- 1 ನಿಜವಾಗಿ ದೇವರು ಇಸ್ರಾಯೇಲಿಗೂ ಶುದ್ಧ ಹೃದಯದವರಿಗೂ ಒಳ್ಳೆಯವನು.
- 2 ನನ್ನ ಪಾದಗಳ ಮಟ್ಟಿಗಾದರೋ ಅವು ತಪ್ಪುವ ಹಾಗಿದ್ದವು, ನನ್ನ ಹೆಜ್ಜೆಗಳು ಜಾರುವದಕ್ಕೆ ಬಹು ಸವಿಾಪವಾಗಿದ್ದವು.
- 3 ದುಷ್ಟರ ಅಭಿವೃದ್ಧಿಯನ್ನು ನೋಡಿದಾಗ ಮೂರ್ಖರ ಮೇಲೆ ಹೊಟ್ಟೇಕಿಚ್ಚು ಪಟ್ಟೆನು.
- 4 ಅವರ ಮರಣಕ್ಕೆ ಬಂಧನಗಳು ಇಲ್ಲ; ಅವರ ತ್ರಾಣವು ಸ್ಥಿರವಾಗಿದೆ.
- 5 ಬೇರೆ ಮನುಷ್ಯರಂತೆ ಅವರು ಕಷ್ಟದಲ್ಲಿಲ್ಲ. ಇಲ್ಲವೆ ಬೇರೆ ಮನುಷ್ಯರ ಹಾಗೆ ಅವರಿಗೆ ವ್ಯಾಧಿಯೂ ಇಲ್ಲ;
- 6 ಆದದರಿಂದ ಗರ್ವವು ಅವರಿಗೆ ಕಂಠಮಾಲೆಯಂತೆ ಅವರನ್ನು ಸುತ್ತಿದೆ, ಬಲಾತ್ಕಾರವು ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತದೆ.
- 7 ಅವರ ಕಣ್ಣುಗಳು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ಹೃದಯವು ಆಶಿಸುವದಕ್ಕಿಂತಲೂ ಹೆಚ್ಚಾಗಿ ಅವರಿಗೆ ಇವೆ.
- 8 ಅವರು ಕೆಟ್ಟುಹೋದವರು. ಸಂಕಟ ಪಡುವವರ ವಿಷಯ ಕೆಟ್ಟದ್ದಾಗಿಯೂ ಗರ್ವದಿಂದಲೂ ಮಾತನಾಡುತ್ತಾರೆ.
- 9 ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ; ಭೂಲೋಕದಲ್ಲೆಲ್ಲಾ ಅವರ ಮಾತೇ ನಡೆಯುವದು.
- 10 ಆದದರಿಂದ ಅವನ ಜನರು ಇಲ್ಲಿಗೆ ತಿರುಗಿ ಕೊಳ್ಳುತ್ತಾರೆ; ಅವರಿಗೆ ಪಾನವು ಯಥೇಚ್ಚವಾಗಿ ದೊರೆಯುತ್ತದೆ.
- 11 ಅವರು-- ದೇವರು ಹೇಗೆ ಬಲ್ಲನು? ಮಹೋನ್ನತನಲ್ಲಿ ತಿಳುವಳಿಕೆ ಉಂಟೋ ಎಂದು ಅಂದುಕೊಳ್ಳುತ್ತಾರೆ.
- 12 ಇಗೋ, ಇಹಲೋಕದಲ್ಲಿ ವೃದ್ಧಿಯಾಗುವ ದುಷ್ಟರು ಇವರೇ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ.
- 13 ನಿಶ್ಚಯವಾಗಿ ನನ್ನ ಹೃದಯವನ್ನು ವ್ಯರ್ಥವಾಗಿ ನಿರ್ಮಲ ಮಾಡಿಕೊಂಡು ನನ್ನ ಕೈಗಳನ್ನು ನಿರಪರಾಧ ದಲ್ಲಿ ತೊಳೆದಿದ್ದೇನೆ.
- 14 ನಾನು ದಿನವೆಲ್ಲಾ ವ್ಯಾಧಿ ಪೀಡಿತನಾಗಿದ್ದೇನೆ; ಪ್ರತಿ ಉದಯದಲ್ಲಿ ನನಗೆ ಶಿಕ್ಷೆ ಯಾಯಿತು.
- 15 ಹೀಗೆ ನಾನು ಮಾತನಾಡುವೆನೆಂದು ಹೇಳಿದರೆ, ಇಗೋ, ನಿನ್ನ ಮಕ್ಕಳ ವಂಶಕ್ಕೆ ವಿರೋಧ ವಾಗಿ ಆತಂಕ ಮಾಡುವೆನು.
- 16 ಇದನ್ನು ತಿಳಿಯು ವದಕ್ಕೆ ನಾನು ಯೋಚಿಸಿದಾಗ, ನಾನು ದೇವರ ಪರಿಶುದ್ಧ ಸ್ಥಳಗಳಿಗೆ ಬರುವ ವರೆಗೆ
- 17 ಅದು ನನ್ನ ದೃಷ್ಟಿಗೆ ಕಷ್ಟವಾಗಿತ್ತು. ಅವರ ಅಂತ್ಯವನ್ನು ಗ್ರಹಿಸಿ ಕೊಂಡೆನು.
- 18 ನಿಶ್ಚಯವಾಗಿ ನೀನು ಅವರನ್ನು ಜಾರುವ ಸ್ಥಳಗಳಲ್ಲಿ ಇಟ್ಟಿದ್ದೀ; ಅವರನ್ನು ನಾಶನಕ್ಕೆ ಕೆಳಗೆ ದೊಬ್ಬಿದ್ದೀ.
- 19 ಕ್ಷಣಮಾತ್ರದಲ್ಲಿ ಹೀಗೆ ನಾಶನಕ್ಕೆ ಅವರನ್ನು ಬರಮಾಡಿದಿ. ಅವರು ದಿಗಿಲುಗಳಿಂದ ಸಂಪೂರ್ಣವಾಗಿ ನಾಶವಾಗಿದ್ದಾರೆ.
- 20 ಎಚ್ಚತ್ತ ಮೇಲೆ ಕನಸು ಹೇಗೋ ಹಾಗೆಯೇ ಓ ಕರ್ತನೇ, ನೀನು ಎಚ್ಚರವಾದಾಗ ಅವರ ರೂಪವನ್ನು ತಿರಸ್ಕರಿಸುವಿ.
- 21 ಹೀಗೆ ನನ್ನ ಹೃದಯವು ವ್ಯಥೆಗೊಂಡಾಗ ನನ್ನ ಅಂತರಿಂದ್ರಿಯಗಳಿಗೆ ತಿವಿಯಲ್ಪಟ್ಟವು.
- 22 ಆಗ ನಾನು ಮೂರ್ಖನಾಗಿ ಏನೂ ತಿಳಿಯದೆ ನಿನ್ನ ಮುಂದೆ ಪಶು ವಿನಂತೆ ಇದ್ದೆನು.
- 23 ಆದಾಗ್ಯೂ ನಾನು ನಿನ್ನ ಸಂಗಡ ಯಾವಾಗಲೂ ಇದ್ದೇನೆ; ನೀನು ನನ್ನ ಬಲಗೈಯನ್ನು ಹಿಡಿದಿದ್ದೀ.
- 24 ನಿನ್ನ ಆಲೋಚನೆಯಂತೆ ನನ್ನನ್ನು ನಡಿಸಿದ ತರು ವಾಯ ಮಹಿಮೆಗೆ ನನ್ನನ್ನು ಅಂಗೀಕರಿಸುವಿ.
- 25 ಪರ ಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರಿದ್ದಾರೆ? ನಿನ್ನ ಹೊರತಾಗಿ ಭೂಮಿಯಲ್ಲಿ ನಾನು ಅಪೇಕ್ಷಿಸುವವರು ಯಾರೂ ಇಲ್ಲ.
- 26 ನನ್ನ ಮಾಂಸವೂ ಹೃದಯವೂ ಕುಂದುತ್ತದೆ; ಆದರೆ ದೇವರು ಯುಗಯುಗಕ್ಕೂ ನನ್ನ ಹೃದಯದ ಬಲವೂ ಪಾಲೂ ಆಗಿದ್ದಾನೆ.
- 27 ಇಗೋ, ನಿನಗೆ ದೂರವಾಗಿರುವವರು ನಾಶವಾಗುವರು, ನಿನ್ನನ್ನು ಬಿಟ್ಟು ಜಾರತ್ವ ಮಾಡುವವರೆಲ್ಲ ರನ್ನು ಸಂಹರಿಸಿದ್ದೀ.
- 28 ನನಗಾದರೋ ದೇವರ ಸವಿಾಪಕ್ಕೆ ಬರುವದೇ ಒಳ್ಳೇದಾಗಿದೆ; ನಿನ್ನ ಕ್ರಿಯೆ ಗಳನ್ನೆಲ್ಲಾ ಸಾರುವದಕ್ಕೆ ಕರ್ತನಾದ ದೇವರಲ್ಲಿ ನನ್ನ ಭರವಸವನ್ನು ಇಟ್ಟಿದ್ದೇನೆ.
Psalms 073
- Details
- Parent Category: Old Testament
- Category: Psalms
ಕೀರ್ತನೆಗಳು ಅಧ್ಯಾಯ 73