- 1 ಕರ್ತನೇ, ದಾವೀದನನ್ನೂ ಅವನ ಎಲ್ಲಾ ಶ್ರಮೆಗಳನ್ನೂ ಜ್ಞಾಪಕ ಮಾಡಿಕೋ.
- 2 ಅವನು ಕರ್ತನಿಗೆ ಆಣೆ ಇಟ್ಟು ಶಕ್ತಿ ಯುಳ್ಳ ಯಾಕೋಬನ ದೇವರಿಗೆ ಪ್ರಮಾಣಮಾಡಿ ಕೊಂಡದ್ದೇನಂದರೆ--
- 3 ಕರ್ತನಿಗೆ ಒಂದು ಸ್ಥಳವನ್ನೂ ಯಾಕೋಬನ ದೇವರಿಗೆ ನಿವಾಸಗಳನ್ನೂ ನಾನು ಕಂಡುಕೊಳ್ಳುವ ವರೆಗೆ ನಿಶ್ಚಯವಾಗಿ
- 4 ನನ್ನ ಮನೆಯ ಗುಡಾರದಲ್ಲಿ ಸೇರೆನು; ನನ್ನ ಮಂಚದ ಹಾಸಿಗೆಯನ್ನು ಏರೆನು;
- 5 ನನ್ನ ಕಣ್ಣುಗಳಿಗೆ ನಿದ್ದೆಯನ್ನೂ ನನ್ನ ರೆಪ್ಪೆ ಗಳಿಗೆ ತೂಕಡಿಕೆಯನ್ನೂ ಕೊಡೆನು ಎಂಬದು.
- 6 ಇಗೋ, ಎಫ್ರಾತದಲ್ಲಿ ಅದನ್ನು ಕೇಳಿದೆವು; ಅಡವಿಯ ಬೈಲುಗಳಲ್ಲಿ ಅದನ್ನು ಕಂಡುಕೊಂಡೆವು.
- 7 ನಾವು ಆತನ ಗುಡಾರಗಳಿಗೆ ಹೋಗಿ ಆತನ ಪಾದಪೀಠದಲ್ಲಿ ಆರಾಧಿಸೋಣ.
- 8 ಓ ಕರ್ತನೇ, ನೀನು ಬಲವುಳ್ಳ ನಿನ್ನ ಮಂಜೂಷದೊಂದಿಗೆ ನಿನ್ನ ವಿಶ್ರಾಂತಿಗೆ ಎದ್ದೇಳು.
- 9 ನಿನ್ನ ಯಾಜಕರು ನೀತಿಯನ್ನು ಹೊದ್ದು ಕೊಳ್ಳಲಿ; ಪರಿಶುದ್ಧರು ಉತ್ಸಾಹಧ್ವನಿ ಮಾಡಲಿ.
- 10 ನಿನ್ನ ಸೇವಕನಾದ ದಾವೀದನ ನಿಮಿತ್ತ ನಿನ್ನ ಅಭಿಷಿಕ್ತನ ಮುಖವನ್ನು ತಿರುಗಿಸಬೇಡ.
- 11 ಕರ್ತನು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾನೆ; ಅದರಿಂದ ತಿರುಗಿಕೊಳ್ಳನು; ಅದು--ನಿನ್ನ ಸಂತಾನ ವನ್ನು ನಿನ್ನ ಸಿಂಹಾಸನದ ಮೇಲೆ ಇರಿಸು ವದು.
- 12 ನಿನ್ನ ಮಕ್ಕಳಿಗೆ ನಾನು ಕಲಿಸುವ ನನ್ನ ಒಡಂಬಡಿಕೆಯನ್ನೂ ನನ್ನ ಸಾಕ್ಷಿಯನ್ನೂ ಕೈಕೊಂಡರೆ ಅವರ ಮಕ್ಕಳು ಸಹ ಎಂದೆಂದಿಗೂ ನಿನ್ನ ಸಿಂಹಾಸನ ದಲ್ಲಿ ಕೂಡ್ರುವರು.
- 13 ಕರ್ತನು ಚೀಯೋನನ್ನು ಆದುಕೊಂಡು ಅದನ್ನು ತನ್ನ ವಾಸಕ್ಕಾಗಿ ಅಪೇಕ್ಷಿಸಿದ್ದಾನೆ.
- 14 ಇದೇ ಎಂದೆಂದಿಗೂ ನನ್ನ ವಿಶ್ರಾಂತಿಯು; ಇಲ್ಲೇ ವಾಸಿಸುವೆನು; ಇದನ್ನು ನಾನು ಅಪೇಕ್ಷಿಸಿದ್ದೇನೆ.
- 15 ಅದರ ಆದಾಯವನ್ನು ಬಹಳವಾಗಿ ಆಶೀರ್ವದಿ ಸುವೆನು; ಆದರೆ ಬಡವರನ್ನು ರೊಟ್ಟಿಯಿಂದ ತೃಪ್ತಿ ಪಡಿಸುವೆನು.
- 16 ಅದರ ಯಾಜಕರಿಗೆ ರಕ್ಷಣೆಯನ್ನೂ ಹೊದಿಸುವೆನು; ಅದರ ಪರಿಶುದ್ಧರು ಗಟ್ಟಿಯಾಗಿ ಉತ್ಸಾಹ ಧ್ವನಿಮಾಡುವರು.
- 17 ಅಲ್ಲಿ ದಾವೀದನಿಗೆ ಕೊಂಬನ್ನು ಮೊಳಿಸುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.
- 18 ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
Psalms 132
- Details
- Parent Category: Old Testament
- Category: Psalms
ಕೀರ್ತನೆಗಳು ಅಧ್ಯಾಯ 132