- 1 ಪಂಚಾಶತ್ತಮ ದಿನವು ಪೂರ್ಣವಾಗಿ ಬಂದಾಗ ಅವರೆಲ್ಲರೂ ಒಂದೇ ಮನಸ್ಸಿ ನಿಂದ ಒಂದೇ ಸ್ಥಳದಲ್ಲಿ ಇದ್ದರು.
- 2 ಆಗ ರಭಸವಾಗಿ ಬೀಸುವ ಬಲವಾದ ಗಾಳಿಯೋಪಾದಿಯಲ್ಲಿ ಒಂದು ಶಬ್ದವು ಆಕಾಶದಿಂದ ಫಕ್ಕನೆ ಬಂದು ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.
- 3 ಇದಲ್ಲದೆ ಅಲ್ಲಿ ವಿಂಗಡಿಸಲ್ಪಟ್ಟ ನಾಲಿಗೆಗಳು ಬೆಂಕಿಯಂತೆ ಅವರಿಗೆ ಕಾಣಿಸಿಕೊಂಡು ಅವರಲ್ಲಿ ಪ್ರತಿಯೊಬ್ಬನ ಮೇಲೆ ಅದು ಕೂತುಕೊಂಡಿತು.
- 4 ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ಆತ್ಮನು ತಮಗೆ ನುಡಿಯುವ ಶಕ್ತಿಯನ್ನು ಕೊಟ್ಟ ಪ್ರಕಾರ ಅವರು ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವದಕ್ಕೆ ಪ್ರಾರಂಭಿಸಿದರು.
- 5 ಆಕಾಶದ ಕೆಳಗಿರುವ ಪ್ರತಿಯೊಂದು ಜನಾಂಗದವರೊಳಗಿಂದ (ಬಂದಿದ್ದ) ಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸ ಮಾಡುತ್ತಿದ್ದರು
- 6 ಆಗ ಈ ಶಬ್ದವು ಬಹು ದೂರದವರೆಗೆ ಕೇಳಿಸಿದ್ದರಿಂದ ಜನಸಮೂಹವು ಕೂಡಿ ಬಂದು ಪ್ರತಿಯೊಬ್ಬನು ತನ್ನ ತನ್ನ ಸ್ವಭಾಷೆಯಲ್ಲಿ ಅವರು ಮಾತನಾಡಿದ್ದನ್ನು ಕೇಳಿ ಭ್ರಮೆಗೊಂಡರು.
- 7 ಅವರು ಆಶ್ಚರ್ಯಪಟ್ಟು ಬೆರ ಗಾಗಿ--ಇಗೋ, ಮಾತನಾಡುತ್ತಿರುವ ಇವರೆಲ್ಲರೂ ಗಲಿಲಾಯದವರಲ್ಲವೇ?
- 8 ಹಾಗಾದರೆ ಪ್ರತಿಯೊ ಬ್ಬನು ನಮ್ಮ ಸ್ವಂತ ಹುಟ್ಟುಭಾಷೆಯಲ್ಲಿ ಮಾತನಾಡು ವದನ್ನು ನಾವು ಕೇಳುವದು ಹೇಗೆ?
- 9 ಪಾರ್ಥ್ಯರೂ ಮೇದ್ಯರೂ ಎಲಾಮ್ಯರೂ ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ,
- 10 ಫ್ರುಗ್ಯ, ಪಂಫುಲ್ಯ, ಐಗುಪ್ತದಲ್ಲಿದ್ದವರು, ಕುರೇನದ ಮಗ್ಗುಲಲ್ಲಿ ರುವ ಲಿಬ್ಯದ ಪ್ರಾಂತ್ಯದವರು, ರೋಮದ ಪ್ರವಾಸಿ ಗಳು, ಯೆಹೂದ್ಯರು, ಯೆಹೂದ್ಯ ಮತಾವಲಂಬಿಗಳು,
- 11 ಕ್ರೇತ್ಯರು ಮತ್ತು ಅರಬಿಯರು ಆಗಿರುವ ನಾವು ನಮ್ಮ ಭಾಷೆಗಳಲ್ಲಿ ದೇವರ ಮಹತ್ಕಾರ್ಯಗಳನ್ನು ಇವರು ಹೇಳುವದನ್ನು ಕೇಳುತ್ತೇವೆ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
- 12 ಅವರೆ ಲ್ಲರೂ ವಿಸ್ಮಯಗೊಂಡು ಸಂದೇಹಪಟ್ಟವರಾಗಿ-- ಇದರ ಅರ್ಥವೇನು ಎಂದು ಒಬ್ಬರನ್ನೊಬ್ಬರು ಕೇಳುವವರಾದರು.
- 13 ಕೆಲವರು--ಈ ಮನುಷ್ಯರು ಹೊಸ ಮದ್ಯಪಾನ ಮಾಡಿ ಮತ್ತರಾಗಿದ್ದಾರೆ ಎಂದು ಹೇಳಿ ಹಾಸ್ಯ ಮಾಡಿದರು.
- 14 ಆದರೆ ಪೇತ್ರನು ಹನ್ನೊಂದು ಮಂದಿಯೊಂದಿಗೆ ಎದ್ದು ನಿಂತು ಗಟ್ಟಿಯಾದ ಸ್ವರದಿಂದ ಅವರಿಗೆ-- ಯೂದಾಯದವರೇ, ಯೆರೂಸಲೇಮಿನಲ್ಲಿ ವಾಸ ವಾಗಿರುವ ಎಲ್ಲಾ ಜನರೇ, ಈ ವಿಷಯ ನಿಮಗೆ ಗೊತ್ತಾಗುವ ಹಾಗೆ ನನ್ನ ಮಾತುಗಳಿಗೆ ಕಿವಿಗೊಡಿರಿ.
- 15 ನೀವು ಭಾವಿಸಿದಂತೆ ಇವರು ಕುಡಿದು ಅಮಲೇರಿ ದವರಲ್ಲ; ಯಾಕಂದರೆ ಈಗ ಹಗಲು ಮೂರು (ಒಂಭತ್ತು) ಗಂಟೆಯಾಗಿದೆಯಷ್ಟೆ.
- 16 ಆದರೆ ಇದು ಪ್ರವಾದಿಯಾದ ಯೋವೇಲನಿಂದ ಹೇಳಲ್ಪಟ್ಟದ್ದಾಗಿದೆ. ಅದೇನಂದರೆ--
- 17 ಕಡೇ ದಿವಸಗಳಲ್ಲಿ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿಸು ವರು; ಇದಲ್ಲದೆ ನಿಮ್ಮ ಯೌವನಸ್ಥರಿಗೆ ದರ್ಶನಗಳಾ ಗುವವು; ನಿಮ್ಮ ವೃದ್ಧರಿಗೆ ಕನಸುಗಳು ಬೀಳುವವು ಎಂದು ದೇವರು ಹೇಳುತ್ತಾನೆ.
- 18 ಇದಲ್ಲದೆ ಆ ದಿನಗಳಲ್ಲಿ ನನ್ನ ಸೇವಕ ಸೇವಕಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು; ಅವರೂ ಪ್ರವಾದಿಸು ವರು;
- 19 ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನೂ ಕೆಳಗೆ ಭೂಮಿಯ ಮೇಲೆ ಸೂಚಕ ಕಾರ್ಯಗಳನ್ನೂ ನಾನು ತೋರಿಸುವೆನು. ಇದಲ್ಲದೆ ರಕ್ತ, ಬೆಂಕಿ ಮತ್ತು ಹೊಗೆಯ ಹಬೆಯು ಉಂಟಾಗುವವು.
- 20 ಕರ್ತನ ಗಂಭೀರವಾದ ಆ ಮಹಾದಿನವು ಬರುವ ಮುಂಚೆ ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗು ವನು.
- 21 ಆಗ ಕರ್ತನ ನಾಮವನ್ನು ಹೇಳಿಕೊಳ್ಳು ವವರೆಲ್ಲರೂ ರಕ್ಷಣೆ ಹೊಂದುವರು ಎಂದು ದೇವರು ಹೇಳುತ್ತಾನೆ ಎಂಬದೇ.
- 22 ಇಸ್ರಾಯೇಲ್ ಜನರೇ, ಈ ಮಾತುಗಳನ್ನು ಕೇಳಿರಿ; ನಿಮಗೂ ತಿಳಿದಿರುವಂತೆ ನಜರೇತಿನ ಯೇಸುವು ದೇವರಿಗೆ ಮೆಚ್ಚಿಕೆಯಾದ ನೆಂಬದಕ್ಕೆ ದೇವರು ಆತನಿಂದ ಮಹತ್ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯ ಗಳನ್ನೂ ನಿಮ್ಮ ಮಧ್ಯದಲ್ಲಿ ನಡಿಸಿದನು.
- 23 ಆದರೆ ದೇವರ ಸ್ಥಿರಸಂಕಲ್ಪಕ್ಕನುಸಾರವಾಗಿಯೂ ಭವಿಷ್ಯದ್ ಜ್ಞಾನಕ್ಕನುಸಾರವಾಗಿಯೂ ಆತನು ಒಪ್ಪಿಸಲ್ಪಟ್ಟಾಗ ನೀವು ಆತನನ್ನು ಹಿಡಿದು ದುಷ್ಟರ ಕೈಗಳಿಂದ ಶಿಲುಬೆಗೆ ಹಾಕಿಸಿಕೊಂದಿರಿ.
- 24 ದೇವರು ಆತನನ್ನು ಮರಣ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು. ಯಾಕಂದರೆ ಮರಣವು ಆತನನ್ನು ಹಿಡಿದುಕೊಂಡಿರುವದು ಅಸಾಧ್ಯ ವಾಗಿತ್ತು.
- 25 ದಾವೀದನು ಆತನ ವಿಷಯವಾಗಿ-- ನಾನು ಕರ್ತನನ್ನು ನನ್ನ ಎದುರಿನಲ್ಲಿ ಯಾವಾಗಲೂ ನೋಡುತ್ತಿದ್ದೆನು; ನಾನು ಕದಲದಂತೆ ಆತನು ನನ್ನ ಬಲಗಡೆಯಲ್ಲಿಯೇ ಇದ್ದಾನೆ.
- 26 ಆದದರಿಂದ ನನ್ನ ಹೃದಯವು ಹರ್ಷಿಸಿತು, ನನ್ನ ನಾಲಿಗೆಯು ಉಲ್ಲಾಸ ಗೊಂಡಿತು; ಇದಲ್ಲದೆ ನನ್ನ ಶರೀರವು ಸಹ ನಿರೀಕ್ಷೆಯಲ್ಲಿ ನೆಲೆಯಾಗಿರುವದು;
- 27 ಯಾಕಂ ದರೆ--ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವ ದಿಲ್ಲ. ನಿನ್ನ ಪರಿಶುದ್ಧನಿಗೆ ಕೊಳೆಯುವ ಅವಸ್ಥೆಯನ್ನು ನೋಡಗೊಡಿಸುವದಿಲ್ಲ.
- 28 ನೀನು ಜೀವಮಾರ್ಗ ಗಳನ್ನು ನನಗೆ ತಿಳಿಯಪಡಿಸಿದ್ದೀ; ನಿನ್ನ ಸಮ್ಮುಖದಲ್ಲಿ ನನ್ನನ್ನು ಆನಂದಭರಿತನಾಗ ಮಾಡುವಿ ಎಂದು ಹೇಳು ತ್ತಾನೆ.
- 29 ಜನರೇ, ಸಹೋದರರೇ, ಮೂಲಪಿತೃವಾದ ದಾವೀದನ ವಿಷಯವಾಗಿ ನಿಮ್ಮೊಂದಿಗೆ ಧಾರಾಳವಾಗಿ ಮಾತನಾಡುತ್ತೇನೆ. ಅವನು ಸತ್ತು ಹೂಣಲ್ಪಟ್ಟನು, ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿದೆ.
- 30 ದಾವೀದನು ಪ್ರವಾದಿಯಾಗಿದ್ದದರಿಂದ ಶರೀರದ ಪ್ರಕಾರ ತನ್ನ ಸಂತಾನದವರಲ್ಲಿ ದೇವರು ಕ್ರಿಸ್ತನನ್ನು ಎಬ್ಬಿಸಿ ತನ್ನ ಸಿಂಹಾಸನದ ಮೇಲೆ ಕೂತುಕೊಳ್ಳುವಂತೆ ಮಾಡುವನೆಂದು ಆಣೆಯಿಟ್ಟು ಪ್ರಮಾಣ ಪೂರ್ವಕ ವಾಗಿ ತನಗೆ ಹೇಳಿದ್ದನ್ನು ಅವನು ಬಲ್ಲವನಾಗಿದ್ದನು.
- 31 ಆತನ ಆತ್ಮವು ಪಾತಾಳದಲ್ಲಿ ಬಿಡಲ್ಪಡಲಿಲ್ಲ ವೆಂತಲೂ ಆತನ ಶರೀರವು ಕೊಳೆಯಲಿಲ್ಲವೆಂತಲೂ ಕ್ರಿಸ್ತನ ಪುನರುತ್ಥಾನದ ವಿಷಯವಾಗಿ ಅವನು ಇದನ್ನು ಮುಂದಾಗಿ ನೋಡಿ ಹೇಳಿದನು;
- 32 ಈ ಯೇಸುವನ್ನೇ ದೇವರು ಎಬ್ಬಿಸಿದನು. ಇದಕ್ಕೆ ನಾವೆಲ್ಲರೂ ಸಾಕ್ಷಿ ಗಳಾಗಿದ್ದೇವೆ.
- 33 ದೇವರ ಬಲಗೈಯಿಂದ ಆತನು ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟು ತಂದೆಯಿಂದ ಪವಿತ್ರಾತ್ಮನ ವಾಗ್ದಾನವನ್ನು ಹೊಂದಿ ನೀವು ಈಗ ನೋಡಿ ಕೇಳುವದನ್ನು ಆತನು ಸುರಿಸಿದ್ದಾನೆ.
- 34 ಯಾಕಂದರೆ ದಾವೀದನು ಆಕಾಶಗಳಿಗೆ ಏರಿಹೋಗಲಿಲ್ಲ; ಆದರೆ ಕರ್ತನು ನನ್ನ ಕರ್ತನಿಗೆ--
- 35 ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ತಾನೇ ಹೇಳುತ್ತಾನೆ.
- 36 ಆದದರಿಂದ ನೀವು ಶಿಲುಬೆಗೆ ಹಾಕಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ಇಸ್ರಾಯೇಲ್ ಮನೆತನದವರೆಲ್ಲರಿಗೂ ನಿಶ್ಚಯವಾಗಿ ತಿಳಿದಿರಲಿ ಎಂದು ಹೇಳಿದನು.
- 37 ಅವರು ಇದನ್ನು ಕೇಳಿ ತಮ್ಮ ಹೃದಯದಲ್ಲಿ ತಿವಿಯಲ್ಪಟ್ಟವರಾಗಿ ಪೇತ್ರನಿಗೂ ಉಳಿದ ಅಪೊಸ್ತಲರಿಗೂ--ಜನರೇ, ಸಹೋದರರೇ, ನಾವು ಏನು ಮಾಡಬೇಕು ಎಂದು ಕೇಳಿದರು.
- 38 ಆಗ ಪೇತ್ರನು ಅವರಿಗೆ--ನೀವು ಮಾನಸಾಂತರಪಟ್ಟು ಪಾಪಗಳ ಪರಿಹಾರಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನು ಯೇಸು ಕ್ರಿಸ್ತನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಳ್ಳಿರಿ; ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ.
- 39 ಯಾಕಂದರೆ ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾದ ಕರ್ತನು ಕರೆಯುವವರೆಲ್ಲರಿಗೂ ಮಾಡಿಯದೆ ಎಂದು ಹೇಳಿದನು.
- 40 ಅವನು ಇನ್ನೂ ಬೇರೆ ಅನೇಕ ಮಾತುಗಳಿಂದ ಸಾಕ್ಷಿಕೊಟ್ಟು--ಈ ಮೂರ್ಖ ಸಂತತಿಯವರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿರಿ ಎಂದು ಎಚ್ಚರಿಸಿ ಹೇಳಿದನು.
- 41 ಆಗ ಅವನ ಮಾತನ್ನು ಸಂತೋಷವಾಗಿ ಅಂಗೀಕರಿಸಿದವರು ಬಾಪ್ತಿಸ್ಮ ಮಾಡಿಸಿಕೊಂಡರು. ಅದೇ ದಿನದಲ್ಲಿ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಸಲ್ಪಟ್ಟರು.
- 42 ಅವರು ಅಪೊಸ್ತಲರ ಬೋಧನೆ ಯಲ್ಲಿಯೂ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿ ಯುವದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿ ಸ್ಥಿರಚಿತ್ತರಾಗಿದ್ದರು.
- 43 ಆಗ ಪ್ರತಿಯೊಬ್ಬನಿಗೂ ಭಯಉಂಟಾಯಿತು; ಇದಲ್ಲದೆ ಅನೇಕ ಅದ್ಭುತಕಾರ್ಯಗಳೂ ಸೂಚಕ ಕಾರ್ಯಗಳೂ ಅಪೊಸ್ತಲರಿಂದ ನಡೆದವು.
- 44 ನಂಬಿದ ವರೆಲ್ಲರೂ ಒಂದಾಗಿದ್ದು ತಮಗಿದ್ದದ್ದನ್ನು ಹುದುವಾಗಿ ಅನುಭವಿಸುತ್ತಿದ್ದರು.
- 45 ಅವರು ಚರಸ್ಥಿರಾಸ್ತಿಗಳನ್ನು ಮಾರಿ ಪ್ರತಿಯೊಬ್ಬನಿಗೆ ಅಗತ್ಯವಿದ್ದ ಹಾಗೆ ಹಂಚಿ ಕೊಟ್ಟರು.
- 46 ಅವರು ದೇವಾಲಯದಲ್ಲಿ ಪ್ರತಿ ದಿನ ಒಮ್ಮನಸ್ಸಿನಿಂದ ಕೂಡುತ್ತಾ ಮನೆಮನೆಗಳಲ್ಲಿ ರೊಟ್ಟಿ ಮುರಿಯುತ್ತಾ ಉಲ್ಲಾಸದಿಂದಲೂ ಏಕಹೃದಯ ದಿಂದಲೂ ಊಟಮಾಡುತ್ತಿದ್ದರು.
- 47 ಇದಲ್ಲದೆ ಅವರು ದೇವರನ್ನು ಕೊಂಡಾಡುವವರಾಗಿಯೂ ಜನ ರೆಲ್ಲರ ದಯೆಯನ್ನು ಹೊಂದುವವರಾಗಿಯೂ ಇದ್ದರು. ಪ್ರತಿ ದಿನ ರಕ್ಷಣೆ ಹೊಂದುತ್ತಿದ್ದವರನ್ನು ಕರ್ತನು ಸಭೆಗೆ ಸೇರಿಸುತ್ತಿದ್ದನು.
Acts 02
- Details
- Parent Category: New Testament
- Category: Acts
ಅಪೊಸ್ತಲರ ಕೃತ್ಯಗ ಅಧ್ಯಾಯ 2