- 1 ಕರ್ತನೇ, ನಿನ್ನ ದೇಶಕ್ಕೆ ದಯೆತೋರಿಸಿದ್ದೀ; ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರ ಮಾಡಿದ್ದೀ.
- 2 ನಿನ್ನ ಜನರ ಅಕ್ರಮವನ್ನು ಪರಿಹರಿಸಿದ್ದೀ; ಅವರ ಪಾಪವನ್ನೆಲ್ಲಾ ಮುಚ್ಚಿದ್ದೀ ಸೆಲಾ.
- 3 ನಿನ್ನ ಕೋಪ ವನ್ನೆಲ್ಲಾ ನೀನು ತೆಗೆದುಬಿಟ್ಟಿದ್ದೀ; ನೀನು ಕೋಪದ ಉರಿಯಿಂದ ತಿರುಗಿಕೊಂಡಿದ್ದೀ.
- 4 ನಮ್ಮ ರಕ್ಷಣೆಯ ಓ ದೇವರೇ, ನಮ್ಮ ಕಡೆಗೆ ತಿರುಗು; ನಮ್ಮ ಮೇಲಿರುವ ನಿನ್ನ ಕೋಪವನ್ನು ತೊಲ ಗಿಸು.
- 5 ಎಂದೆಂದಿಗೂ ನಮ್ಮ ಮೇಲೆ ಕೋಪಿಸು ವಿಯೋ? ತಲತಲಾಂತರಕ್ಕೂ ನಿನ್ನ ಕೋಪವನ್ನು ಏಳ ಮಾಡುವಿಯೋ?
- 6 ನಿನ್ನ ಜನರು ನಿನ್ನಲ್ಲಿ ಸಂತೋಷ ಪಡುವ ಹಾಗೆ ನೀನು ತಿರುಗಿ ನಮ್ಮನ್ನು ಉಜ್ಜೀವಿ ಸುವದಿಲ್ಲವೋ?
- 7 ಓ ಕರ್ತನೇ, ನಿನ್ನ ಕರುಣೆಯನ್ನು ನಮಗೆ ದಯಪಾಲಿಸು. ನಿನ್ನ ರಕ್ಷಣೆಯನ್ನು ನಮಗೆ ಕೊಡು.
- 8 ಕರ್ತನಾದ ದೇವರು ಏನು ಹೇಳುತ್ತಾನೋ ಅದನ್ನು ಕೇಳುವೆನು; ನಿಶ್ಚಯವಾಗಿ ಜನರಿಗೂ ತನ್ನ ಪರಿಶುದ್ಧ ರಿಗೂ ಸಮಾಧಾನದ ಮಾತು ಹೇಳುವನು; ಇನ್ನು ಬುದ್ಧಿಹೀನತ್ವಕ್ಕೆ ಅವರು ತಿರುಗಿಕೊಳ್ಳದೆ ಇರಲಿ.
- 9 ನಿಶ್ಚ ಯವಾಗಿ ಘನವು ನಮ್ಮ ದೇಶದಲ್ಲಿ ವಾಸವಾಗಿರುವ ಹಾಗೆ, ಆತನಿಗೆ ಭಯಪಡುವವರಿಗೆ ಆತನ ರಕ್ಷಣೆಯು ಸವಿಾಪವಾಗಿದೆ.
- 10 ಕೃಪೆಯೂ ಸತ್ಯವೂ ಸಂಧಿಸಿ ಕೊಳ್ಳುತ್ತವೆ; ನೀತಿಯೂ ಸಮಾಧಾನವೂ ಮುದ್ದಿಟ್ಟು ಕೊಳ್ಳುತ್ತವೆ.
- 11 ಸತ್ಯವು ಭೂಮಿಯಿಂದ ಮೊಳೆಯು ವದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.
- 12 ಹೌದು, ಕರ್ತನು ಒಳ್ಳೇದನ್ನು ಮಾಡುವನು. ನಮ್ಮ ಭೂಮಿಯು ಅದರ ಬೆಳೆಯನ್ನು ಕೊಡುವದು.
- 13 ನೀತಿಯು ಆತನ ಮುಂದೆ ಹೋಗುತ್ತಾ ನಾವು ಆತನ ಹೆಜ್ಜೆಗಳಲ್ಲಿ ನಡೆಯುವಂತೆ ಮಾರ್ಗವನ್ನು ಮಾಡುವದು.
Psalms 085
- Details
- Parent Category: Old Testament
- Category: Psalms
ಕೀರ್ತನೆಗಳು ಅಧ್ಯಾಯ 85