- 1 ಕರ್ತನೇ, ತಲತಲಾಂತರಗಳಲ್ಲಿ ನೀನು ನಮ್ಮ ವಾಸಸ್ಥಾನವಾಗಿದ್ದೀ.
- 2 ಬೆಟ್ಟಗಳು ಹುಟ್ಟುವದಕ್ಕಿಂತ ಮುಂಚೆಯೂ ನೀನು ಭೂಮಿಯನ್ನೂ ಲೋಕವನ್ನೂ ನಿರ್ಮಿಸುವದಕ್ಕಿಂತ ಮುಂಚೆಯೂ ನಿತ್ಯತ್ವದಿಂದ ನಿತ್ಯತ್ವಕ್ಕೂ ನೀನು ದೇವರಾಗಿದ್ದೀ.
- 3 ನೀನು ಮನುಷ್ಯನನ್ನು ನಾಶನಕ್ಕೆ ತಿರುಗಿಸಿ-- ಮನುಷ್ಯರ ಮಕ್ಕಳೇ, ಹಿಂತಿರುಗಿರಿ ಎಂದು ಹೇಳುತ್ತೀ;
- 4 ಸಾವಿರ ವರುಷಗಳು ನಿನ್ನ ದೃಷ್ಟಿಗೆ ಕಳೆದು ಹೋದನಿನ್ನೆಯ ದಿವಸದ ಹಾಗೆಯೂ ರಾತ್ರಿ ಜಾವದ ಹಾಗೆಯೂ ಅವೆ.
- 5 ಅವರನ್ನು ಪ್ರವಾಹದಂತೆ ಬಡು ಕೊಂಡು ಹೋಗುತ್ತೀ; ಅವರು ನಿದ್ರೆಯಲ್ಲಿದ್ದಂತೆಯೂ ಬೆಳಿಗ್ಗೆ ಚಿಗುರುವ ಹುಲ್ಲಿನ ಹಾಗೆಯೂ ಇದ್ದಾರೆ.
- 6 ಅದು ಬೆಳಿಗ್ಗೆ ಅರಳಿ ಬೆಳೆಯುತ್ತದೆ. ಸಂಜೆಯಲ್ಲಿ ಕೊಯ್ಯಲ್ಪಟ್ಟು ಒಣಗುತ್ತದೆ.
- 7 ನಾವು ನಿನ್ನ ಕೋಪದಿಂದ ತೀರಿಹೋಗಿ, ನಿನ್ನ ರೌದ್ರದಿಂದ ತಲ್ಲಣಿಸುತ್ತೇವೆ.
- 8 ನಮ್ಮ ಅಕ್ರಮಗಳನ್ನು ನಿನ್ನ ಮುಂದೆಯೂ ನಮ್ಮ ಮರೆಯಾದ ಪಾಪಗಳನ್ನು ನಿನ್ನ ಮುಖದ ಬೆಳಕಿನಲ್ಲಿಯೂ ಇಟ್ಟಿದ್ದೀ.
- 9 ನಮ್ಮ ದಿವಸಗಳೆಲ್ಲಾ ನಿನ್ನ ಕೋಪದಿಂದ ದಾಟಿಹೋದವು. ನಮ್ಮ ವರುಷಗಳನ್ನು ಕೇಳಿದ ಕಥೆಯ ಹಾಗೆ ಕಳೆ ಯುತ್ತೇವೆ.
- 10 ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ, ಬಲದಿಂದಿದ್ದರೆ ಎಂಭತ್ತು ವರುಷ; ಆದಾಗ್ಯೂ ಅವು ಗಳ ಬಲವು ಪ್ರಯಾಸವೂ ದುಃಖವೂ ಆಗಿವೆ; ಅದು ಬೇಗ ಕೊಯಿದು ಹಾಕಲ್ಪಡುತ್ತದೆ; ನಾವು ಹಾರಿ ಹೋಗುತ್ತೇವೆ.
- 11 ನಿನ್ನ ಕೋಪದ ಬಲವನ್ನು ತಿಳಿದ ವನಾರು? ನಿನ್ನ ಭಯದ ಪ್ರಕಾರವೇ ನಿನ್ನ ಉಗ್ರತೆ ಇದೆ.
- 12 ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿವಸಗಳನ್ನು ಲೆಕ್ಕಿಸುವದಕ್ಕೆ ನಮಗೆ ಕಲಿಸು.
- 13 ಕರ್ತನೇ, ಎಷ್ಟರವರೆಗೆ ಹಿಂತಿರುಗದಿರುವಿ? ನಿನ್ನ ಸೇವಕರ ವಿಷಯದಲ್ಲಿ ಅಂತಃಕರಣವಿರಲಿ.
- 14 ಬೆಳಿಗ್ಗೆ ನಿನ್ನ ಕರುಣೆಯಿಂದ ನಮಗೆ ತೃಪ್ತಿಪಡಿಸು; ಆಗ ನಮ್ಮ ದಿವಸಗಳಲ್ಲೆಲ್ಲಾ ಉತ್ಸಾಹಧ್ವನಿಗೈದು ಸಂತೋಷ ಪಡುವೆವು.
- 15 ನೀನು ನಮ್ಮನ್ನು ಕುಂದಿಸಿದ ದಿವಸಗಳ ಪ್ರಕಾರವೂ ನಾವು ಕೇಡನ್ನು ನೋಡಿದ ವರುಷಗಳ ಪ್ರಕಾರವೂ ನಮ್ಮನ್ನು ಸಂತೋಷಪಡಿಸು.
- 16 ನಿನ್ನ ಸೇವಕರಿಗೆ ನಿನ್ನ ಕೆಲಸವೂ ಅವರ ಮಕ್ಕಳಿಗೆ ನಿನ್ನ ಪ್ರಭೆಯೂ ತೋರಿಬರಲಿ.
- 17 ನಮ್ಮ ದೇವರಾದ ಕರ್ತನ ರಮ್ಯತೆಯು ನಮ್ಮ ಮೇಲೆ ಇರಲಿ; ನಾವು ಕೈಹಾಕಿದ ಕೈಲಸವನ್ನು ನಮಗೆ ಸ್ಥಿರಪಡಿಸು; ಹೌದು, ನಮ್ಮ ಕೆಲಸವನ್ನು ಸ್ಥಿರಪಡಿಸು;
Psalms 090
- Details
- Parent Category: Old Testament
- Category: Psalms
ಕೀರ್ತನೆಗಳು ಅಧ್ಯಾಯ 90