wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಕೀರ್ತನೆಗಳುಅಧ್ಯಾಯ 55
  • 1 ಓ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗೆ ನಿನ್ನನ್ನು ಮರೆಮಾಡಿಕೊಳ್ಳಬೇಡ.
  • 2 ನನ್ನನ್ನು ಆಲೈಸಿ ನನಗೆ ಕಿವಿಗೊಡು; ನನ್ನ ಚಿಂತೆಯಲ್ಲಿ ನಾನು ದುಃಖಿಸುತ್ತಾ
  • 3 ಶತ್ರುವಿನ ಶಬ್ದಕ್ಕೋಸ್ಕರವೂ ದುಷ್ಟನ ಉಪದ್ರವದ ನಿಮಿತ್ತವೂ ನರಳುತ್ತೇನೆ; ಅವರು ನನ್ನ ಮೇಲೆ ಅಪರಾಧವನ್ನು ಬೀಳಮಾಡಿ ಕೋಪದಿಂದ ನನ್ನನ್ನು ಹಗೆಮಾಡುತ್ತಾರೆ.
  • 4 ನನ್ನ ಹೃದಯವು ನನ್ನ ಅಂತ ರಂಗದಲ್ಲಿ ನೊಂದುಕೊಳ್ಳುತ್ತದೆ; ಮರಣದ ಬೆದರಿಕೆ ಗಳು ನನ್ನ ಮೇಲೆ ಬಿದ್ದವೆ.
  • 5 ಭಯವೂ ನಡುಗೂ ನನಗೆ ಬಂದವೆ; ಭೀತಿಯು ನನ್ನನ್ನು ಮುಚ್ಚಿಯದೆ.
  • 6 ನನಗೆ ಪಾರಿವಾಳದಂತೆ ರೆಕ್ಕೆಗಳಿರುತ್ತಿದ್ದರೆ ಹಾರಿ ಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆನು ಎಂದು ಅಂದುಕೊಂಡೆನು.
  • 7 ಇಗೋ, ದೂರದ ಅರ ಣ್ಯಕ್ಕೆ ಅಲೆದಾಡುತ್ತಾ ಹೋಗಿ ತಂಗುವೆನು. ಸೆಲಾ.
  • 8 ಗಾಳಿಯ ತುಫಾನಿಗೂ ಬಿರುಗಾಳಿಗೂ ತಪ್ಪಿಸಿಕೊಳ್ಳಲು ತ್ವರೆಪಡುವೆನು.
  • 9 ಓ ಕರ್ತನೇ, (ಅವರನ್ನು) ನಾಶಮಾಡು. ಅವರ ನಾಲಿಗೆಗಳನ್ನು ಭೇದಿಸು; ಯಾಕಂದರೆ ಬಲಾತ್ಕಾರ ವನ್ನೂ ವಿವಾದವನ್ನೂ ಪಟ್ಟಣದಲ್ಲಿ ನಾನು ನೋಡಿ ದ್ದೇನೆ;
  • 10 ಹಗಲು ಇರುಳು ಅದರ ಗೋಡೆಗಳ ಮೇಲೆ ಅವರು ಸುತ್ತುತ್ತಾರೆ; ಕೇಡೂ ದುಃಖವೂ ಅವರ ಮಧ್ಯದಲ್ಲಿದೆ;
  • 11 ದುಷ್ಟತನವು ಅದರ ಮಧ್ಯ ದಲ್ಲಿದೆ; ಅದರ ಬೀದಿಗಳೊಳಗಿಂದ ಮೋಸವೂ ವಂಚನೆಯೂ ತೊಲಗುವದಿಲ್ಲ.
  • 12 ನನ್ನನ್ನು ನಿಂದಿಸಿದವನು ಶತ್ರುವಲ್ಲ; ಶತ್ರುವಾದರೆ ತಾಳಿಕೊಳ್ಳುತ್ತಿದ್ದೆನು; ನಿನಗೆ ವಿರೋಧವಾಗಿ ಹೆಚ್ಚಿಸಿ ಕೊಳ್ಳುವವನು ನನ್ನ ಹಗೆಯವನಲ್ಲ; ಹಗೆಯವನಾದರೆ ಅವನಿಗೆ ಅಡಗಿಕೊಳ್ಳುತ್ತಿದ್ದೆನು.
  • 13 ಆದರೆ ನೀನು ನನ್ನ ಜೊತಗಾರನೂ ನಡಿಸುವವನೂ ನನ್ನ ಪರಿಚಿತನೂ ಆಗಿದ್ದೀ.
  • 14 ನಾವು ಒಟ್ಟಾಗಿ ಇಂಪಾದ ಸಂಭಾಷಣೆ ಮಾಡಿದೆವು; ದೇವರ ಆಲಯಕ್ಕೆ ಗುಂಪಿನೊಂದಿಗೆ ನಡೆದುಹೋದೆವು.
  • 15 ಮರಣವು ಅವರನ್ನು ಹಿಡಿ ಯಲಿ; ತ್ವರಿತವಾಗಿ ನರಕಕ್ಕೆ ಅವರು ಇಳಿದುಹೋಗಲಿ; ಅವರ ವಾಸಸ್ಥಳದಲ್ಲಿಯೂ ಮಧ್ಯದಲ್ಲಿಯೂ ದುಷ್ಟತನ ಇದೆ.
  • 16 ನಾನಾದರೋ ದೇವರನ್ನು ಕರೆಯುವೆನು; ಕರ್ತ ನು ನನ್ನನ್ನು ರಕ್ಷಿಸುವನು.
  • 17 ಸಂಜೆಯಲ್ಲಿ ಮುಂಜಾನೆ ಯಲ್ಲಿ ಮಧ್ಯಾಹ್ನದಲ್ಲಿ ಪ್ರಾರ್ಥಿಸಿ ಕೂಗುವೆನು;ಆತನು ನನ್ನ ಸ್ವರವನ್ನು ಕೇಳುವನು.
  • 18 ನನಗೆ ವಿರೋಧ ವಾಗಿದ್ದ ಕಾಳಗದಿಂದ ಆತನು ನನ್ನ ಪ್ರಾಣವನ್ನು ಸಮಾಧಾನದಲ್ಲಿ ವಿಮೋಚಿಸಿದ್ದಾನೆ; ಹೇಗಂದರೆ ಅನೇಕರು ನನ್ನ ಸಂಗಡ ಇದ್ದರು.
  • 19 ಅನಾದಿಯಿಂದ ಇರುವ ದೇವರು ಲಕ್ಷ್ಯವಿಟ್ಟು ಅವರನ್ನು ಕುಗ್ಗಿಸುವನು. ಸೆಲಾ. ಅವರಲ್ಲಿ ಮಾರ್ಪಾಡುವಿಕೆಗಳು ಇಲ್ಲ; ಆದಕಾರಣ ದೇವರಿಗೆ ಅವರು ಭಯಪಡುವದಿಲ್ಲ.
  • 20 ಅವನು ತನ್ನ ಸಂಗಡ ಸಮಾಧಾನವುಳ್ಳವರಿಗೆ ವಿರೋಧವಾಗಿ ತನ್ನ ಕೈಗಳನ್ನು ಹಾಕಿದ್ದಾನೆ; ತನ್ನ ಒಡಂಬಡಿಕೆಯನ್ನು ಮುರಿದಿದ್ದಾನೆ.
  • 21 ಅವನ ಬಾಯಿ ಮಾತುಗಳು ಬೆಣ್ಣೆಗಿಂತ ನುಣುಪಾಗಿವೆ; ಅವನ ಹೃದ ಯವೋ ಕಲಹಮಯವೇ. ಅವನ ಮಾತುಗಳು ಎಣ್ಣೆ ಗಿಂತ ನಯವಾಗಿವೆ; ಆದರೆ ಅವು ಬಿಚ್ಚು ಕತ್ತಿಗಳಾಗಿವೆ.
  • 22 ನಿನ್ನ ಭಾರವನ್ನು ಕರ್ತನ ಮೇಲೆ ಹಾಕು; ಆತನು ನಿನಗೆ ಆಧಾರವಾಗಿರುವನು. ಆತನು ಎಂದೆಂದಿಗೂ ನೀತಿವಂತನನ್ನು ಕದಲಗೊಡಿಸನು.
  • 23 ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.