ದ್ರಾಕ್ಷಾರಸವನ್ನು ಕುಡಿ ಯುವದು ರಾಜರಿಗೆ ಯೋಗ್ಯವಲ್ಲ; ಓ ಲೆಮೂ ವೇಲನೇ, ಅದು ಅರಸರಿಗೆ ಬೇಡ; ಇಲ್ಲವೆ ಪ್ರಭುಗ ಳಿಗೆ ಕುಡಿಯುವದು ಹಿತವಲ್ಲ;
- 5 ಕುಡಿದರೆ ಅವರು ಕಟ್ಟಿಳೆಯನ್ನು ಮರೆತು ಬಾಧಿತರಲ್ಲಿ ಯಾವನಿಗಾದರೂ ನ್ಯಾಯತೀರ್ಪನ್ನು ವ್ಯತ್ಯಾಸಮಾಡುತ್ತಾರೆ.
- 6 ನಾಶ ವಾಗುವದಕ್ಕೆ ಸಿದ್ಧವಾಗಿರುವವನಿಗೆ ಮದ್ಯವನ್ನೂ ಮನೋವ್ಯಥೆಪಡುವವರಿಗೆ ದ್ರಾಕ್ಷಾರಸವನ್ನೂ ಕೊಡು.
- 7 ಅವನು ಕುಡಿದು ತನ್ನ ಬಡತನವನ್ನು ಮರೆತುಬಿಡಲಿ; ತನ್ನ ಶ್ರೆಮೆಯನ್ನು ಇನ್ನು ಜ್ಞಾಪಕಕ್ಕೆ ತಾರದಿರಲಿ;
- 8 ಮೂಕರಿಗಾಗಿಯೂ ನಾಶವಾಗುವದಕ್ಕೆ ನೇಮಿಸಲ್ಪಟ್ಟ ವರೆಲ್ಲರಿಗಾಗಿಯೂ ನಿನ್ನ ಬಾಯನ್ನು ತೆರೆ.
- 9 ನಿನ್ನ ಬಾಯಿ ತೆರೆದು ನೀತಿಯಿಂದ ನ್ಯಾಯತೀರಿಸು; ದರಿದ್ರ ರಿಗಾಗಿಯೂ ದಿಕ್ಕಿಲ್ಲದವರಿಗಾಗಿಯೂ ವ್ಯಾಜ್ಯಮಾಡು.
- 10 ಗುಣವತಿಯಾದ ಸ್ತ್ರೀಯನ್ನು ಯಾವನು ಕಂಡು ಕೊಂಡಾನು? ಅವಳ ಕ್ರಯ ಹವಳಕ್ಕಿಂತಲೂ ಅಮೂ ಲ್ಯವೇ.
- 11 ತನಗೆ ಯಾವ ನಷ್ಟವೂ ಇರದಂತೆ ಅವಳ ಪತಿಯ ಹೃದಯವು ತನ್ನಲ್ಲಿ ನಿರ್ಭಯವಾಗಿ ಭರವಸೆ ಇಡುತ್ತದೆ.
- 12 ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ, ಒಳ್ಳೇದನ್ನೇ ಮಾಡುವಳು.
- 13 ಆಕೆಯು ಉಣ್ಣೆಯನ್ನೂ ಸಣಬನ್ನೂ ಹುಡುಕು ವವಳಾಗಿ ತನ್ನ ಕೈಗಳಿಂದ ಮನಃಪೂರ್ವಕವಾಗಿ ಕೆಲಸ ಮಾಡುತ್ತಾಳೆ.
- 14 ಆಕೆಯು ವರ್ತಕರ ಹಡಗುಗಳಂತೆ ಇದ್ದಾಳೆ; ಆಕೆಯು ದೂರದಿಂದ ತನ್ನ ಆಹಾರವನ್ನು ತರುತ್ತಾಳೆ.
- 15 ಆಕೆಯು ಇನ್ನೂ ಕತ್ತಲಿರುವಾಗಲೇ ಎದ್ದು ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು ತನ್ನ ದಾಸಿಯರಿಗೆ ಭತ್ಯವನ್ನು ಹಂಚುತ್ತಾಳೆ.
- 16 ಆಕೆಯು ಯೋಚಿಸಿ ಹೊಲವನ್ನು ಕೊಂಡುಕೊಳ್ಳುತ್ತಾಳೆ; ತನ್ನ ಕೈಕೆಲಸದ ಫಲದಿಂದ ಆಕೆಯು ದ್ರಾಕ್ಷಾಲತೆಗಳನ್ನು ನೆಡುತ್ತಾಳೆ.
- 17 ಆಕೆಯು ತನ್ನ ಬಲದಿಂದ ನಡುವನ್ನು ಕಟ್ಟಿಕೊಂಡು ತನ್ನ ತೋಳುಗಳನ್ನು ಶಕ್ತಿಗೊಳಿಸುತ್ತಾಳೆ.
- 18 ತನ್ನ ವ್ಯಾಪಾರದ ಸರಕು ಒಳ್ಳೇದೆಂದು ಆಕೆಯು ತಿಳು ಕೊಳ್ಳುತ್ತಾಳೆ; ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.
- 19 ರಾಟೆಯ ಮೇಲೆ ಕೈಹಾಕಿ ತನ್ನ ಕೈಗಳು ಕದರನ್ನು ಹಿಡಿಯುತ್ತವೆ.
- 20 ಆಕೆಯು ಬಡವರಿಗಾಗಿ ಕೈ ಬಿಚ್ಚುತ್ತಾಳೆ; ಹೌದು, ದಿಕ್ಕಿಲ್ಲದವರಿಗೆ ಆಕೆಯು ಕೈ ನೀಡುತ್ತಾಳೆ.
- 21 ತನ್ನ ಮನೆಯವರಿಗಾಗಿ ಆಕೆಯು ಹಿಮಕ್ಕೆ ಭಯಪಡುವದಿಲ್ಲ; ಆಕೆಯ ಮನೆಯವ ರೆಲ್ಲರೂ ರಕ್ತಾಂಭರಗಳಿಂದ ಹೊದಿಸಲ್ಪಟ್ಟಿದ್ದಾರೆ.
- 22 ಆಕೆಯು ತನಗಾಗಿ ರತ್ನ ಕಂಬಳಿಗಳನ್ನು ಮಾಡು ತ್ತಾಳೆ; ಆಕೆಯ ಉಡುಪೋ ರೇಷ್ಮೆ ರಕ್ತಾಂಭರ.
- 23 ದೇಶದ ಹಿರಿಯರ ಮಧ್ಯದಲ್ಲಿ ತನ್ನ ಪತಿಯು ಕೂತಿ ರುವಾಗ ಅವನು ದ್ವಾರಗಳಲ್ಲಿ ಪ್ರಸಿದ್ಧನಾಗಿರುವನು.
- 24 ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ; ಆಕೆಯು ವರ್ತಕನಿಗೆ ನಡುಕಟ್ಟುಗಳನ್ನು ಒಪ್ಪಿಸುತ್ತಾಳೆ.
- 25 ಆಕೆಯ ಉಡುಪು ಬಲವೂ ಘನತೆಯೂ ಆಗಿವೆ; ಭವಿಷ್ಯತ್ತಿ ನಲ್ಲಿ ಆಕೆಯು ಸಂತೋಷಿಸುವಳು.
- 26 ಆಕೆಯು ಜ್ಞಾನದಿಂದ ತನ್ನ ಬಾಯಿ ತೆರೆಯುತ್ತಾಳೆ; ತನ್ನ ನಾಲಿಗೆಯಲ್ಲಿ ದಯೆಯ ಉಪದೇಶವಿರುವದು.
- 27 ಆಕೆಯು ತನ್ನ ಗೃಹಕೃತ್ಯಗಳ ನ್ನೆಲ್ಲಾ ಚೆನ್ನಾಗಿ ನೋಡಿಕೊಂಡವಳಾಗಿ ಸೋಮಾರಿ ತನದ ರೊಟ್ಟಿಯನ್ನು ತಿನ್ನುವದಿಲ್ಲ.
- 28 ಆಕೆಯ ಮಕ್ಕಳು ಎದ್ದು ಆಕೆಯನ್ನು ಧನ್ಯಳೆಂದು ಕರೆಯುತ್ತಾರೆ; ಆಕೆಯ ಪತಿಯು ಸಹ ಹೊಗಳುತ್ತಾನೆ.
- 29 ಅವನು--ಬಹು ಮಂದಿ ಕುಮಾರ್ತೆಯರು ಗುಣವತಿಯಾಗಿ ನಡೆದಿ ದ್ದಾರೆ; ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು ಎಂದು ತನ್ನ ಪತಿಯು ಹೊಗಳುತ್ತಾನೆ.
- 30 ಸೌಂದ ರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು.
- 31 ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.
Proverbs 31
- Details
- Parent Category: Old Testament
- Category: Proverbs
ಙ್ಞಾನೋಕ್ತಿಗಳು ಅಧ್ಯಾಯ 31