- 1 ನಾನು ಎಲ್ಲಾ ಕಾಲಗಳಲ್ಲಿ ಕರ್ತನನ್ನು ಸ್ತುತಿಸುವೆನು; ಆತನ ಸ್ತೋತ್ರವು ಯಾವಾ ಗಲೂ ನನ್ನ ಬಾಯಲ್ಲಿ ಇರುವದು.
- 2 ನನ್ನ ಪ್ರಾಣವು ಕರ್ತನಲ್ಲಿ ಹೊಗಳಿಕೊಳ್ಳುವದು; ಇದನ್ನು ದೀನರು ಕೇಳಿ ಸಂತೋಷಪಡುವರು.
- 3 ನನ್ನ ಸಂಗಡ ಕರ್ತ ನನ್ನು ಘನಪಡಿಸಿರಿ. ನಾವು ಒಟ್ಟಾಗಿ ಆತನ ಹೆಸ ರನ್ನು ಘನಪಡಿಸೋಣ.
- 4 ನಾನು ಕರ್ತನನ್ನು ಹುಡು ಕಿದೆನು; ಆಗ ಆತನು ನನಗೆ ಉತ್ತರಕೊಟ್ಟು ನನ್ನ ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದನು.
- 5 ಅವರು ಆತನನ್ನು ದೃಷ್ಟಿಸಿ ಪ್ರಕಾಶ ಹೊಂದಿದರು. ಅವರ ಮುಖಗಳು ನಾಚಿಕೆಪಡಲಿಲ್ಲ.
- 6 ಈ ಬಡವನು ಮೊರೆ ಯಿಡಲು; ಕರ್ತನು ಅದನ್ನು ಕೇಳಿ ಅವನ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವನನ್ನು ರಕ್ಷಿಸಿದನು.
- 7 ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ.
- 8 ಕರ್ತನು ಒಳ್ಳೆಯವನೆಂದು ರುಚಿಸಿ ನೋಡಿರಿ; ಆತನಲ್ಲಿ ಆಶ್ರ ಯಿಸಿಕೊಳ್ಳುವ ಮನುಷ್ಯನು ಧನ್ಯನು.
- 9 ಆತನ ಪರಿ ಶುದ್ಧರೇ, ನೀವು ಕರ್ತನಿಗೆ ಭಯಪಡಿರಿ; ಆತನಿಗೆ ಭಯಪಡುವವರಿಗೆ ಏನೂ ಕೊರತೆ ಇಲ್ಲ.
- 10 ಪ್ರಾಯದ ಸಿಂಹಗಳು ಕೊರತೆಯಾಗಿ ಹಸಿಯುತ್ತವೆ; ಆದರೆ ಕರ್ತನನ್ನು ಹುಡುಕುವವರು ಯಾವ ಒಳ್ಳೆಯ ದಕ್ಕಾದರೂ ಕೊರತೆ ಪಡುವದಿಲ್ಲ.
- 11 ಮಕ್ಕಳೇ, ನೀವು ಬಂದು ನನ್ನ ಮಾತನ್ನು ಕೇಳಿರಿ; ನಾನು ಕರ್ತನ ಭಯವನ್ನು ನಿಮಗೆ ಕಲಿಸುವೆನು.
- 12 ಒಳ್ಳೆಯದನ್ನು ನೋಡುವಂತೆ ದಿವಸಗಳನ್ನು ಪ್ರೀತಿ ಮಾಡಿ, ಜೀವವನ್ನು ಕೋರುವ ಮನುಷ್ಯನು ಯಾರು?
- 13 ಕೇಡಿನಿಂದ ನಿನ್ನ ನಾಲಿಗೆಯನ್ನೂ ಮೋಸವನ್ನು ನುಡಿಯದ ಹಾಗೆ ನಿನ್ನ ತುಟಿಗಳನ್ನೂ ಕಾಯಿ.
- 14 ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು; ಸಮಾ ಧಾನವನ್ನು ಹುಡುಕಿ ಅದನ್ನು ಹಿಂಬಾಲಿಸು.
- 15 ಕರ್ತನ ಕಣ್ಣುಗಳು ನೀತಿವಂತರ ಮೇಲೆಯೂ ಆತನ ಕಿವಿಗಳು ಅವರ ಮೊರೆಯ ಕಡೆಗೂ ಅವೆ.
- 16 ಕೇಡನ್ನು ಮಾಡುವವರ ಜ್ಞಾಪಕವನ್ನು ಭೂಮಿ ಯೊಳಗಿಂದ ಕಡಿದುಹಾಕುವದಕ್ಕೆ ಕರ್ತನ ಮುಖವು ಅವರಿಗೆ ವಿರೋಧವಾಗಿದೆ.
- 17 ನೀತಿವಂತರು ಕೂಗು ತ್ತಾರೆ; ಆಗ ಕರ್ತನು ಕೇಳಿ ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವರನ್ನು ಬಿಡಿಸುತ್ತಾನೆ.
- 18 ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ.
- 19 ನೀತಿವಂತನಿಗೆ ಬರುವ ಕೇಡುಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಕರ್ತನು ಅವನನ್ನು ಬಿಡಿಸುತ್ತಾನೆ.
- 20 ಆತನ ಎಲುಬು ಗಳನ್ನೆಲ್ಲಾ ಕಾಪಾಡುತ್ತಾನೆ; ಅವುಗಳಲ್ಲಿ ಒಂದಾದರೂ ಮುರಿಯಲ್ಪಡುವದಿಲ್ಲ.
- 21 ಕೇಡು ದುಷ್ಟನನ್ನು ಕೊಲ್ಲು ವದು; ನೀತಿವಂತನನ್ನು ಹಗೆಮಾಡುವವರು ಹಾಳಾ ಗುವರು.
- 22 ಕರ್ತನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ; ಆತನಲ್ಲಿ ಭರವಸವಿಡುವವರು ಹಾಳಾಗುವದಿಲ್ಲ.
Psalms 034
- Details
- Parent Category: Old Testament
- Category: Psalms
ಕೀರ್ತನೆಗಳು ಅಧ್ಯಾಯ 34