wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಕೀರ್ತನೆಗಳುಅಧ್ಯಾಯ 40
  • 1 ನಾನು ಕರ್ತನಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಆತನು ಕಿವಿಗೊಟ್ಟು ನನ್ನ ಮೊರೆ ಯನ್ನು ಲಕ್ಷಿಸಿದನು.
  • 2 ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.
  • 3 ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ; ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು.
  • 4 ಕರ್ತನನ್ನು ತನ್ನ ಭರವಸವಾಗಿ ಮಾಡಿಕೊಂಡು ಅಹಂಕಾರಿಗಳನ್ನು ಗೌರವಿಸದೆಯೂ ಇಲ್ಲವೆ ಸುಳ್ಳಿನ ಕಡೆಗೆ ತಿರುಗಿಕೊಳ್ಳ ದೆಯೂ ಇರುವ ಮನುಷ್ಯನು ಧನ್ಯನು.
  • 5 ಓ ನನ್ನ ದೇವರಾದ ಕರ್ತನೇ, ನೀನು ಮಾಡಿದ ನಿನ್ನ ಅದ್ಭುತ ಕಾರ್ಯಗಳೂ ನಮ್ಮ ಕಡೆಗಿರುವ ನಿನ್ನ ಯೋಚನೆಗಳೂ ಬಹಳ; ಅವುಗಳನ್ನು ಕ್ರಮವಾಗಿ ನಿನ್ನ ಮುಂದೆ ಎಣಿಸಲಾರೆನು; ಅವುಗಳನ್ನು ನಾನು ತಿಳಿಸಿ ಹೇಳಬೇಕಾದರೆ ಎಣಿಸುವದಕ್ಕಿಂತ ಹೆಚ್ಚಾಗಿವೆ.
  • 6 ಯಜ್ಞದಲ್ಲಿಯೂ ಅರ್ಪಣೆಯಲ್ಲಿಯೂ ನೀನು ಇಷ್ಟ ಪಡಲಿಲ್ಲ; ದಹನಬಲಿಯನ್ನೂ ಪಾಪದಬಲಿಯನ್ನೂ ನೀನು ಕೇಳಲಿಲ್ಲ. ನನ್ನ ಕಿವಿಗಳನ್ನು ನೀನು ತೆರೆದಿ;
  • 7 ಆಗ ನಾನು--ಇಗೋ, ನಾನು ಇದ್ದೇನೆ; ಪುಸ್ತಕದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ.
  • 8 ಓ ನನ್ನ ದೇವರೇ ನಿನಗೆ ಮೆಚ್ಚಿಕೆಯಾದದ್ದನ್ನು ಮಾಡಲು ಸಂತೋಷಿಸುತ್ತೇನೆ; ನಿನ್ನ ನ್ಯಾಯ ಪ್ರಮಾಣವು ನನ್ನ ಅಂತರಂಗದಲ್ಲಿ ಅದೆ.
  • 9 ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ.
  • 10 ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
  • 11 ಕರ್ತನೇ, ನಿನ್ನ ಅಂತಃಕರುಣೆಗಳನ್ನು ನನ್ನಿಂದ ಹಿಂತೆಗೆಯಬೇಡ; ನಿನ್ನ ಪ್ರೀತಿ ಕರುಣೆಗಳೂ ನಿನ್ನ ಸತ್ಯವೂ ಯಾವಾಗಲೂ ನನ್ನನ್ನು ಕಾಯಲಿ.
  • 12 ಲೆಕ್ಕ ವಿಲ್ಲದಷ್ಟು ಕೇಡುಗಳು ನನ್ನ ಸುತ್ತಲು ಆವರಿಸಿಕೊಂಡಿವೆ; ನಾನು ಮೇಲಕ್ಕೆ ನೋಡಲಾರದಷ್ಟು ನನ್ನ ಅಕ್ರಮ ಗಳು ನನ್ನನ್ನು ಹಿಡಿದವೆ; ಅವು ನನ್ನ ತಲೆಯ ಕೂದಲು ಗಳಿಗಿಂತ ಹೆಚ್ಚಾಗಿವೆ; ಆದದರಿಂದ ನನ್ನ ಹೃದಯವು ನನ್ನನ್ನು ಕುಂದಿಸಿತು.
  • 13 ಓ ಕರ್ತನೇ, ನನ್ನನ್ನು ಬಿಡಿಸು ವದಕ್ಕೆ ಇಷ್ಟವುಳ್ಳವನಾಗಿ, ಓ ಕರ್ತನೆ, ನನ್ನ ಸಹಾ ಯಕ್ಕೆ ತ್ವರೆಪಡು.
  • 14 ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ.
  • 15 ಆಹಾ, ಆಹಾ ಎಂದು ನನಗೆ ಹೇಳುವವರು ತಮ್ಮ ನಾಚಿಕೆಯ ಫಲಕ್ಕಾಗಿ ಹಾಳಾಗಲಿ;
  • 16 ನಿನ್ನನ್ನು ಹುಡುಕುವವರೆಲ್ಲರು ನಿನ್ನಲ್ಲಿ ಆನಂದಪಟ್ಟು ಸಂತೋಷಿಸಲಿ; ನಿನ್ನ ರಕ್ಷಣೆಯನ್ನು ಪ್ರೀತಿಮಾಡುವ ವರು--ಕರ್ತನು ಮಹಿಮೆಪಡಲಿ ಎಂದು ಯಾವಾ ಗಲೂ ಹೇಳಲಿ.
  • 17 ಆದರೆ ನಾನು ದೀನನೂ ಬಡ ವನೂ ಆಗಿದ್ದೇನೆ; ಆದರೂ ಕರ್ತನು ನನಗೋಸ್ಕರ ಯೋಚಿಸುತ್ತಾನೆ; ನನ್ನ ಸಹಾಯವೂ ನನ್ನನ್ನು ತಪ್ಪಿಸುವಾ ತನೂ ನೀನೇ; ಓ ನನ್ನ ದೇವರೇ, ತಡ ಮಾಡಬೇಡ.