- 1 ನೊವೊಮಿಯ ಗಂಡನಾದ ಎಲೀಮೆಲೆ ಕನ ಗೋತ್ರದಲ್ಲಿ ಬೋವಜನು ಎಂಬ ಹೆಸರುಳ್ಳ ಬಹಳ ಐಶ್ವರ್ಯವಂತನಾಗಿರುವ ಸಂಬಂಧಿ ಕನಿದ್ದನು.
- 2 ಮೋವಾಬ್ಯಳಾದ ರೂತಳು ನೊವೊಮಿಗೆ ನಾನು ಹೊಲಕ್ಕೆ ಹೋಗಿ ಯಾವನ ಕೃಪೆಯು ನನಗೆ ಆಗುವದೋ ಅವನ ಹೊಲದಲ್ಲಿ ಹಕ್ಕಲ ತೆನೆಗಳನ್ನು ಕೂಡಿಸಿಕೊಳ್ಳುವೆನು ಅಂದಳು. ಅದಕ್ಕೆ ಇವಳು ನನ್ನ ಮಗಳೇ, ಹೋಗು ಅಂದಳು.
- 3 ಅವಳು ಹೋಗಿ ಹೊಲದಲ್ಲಿ ಕೊಯ್ಯುವವರ ಹಿಂದೆ ಹಕ್ಕಲಾದು ಕೊಂಡಳು. ಅವಳಿಗೆ ಪ್ರಾಪ್ತಿಸಿದ ಆ ಹೊಲದ ಭಾಗ ಎಲೀಮೆಲೆಕನ ಸಂಬಂಧಿಕನಾದ ಬೋವಜನದಾಗಿತ್ತು.
- 4 ಇಗೋ, ಬೋವಜನು ಬೇತ್ಲೆಹೇಮಿನಿಂದ ಬಂದು ಕೊಯ್ಯುವವರಿಗೆ ಕರ್ತನು ನಿಮ್ಮ ಸಂಗಡ ಇರಲಿ ಅಂದನು. ಅದಕ್ಕೆ ಅವರು ಕರ್ತನು ನಿನ್ನನ್ನು ಆಶೀರ್ವ ದಿಸಲಿ ಅಂದರು.
- 5 ಬೋವಜನು ಕೊಯ್ಯುವವರ ಮೇಲೆ ಮೇಲ್ಗಾವಲಿಯಾಗಿ ಇಟ್ಟ ತನ್ನ ಸೇವಕನಿಗೆ ಇವಳು ಯಾರ ಹುಡುಗಿ ಅಂದನು.
- 6 ಅದಕ್ಕೆ ಕೊಯ್ಯು ವವರ ಮೇಲೆ ಮೇಲ್ಗಾವಲಿಯಾಗಿ ಇಡಲ್ಪಟ್ಟ ಆ ಸೇವಕನು ಪ್ರತ್ಯುತ್ತರವಾಗಿ ಇವಳು ಮೋವಾಬ್ ಸೀಮೆಯಿಂದ ನೊವೊಮಿಯ ಸಂಗಡ ಹಿಂದಿರುಗಿ ಬಂದ ಮೋವಾಬಿನ ಹುಡುಗಿ.
- 7 ಆದರೆ ಇವಳು, ಕೊಯ್ಯುವವರ ಹಿಂದೆ ಕೊಯ್ದ ಸಿವುಡುಗಳಲ್ಲಿ ನಾನು ಹಕ್ಕಲಾರಿಸಿಕೊಳ್ಳಲೂ ಕೂಡಿಸಿಕೊಳ್ಳಲೂ ಅಪ್ಪಣೆ ಯಾಗಲಿ ಅಂದಳು. ಮನೆಯಲ್ಲಿ ಕ್ಷಣಮಾತ್ರವಿದ್ದು ಬೆಳಗಿನಿಂದ ಈ ವರೆಗೂ ಇಲ್ಲಿಯೇ ಇದ್ದಾಳೆ ಅಂದನು.
- 8 ಆಗ ಬೋವಜನು ರೂತಳಿಗೆ ನನ್ನ ಮಗಳೇ, ನನ್ನ ಮಾತು ಕೇಳುತ್ತೀಯಾ? ನೀನು ಹಕ್ಕಲಾದುಕೊಳ್ಳಲು ಅನ್ಯರ ಹೊಲಕ್ಕೆ ಹೋಗದೆ, ಈ ಸ್ಥಳವನ್ನು ಬಿಟ್ಟು ಹೊರಡದೆ, ಇಲ್ಲಿಯೇ ನನ್ನ ದಾಸಿಗಳ ಸಂಗಡ ಕೂಡಿಕೊಂಡಿರು.
- 9 ನಿನ್ನ ಕಣ್ಣುಗಳು ಅವರು ಕೊಯ್ಯುವ ಹೊಲದ ಮೇಲೆ ಇರಲಿ; ಅವರ ಹಿಂದೆಯೇ ಹೋಗು, ಯಾವನಾದರೂ ನಿನ್ನನ್ನು ಮುಟ್ಟದ ಹಾಗೆ ಅವರಿಗೆ ಆಜ್ಞಾಪಿಸಿದೆನಲ್ಲಾ? ನಿನಗೆ ದಾಹವಾದರೆ ನೀನು ಪಾತ್ರೆಗಳ ಬಳಿಗೆ ಹೋಗಿ ಪ್ರಾಯಸ್ಥರು ಸೇದಿಟ್ಟ ನೀರನ್ನು ಕುಡಿ ಅಂದನು.
- 10 ಆಗ ಅವಳು ಸಾಷ್ಟಾಂಗ ಬಿದ್ದು ವಂದಿಸಿ ಅವನಿಗೆ ನಾನು ಅನ್ಯಳಾಗಿರುವಾಗ ನೀನು ನನ್ನನ್ನು ತಿಳುಕೊಂಡು ನನ್ನ ಮೇಲೆ ನಿನ್ನ ಕೃಪೆ ಯನ್ನು ತೋರಿಸಿದ್ದು ಹೇಗೆ ಅಂದಳು.
- 11 ಆಗ ಬೋವಜನು ಅವಳಿಗೆ ಪ್ರತ್ಯುತ್ತರವಾಗಿ ನಿನ್ನ ಗಂಡನು ಸತ್ತ ತರುವಾಯ ನೀನು ನಿನ್ನ ಅತ್ತೆಗೋಸ್ಕರ ಮಾಡಿ ದ್ದೆಲ್ಲವೂ ನಿನ್ನ ತಂದೆತಾಯಿಗಳನ್ನೂ ಹುಟ್ಟಿದ ದೇಶವನ್ನೂ ಎಂದಿಗೂ ಅರಿಯದ ಜನರ ಬಳಿಗೆ ಬಂದದ್ದೂ ನನಗೆ ಚೆನ್ನಾಗಿ ತಿಳಿಸಲ್ಪಟ್ಟಿದೆ.
- 12 ನೀನು ಮಾಡಿದ್ದಕ್ಕೆ ಕರ್ತನು ನಿನಗೆ ಬದಲು ಕೊಡಲಿ; ಇಸ್ರಾಯೇಲ್ ದೇವರಾದ ಕರ್ತನ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳಲು ಬಂದ ನಿನಗೆ ಆತನಿಂದ ಬರುವ ನಿನ್ನ ಬಹುಮಾನ ಪರಿಪೂರ್ಣವಾಗಿರಲಿ ಅಂದನು.
- 13 ಅದಕ್ಕೆ ಅವಳು ನನ್ನ ಒಡೆಯನೇ, ನನಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ. ಯಾಕಂದರೆ ನನ್ನನ್ನು ನೀನು ಆದರಿಸಿದಿ; ನಾನು ನಿನ್ನ ದಾಸಿಗಳಲ್ಲಿ ಒಬ್ಬಳಲ್ಲ ದಿದ್ದರೂ ನನ್ನ ಕೂಡ ಸ್ನೇಹದಿಂದ ಮಾತನಾಡಿದಿಅಂದಳು.
- 14 ಇದಲ್ಲದೆ ಬೋವಜನು ಅವಳಿಗೆ ಊಟದ ವೇಳೆಯಲ್ಲಿ ಹತ್ತಿರ ಬಂದು ರೊಟ್ಟಿಯ ತುತ್ತನ್ನು ಹುಳಿರಸದಲ್ಲಿ ಅದ್ದಿ ತಿನ್ನು ಅಂದನು. ಅವಳು ಕೊಯ್ಯುವವರ ಬಳಿಯಲ್ಲಿ ಕುಳಿತಳು. ಆಗ ಅವನು ಅವಳಿಗೆ ಹುರಿದ ತೆನೆಯನ್ನು ಕೊಟ್ಟನು. ಅವಳು ತಿಂದು ತೃಪ್ತಿಪಟ್ಟು ಇನ್ನೂ ಉಳಿಸಿಟ್ಟುಕೊಂಡಳು.
- 15 ಅವಳು ಹಕ್ಕಲಾದುಕೊಳ್ಳಲು ಏಳುವಾಗ ಬೋವ ಜನು ತನ್ನ ಯುವಕರಿಗೆ ಆಜ್ಞಾಪಿಸಿ ಇವಳು ಕೊಯಿದ ಸಿವುಡುಗಳ ಮಧ್ಯದಲ್ಲಿ ಹಕ್ಕಲಾದುಕೊಳ್ಳಲಿ. ನೀವು ಅವಳನ್ನು ನಿಂದಿಸಬೇಡಿರಿ;
- 16 ಅವಳು ಹಕ್ಕಲಾದು ಕೊಳ್ಳುವ ಹಾಗೆ ನೀವು ಅವಳಿಗೋಸ್ಕರ ಸಿವುಡು ಗಳಲ್ಲಿ ಕೆಲವು ಜಾರಬಿಡಿರಿ; ಅವಳನ್ನು ಗದರಿಸಬೇಡಿರಿ ಅಂದನು.
- 17 ಹಾಗೆಯೇ ಅವಳು ಸಾಯಂಕಾಲದ ವರೆಗೂ ಹೊಲದಲ್ಲಿ ಹಕ್ಕಲಾದುಕೊಂಡಳು. ಅವಳು ಹಕ್ಕಲಾದುಕೊಂಡದ್ದನ್ನು ಬಡಿದಾಗ ಅದು ಹೆಚ್ಚು ಕಡಿಮೆ ಒಂದು ಏಫದಷ್ಟು ಜವೆಗೋಧಿಯಾಗಿತ್ತು.
- 18 ಅವಳು ಅದನ್ನು ತೆಗೆದುಕೊಂಡು ಪಟ್ಟಣಕ್ಕೆ ಹೋದಳು. ಅವಳು ಹಕ್ತಲಾದುಕೊಂಡದ್ದನ್ನು ಅವಳ ಅತ್ತೆಯು ನೋಡಿದಳು. ರೂತಳು ತೃಪ್ತಿಯಾದ ಮೇಲೆ ಉಳಿಸಿ ತಂದದ್ದನ್ನು ಅವಳಿಗೆ ಕೊಟ್ಟಳು.
- 19 ಆಗ ಅವಳ ಅತ್ತೆಯು ಆಕೆಗೆ ನೀನು ಈ ಹೊತ್ತು ಎಲ್ಲಿ ಹಕ್ಕಲಾದುಕೊಂಡಿ? ಎಲ್ಲಿ ಕೆಲಸ ಮಾಡಿದಿ? ನಿನ್ನನ್ನು ಪರಾಮರಿಸಿದವನು ಆಶೀರ್ವದಿಸಲ್ಪಡಲಿ ಅಂದಳು. ಅದಕ್ಕವಳು ತಾನು ಯಾವನ ಹತ್ತಿರ ಕೆಲಸ ಮಾಡಿ ದಳೋ ಅದನ್ನು ತನ್ನ ಅತ್ತೆಗೆ ತಿಳಿಸಿ ನಾನು ಈ ಹೊತ್ತು ಕೆಲಸಮಾಡಿದವನ ಹೆಸರು ಬೋವಜ ಎಂದು ಹೇಳಿದಳು.
- 20 ನೊವೊಮಿ ತನ್ನ ಸೊಸೆಗೆಜೀವಿಸಿರುವವರಿಗೋಸ್ಕರವೂ ಸತ್ತವರಿಗೋಸ್ಕರವೂ ಮಾಡಿದ ಕೃಪೆಯನ್ನು ಬಿಡದೆ ಇರುವವನು ಕರ್ತ ನಿಂದ ಆಶೀರ್ವದಿಸಲ್ಪಡಲಿ ಅಂದಳು. ನೊವೊಮಿ ಅವಳಿಗೆ ಆ ಮನುಷ್ಯನು ನಮ್ಮ ಸಂಬಂಧಿಕನಾಗಿಯೂ ವಿಮೋಚಿಸತಕ್ಕ ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ ಅಂದಳು.
- 21 ಅದಕ್ಕೆ ಮೋವಾಬ್ಯಳಾದ ರೂತಳು ಅವನು, ನನ್ನ ಪೈರೆಲ್ಲಾ ಕೊಯಿದು ತೀರುವ ವರೆಗೂ ನೀನು ನನ್ನ ಕೆಲಸದವರ ಸಂಗಡ ಕೂಡಿ ಕೊಂಡಿರು ಎಂದು ನನಗೆ ಹೇಳಿದನು ಅಂದಳು.
- 22 ಆಗ ನೊವೊಮಿಯು ತನ್ನ ಸೊಸೆಯಾದ ರೂತಳಿಗೆ ನನ್ನ ಮಗಳೇ, ಮತ್ತೊಂದು ಹೊಲದಲ್ಲಿ ಮನುಷ್ಯರು ನಿನ್ನನ್ನು ಕಂಡುಕೊಳ್ಳದ ಹಾಗೆ ನೀನು ಅವನ ದಾಸಿ ಗಳ ಸಂಗಡ ಹೊರಟು ಹೋಗುವದು ಒಳ್ಳೇದು ಅಂದಳು.
- 23 ಹೀಗೆ ಅವಳು ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದು ಹಾಗೆಯೇ ಜವೆಗೋಧಿಯ ಸುಗ್ಗಿಯು ತೀರುವ ವರೆಗೆ ಹಕ್ಕಲಾದುಕೊಳ್ಳುವದ ಕ್ಕೋಸ್ಕರ ಬೋವಜನ ದಾಸಿಗಳ ಸಂಗಡ ಕೂಡಿ ಕೊಂಡು ಹೋಗುತ್ತಿದ್ದಳು.
Ruth 02
- Details
- Parent Category: Old Testament
- Category: Ruth
ರೂತಳು ಅಧ್ಯಾಯ 2