- 1 ಕರ್ತನನ್ನು ಸ್ತುತಿಸಿರಿ; ಕರ್ತನ ಸೇವಕರೇ; ಸ್ತುತಿಸಿರಿ; ಕರ್ತನ ಹೆಸರನ್ನು ಸ್ತುತಿಸಿರಿ;
- 2 ಇಂದಿನಿಂದ ಯುಗಯುಗಕ್ಕೂ ಕರ್ತನ ಹೆಸರಿಗೆ ಸ್ತುತಿಯುಂಟಾಗಲಿ.
- 3 ಸೂರ್ಯೋದಯ ದಿಂದ ಅದರ ಅಸ್ತಮಾನದ ವರೆಗೂ ಕರ್ತನ ಹೆಸರು ಸ್ತುತಿಸಲ್ಪಡತಕ್ಕದ್ದು.
- 4 ಕರ್ತನು ಎಲ್ಲಾ ಜನಾಂಗಗಳ ಮೇಲೆ ಉನ್ನತವಾದವನು; ಆತನ ಮಹಿಮೆಯು ಆಕಾ ಶಗಳ ಮೇಲೆ ಇದೆ.
- 5 ನಮ್ಮ ದೇವರಾದ ಕರ್ತನ ಹಾಗೆ ಯಾರಿದ್ದಾರೆ? ಉನ್ನತದಲ್ಲಿ ಆತನು ವಾಸಿಸುತ್ತಾನೆ.
- 6 ಆಕಾಶದ ಮೇಲೆಯೂ ಭೂಮಿಯ ಮೇಲೆಯೂ ದೃಷ್ಟಿ ಇಡುವದಕ್ಕೆ ಆತನು ತನ್ನನ್ನು ತಗ್ಗಿಸಿಕೊಳ್ಳುತ್ತಾನೆ.
- 7 ಅಧಿಪತಿಗಳ ಸಂಗಡವೂ ತನ್ನ ಜನರ ಅಧಿಪತಿಗಳ ಸಂಗಡವೂ ಕುಳ್ಳಿರಿಸುವದಕ್ಕೆ,
- 8 ಧೂಳಿನೊಳಗಿಂದ ದರಿದ್ರನನ್ನು ಏಳಮಾಡಿ ತಿಪ್ಪೆಯೊಳಗಿಂದ ಬಡವನನ್ನು ಎತ್ತುತ್ತಾನೆ.
- 9 ಬಂಜೆಯಾದವಳನ್ನು ಮಕ್ಕಳ ಸಂತೋಷ ವುಳ್ಳ ತಾಯಿಯಾಗಿ ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾನೆ ಕರ್ತನನ್ನು ಸ್ತುತಿಸಿರಿ.
Psalms 113
- Details
- Parent Category: Old Testament
- Category: Psalms
ಕೀರ್ತನೆಗಳು ಅಧ್ಯಾಯ 113