- 1 ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬದನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು.
- 2 ಪೇತ್ರನು ಯೆರೂಸಲೇಮಿಗೆ ಬಂದಾಗ ಸುನ್ನತಿ ಯವರು ಅವನ ಕೂಡ ವಿವಾದಿಸುತ್ತಾ--
- 3 ನೀನು ಸುನ್ನತಿಯಿಲ್ಲದವರ ಬಳಿಗೆ ಹೋಗಿ ಅವರ ಸಂಗಡ ಊಟಮಾಡಿದೆಯಲ್ಲಾ ಎಂದು ಕೇಳಿದರು.
- 4 ಆದರೆ ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿ ನಿಂದ ಕ್ರಮವಾಗಿ ವಿವರಿಸಿ ಹೇಳಿದ್ದೇನಂದರೆ--
- 5 ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆ ಮಾಡುತ್ತಿ ದ್ದಾಗ ಪರವಶನಾಗಿದ್ದ ನನಗೆ ಒಂದು ದರ್ಶನ ವಾಯಿತು; ಅದೇನಂದರೆ, ಆಕಾಶದಿಂದ ನಾಲ್ಕು ಮೂಲೆಗಳಿಂದ ದೊಡ್ಡ ಜೋಳಿಗೆಯಂತಿರುವ ಒಂದು ಪಾತ್ರೆಯು ಇಳಿಸಲ್ಪಟ್ಟು ನನ್ನ ಬಳಿಗೆ ಬಂತು.
- 6 ಅದೇನೆಂದು ತಿಳುಕೊಳ್ಳುವದಕ್ಕೆ ನಾನು ಚೆನ್ನಾಗಿ ನೊಡಿದಾಗ ಭೂಮಿಯ ಮೇಲಿರುವ ನಾಲ್ಕು ಕಾಲು ಗಳುಳ್ಳ ಪಶುಗಳನ್ನೂ ಕಾಡು ಮೃಗಗಳನ್ನೂ ಹರಿ ದಾಡುವ ಕ್ರಿಮಿಕೀಟಗಳನ್ನೂ ಆಕಾಶದ ಪಕ್ಷಿಗಳನ್ನೂ ಕಂಡೆನು.
- 7 ಆಗ--ಪೇತ್ರನೇ, ಎದ್ದು ಕೊಂದು ತಿನ್ನು ಎಂದು ನನಗೆ ಹೇಳುವ ಧ್ವನಿಯನ್ನು ಕೇಳಿದೆನು.
- 8 ಆದರೆ ನಾನು--ಕರ್ತನೇ, ಹಾಗಲ್ಲ; ಹೊಲೆಯಾದ ದ್ದಾಗಲೀ ಅಶುದ್ಧವಾದದ್ದಾಗಲೀ ಯಾವದೂ ಯಾವ ಸಮಯದಲ್ಲೂ ನನ್ನ ಬಾಯೊಳಗೆ ಸೇರಲಿಲ್ಲ ಎಂದು ಹೇಳಿದೆನು;
- 9 ಅದಕ್ಕೆ--ದೇವರು ಶುದ್ಧ ಮಾಡಿದ್ದನ್ನು ನೀನು ಹೊಲೆಯೆನ್ನಬಾರದು ಎಂಬದಾಗಿ ತಿರಿಗಿ ಆಕಾಶದಿಂದ ಧ್ವನಿಯು ನನಗೆ ಉತ್ತರಕೊಟ್ಟಿತು.
- 10 ಇದು ಮೂರು ಸಾರಿ ಆಯಿತು. ಆಮೇಲೆ ಎಲ್ಲವೂ ತಿರಿಗಿ ಆಕಾಶಕ್ಕೆ ಎತ್ತಲ್ಪಟ್ಟಿತು.
- 11 ಆಗ ಇಗೋ, ತಕ್ಷಣವೇ ಮೂರು ಮಂದಿ ಮನುಷ್ಯರು ನಾನಿದ್ದ ಮನೆಗೆ ಆಗಲೇ ಬಂದಿದ್ದರು. ಅವರು ಕೈಸರೈಯದಿಂದ ನನ್ನ ಹತ್ತಿರಕ್ಕೆ ಕಳುಹಿಸಲ್ಪಟ್ಟವರು.
- 12 ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗಬೇಕೆಂದು ಆತ್ಮನು ನನಗೆ ಅಪ್ಪಣೆಕೊಟ್ಟನು; ಇದಲ್ಲದೆ ಈ ಆರು ಮಂದಿ ಸಹೋದರರು ನನ್ನೊಂದಿಗೆ ಬಂದರು; ನಾವು ಆ ಮನುಷ್ಯನ ಮನೆಯೊಳಕ್ಕೆ ಸೇರಿದೆವು.
- 13 ಅವನು ತನ್ನ ಮನೆಯಲ್ಲಿ ಒಬ್ಬ ದೂತನನ್ನು ಕಂಡನೆಂದು ನಮಗೆ ತಿಳಿಸಿದನು. ಆ ದೂತನು ಅವನಿಗೆ--ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು;
- 14 ಅವನು ನಿನಗೆ ವಾಕ್ಯ ಗಳನ್ನು ಹೇಳುವನು; ಆ ವಾಕ್ಯಗಳಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು ಎಂದು ಹೇಳಿದನೆಂಬದಾಗಿ ತಿಳಿಸಿದನು.
- 15 ನಾನು ಮಾತನಾ ಡುವದಕ್ಕೆ ಪ್ರಾರಂಭಿಸಿದಾಗ ಪವಿತ್ರಾತ್ಮನು ಮೊದಲು ನಮ್ಮ ಮೇಲೆ ಬಂದಹಾಗೆ ಅವರ ಮೇಲೆಯೂ ಬಂದನು.
- 16 ಆಗ--ಯೋಹಾನನು ನಿಜವಾಗಿಯೂ ನೀರಿನ ಬಾಪ್ತಿಸ್ಮ ಮಾಡಿಸಿದನು; ನೀವಾದರೋ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಕರ್ತನು ಹೇಳಿದ ಮಾತು ನನ್ನ ನೆನಪಿಗೆ ಬಂತು.
- 17 ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ದೇವರು ಕೊಟ್ಟ ದಾನಕ್ಕೆ ಸರಿಯಾದ ದಾನವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವದಕ್ಕೆ ನಾನು ಎಷ್ಟರವನು ಎಂದು ಹೇಳಿದನು.
- 18 ಅವರು ಇವುಗಳನ್ನು ಕೇಳಿ ಮೌನವಾಗಿದ್ದು ದೇವ ರನ್ನು ಕೊಂಡಾಡಿ--ಹಾಗಾದರೆ ಅನ್ಯ ಜನಾಂಗದವ ರಿಗೂ ಜೀವಕ್ಕಾಗಿ ಮಾನಸಾಂತರವನ್ನು ದೇವರು ದಯಪಾಲಿಸಿದ್ದಾನೆ ಎಂದು ಹೇಳಿದರು.
- 19 ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೊದವರು ಯೆಹೂದ್ಯರಿಗೇ ಹೊರತು ಮತ್ತಾ ರಿಗೂ ವಾಕ್ಯವನ್ನು ಸಾರದೆ ಫೊಯಿನಿಕೆ ಕುಪ್ರ ಅಂತಿ ಯೋಕ್ಯಗಳ ವರೆಗೂ ಸಂಚರಿಸಿದರು.
- 20 ಅವರಲ್ಲಿ ಕೆಲವರು ಕುಪ್ರ ಮತ್ತು ಕುರೇನ್ಯದವರಾಗಿದ್ದರು. ಅವರು ಅಂತಿಯೋಕ್ಯಕ್ಕೆ ಬಂದು ಗ್ರೀಕರ ಸಂಗಡ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾಗಿ ಸಾರಿದರು.
- 21 ಕರ್ತನ ಹಸ್ತವು ಅವರೊಂದಿಗಿದ್ದದ ರಿಂದ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿ ಕೊಂಡರು.
- 22 ಈ ವಿಷಯಗಳ ವರ್ತಮಾನವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು.
- 23 ಅವನು ಬಂದು ದೇವರ ಕೃಪೆಯನ್ನು ನೋಡಿ ಸಂತೋಷಪಟ್ಟು ದೃಢಮನಸ್ಸಿನಿಂದ ಕರ್ತನನ್ನು ಅಂಟಿ ಕೊಂಡಿರಬೇಕೆಂದು ಅವರೆಲ್ಲರನ್ನು ಪ್ರೇರೇಪಿಸಿದನು.
- 24 ಅವನು ಒಳ್ಳೆಯವನಾಗಿದ್ದು ಪವಿತ್ರಾತ್ಮನಿಂದಲೂ ನಂಬಿಕೆಯಿಂದಲೂ ತುಂಬಿದವನಾಗಿದ್ದನು; ಬಹು ಮಂದಿ ಕರ್ತನನ್ನು ಸೇರಿಕೊಂಡರು.
- 25 ತರುವಾಯ ಬಾರ್ನಬನು ಸೌಲನನ್ನು ಹುಡುಕುವದಕ್ಕಾಗಿ ತಾರ್ಸಕ್ಕೆ ಹೊರಟುಹೊಗಿ
- 26 ಅವನನ್ನು ಕಂಡುಕೊಂಡು ಅಂತಿ ಯೋಕ್ಯಕ್ಕೆ ಕರೆದುಕೊಂಡು ಬಂದನು. ಆಮೇಲೆ ಅವರು ಪೂರಾ ಒಂದು ವರುಷ ಸಭೆಯವರ ಸಂಗಡ ಕೂಡಿದ್ದು ಬಹು ಜನರಿಗೆ ಉಪದೇಶ ಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು.
- 27 ಆ ದಿವಸಗಳಲ್ಲಿ ಪ್ರವಾದಿಗಳಾಗಿದ್ದವರು ಯೆರೂ ಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು.
- 28 ಅವರಲ್ಲಿ ಅಗಬನೆಂಬವನೊಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವದು ಎಂದು ಆತ್ಮನಿಂದ ಸೂಚಿಸಿದನು. ಅದು ಕ್ಲೌದ್ಯ ಕೈಸರನ ದಿವಸಗಳಲ್ಲಿ ಉಂಟಾಯಿತು.
- 29 ಆಗ ಶಿಷ್ಯರಲ್ಲಿ ಪ್ರತಿಯೊಬ್ಬನು ಯೂದಾಯದಲ್ಲಿದ್ದ ಸಹೊದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ದ್ರವ್ಯ ಸಹಾಯ ಕಳುಹಿಸಬೇಕೆಂದು ನಿಶ್ಚಯಿಸಿಕೊಂಡರು.
- 30 ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.
Acts 11
- Details
- Parent Category: New Testament
- Category: Acts
ಅಪೊಸ್ತಲರ ಕೃತ್ಯಗ ಅಧ್ಯಾಯ 11