wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಕೀರ್ತನೆಗಳುಅಧ್ಯಾಯ 59
  • 1 ಓ ನನ್ನ ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನನಗೆ ವಿರೋಧವಾಗಿ ಎದ್ದವರಿಂದ ನನ್ನನ್ನು ರಕ್ಷಿಸು.
  • 2 ಅಪರಾಧ ಮಾಡುವವರಿಂದ ನನ್ನನ್ನು ಬಿಡಿಸು; ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
  • 3 ಓ ಕರ್ತನೇ, ನನ್ನ ಅಪರಾಧಕ್ಕಾಗಿ ಇಲ್ಲವೆ ನನ್ನ ಪಾಪಕ್ಕಾಗಿ ಅಲ್ಲ; ಆದರೂ ಇಗೋ, ಅವರು ನನ್ನ ಪ್ರಾಣಕ್ಕೆ ಹೊಂಚುಹಾಕುತ್ತಾರೆ; ಪರಾಕ್ರಮಶಾಲಿಗಳು ನನಗೆ ವಿರೋಧವಾಗಿ ಕೂಡಿ ಕೊಳ್ಳುತ್ತಾರೆ.
  • 4 ನನ್ನಲ್ಲಿ ತಪ್ಪು ಇಲ್ಲದಿದ್ದರೂ ಅವರು ಓಡಾಡಿ ಸಿದ್ಧರಾಗುತ್ತಾರೆ; ನನಗೆ ಸಹಾಯ ಮಾಡುವದಕ್ಕೆ ಎಚ್ಚತ್ತು ನೋಡು.
  • 5 ಸೈನ್ಯಗಳ ದೇವ ರಾದ ಓ ಕರ್ತನೇ, ಇಸ್ರಾಯೇಲಿನ ದೇವರೇ, ನೀನು ಎಲ್ಲಾ ಜನಾಂಗಗಳನ್ನು ದರ್ಶಿಸುವದಕ್ಕೆ ಎಚ್ಚರವಾಗು; ದುಷ್ಟರಾದ ಅಪರಾಧಿಗಳಲ್ಲಿ ಯಾರಿಗಾದರೂ ಕರುಣೆ ತೋರಿಸಬೇಡ. ಸೆಲಾ.
  • 6 ಅವರು ಸಂಜೆಗೆ ಹಿಂತಿರುಗುವರು; ನಾಯಿಯ ಹಾಗೆ ಬೊಗಳುವರು; ಪಟ್ಟಣವನ್ನು ಸುತ್ತುವರು.
  • 7 ಇಗೋ, ತಮ್ಮ ಬಾಯಿಯಿಂದ ಕಕ್ಕುತ್ತಾರೆ; ಅವರ ತುಟಿಗಳಲ್ಲಿ ಕತ್ತಿಗಳು ಅವೆ; ಅವರು--ಕೇಳುವವನಾರು ಎಂದು ಅನ್ನುತ್ತಾರೆ.
  • 8 ಆದರೆ ಓ ಕರ್ತನೇ, ನೀನು ಅವರನ್ನು ನೋಡಿ ನಗುವಿ, ನೀನು ಅನ್ಯಜನಾಂಗ ಗಳನ್ನೆಲ್ಲಾ ಗೇಲಿಮಾಡುವಿ.
  • 9 ನನ್ನ ಬಲಕ್ಕಾಗಿ ನಾನು ನಿನ್ನನ್ನು ಕಾದುಕೊಂಡಿರುವೆನು; ದೇವರು ನನ್ನ ದುರ್ಗವಾಗಿದ್ದಾನೆ.
  • 10 ಕರುಣೆಯುಳ್ಳ ನನ್ನ ದೇವರು ನನಗೆ ಪ್ರಸನ್ನನಾಗುವನು; ದೇವರು ನನ್ನ ಇಷ್ಟದಂತೆ ನನ್ನ ವಿರೋಧಿಗಳಿಗೆ ಆಗುವದನ್ನು ನೋಡುವಂತೆ ಮಾಡುವನು.
  • 11 ನನ್ನ ಜನರು ಮರೆತುಬಿಡದ ಹಾಗೆ ಅವರನ್ನು ಕೊಲ್ಲಬೇಡ; ನಿನ್ನ ಪರಾಕ್ರಮದಿಂದ ಅವರನ್ನು ಚದರಿಸಿ, ನಮ್ಮ ಗುರಾಣಿಯಾದ ಓ ಕರ್ತನೇ, ಅವರನ್ನು ಕೆಡವಿಹಾಕು.
  • 12 ಅವರ ಬಾಯಿಂದ ಬರುವ ಪಾಪಕ್ಕೂ ಅವರ ತುಟಿಗಳ ಮಾತಿಗೂ ಅವರು ನುಡಿಯುವ ಶಾಪಕ್ಕೋಸ್ಕರವೂ ಸುಳ್ಳುಗಳಿಗೋಸ್ಕರವೂ ಅವರ ಅಹಂಕಾರದಲ್ಲಿ ಸಿಕ್ಕಿಬೀಳಲಿ.
  • 13 ಕೋಪದಿಂದ ಅವ ರನ್ನು ದಹಿಸಿಬಿಡು, ಅವರು ಇಲ್ಲದಂತೆ ಸಂಹರಿಸು; ಆಗ ದೇವರು ಯಾಕೋಬನಲ್ಲಿ ಭೂಮಿಯ ಕೊನೆ ಗಳವರೆಗೆ ಆಳುವಾತನಾಗಿದ್ದಾನೆಂದು ತಿಳುಕೊಳ್ಳು ವರು. ಸೆಲಾ.
  • 14 ಸಂಜೆಗೆ ಅವರು ಹಿಂತಿರುಗುವರು; ನಾಯಿಯ ಹಾಗೆ ಬೊಗಳುವರು; ಪಟ್ಟಣವನ್ನು ಸುತ್ತು ವರು.
  • 15 ಅವರು ಊಟಕ್ಕಾಗಿ ಅಲೆದಾಡಲಿ; ತೃಪ್ತಿ ಯಾಗದೆ ಗುಣಗುಟ್ಟಲಿ.
  • 16 ಆದರೆ ನಾನು ನಿನ್ನ ಬಲದ ವಿಷಯವಾಗಿ ಹಾಡುವೆನು; ಹೌದು, ಹೊತ್ತಾರೆ ನಿನ್ನ ಕೃಪೆಗಾಗಿ ಉತ್ಸಾಹಪಡುವೆನು; ನೀನು ನನಗೆ ದುರ್ಗ ವಾಗಿಯೂ ನನ್ನ ಇಕ್ಕಟ್ಟಿನ ದಿವಸದಲ್ಲಿ ಆಶ್ರಯ ವಾಗಿಯೂ ಇದ್ದೀ.
  • 17 ಓ ನನ್ನ ಬಲವೇ, ನಿನ್ನನ್ನು ಕೀರ್ತಿಸುವೆನು; ದೇವರು ನನ್ನ ದುರ್ಗವೂ ಕರುಣೆ ಯುಳ್ಳ ನನ್ನ ದೇವರೂ ಆಗಿದ್ದಾನೆ.