- 1 ಕರ್ತನಿಗೆ ಉಪಕಾರ ಸ್ತುತಿಮಾಡಿರಿ; ಆತನ ಹೆಸರನ್ನು ಕರೆಯಿರಿ; ಜನ ಗಳಲ್ಲಿ ಆತನ ಕ್ರಿಯೆಗಳನ್ನು ತಿಳಿಯಮಾಡಿರಿ.
- 2 ಆತನಿಗೆ ಹಾಡಿರಿ, ಆತನಿಗೆ ಕೀರ್ತನೆ ಹಾಡಿರಿ; ಆತನ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
- 3 ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ; ಕರ್ತನನ್ನು ಹುಡುಕುವವರ ಹೃದಯವು ಸಂತೋಷಿಸಲಿ.
- 4 ಕರ್ತನನ್ನೂ ಆತನ ಬಲವನ್ನೂ ಹುಡುಕಿರಿ. ಆತನ ಮುಖ ವನ್ನು ಯಾವಾಗಲೂ ಹುಡುಕಿರಿ.
- 5 ಆತನು ಮಾಡಿದ ಆಶ್ಚರ್ಯ ಕಾರ್ಯಗಳನ್ನೂ ಆತನ ಅದ್ಭುತಗಳನ್ನೂ ಆತನ ಬಾಯಿಯ ನ್ಯಾಯಗಳನ್ನೂ ಜ್ಞಾಪಕಮಾಡಿ ಕೊಳ್ಳಿರಿ;
- 6 ಆತನ ಸೇವಕನಾದ ಅಬ್ರಹಾಮನ ಸಂತತಿಯೇ, ಆತನು ಆದುಕೊಂಡ ಯಾಕೋಬನ ಮಕ್ಕಳೇ,
- 7 ಆತನೇ ನಮ್ಮ ದೇವರಾದ ಕರ್ತನಾಗಿದ್ದಾನೆ; ಆತನ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಅವೆ.
- 8 ತನ್ನ ಒಡಂಬಡಿಕೆಯನ್ನೂ ಸಾವಿರ ತಲಾಂತರಗ ಳಿಗೆ ಆಜ್ಞಾಪಿಸಿದ ತನ್ನ ಮಾತನ್ನೂ
- 9 ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಇಸಾಕನಿಗೆ ಇಟ್ಟ ಆಣೆಯನ್ನೂ ಆತನು ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾನೆ.
- 10 ಅದನ್ನು ಯಾಕೋಬನಿಗೆ ದೃಢ ಮಾಡಿದನು ಮತ್ತು ಇಸ್ರಾಯೇಲಗೆ ನಿತ್ಯ ಒಡಂಬಡಿಕೆ ಯಾಗಿ ಸ್ಥಾಪಿಸಿ ಹೇಳಿದ್ದೇನಂದರೆ--
- 11 ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.
- 12 ಆಗ ಅವರು ಲೆಕ್ಕಕ್ಕೆ ಸ್ವಲ್ಪವಾಗಿಯೂ ಹೌದು, ಬಹಳ ಸ್ವಲ್ಪ ಮಂದಿಯಾಗಿಯೂ ಪರದೇಶಸ್ಥರಾ ಗಿಯೂ ಅದರಲ್ಲಿ ಇದ್ದರು.
- 13 ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋದರು.
- 14 ಮನುಷ್ಯರು ಅವರಿಗೆ ಕೇಡು ಮಾಡದಂತೆ ಆತನು ತಡೆದನು; ಹೌದು, ಅವರಿಗೋ ಸ್ಕರ ಆತನು ಅರಸುಗಳನ್ನು ಗದರಿಸಿದನು.
- 15 ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ, ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ ಎಂದು ಹೇಳಿದನು.
- 16 ದೇಶದ ಮೇಲೆ ಬರವನ್ನು ಬರಮಾಡಿ ಆಹಾರ ವೆಂಬ ಊರುಕೋಲನ್ನು ಮುರಿದನು.
- 17 ಅವರ ಮುಂದೆ ಒಬ್ಬ ಮನುಷ್ಯನನ್ನು ಅಂದರೆ ದಾಸನಾಗಿ ಮಾರಲ್ಪಟ್ಟ ಯೋಸೇಫನನ್ನು ಕಳುಹಿಸಿದನು.
- 18 ಅವರು ಸಂಕೋಲೆಗಳಿಂದ ಅವನ ಕಾಲುಗಳನ್ನು ಬಾಧಿಸಿದರು; ಅವನನ್ನು ಕಬ್ಬಿಣದ ಬೇಡಿಗಳಲ್ಲಿ ಬಂಧಿಸಿದರು.
- 19 ಆತನ ವಾಕ್ಯವು ಬರುವ ವರೆಗೆ ಕರ್ತನ ಮಾತು ಅವನನ್ನು ಪುಟಕ್ಕೆ ಹಾಕಿತು.
- 20 ಅರಸನು ಕಳುಹಿಸಿ ಅವನನ್ನು ಬಿಡಿಸಿದನು; ಜನಗಳ ಅಧಿಪತಿಯು ಅವನನ್ನು ಬಿಡುಗಡೆ ಮಾಡಿದನು.
- 21 ಅವನನ್ನು ತನ್ನ ಮನೆಗೆ ಯಜಮಾನನಾಗಿಯೂ ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಪತಿಯಾಗಿಯೂ
- 22 ತನ್ನ ಪ್ರಧಾನರನ್ನು ಮನಸ್ಸು ಬಂದ ಹಾಗೆ ಕಟ್ಟುವದಕ್ಕೂ ತನ್ನ ಜ್ಞಾನ ವನ್ನು ಆಲೋಚನಾ ಕರ್ತರಿಗೆ ಕಲಿಸುವದಕ್ಕೂ ಇಟ್ಟನು.
- 23 ಆಗ ಇಸ್ರಾಯೇಲನು ಐಗುಪ್ತಕ್ಕೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪರದೇಶಸ್ಥನಾಗಿದ್ದನು.
- 24 ಆತನು ತನ್ನ ಜನರನ್ನು ಬಹಳ ಅಭಿವೃದ್ಧಿಮಾಡಿ ಅವರ ವೈರಿಗಳಿಗಿಂತ ಬಲಿಷ್ಠ ರನ್ನಾಗಿ ಮಾಡಿದನು.
- 25 ಆತನು ಆ ದೇಶದವರ ಹೃದಯವನ್ನು ಮಾರ್ಪ ಡಿಸಿದ್ದರಿಂದ ಅವರು ಆತನ ಜನರನ್ನು ದ್ವೇಷಿಸಿ ಆತನ ಸೇವಕರನ್ನು ಕುಯುಕ್ತಿಯಿಂದ ನಡಿಸಿದರು.
- 26 ತನ್ನ ಸೇವಕನಾದ ಮೋಶೆಯನ್ನೂ ತಾನು ಆದು ಕೊಂಡ ಆರೋನನನ್ನೂ ಕಳುಹಿಸಿದನು.
- 27 ಇವರು ಆತನ ಗುರುತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.
- 28 ಆತನು ಕತ್ತಲನ್ನು ಕಳುಹಿಸಿ ಅದನ್ನು ಕತ್ತಲಾಗ ಮಾಡಿದನು; ಆಗ ಆತನ ಮಾತಿಗೆ ಅವರು ಎದು ರಾಡಲಿಲ್ಲ.
- 29 ಅವರ ನೀರನ್ನು ರಕ್ತವಾಗಿ ಮಾರ್ಪ ಡಿಸಿ; ವಿಾನುಗಳನ್ನು ಸಾಯಿಸಿದನು.
- 30 ಅವರ ದೇಶದಲೆಲ್ಲಾ ಬಹಳವಾಗಿ ಕಪ್ಪೆಗಳು ತುಂಬಿ ಕೊಂಡವು. ಅರಸುಗಳ ಕೊಠಡಿಗಳಲ್ಲಿ ಸಹ ಬಂದವು.
- 31 ಆತನು ಹೇಳಲು ನೊಣದ ಗುಂಪುಗಳೂ ಅವರ ಮೇರೆಗಳಲ್ಲೆಲ್ಲಾ ಹೇನುಗಳೂ ಬಂದವು.
- 32 ಅವರ ಮಳೆಗಾಗಿ ಕಲ್ಮಳೆಯನ್ನೂ ಅಗ್ನಿಜ್ವಾಲೆಗಳನ್ನೂ ದೇಶದಲ್ಲಿ ಬರಮಾಡಿದನು.
- 33 ಅವರ ದ್ರಾಕ್ಷೇ ಬಳ್ಳಿಯನ್ನೂ ಅಂಜೂರದ ಗಿಡಗಳನ್ನೂ ಹೊಡೆದು ಮೇರೆಗಳ ಮರ ಗಳನ್ನು ಮುರಿದನು.
- 34 ಆತನು ಹೇಳಲು ಮಿಡಿತೆಗಳೂ ಲೆಕ್ಕವಿಲ್ಲದ ಕಂಬಳಿ ಹುಳಗಳೂ ಬಂದವು,
- 35 ಅವು ಅವರ ದೇಶದಲ್ಲಿ ಎಲ್ಲಾ ಪಲ್ಯಗಳನ್ನು ನುಂಗಿಬಿಟ್ಟು; ಭೂಮಿಯ ಫಲಗಳನ್ನು ತಿಂದುಬಿಟ್ಟವು.
- 36 ಅವರ ದೇಶದಲ್ಲಿಯ ಎಲ್ಲಾ ಚೊಚ್ಚಲುಗಳನ್ನೂ ಬಲವುಳ್ಳ ಎಲ್ಲಾ ಪ್ರಮುಖರನ್ನೂ ಹೊಡೆದನು.
- 37 ಆತನು ಬೆಳ್ಳಿ ಬಂಗಾರಗಳ ಸಂಗಡ ಅವರನ್ನು ಹೊರಗೆ ಬರಮಾಡಿ ದನು; ಅವರ ಗೋತ್ರಗಳಲ್ಲಿ ಬಲಹೀನನು ಒಬ್ಬನೂ ಇರಲಿಲ್ಲ.
- 38 ಐಗುಪ್ತ್ಯರು ಅವರ ವಿಷಯದಲ್ಲಿ ಹೆದರಿಕೆ ಯುಳ್ಳವರಾದ್ದರಿಂದ ಅವರು ಹೊರಟು ಹೋದದಕ್ಕೆ ಸಂತೋಷಿಸಿದರು.
- 39 ಆತನು ನೆರಳಿಗಾಗಿ ಮೇಘ ವನ್ನೂ ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ವಿಸ್ತರಿಸಿದನು.
- 40 ಅವರು ಕೇಳಿದಾಗ ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ರೊಟ್ಟಿಯಿಂದ ಅವರನ್ನು ತೃಪ್ತಿಪಡಿಸಿದನು.
- 41 ಆತನು ಬಂಡೆಯನ್ನು ತೆರೆಯಲು ನೀರು ಹೊರಟಿತು; ಅದು ಒಣಗಿದ ಸ್ಥಳಗಳಲ್ಲಿ ನದಿಯಾಗಿ ಹರಿಯಿತು.
- 42 ಆತನು ತನ್ನ ಪರಿಶುದ್ಧ ವಾಗ್ದಾನವನ್ನೂ ಸೇವಕನಾದ ಅಬ್ರಹಾಮನನ್ನೂ ಜ್ಞಾಪಕ ಮಾಡಿಕೊಂಡನು.
- 43 ಆತನು ತನ್ನ ಜನರನ್ನು ಆನಂದದಿಂದಲೂ ತಾನು ಆದುಕೊಂಡವರನ್ನು ಉತ್ಸಾ ಹದಿಂದಲೂ ಹೊರಗೆ ಬರಮಾಡಿದನು,
- 44 ಅವರು ಪ್ರಜೆಗಳ ಕಷ್ಟಾರ್ಜಿತವನ್ನು ಸ್ವಾಧೀನಮಾಡಿಕೊಂಡರು.
- 45 ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ.
Psalms 105
- Details
- Parent Category: Old Testament
- Category: Psalms
ಕೀರ್ತನೆಗಳು ಅಧ್ಯಾಯ 105