- 1 ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ.
- 2 ಅವರ ದೇವರು ಎಲ್ಲಿ ಎಂದು ಅನ್ಯ ಜನಾಂಗಗಳು ಯಾಕೆ ಹೇಳಬೇಕು?
- 3 ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಇಚ್ಚಿಸುವ ದನ್ನೆಲ್ಲಾ ಮಾಡುತ್ತಾನೆ.
- 4 ಅವರ ವಿಗ್ರಹಗಳು ಬೆಳ್ಳಿಯೂ ಬಂಗಾರವೂ ಮನುಷ್ಯನ ಕೈಕೆಲಸವೂ ಆಗಿವೆ.
- 5 ಅವುಗಳಿಗೆ ಬಾಯಿ ಉಂಟು; ಮಾತಾಡುವದಿಲ್ಲ; ಕಣ್ಣುಗಳುಂಟು; ನೋಡು ವದಿಲ್ಲ.
- 6 ಕಿವಿಗಳುಂಟು; ಕೇಳುವದಿಲ್ಲ. ಮೂಗು ಉಂಟು; ಮೂಸುವದಿಲ್ಲ.
- 7 ಕೈಗಳುಂಟು; ಮುಟ್ಟುವ ದಿಲ್ಲ. ಕಾಲುಗಳುಂಟು; ನಡೆಯುವದಿಲ್ಲ. ತಮ್ಮ ಗಂಟಲಿನಿಂದ ಮಾತನಾಡುವದಿಲ್ಲ,
- 8 ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- 9 ಓ ಇಸ್ರಾಯೇಲೇ, ಕರ್ತನಲ್ಲಿ ಭರವಸವಿಡು; ಆತನೇ ಅವರ ಸಹಾಯವೂ ಗುರಾಣಿಯೂ ಆಗಿ ದ್ದಾನೆ.
- 10 ಆರೋನನ ಮನೆಯವರೇ, ಕರ್ತನಲ್ಲಿ ಭರವಸವಿಡಿರಿ; ಆತನೇ ಅವರ ಸಹಾಯವೂ ಗುರಾ ಣಿಯೂ ಆಗಿದ್ದಾನೆ.
- 11 ಕರ್ತನಿಗೆ ಭಯಪಡುವವರೇ, ಕರ್ತನಲ್ಲಿ ಭರವಸವಿಡಿರಿ; ಆತನೇ ಅವರ ಸಹಾ ಯವೂ ಗುರಾಣಿಯೂ ಆಗಿದ್ದಾನೆ.
- 12 ಕರ್ತನು ನಮ್ಮನ್ನು ಜ್ಞಾಪಕಮಾಡಿಕೊಂಡಿದ್ದಾನೆ,ಆತನು ನಮ್ಮನ್ನು ಆಶೀರ್ವದಿಸುವನು; ಇಸ್ರಾಯೇಲಿನ ಮನೆಯನ್ನು ಆಶೀರ್ವದಿಸುವನು; ಆರೋನನ ಮನೆ ಯನ್ನು ಆಶೀರ್ವದಿಸುವನು.
- 13 ಕರ್ತನಿಗೆ ಭಯ ಪಡುವವರಾದ ಹಿರಿಯರ ಸಂಗಡ ಕಿರಿಯರನ್ನು ಆಶೀರ್ವದಿಸುವನು.
- 14 ಕರ್ತನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವನು.
- 15 ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಕರ್ತನಿಂದ ನೀವು ಆಶೀರ್ವದಿಸಲ್ಪಟ್ಟವರು.
- 16 ಆಕಾಶಗಳು ಕರ್ತನವುಗಳೇ. ಆತನು ಭೂಮಿ ಯನ್ನು ನರಪುತ್ರರಿಗೆ ಕೊಟ್ಟಿದ್ದಾನೆ.
- 17 ಸತ್ತವರೂ ಮೌನಕ್ಕೆ ಇಳಿದವರೆಲ್ಲರೂ ಕರ್ತನನ್ನು ಸ್ತುತಿಸುವ ದಿಲ್ಲ.
- 18 ನಾವಾದರೋ ಇಂದಿನಿಂದ ಯುಗಯುಗಕ್ಕೂ ಕರ್ತನನ್ನು ಸ್ತುತಿಸುವೆವು. ಕರ್ತನನ್ನು ಸ್ತುತಿಸಿರಿ.
Psalms 115
- Details
- Parent Category: Old Testament
- Category: Psalms
ಕೀರ್ತನೆಗಳು ಅಧ್ಯಾಯ 115