- 1 ಪ್ರಾರ್ಥನೆಯ ಸಮಯವಾದ ಒಂಭತ್ತ ನೆಯ ತಾಸಿನಲ್ಲಿ (ಮೂರು ಘಂಟೆಗೆ) ಪೇತ್ರ ಯೋಹಾನರು ಕೂಡಿಕೊಂಡು ದೇವಾಲಯಕ್ಕೆ ಹೋದರು.
- 2 ಹುಟ್ಟು ಕುಂಟನಾಗಿದ್ದ ಒಬ್ಬಾನೊಬ್ಬ ಮನುಷ್ಯನು ದೇವಾಲಯಕ್ಕೆ ಹೋಗುತ್ತಿದ್ದವರಿಂದ ಭಿಕ್ಷೆ ಬೇಡುವದಕ್ಕಾಗಿ ಅವನನ್ನು ಕೆಲವರು ಹೊತ್ತು ಕೊಂಡು ಹೋಗಿ ದೇವಾಲಯದ ಸುಂದರವೆಂಬ ಬಾಗಲಿನಲ್ಲಿ ಪ್ರತಿ ದಿನ ಕೂಡ್ರಿಸುತ್ತಿದ್ದರು.
- 3 ದೇವಾ ಲಯದೊಳಕ್ಕೆ ಹೋಗುವದಕ್ಕಿದ್ದ ಪೇತ್ರ ಯೋಹಾನ ರನ್ನು ಅವನು ನೋಡಿ ಭಿಕ್ಷೆ ಬೇಡಿದನು.
- 4 ಆಗ ಪೇತ್ರನು ಯೋಹಾನನೊಂದಿಗೆ ಅವನನ್ನು ಕಣ್ಣಿಟ್ಟು ನೋಡುತ್ತಾ--ನಮ್ಮನ್ನು ನೋಡು ಅಂದನು.
- 5 ಆಗ ಅವರಿಂದ ಏನಾದರೂ ತನಗೆ ಸಿಕ್ಕೀತೆಂದು ನಿರೀಕ್ಷಿಸಿ ಅವನು ಅವರ ಮೇಲೆ ಲಕ್ಷ್ಯವಿಟ್ಟನು.
- 6 ಆಗ ಪೇತ್ರನು--ಬೆಳ್ಳಿಬಂಗಾರವಂತೂ ನನ್ನಲ್ಲಿಲ್ಲ. ಆದರೆ ನನಗಿರುವದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆದಾಡು ಎಂದು ಹೇಳಿ
- 7 ಪೇತ್ರನು ಅವನ ಬಲಗೈಯನ್ನು ಹಿಡಿದು ಎತ್ತಿದನು; ಕೂಡಲೆ ಅವನ ಪಾದಗಳೂ ಹರಡಿನ ಎಲುಬುಗಳೂ ಬಲವನ್ನು ಹೊಂದಿದವು.
- 8 ಆಗ ಅವನು ಹಾರಿ ನಿಂತು ನಡೆದನು. ನಡೆಯುತ್ತಾ ಹಾರುತ್ತಾ ದೇವರನ್ನು ಕೊಂಡಾಡುತ್ತಾ ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಿದನು.
- 9 ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರೂ ನೋಡಿ
- 10 ದೇವಾಲಯದ ಸುಂದರ ವೆಂಬ ಬಾಗಲಿನಲ್ಲಿ ಭಿಕ್ಷೆಗಾಗಿ ಕೂತುಕೊಂಡಿದ್ದವನು ಇವನೇ ಎಂದು ಅವರು ತಿಳಿದುಕೊಂಡರು; ಹಾಗೆ ಅವನಿಗೆ ಸಂಭವಿಸಿದ್ದಕ್ಕಾಗಿ ಅವರು ಆಶ್ಚರ್ಯದಿಂದಲೂ ವಿಸ್ಮಯದಿಂದಲೂ ತುಂಬಿದವರಾದರು.
- 11 ಸ್ವಸ್ಥನಾದ ಆ ಕುಂಟನು ಪೇತ್ರನನ್ನೂ ಯೋಹಾನ ನನ್ನೂ ಅಂಟಿಕೊಂಡಿದ್ದಾಗ ಜನರೆಲ್ಲರೂ ಕೂಡಿ ಅವರ ಬಳಿಗೆ ಅತ್ಯಾಶ್ಚರ್ಯದಿಂದ ಸೊಲೊಮೋನನದೆಂದು ಕರೆಯಲ್ಪಟ್ಟ ದ್ವಾರಾಂಗಳದೊಳಕ್ಕೆ ಓಡಿ ಬಂದರು.
- 12 ಪೇತ್ರನು ಇದನ್ನು ನೋಡಿ ಜನರಿಗೆ--ಇಸ್ರಾ ಯೇಲ್ ಜನರೇ, ನೀವು ಯಾಕೆ ಇದಕ್ಕೆ ಆಶ್ಚರ್ಯ ಪಡುತ್ತೀರಿ? ಇಲ್ಲವೆ ನಮ್ಮ ಸ್ವಂತ ಶಕ್ತಿಯಿಂದಾಗಲಿ ಪರಿಶುದ್ಧತೆಯಿಂದಾಗಲಿ ಈ ಮನುಷ್ಯನನ್ನು ನಡೆಯು ವಂತೆ ಮಾಡಿದೆವೋ ಎಂಬಂತೆ ನಮ್ಮ ಮೇಲೆ ಯಾಕೆ ನೀವು ದೃಷ್ಟಿ ಇಟ್ಟು ನೋಡುತ್ತೀರಿ?
- 13 ಅಬ್ರಹಾಮ ಇಸಾಕ ಯಾಕೋಬರ ದೇವರು, ನಮ್ಮ ಪಿತೃಗಳ ದೇವರು, ತನ್ನ ಮಗನಾದ ಯೇಸುವನ್ನು ಮಹಿಮೆ ಪಡಿಸಿದ್ದಾನೆ; ನೀವಾದರೋ ಆತನನ್ನು ಒಪ್ಪಿಸಿಕೊಟ್ಟಿರಿ; ಪಿಲಾತನು ಆತನನ್ನು ಬಿಟ್ಟುಬಿಡಬೇಕೆಂದು ನಿರ್ಣಯಿಸಿ ದಾಗ ನೀವು ಆತನನ್ನು ಅವನ ಮುಂದೆ ಅಲ್ಲಗಳೆದಿರಿ.
- 14 ಹೀಗೆ ಪರಿಶುದ್ಧನೂ ನೀತಿವಂತನೂ ಆಗಿರುವಾತ ನನ್ನು ನೀವು ಬೇಡವೆಂದು ಹೇಳಿ ಒಬ್ಬ ಕೊಲೆಗಾರನನ್ನು ನಿಮಗಾಗಿ ಬಿಟ್ಟುಕೊಡುವಂತೆ ಅಪೇಕ್ಷಿಸಿ
- 15 ಜೀವಾಧಿ ಪತಿಯನ್ನು ಕೊಲ್ಲಿಸಿದಿರಿ; ದೇವರು ಆತನನ್ನೇ ಸತ್ತವ ರೊಳಗಿಂದ ಎಬ್ಬಿಸಿದ್ದಾನೆ; ಇದಕ್ಕೆ ನಾವು ಸಾಕ್ಷಿಗಳಾ ಗಿದ್ದೇವೆ.
- 16 ನೀವು ನೋಡಿ ತಿಳಿದಂಥ ಈ ಮನುಷ್ಯನು ಆತನ ಹೆಸರಿನಲ್ಲಿ ನಂಬಿಕೆ ಇಟ್ಟದ್ದರಿಂದ ಆ ಹೆಸರೇ ಇವನನ್ನು ಬಲಪಡಿಸಿತು; ಹೌದು, ಆತನಿಂದಾದ ನಂಬಿಕೆಯು ನಿಮ್ಮೆಲ್ಲರ ಮುಂದೆ ಇವನಿಗೆ ಇಂಥ ಪೂರ್ಣ ಸ್ವಸ್ಥತೆಯನ್ನು ಕೊಟ್ಟಿತು.
- 17 ಈಗ ಸಹೋದರರೇ, ನಿಮ್ಮ ಅಧಿಕಾರಿಗಳು ತಿಳಿಯದೆ ಮಾಡಿದಂತೆ ನೀವೂ ಇದನ್ನು ಮಾಡಿದಿ ರೆಂದು ನಾನು ಬಲ್ಲೆನು.
- 18 ಕ್ರಿಸ್ತನು ಬಾಧೆಪಡ ಬೇಕೆಂದು ದೇವರು ಮುಂದಾಗಿ ತನ್ನ ಎಲ್ಲಾ ಪ್ರವಾದಿ ಗಳ ಬಾಯಿಂದ ಹೇಳಿಸಿದವುಗಳನ್ನು ಹೀಗೆ ನೆರವೇರಿ ಸಿದನು.
- 19 ಆದದರಿಂದ ನಿಮ್ಮ ಪಾಪಗಳು ಅಳಿಸಲ್ಪಡು ವಂತೆ ನೀವು ಮಾನಸಾಂತರಪಟ್ಟು ತಿರುಗಿಕೊಳ್ಳಿರಿ; ಆಗ ಕರ್ತನ ಸನ್ನಿಧಾನದಿಂದ ನಿಮಗೆ ವಿಶ್ರಾಂತಿಕಾಲಗಳು ಒದಗುವವು.
- 20 ಇದಲ್ಲದೆ ಮೊದಲು ನಿಮಗೆ ಸಾರಲ್ಪ ಟ್ಟಂಥ ಯೇಸು ಕ್ರಿಸ್ತನನ್ನು ಆತನು ಕಳುಹಿಸುವನು.
- 21 ಲೋಕಾದಿಯಿಂದ ತನ್ನ ಎಲ್ಲಾ ಪರಿಶುದ್ಧ ಪ್ರವಾದಿ ಗಳ ಬಾಯಿಯ ಮುಖಾಂತರ ದೇವರು ತಿಳಿಸಿದ್ದೆ ಲ್ಲವುಗಳು ಯಥಾಸ್ಥಿತಿಗೆ ಬರುವ ಸಮಯದ ವರೆಗೆ ಪರಲೋಕದಲ್ಲಿ ಆತನು ಇರುವದು ಅವಶ್ಯವಾಗಿತ್ತು.
- 22 ಯಾಕಂದರೆ ಪಿತೃಗಳಿಗೆ ಮೋಶೆಯು ನಿಜವಾಗಿಯೂ ಹೇಳಿದ್ದೇನಂದರೆ--ನನ್ನ ಹಾಗೆ ಒಬ್ಬ ಪ್ರವಾದಿಯನ್ನು ನಿಮ್ಮ ಸಹೋದರರಲ್ಲಿ ನಿಮ್ಮ ದೇವರಾದ ಕರ್ತನು ನಿಮಗಾಗಿ ಎಬ್ಬಿಸುವನು; ಆತನು ನಿಮಗೆ ಹೇಳುವ ಎಲ್ಲಾ ವಿಷಯಗಳಿಗೆ ನೀವು ಕಿವಿಗೊಡತಕ್ಕದ್ದು;
- 23 ಆ ಪ್ರವಾದಿಗೆ ಕಿವಿಗೊಡದಿರುವ ಪ್ರತಿಯೊಬ್ಬನೂ ಜನ ರೊಳಗಿಂದ ನಾಶವಾಗುವನು ಎಂಬದು.
- 24 ಹೌದು, ಸಮುವೇಲನು ಮೊದಲುಗೊಂಡು ಎಲ್ಲಾ ಪ್ರವಾದಿ ಗಳೂ ತರುವಾಯ ಬಂದು ಮಾತನಾಡಿದವರೆಲ್ಲರೂ ಈ ದಿವಸಗಳ ವಿಷಯವಾಗಿ ಅದರಂತೆಯೇ ಮುಂತಿಳಿ ಸಿದರು.
- 25 ಇದಲ್ಲದೆ ಅಬ್ರಹಾಮನಿಗೆ--ನಿನ್ನ ಸಂತ ತಿಯ ಮೂಲಕ ಭೂಲೋಕದ ಎಲ್ಲಾ ಕುಲದವರು ಆಶೀರ್ವದಿಸಲ್ಪಡುವರು ಎಂದು ದೇವರು ನಮ್ಮ ಪಿತೃಗಳೊಂದಿಗೆ ಮಾಡಿದ ಒಡಂಬಡಿಕೆಯ ಮಕ್ಕಳೂ ಪ್ರವಾದಿಗಳ ಮಕ್ಕಳೂ ನೀವಾಗಿದ್ದೀರಿ.
- 26 ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದ್ರೋಹಗಳಿಂದ ತಿರು ಗಿಸಿ ಆಶೀರ್ವದಿಸುವದಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಎಬ್ಬಿಸಿ ಮೊದಲು ಆತನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಿದನು.
Acts 03
- Details
- Parent Category: New Testament
- Category: Acts
ಅಪೊಸ್ತಲರ ಕೃತ್ಯಗ ಅಧ್ಯಾಯ 3