wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಜೆಕರ್ಯಅಧ್ಯಾಯ 11
  • 1 ಓ ಲೆಬನೋನೇ, ಬೆಂಕಿ ನಿನ್ನ ದೇವದಾರುಗಳನ್ನು ನುಂಗುವ ಹಾಗೆ ನಿನ್ನ ಬಾಗಲು ಗಳನ್ನು ತೆರೆ.
  • 2 ತುರಾಯಿ ಗಿಡವೇ, ಗೋಳಿಡು; ದೇವದಾರು ಬಿದ್ದುಹೋಯಿತು, ಬಲವಾದವುಗಳು ಹಾಳಾದವು; ಬಾಷಾನಿನ ಓಕ್‌ ಮರಗಳೇ, ಗೋಳಾ ಡಿರಿ; ದ್ರಾಕ್ಷೆಯ ಅಡವಿಯು ಇಳಿದು ಬಂದಿದೆ.
  • 3 ಕುರುಬರು ಗೋಳಿಡುವ ಶಬ್ದವುಂಟು; ಅವರ ಗೌರವವು ಕೆಡಿಸಲ್ಪಟ್ಟಿದೆ, ಪ್ರಾಯದ ಸಿಂಹಗಳ ಘರ್ಜಿಸುವ ಶಬ್ದವುಂಟು; ಯೊರ್ದನಿನ ಗರ್ವ ಕೆಡಿಸಲ್ಪಟ್ಟಿದೆ.
  • 4 ನನ್ನ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೊಲೆಯ ಮಂದೆಯನ್ನು ಮೇಯಿಸು.
  • 5 ಅವುಗಳನ್ನು ಸಂಪಾದಿಸಿದವರು ಅವುಗಳನ್ನು ಕೊಂದು ತಮ್ಮನ್ನು ನಿರಪರಾಧಿಗಳೆಂದೆಣಿಸುತ್ತಾರೆ; ಅವುಗಳನ್ನು ಮಾರುವ ವರು--ನಾನು ಐಶ್ವರ್ಯವಂತನಾದೆನು, ಕರ್ತನಿಗೆ ಸ್ತೋತ್ರ ಎಂದನ್ನುತ್ತಾರೆ; ಅವರ ಸ್ವಂತ ಕುರುಬರು ಅವುಗಳನ್ನು ಕನಿಕರಿಸುವದಿಲ್ಲ.
  • 6 ನಾನು ದೇಶದ ನಿವಾಸಿಗಳನ್ನು ಇನ್ನು ಕನಿಕರಿಸುವದೇ ಇಲ್ಲ ಎಂದು ಕರ್ತನು ಅನ್ನುತ್ತಾನೆ; ಆದರೆ ಇಗೋ, ನಾನು ಒಬ್ಬೊ ಬ್ಬನನ್ನು ತನ್ನ ತನ್ನ ನೆರೆಯವನ ಕೈಗೂ ತನ್ನ ಅರಸನ ಕೈಗೂ ಒಪ್ಪಿಸುವೆನು; ಅವರು ದೇಶವನ್ನು ಹೊಡೆ ಯುವರು; ಅವರ ಕೈಯೊಳಗಿಂದ ನಾನು ಅವರನ್ನು ತಪ್ಪಿಸುವದಿಲ್ಲ.
  • 7 ಆಗ ಕೊಯ್ಗುರಿಗಳ ಮಂದೆ ಯನ್ನು ಹೌದು, ಬಡವಾದ ಮಂದೆಯನ್ನೇ ಮೇಯಿಸಿದೆನು; ನನಗಾಗಿ ಎರಡು ಕೋಲುಗಳನ್ನು ತಕ್ಕೊಂಡೆನು; ಒಂದಕ್ಕೆ ಸೌಂದರ್ಯ ಎಂದೂ ಮತ್ತೊಂದಕ್ಕೆ ಬಂಧ ಗಳೆಂದೂ ಹೆಸರಿಟ್ಟೆನು; ಹೀಗೆ ಮಂದೆಯನ್ನು ಮೇಯಿ ಸಿದೆನು.
  • 8 ಇದಲ್ಲದೆ ಒಂದೇ ತಿಂಗಳಲ್ಲಿ ಮೂರು ಕುರುಬರನ್ನು ತೆಗೆದುಹಾಕಿದೆನು; ನನ್ನ ಆತ್ಮವು ಅವರನ್ನು ಹೇಸಿಕೊಂಡಿತು; ಅವರ ಆತ್ಮವು ಸಹ ನನ್ನನ್ನು ಹೇಸಿ ಕೊಂಡಿತು.
  • 9 ಆಗ ನಾನು ಹೇಳಿದ್ದೇನಂದರೆ-- ನಾನು ನಿಮ್ಮನ್ನು ಮೇಯಿಸುವದಿಲ್ಲ; ಸಾಯುವಂಥದ್ದು ಸಾಯಲಿ; ಕೆಡುವಂಥದ್ದು ಕೆಡಲಿ; ಮಿಕ್ಕಾದವುಗಳ ಒಂದರ ಮಾಂಸವನ್ನು ಒಂದು ತಿನ್ನಲಿ.
  • 10 ಆಗ ಸೌಂದರ್ಯವೆಂಬ ನನ್ನ ಕೋಲನ್ನು ತಕ್ಕೊಂಡು ಅದನ್ನು ಮುರಿದುಬಿಟ್ಟೆನು; ಹೀಗೆ ಜನರೆಲ್ಲರ ಸಂಗಡ ನಾನು ಮಾಡಿದ್ದ ನನ್ನ ಒಡಂಬಡಿಕೆಯನ್ನು ಮುರಿದುಬಿಟ್ಟೆನು,
  • 11 ಅದೇ ದಿನದಲ್ಲಿ ಅದು ಮುರಿಯಲ್ಪಟ್ಟಿತು; ಆಗ ನನ್ನಲ್ಲಿ ನಿರೀಕ್ಷೆಯಿಟ್ಟ ಬಡ ಕುರಿಮಂದೆಯು ಅದು ಕರ್ತನ ವಾಕ್ಯವೆಂದು ತಿಳಿದುಕೊಂಡಿತು.
  • 12 ಆಗ ನಾನು ಅವರಿಗೆ--ನಿಮ್ಮ ಕಣ್ಣುಗಳಲ್ಲಿ ಒಳ್ಳೇದಾಗಿ ತೋರಿದರೆ ನನ್ನ ಸಂಬಳವನ್ನು ಕೊಡಿರಿ, ಇಲ್ಲದಿದ್ದರೆ ಬಿಡಿರಿ ಅಂದೆನು. ಆಗ ಅವರು ನನ್ನ ಸಂಬಳಕ್ಕಾಗಿ ಮೂವತ್ತು ರೂಪಾಯಿಗಳನ್ನು ತೂಕಮಾಡಿದರು.
  • 13 ಆಗ ಕರ್ತನು ನನಗೆ--ಅದನ್ನು ಕುಂಬಾರನಿಗೆ ಹಾಕು; ನಾನು ಅವರಿಂದ ಬೆಲೆ ಮಾಡಲ್ಪಟ್ಟದ್ದು ಸರಿಯಾದ ಬೆಲೆ ಅಲ್ಲವೋ ಅಂದನು; ಆಗ ನಾನು ಆ ಮೂವತ್ತು ರೂಪಾಯಿಗಳನ್ನು ತಕ್ಕೊಂಡು ಕರ್ತನ ಆಲಯದಲ್ಲಿ ಅವುಗಳನ್ನು ಕುಂಬಾರನಿಗೆ ಹಾಕಿದೆನು.
  • 14 ಆಗ ನನ್ನ ಎರಡನೇ ಕೋಲಾದ ಬಂಧಗಳನ್ನು ಮುರಿದುಬಿಟ್ಟೆನು; ಹೀಗೆ ಯೆಹೂದಕ್ಕೂ ಇಸ್ರಾಯೇ ಲಿಗೂ ಮಧ್ಯೆ ಇರುವ ಸಹೋದರತನವನ್ನು ಇಲ್ಲದ ಹಾಗೆ ಮಾಡಿದೆನು.
  • 15 ಇದಲ್ಲದೆ ಕರ್ತನು ನನಗೆ ಹೇಳಿದ್ದೇನಂದರೆ --ಇನ್ನು ಬುದ್ಧಿಹೀನವಾದ ಕುರುಬನ ಆಯುಧಗ ಳನ್ನು ತಕ್ಕೋ.
  • 16 ಇಗೋ, ನಾನು ದೇಶದಲ್ಲಿ ಒಬ್ಬ ಕುರುಬನನ್ನು ಎಬ್ಬಿಸುವೆನು; ಅವನು ಕೆಟ್ಟು ಹೋಗುವ ವುಗಳನ್ನು ವಿಚಾರಿಸುವದಿಲ್ಲ; ಇಲ್ಲವೆ ಮರಿಯನ್ನು ಅವನು ಹುಡುಕುವದಿಲ್ಲ; ಮುರಿದದ್ದನ್ನು ಅವನು ಗುಣಮಾಡುವದಿಲ್ಲ; ಇನ್ನೂ ನಿಂತಿರುವದನ್ನು ಅವನು ಪೋಷಿಸುವದಿಲ್ಲ; ಆದರೆ ಕೊಬ್ಬಿದವುಗಳ ಮಾಂಸ ವನ್ನು ತಿನ್ನುವನು; ಅವುಗಳ ಗೊರಸುಗಳನ್ನು ಮುರಿದು ಬಿಡುವನು.
  • 17 ಮಂದೆಯನ್ನು ಕೈಬಿಡುವಂಥ ಮೈಗಳ್ಳನಾದ ಕುರುಬನಿಗೆ ಅಯ್ಯೋ! ಕತ್ತಿಯು ಅವನ ತೋಳಿನ ಮೇಲೆಯೂ ಅವನ ಬಲಗಣ್ಣಿನ ಮೇಲೆಯೂ ಇರುವದು; ಅವನ ತೋಳು ತೀರಾ ಒಣಗುವದು; ಅವನ ಬಲಗಣ್ಣು ಪೂರ್ಣವಾಗಿ ಕತ್ತಲಾಗುವದು.