- 1 ಓ ದೇವರೇ, ನನ್ನ ಹೃದಯವು ಸಿದ್ಧವಾಗಿದೆ; ನಾನು ನನ್ನ ಹೆಚ್ಚಳ ದೊಂದಿಗೆ ಹಾಡಿ ಕೀರ್ತಿಸುವೆನು.
- 2 ವೀಣೆಯೇ, ಕಿನ್ನರಿಯೇ, ಎಚ್ಚರವಾಗು; ನಾನು ಉದಯದಲ್ಲಿ ಎಚ್ಚರಗೊಳ್ಳುವೆನು.
- 3 ಕರ್ತನೇ, ಜನರಲ್ಲಿ ನಿನ್ನನ್ನು ಕೊಂಡಾಡುವೆನು; ಜನಾಂಗಗಳಲ್ಲಿ ನಿನ್ನನ್ನು ಕೀರ್ತಿಸು ವೆನು.
- 4 ಆಕಾಶಕ್ಕಿಂತ ನಿನ್ನ ಕರುಣೆಯೂ ಮೇಘಗಳನ್ನು ನಿಲುಕುವಂಥ ನಿನ್ನ ಸತ್ಯವೂ ದೊಡ್ಡದು.
- 5 ದೇವರೇ, ಆಕಾಶಗಳ ಮೇಲೆ ನೀನು ಘನಹೊಂದು; ಭೂಮಿಯ ಮೇಲೆ ನಿನ್ನ ಮಹಿಮೆಯು ಇರಲಿ.
- 6 ನಿನ್ನ ಪ್ರಿಯರು ಬಿಡುಗಡೆಯಾಗುವ ಹಾಗೆ ನಿನ್ನ ಬಲಗೈಯಿಂದ ರಕ್ಷಿಸಿ ನನಗೆ ಉತ್ತರ ಕೊಡು.
- 7 ದೇವರು ತನ್ನ ಪರಿಶುದ್ಧತ್ವದಲ್ಲಿ ನುಡಿದಿದ್ದಾನೆ; ನಾನು ಉತ್ಸಾಹ ಪಡುವೆನು. ಶೆಕೆಮನ್ನು ಹಂಚುವೆನು, ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.
- 8 ಗಿಲ್ಯಾದ್ ನನ್ನದು; ಮನಸ್ಸೆ ನನ್ನದು; ಎಫ್ರಾಯಾಮ್ ನನ್ನ ತಲೆಯ ಬಲಸ್ಥಾನವು; ಯೆಹೂದವು ನನ್ನ ರಾಜ ದಂಡವಾಗಿದೆ
- 9 ಮೋವಾಬ್ ನನ್ನನ್ನು ತೊಳೆಯುವ ಪಾತ್ರೆಯು; ಏದೋಮಿನ ಮೇಲೆ ನನ್ನ ಕೆರವನ್ನು ಎಸೆಯುವೆನು; ಫಿಲಿಷ್ಟಿಯದ ಮೇಲೆ ಜಯಧ್ವನಿಗೈಯುವೆನು.
- 10 ಬಲ ವುಳ್ಳ ಪಟ್ಟಣಕ್ಕೆ ನನ್ನನ್ನು ಕರೆತರುವವನಾರು? ಏದೋಮಿನ ವರೆಗೆ ನನ್ನನ್ನು ನಡಿಸುವವನಾರು?
- 11 ದೇವರೇ, ನಮ್ಮನ್ನು ತೊರೆದು ಬಿಟ್ಟವನು ನೀನೇ ಅಲ್ಲವೋ? ನಮ್ಮ ಸೈನ್ಯಗಳ ಸಂಗಡ ಹೊರಟು ಹೋಗದೆ ಇದ್ದ ದೇವರು ನೀನಲ್ಲವೋ?
- 12 ಇಕ್ಕಟ್ಟಿ ನಲ್ಲಿರುವ ನಮಗೆ ಸಹಾಯಕೊಡು; ಮನುಷ್ಯನ ಸಹಾಯವು ವ್ಯರ್ಥವಾಗಿದೆ.
- 13 ದೇವರಿಂದ ಪರಾ ಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.
Psalms 108
- Details
- Parent Category: Old Testament
- Category: Psalms
ಕೀರ್ತನೆಗಳು ಅಧ್ಯಾಯ 108