wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಜೆಕರ್ಯಅಧ್ಯಾಯ 3
  • 1 ಇದಲ್ಲದೆ ಆತನು ನನಗೆ--ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು.
  • 2 ಆಗ ಕರ್ತನ ದೂತನು ಸೈತಾನನಿಗೆ--ಸೈತಾನನೇ, ಕರ್ತನು ನಿನ್ನನ್ನು ಗದರಿಸಲಿ; ಹೌದು, ಯೆರೂಸಲೇಮನ್ನು ಆದುಕೊಂಡ ಕರ್ತನು ನಿನ್ನನ್ನು ಗದರಿಸಲಿ; ಅದು ಬೆಂಕಿಯೊಳಗಿಂದ ಎಳೆದ ಕೊಳ್ಳೆಯಾಗಿದೆಯಲ್ಲವೋ ಅಂದನು.
  • 3 ಯೆಹೋಶು ವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವ ನಾಗಿ ದೂತನ ಮುಂದೆ ನಿಂತನು.
  • 4 ಆಗ ಅವನು ಉತ್ತರಕೊಟ್ಟು ತನ್ನ ಮುಂದೆ ನಿಂತವರಿಗೆ--ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದು ಹಾಕಿರಿ ಅಂದನು. ಅವನಿಗೆ--ಇಗೋ, ನಿನ್ನ ಅಕ್ರಮವು ನಿನ್ನನ್ನು ಬಿಟ್ಟುಹೋಗುವಂತೆ ಮಾಡಿದ್ದೇನೆ; ಬದಲು ವಸ್ತ್ರಗಳನ್ನು ನಿನಗೆ ತೊಡಿಸುವೆನು ಅಂದನು.
  • 5 ಆಗ ನಾನು--ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಡಿರಿ ಅಂದೆನು. ಆಗ ಅವರು ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಟ್ಟು ಅವನಿಗೆ ನಿಲು ವಂಗಿಗಳನ್ನು ತೊಡಿಸಿದರು; ಕರ್ತನ ದೂತನು ಪಕ್ಕ ದಲ್ಲಿ ನಿಂತಿದ್ದನು.
  • 6 ಆಗ ಕರ್ತನ ದೂತನು ಯೆಹೋ ಶುವನಿಗೆ ಸಾಕ್ಷಿ ಕೊಟ್ಟದ್ದೇನಂದರೆ--
  • 7 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನ ಮಾರ್ಗಗಳಲ್ಲಿ ನಡೆದು ನನ್ನ ಆಜ್ಞೆಯನ್ನು ಕೈಕೋ, ಆಗ ನೀನು ನನ್ನ ಮನೆಗೂ ನ್ಯಾಯತೀರಿಸಿ ನನ್ನ ಅಂಗಳಗಳನ್ನೂ ಕಾಯುವಿ; ಇಲ್ಲಿ ನಿಂತವರ ಬಳಿಯಲ್ಲಿ ನಡೆದಾಡುವ ನಿನಗೆ ಸ್ಥಳಗಳನ್ನು ಕೊಡುವೆನು.
  • 8 ಪ್ರಧಾನ ಯಾಜಕ ನಾದ ಓ ಯೆಹೋಶುವನೇ, ನೀನೂ ನಿನ್ನ ಮುಂದೆ ಕೂತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ; ಅವರು ಆಶ್ಚರ್ಯವನ್ನುಂಟು ಮಾಡುವ ಮನುಷ್ಯರಾಗಿ ದ್ದಾರೆ; ಇಗೋ, ನಾನು ಕೊಂಬೆಯೆಂಬ ನನ್ನ ಸೇವಕ ನನ್ನು ಬರಮಾಡುವೆನು.
  • 9 ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವವು; ಇಗೋ, ನಾನು ಅದರ ಕೆತ್ತನೆಯಿಂದ ಕೆತ್ತುವೆನು; ಆ ದೇಶದ ಅಪರಾಧ ವನ್ನು ಒಂದೇ ದಿನದಲ್ಲಿ ತೊಲಗಿಸುವೆನು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
  • 10 ಆ ದಿನದಲ್ಲಿ ನೀವು ನಿಮ್ಮ ನಿಮ್ಮ ನೆರೆಯವರನ್ನು ದ್ರಾಕ್ಷೇಬಳ್ಳಿಯ ಕೆಳಗೂ ಅಂಜೂರ ಮರದ ಕೆಳಗೂ ಕರೆಯುವಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.