wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಕೀರ್ತನೆಗಳುಅಧ್ಯಾಯ 25
  • 1 ಓ ಕರ್ತನೇ, ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.
  • 2 ಓ ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ; ನಾನು ಆಶಾಭಂಗ ಪಡದಂತೆಮಾಡು; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.
  • 3 ನಿನ್ನನ್ನು ನಿರೀಕ್ಷಿಸು ವವರಲ್ಲಿ ಯಾರೂ ಆಶಾಭಂಗಪಡದಿರಲಿ; ನಿಷ್ಕಾರಣ ವಾಗಿ ದ್ರೋಹ ಮಾಡುವವರು ನಾಚಿಕೆಗೊಳ್ಳಲಿ.
  • 4 ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು.
  • 5 ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ.
  • 6 ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು.
  • 7 ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.
  • 8 ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು.
  • 9 ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು.
  • 10 ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು.
  • 11 ಓ ಕರ್ತನೇ, ನನ್ನ ಅಕ್ರಮವು ಬಹಳ ವಾಗಿದೆ. ನಿನ್ನ ಹೆಸರಿನ ನಿಮಿತ್ತ ಅದನ್ನು ಮನ್ನಿಸು;
  • 12 ಕರ್ತನಿಗೆ ಭಯಪಡುವ ಮನುಷ್ಯನು ಯಾರು? ಅವನು ಆದು ಕೊಳ್ಳುವ ಮಾರ್ಗದಲ್ಲಿ ಆತನು ಅವನಿಗೆ ಬೋಧಿಸುವನು.
  • 13 ಅವನ ಪ್ರಾಣವು ಸುಖದಲ್ಲಿ ಉಳುಕೊಳ್ಳುವದು; ಅವನ ಸಂತಾನವು ದೇಶವನ್ನು ಸ್ವಾಧೀನಮಾಡಿಕೊಳ್ಳುವದು.
  • 14 ಕರ್ತನ ಗುಟ್ಟು ಆತ ನಿಗೆ ಭಯಪಡುವವರೊಂದಿಗೆ ಅದೆ; ತನ್ನ ಒಡಂಬಡಿಕೆ ಯನ್ನು ಆತನು ಅವರಿಗೆ ತಿಳಿಸುವನು.
  • 15 ನನ್ನ ಕಣ್ಣುಗಳು ಯಾವಾಗಲೂ ಕರ್ತನ ಕಡೆಗೆ ಅವೆ; ಆತನೇ ನನ್ನ ಪಾದಗಳನ್ನು ಬಲೆಯಿಂದ ಹೊರಗೆ ಬರಮಾಡುವನು.
  • 16 ನೀನು ನನ್ನ ಕಡೆಗೆ ತಿರುಗಿ ನನ್ನ ಮೇಲೆ ಕರುಣೆಯಿಡು; ನಾನು ಒಂಟಿಗ ನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ.
  • 17 ನನ್ನ ಮನೋವ್ಯಥೆಗಳು ಹೆಚ್ಚಾಗಿವೆ; ನೀನು ನನ್ನ ಸಂಕಟಗಳೊಳಗಿಂದ ನನ್ನನ್ನು ಹೊರಗೆ ಬರಮಾಡು.
  • 18 ನನ್ನ ಸಂಕಟವನ್ನೂ ನೋವನ್ನೂ ನೋಡು; ನನ್ನ ಪಾಪಗಳನ್ನೆಲ್ಲಾ ಕ್ಷಮಿಸು.
  • 19 ನನ್ನ ಶತ್ರುಗಳನ್ನು ನೋಡು, ಅವರು ಹೆಚ್ಚಾಗಿದ್ದಾರೆ; ಕ್ರೂರವಾದ ಹಗೆ ಯಿಂದ ಅವರು ನನ್ನನ್ನು ಹಗೆಮಾಡುತ್ತಾರೆ.
  • 20 ಹಾ, ನನ್ನ ಪ್ರಾಣವನ್ನು ಕಾಪಾಡಿ ನನ್ನನ್ನು ಬಿಡಿಸು; ನಾನು ಆಶಾಭಂಗಪಡದಂತೆ ಮಾಡು; ನಾನು ನಿನ್ನಲ್ಲಿ ಭರವಸ ವಿಟ್ಟಿದ್ದೇನೆ.
  • 21 ಯಥಾರ್ಥತೆಯೂ ನಿರ್ಮಲತೆಯೂ ನನ್ನನ್ನು ಕಾಯಲಿ; ನಿನ್ನನ್ನು ನಿರೀಕ್ಷಿಸುತ್ತೇನೆ.
  • 22 ಓ ದೇವರೇ, ಇಸ್ರಾಯೇಲ್ಯರನ್ನು ಅವರ ಎಲ್ಲಾ ಭಾದೆ ಗಳೊಳಗಿಂದ ವಿಮೋಚಿಸು.