- 1 ನಾನು ನಿಮಗೆ ನಿಜನಿಜವಾಗಿ ಹೇಳು ತ್ತೇನೆ--ಬಾಗಲಿನಿಂದ ಕುರೀಹಟ್ಟಿಯೊಳಗೆ ಬಾರದೆ ಮತ್ತೆಲ್ಲಿಂದಾದರೂ ಹತ್ತಿಬರುವವನೇ ಕಳ್ಳನೂ ಸುಲುಕೊಳ್ಳುವವನೂ ಆಗಿದ್ದಾನೆ.
- 2 ಆದರೆ ಬಾಗಲಿ ನಿಂದ ಒಳಗೆ ಬರುವವನು ಆ ಕುರಿಗಳ ಕುರುಬನಾಗಿ ದ್ದಾನೆ.
- 3 ಬಾಗಲು ಕಾಯುವವನು ಅವನಿಗೆ ತೆರೆಯು ತ್ತಾನೆ; ಕುರಿಗಳು ಅವನ ಸ್ವರವನ್ನು ಕೇಳುತ್ತವೆ, ಅವನು ತನ್ನ ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಅವು ಗಳನ್ನು ಹೊರಗೆ ನಡಿಸುತ್ತಾನೆ.
- 4 ಅವನು ತನ್ನ ಕುರಿ ಗಳನ್ನು ಹೊರಗೆ ಬಿಟ್ಟ ಮೇಲೆ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳು ಕೊಳ್ಳುವದರಿಂದ ಅವನನ್ನು ಹಿಂಬಾಲಿಸುತ್ತವೆ;
- 5 ಅವು ಅನ್ಯನನ್ನು ಹಿಂಬಾಲಿಸದೆ ಅವನ ಬಳಿಯಿಂದ ಓಡಿ ಹೋಗುವವು; ಅವು ಅನ್ಯರ ಸ್ವರವನ್ನು ತಿಳಿಯುವದಿಲ್ಲ.
- 6 ಯೇಸು ಈ ಸಾಮ್ಯವನ್ನು ಅವರಿಗೆ ಹೇಳಿದನು; ಆದರೆ ಆತನು ಅವರ ಸಂಗಡ ಮಾತನಾಡಿದ ವಿಷಯಗಳು ಏನಾಗಿದ್ದವು ಎಂದು ಅವರು ಗ್ರಹಿಸಲಿಲ್ಲ.
- 7 ಯೇಸು ತಿರಿಗಿ ಅವರಿಗೆ--ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗ ಲಾಗಿದ್ದೇನೆ.
- 8 ನನಗಿಂತ ಮುಂಚೆ ಬಂದವರೆಲ್ಲರು ಕಳ್ಳರೂ ಸುಲುಕೊಳ್ಳುವವರೂ ಆಗಿದ್ದಾರೆ. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
- 9 ನಾನೇ ಆಬಾಗಲು; ನನ್ನ ಮೂಲಕವಾಗಿ ಯಾವನಾದರೂ ಪ್ರವೇಶಿಸಿದರೆ ಅವನು ರಕ್ಷಣೆ ಹೊಂದುವನು; ಇದ ಲ್ಲದೆ ಅವನು ಒಳಗೆ ಹೋಗುತ್ತಾನೆ, ಹೊರಗೆ ಬರು ತ್ತಾನೆ ಮತ್ತು ಮೇವನ್ನು ಕಂಡುಕೊಳ್ಳುತ್ತಾನೆ.
- 10 ಕಳ್ಳನು ಕದ್ದುಕೊಳ್ಳುವದಕ್ಕೂ ಕೊಲ್ಲುವದಕ್ಕೂ ಹಾಳುಮಾಡು ವದಕ್ಕೂ ಮಾತ್ರ ಬರುತ್ತಾನೇ ಹೊರತು ಮತ್ತಾವದಕ್ಕೂ ಬರುವದಿಲ್ಲ; ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಸಮೃದ್ಧಿಯು ಇರಬೇಕೆಂತಲೂ ಬಂದೆನು.
- 11 ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.
- 12 ಆದರೆ ಕೂಲಿಯವನು ಕುರುಬನಲ್ಲವಾದದ ರಿಂದಲೂ ಕುರಿಗಳು ತನ್ನವುಗಳಲ್ಲವಾದದರಿಂದಲೂ ತೋಳ ಬರುವದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ; ಆಗ ತೋಳವು ಕುರಿಗಳನ್ನು ಹಿಡಿದು ಕೊಂಡು ಅವುಗಳನ್ನು ಚದರಿಸುತ್ತದೆ.
- 13 ಕೂಲಿಯವನು ಕೂಲಿಯವನೇ ಆಗಿರುವದರಿಂದ ಕುರಿಗಳಿಗೋಸ್ಕರ ಚಿಂತಿಸದೆ ಓಡಿ ಹೋಗುತ್ತಾನೆ.
- 14 ನಾನೇ ಒಳ್ಳೇ ಕುರುಬನು; ನನ್ನ ಕುರಿಗಳನ್ನು ನಾನು ಬಲ್ಲೆನು. ನನ್ನ ಕುರಿಗಳು ನನ್ನನ್ನು ತಿಳಿದವೆ.
- 15 ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ.
- 16 ಇದಲ್ಲದೆ ಈ ಹಟ್ಟಿಗೆ ಸೇರದ ಬೇರೆ ಕುರಿಗಳು ನನಗುಂಟು; ಅವುಗಳನ್ನು ಸಹ ನಾನು ತರಬೇಕು ಮತ್ತು ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು ಮತ್ತು ಒಬ್ಬನೇ ಕುರುಬನು ಇರುವನು.
- 17 ಯಾಕಂದರೆ ನಾನು ನನ್ನ ಪ್ರಾಣವನ್ನು ತಿರಿಗಿಪಡಕೊಳ್ಳುವಂತೆ ಅದನ್ನು ಕೊಡುತ್ತೇನೆ; ಆದದ ರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾನೆ.
- 18 ಯಾವ ಮನುಷ್ಯನಾದರೂ ಅದನ್ನು ನನ್ನಿಂದ ತೆಗೆಯುವದಿಲ್ಲ; ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ನಾನು ಅದನ್ನು ಕೊಡುವದಕ್ಕೆ ನನಗೆ ಅಧಿಕಾರವಿದೆ; ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರವಿದೆ. ಈ ಅಪ್ಪಣೆಯನ್ನು ನಾನು ನನ್ನ ತಂದೆ ಯಿಂದ ಹೊಂದಿದ್ದೇನೆ ಅಂದನು.
- 19 ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ತಿರಿಗಿ ಭೇದಉಂಟಾಯಿತು.
- 20 ಅವರಲ್ಲಿ ಅನೇಕರು--ಅವನಿಗೆ ದೆವ್ವ ಹಿಡಿದದೆ ಮತ್ತು ಹುಚ್ಚನಾಗಿ ದ್ದಾನೆ; ನೀವು ಯಾಕೆ ಅವನ ಮಾತನ್ನು ಕೇಳುತ್ತೀರಿ ಅಂದರು.
- 21 ಬೇರೆಯವರು--ಇವು ದೆವ್ವ ಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆ ಯುವದಕ್ಕಾದೀತೇ ಅಂದರು.
- 22 ಯೆರೂಸಲೇಮಿನಲ್ಲಿ (ದೇವಾಲಯದ) ಪ್ರತಿ ಷ್ಠೆಯ ಹಬ್ಬವಿತ್ತು; ಆಗ ಚಳಿಗಾಲವಾಗಿತ್ತು.
- 23 ಯೇಸು ದೇವಾಲಯದಲ್ಲಿ ಸೊಲೊಮೋನನ ದ್ವಾರಾಂಗಳ ದೊಳಗೆ ತಿರುಗಾಡುತ್ತಿದ್ದನು;
- 24 ಆಗ ಯೆಹೂದ್ಯರು ಆತನ ಸುತ್ತಲು ಬಂದು ಆತನಿಗೆ--ಇನ್ನು ಎಷ್ಟರ ವರೆಗೆ ನಮ್ಮನ್ನು ಸಂದೇಹಪಡಿಸುತ್ತೀ? ನೀನು ಕ್ರಿಸ್ತ ನಾಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು ಅಂದರು.
- 25 ಯೇಸು ಅವರಿಗೆ--ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬಲಿಲ್ಲ; ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಕೊಡುತ್ತವೆ.
- 26 ಆದರೆ ನಾನು ನಿಮಗೆ ಹೇಳಿದಂತೆ ನೀವು ನನ್ನ ಕುರಿಗಳಲ್ಲವಾದದರಿಂದ ನಂಬದೆ ಇದ್ದೀರಿ.
- 27 ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ, ನಾನು ಅವುಗಳನ್ನು ಬಲ್ಲೆನು; ಅವು ನನ್ನನ್ನು ಹಿಂಬಾಲಿಸುತ್ತವೆ.
- 28 ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದಿಲ್ಲ; ಇಲ್ಲವೆ ಅವು ಗಳನ್ನು ಯಾವನೂ ನನ್ನ ಕೈಯೊಳಗಿಂದ ಕಸಕೊಳ್ಳ ಲಾರನು.
- 29 ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತಲೂ ದೊಡ್ಡವನು; ನನ್ನ ತಂದೆಯ ಕೈಯೊಳ ಗಿಂದ ಅವುಗಳನ್ನು ಯಾವನೂ ಕಸಕೊಳ್ಳಲಾರನು.
- 30 ನಾನು ಮತ್ತು ನನ್ನ ತಂದೆಯು ಒಂದಾಗಿದ್ದೇವೆ ಎಂದು ಉತ್ತರಕೊಟ್ಟನು.
- 31 ಆಗ ಯೆಹೂದ್ಯರು ತಿರಿಗಿ ಆತನನ್ನು ಕೊಲ್ಲುವ ದಕ್ಕಾಗಿ ಕಲ್ಲುಗಳನ್ನು ತಕ್ಕೊಂಡರು.
- 32 ಅದಕ್ಕೆ ಯೇಸು ಅವರಿಗೆ--ನನ್ನ ತಂದೆಯಿಂದ ಅನೇಕ ಒಳ್ಳೇ ಕಾರ್ಯ ಗಳನ್ನು ನಾನು ನಿಮಗೆ ತೋರಿಸಿದ್ದೇನೆ; ಅವುಗಳಲ್ಲಿ ಯಾವ ಕಾರ್ಯಗಳಿಗೋಸ್ಕರ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ ಎಂದು ಕೇಳಿದನು.
- 33 ಅದಕ್ಕೆ ಯೆಹೂದ್ಯರು ಪ್ರತ್ಯುತ್ತರವಾಗಿ ಆತನಿಗೆ--ಒಳ್ಳೇ ಕಾರ್ಯಗಳಿಗೋಸ್ಕರವಲ್ಲ, ದೇವದೂಷಣೆಗೋಸ್ಕ ರವೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರಾಗಿ ಮಾಡಿಕೊಳ್ಳುವದಕ್ಕೊಸ್ಕರವೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು.
- 34 ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ದೇವರುಗಳಾ ಗಿದ್ದೀರಿ ಎಂದು ನಾನು ಹೇಳಿದೆನು ಎಂಬದಾಗಿ ನಿಮ್ಮ ನ್ಯಾಯಪ್ರಮಾಣದಲ್ಲಿ ಬರೆದಿರುವದಿಲ್ಲವೋ?
- 35 ಹಾಗಾದರೆ ದೇವರವಾಕ್ಯವನ್ನು ಹೊಂದಿದವರು ದೇವರುಗಳೆಂದು ಆತನು ಕರೆದಿರುವಲ್ಲಿ ಬರಹವು ವ್ಯರ್ಥವಾಗಲಾರದಷ್ಟೆ.
- 36 ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನಾಗಿದ್ದೇನೆಂದು ಹೇಳಿದ್ದಕ್ಕೆ--ನೀನು ದೇವ ದೂಷಣೆ ಮಾಡುತ್ತೀ ಎಂದು ನೀವು ಅನ್ನುತ್ತೀರೋ?
- 37 ನನ್ನ ತಂದೆಯ ಕಾರ್ಯಗಳನ್ನು ನಾನು ಮಾಡದೆ ಹೋದರೆ ನನ್ನನ್ನು ನಂಬಬೇಡಿರಿ.
- 38 ನಾನು ಮಾಡಿ ದರೂ ನೀವು ನನ್ನನ್ನು ನಂಬದಿದ್ದರೆ ತಂದೆಯು ನನ್ನ ಲ್ಲಿಯೂ ನಾನು ಆತನಲ್ಲಿಯೂ ಇರುವದನ್ನು ನೀವು ತಿಳಿದುಕೊಂಡು ನಂಬುವಂತೆ ಈ ಕಾರ್ಯಗಳನ್ನಾ ದರೂ ನಂಬಿರಿ ಅಂದನು.
- 39 ಆದದರಿಂದ ತಿರಿಗಿ ಅವರು ಆತನನ್ನು ಹಿಡಿಯುವದಕ್ಕೆ ಹುಡುಕಿದರು; ಆದರೆ ಆತನು ಅವರ ಕೈಯಿಂದ ತಪ್ಪಿಸಿಕೊಂಡು
- 40 ಯೋಹಾನನು ಮೊದಲು ಬಾಪ್ತಿಸ್ಮ ಮಾಡಿಸುತ್ತಿದ್ದ ಸ್ಥಳವಾದ ಯೊರ್ದನಿನ ಆಚೆಗೆ ತಿರಿಗಿಹೋಗಿ ಅಲ್ಲಿ ವಾಸಿಸಿದನು.
- 41 ಆಗ ಅನೇಕರು ಆತನ ಬಳಿಗೆ ಬಂದು--ಯೋಹಾನನು ಅದ್ಭುತಕಾರ್ಯಗಳನ್ನು ಮಾಡಲಿಲ್ಲ; ಆದರೆ ಈ ಮನುಷ್ಯನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲವೂ ನಿಜವಾಗಿದೆ ಅಂದರು.
- 42 ಅಲ್ಲಿ ಅನೇಕರು ಆತನ ಮೇಲೆ ನಂಬಿಕೆಯಿಟ್ಟರು.
John 10
- Details
- Parent Category: New Testament
- Category: John
ಯೋಹಾನನು ಅಧ್ಯಾಯ 10