- 1 ಮರಿಯಳ ಮತ್ತು ಆಕೆಯ ಸಹೋದರಿ ಯಾದ ಮಾರ್ಥಳ ಊರಾದ ಬೇಥಾನ್ಯ ದಲ್ಲಿ ಲಾಜರನೆಂಬವನೊಬ್ಬನು ಅಸ್ವಸ್ಥನಾಗಿದ್ದನು.
- 2 (ಕರ್ತನಿಗೆ ತೈಲವನ್ನು ಹಚ್ಚಿ ತನ್ನ ತಲೇಕೂದಲಿನಿಂದ ಆತನ ಪಾದಗಳನ್ನು ಒರಸಿದ ಈ ಮರಿಯಳ ಸಹೋ ದರನಾದ ಲಾಜರನು ಅಸ್ವಸ್ಥನಾಗಿದ್ದನು).
- 3 ಆದದ ರಿಂದ ಅವನ ಸಹೋದರಿಯರು--ಕರ್ತನೇ, ಇಗೋ, ನೀನು ಪ್ರೀತಿಮಾಡುತ್ತಿರುವವನು ಅಸ್ವಸ್ಥನಾಗಿದ್ದಾನೆ ಎಂದು ಆತನಿಗೆ ಹೇಳಿಕಳುಹಿಸಿದರು.
- 4 ಯೇಸು ಅದನ್ನು ಕೇಳಿ--ಈ ರೋಗವು ಮರಣಕ್ಕಾಗಿಯಲ್ಲ, ಆದರೆ ದೇವಕುಮಾರನು ಅದರಿಂದ ಮಹಿಮೆ ಹೊಂದುವಂತೆ ದೇವರ ಮಹಿಮೆಗೋಸ್ಕರವೇ ಬಂದದ್ದು ಎಂದು ಹೇಳಿದನು.
- 5 ಮಾರ್ಥಳನ್ನೂ ಅವಳ ಸಹೋದರಿಯನ್ನೂ ಲಾಜರನನ್ನೂ ಯೇಸು ಪ್ರೀತಿಸು ತ್ತಿದ್ದನು.
- 6 ಅವನು ಅಸ್ವಸ್ಥನಾಗಿದ್ದಾನೆಂದು ಆತನು ಕೇಳಿ ದರೂ ಎರಡು ದಿವಸ ತಾನಿದ್ದ ಸ್ಥಳದಲ್ಲೇ ಉಳಿದನು.
- 7 ತರುವಾಯ ಆತನು ತನ್ನ ಶಿಷ್ಯರಿಗೆ--ನಾವು ತಿರಿಗಿ ಯೂದಾಯಕ್ಕೆ ಹೋಗೋಣ ಅಂದನು.
- 8 ಆತನ ಶಿಷ್ಯರು ಆತನಿಗೆ--ಬೋಧಕನೇ, ಆಗಲೇ ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿ ದ್ದರಲ್ಲಾ; ತಿರಿಗಿ ನೀನು ಅಲ್ಲಿಗೆ ಹೋಗುತ್ತೀಯೋ? ಅಂದರು.
- 9 ಯೇಸು--ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾವ ಮನುಷ್ಯನಾದರೂ ಹಗಲಿ ನಲ್ಲಿ ತಿರುಗಾಡಿದರೆ ಈ ಲೋಕದ ಬೆಳಕನ್ನು ನೋಡು ವದರಿಂದ ಅವನು ಎಡವುವದಿಲ್ಲ.
- 10 ಆದರೆ ಒಬ್ಬ ಮನುಷ್ಯನು ರಾತ್ರಿಯಲ್ಲಿ ತಿರುಗಾಡಿದರೆ ತನ್ನಲ್ಲಿ ಬೆಳಕು ಇಲ್ಲವಾದದರಿಂದ ಅವನು ಎಡವುತ್ತಾನೆ ಎಂದು ಉತ್ತರಕೊಟ್ಟನು.
- 11 ಈ ಮಾತುಗಳನ್ನು ಹೇಳಿದ ತರುವಾಯ ಆತನು ಅವರಿಗೆ--ನಮ್ಮ ಸ್ನೇಹಿತನಾದ ಲಾಜರನು ನಿದ್ರಿಸುತ್ತಿದ್ದಾನೆ; ಆದರೆ ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಾಕ್ಕಾಗಿ ಹೋಗುತ್ತೇನೆ ಎಂದು ಹೇಳಿದನು.
- 12 ಆಗ ಆತನ ಶಿಷ್ಯರು--ಕರ್ತನೇ, ಅವನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು ಅಂದರು.
- 13 ಆದರೆ ಯೇಸು ಅವನ ಮರಣದ ವಿಷಯವಾಗಿ ಹೇಳಿದ್ದನು; ಆದರೆ ಅವರು ನಿದ್ರೆಯಲ್ಲಿಯ ವಿಶ್ರಾಂತಿ ಕುರಿತು ಆತನು ಹೇಳಿದ ನೆಂದು ಯೋಚಿಸಿದರು.
- 14 ಆಗ ಯೇಸು ಸ್ಪಷ್ಟವಾಗಿ ಅವರಿಗೆ--ಲಾಜರನು ಸತ್ತಿದ್ದಾನೆ.
- 15 ನೀವು ನಂಬು ವಂತೆ ನಿಮಗೋಸ್ಕರ ನಾನು ಅಲ್ಲಿ ಇಲ್ಲದಿರುವದಕ್ಕೆ ಸಂತೋಷಪಡುತ್ತೇನೆ; ಹೇಗೂ ನಾವು ಅವನ ಬಳಿಗೆ ಹೋಗೋಣ ಎಂದು ಅವರಿಗೆ ಹೇಳಿದನು.
- 16 ತರು ವಾಯ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ--ನಾವು ಸಹ ಆತನೊಂದಿಗೆ ಸಾಯುವಂತೆ ಹೋಗೋಣ ಅಂದನು.
- 17 ತರುವಾಯ ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿವಸಗಳಾಗಿದ್ದ ವೆಂದು ಆತನು ತಿಳಿದುಕೊಂಡನು;
- 18 ಬೇಥಾನ್ಯವು ಯೆರೂಸಲೇಮಿಗೆ ಹೆಚ್ಚುಕಡಿಮೆ ಒಂದು ಹರದಾರಿ ಯಷ್ಟು ಸವಿಾಪದಲ್ಲಿತ್ತು.
- 19 ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋ ದರನ ವಿಷಯವಾಗಿ ಆದರಿಸುವದಕ್ಕೆ ಬಂದಿದ್ದರು.
- 20 ಆಗ ಯೇಸು ಬರುತ್ತಿದ್ದಾನೆಂದು ಮಾರ್ಥಳು ಕೇಳು ತ್ತಲೇ ಹೋಗಿ ಆತನನ್ನು ಎದುರುಗೊಂಡಳು. ಮರಿಯಳಾದರೋ ಮನೆಯಲ್ಲಿಯೇ ಕೂತುಕೊಂಡಿ ದ್ದಳು.
- 21 ಆಗ ಮಾರ್ಥಳು ಯೇಸುವಿಗೆ-- ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯು ತ್ತಿರಲಿಲ್ಲ.
- 22 ಆದರೆ ಈಗಲೂ ಸಹ ನೀನು ದೇವರಿಂದ ಏನು ಕೇಳಿಕೊಳ್ಳುತ್ತೀಯೋ ದೇವರು ಅದನ್ನು ನಿನಗೆ ಕೊಡುವನೆಂದು ನಾನು ಬಲ್ಲೆನು ಅಂದಳು.
- 23 ಯೇಸು ಆಕೆಗೆ--ನಿನ್ನ ಸಹೋದರನು ತಿರಿಗಿ ಎದ್ದೇಳುವನು ಎಂದು ಹೇಳಿದನು.
- 24 ಮಾರ್ಥಳು ಆತನಿಗೆ--ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ತಿರಿಗಿ ಎದ್ದೇಳುವನೆಂದು ನಾನು ಬಲ್ಲೆನು ಎಂದು ಹೇಳಿದಳು.
- 25 ಯೇಸು ಆಕೆಗೆ--ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು;
- 26 ಯಾವನಾದರೂ ಬದುಕುತ್ತಾ ನನ್ನಲ್ಲಿ ನಂಬಿಕೆಯಿಡುವದಾದರೆ ಅವನು ಎಂದಿಗೂ ಸಾಯುವ ದಿಲ್ಲ. ಇದನ್ನು ನೀನು ನಂಬುತ್ತೀಯೋ ಎಂದು ಕೇಳಿದ್ದಕ್ಕೆ
- 27 ಆಕೆಯು ಆತನಿಗೆ--ಹೌದು, ಕರ್ತನೇ, ಲೋಕಕ್ಕೆ ಬರಬೇಕಾಗಿದ್ದ ದೇವರಮಗನಾದ ಕ್ರಿಸ್ತನು ನೀನೇ ಎಂದು ನಾನು ನಂಬುತ್ತೇನೆ ಅಂದಳು.
- 28 ಆಕೆಯು ಹೀಗೆ ಹೇಳಿದ ಮೇಲೆ ಹೊರಟು ಹೋಗಿ ತನ್ನ ಸಹೋದರಿಯಾದ ಮರಿಯಳನ್ನು ಗುಪ್ತ ವಾಗಿ ಕರೆದು--ಬೋಧಕನು ಬಂದಿದ್ದಾನೆ, ನಿನ್ನನ್ನು ಕರೆಯುತ್ತಾನೆ ಅಂದಳು.
- 29 ಆಕೆಯು ಇದನ್ನು ಕೇಳಿದ ಕೂಡಲೆ ತಟ್ಟನೆ ಎದ್ದು ಆತನ ಬಳಿಗೆ ಬಂದಳು.
- 30 ಯೇಸು ಇನ್ನೂ ಊರೊಳಕ್ಕೆ ಬಾರದೆ ಮಾರ್ಥಳು ಆತನನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದನು.
- 31 ಮನೆ ಯಲ್ಲಿ ಆಕೆಯ ಕೂಡ ಇದ್ದು ಆಕೆಯನ್ನು ಆದರಿಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುವದನ್ನು ನೋಡಿ--ಆಕೆಯು ಅಳುವದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಾಳೆಂದು ತಿಳಿದು ಆಕೆ ಯನ್ನು ಹಿಂಬಾಲಿಸಿದರು.
- 32 ತರುವಾಯ ಯೇಸು ಇದ್ದ ಸ್ಥಳಕ್ಕೆ ಮರಿಯಳು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು ಆತನಿಗೆ--ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ ಎಂದು ಹೇಳಿದಳು.
- 33 ಆಕೆಯು ಅಳುವದನ್ನು ಮತ್ತು ಆಕೆಯೊಂದಿಗೆ ಬಂದ ಯೆಹೂದ್ಯರು ಸಹ ಅಳುವದನ್ನು ಯೇಸು ನೋಡಿದಾಗ ಆತ್ಮದಲ್ಲಿ ಕಳವಳಪಟ್ಟು ಮೂಲ್ಗುತ್ತಾ--
- 34 ಅವನನ್ನು ಎಲ್ಲಿ ಇಟ್ಟಿದ್ದೀರಿ ಅಂದನು. ಅವರು ಆತನಿಗೆ--ಕರ್ತನೇ, ಬಂದು ನೋಡು ಅಂದರು.
- 35 ಯೇಸು ಅತ್ತನು.
- 36 ಆಗ ಯೆಹೂದ್ಯ ರು--ಇಗೋ, ಆತನು ಅವನನ್ನು ಎಷ್ಟು ಪ್ರೀತಿ ಮಾಡಿದನಲ್ಲಾ ಅಂದರು.
- 37 ಅವರಲ್ಲಿ ಕೆಲ ವರು--ಆ ಕುರುಡನ ಕಣ್ಣುಗಳನ್ನು ತೆರೆದ ಈ ಮನುಷ್ಯನು ಇವನನ್ನೂ ಸಾಯದಹಾಗೆ ಮಾಡಲಾರದೆ ಇದ್ದನೇ ಅಂದರು.
- 38 ಆದದರಿಂದ ಯೇಸು ತಿರಿಗಿ ತನ್ನಲ್ಲಿ ಮೂಲ್ಗುತ್ತಾ ಸಮಾಧಿಗೆ ಬಂದನು. ಅದು ಗವಿಯಾಗಿತ್ತು; ಒಂದು ಕಲ್ಲು ಅದರ ಮೇಲೆ ಇಟ್ಟಿತ್ತು.
- 39 ಯೇಸು--ಆ ಕಲ್ಲನ್ನು ತೆಗೆದುಹಾಕಿರಿ ಅಂದನು. ಅದಕ್ಕೆ ಸತ್ತುಹೋದವನ ಸಹೋದರಿಯಾದ ಮಾರ್ಥಳು ಆತನಿಗೆ--ಕರ್ತನೇ, ಇಷ್ಟರೊಳಗೆ ಅವನು ನಾರುತ್ತಾನೆ; ಯಾಕಂದರೆ ಅವನು ಸತ್ತು ನಾಲ್ಕು ದಿನಗಳಾದವು ಅಂದಳು.
- 40 ಯೇಸು ಆಕೆಗೆ--ನೀನು ನಂಬುವದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೇ ಅಂದನು.
- 41 ಆಗ ಅವರು ಸತ್ತವನನ್ನು ಇಟ್ಟಿದ್ದ ಸ್ಥಳದಿಂದ ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ--ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಾನು ನಿನ್ನನ್ನು ಕೊಂಡಾಡುತ್ತೇನೆ.
- 42 ನೀನು ನನ್ನ ಪ್ರಾರ್ಥನೆಯನ್ನು ಯಾವಾಗಲೂ ಕೇಳುತ್ತೀ ಎಂದು ನಾನು ಬಲ್ಲೆನು. ಆದರೆ ನನ್ನ ಹತ್ತಿರದಲ್ಲಿ ನಿಂತಿರುವ ಜನರ ನಿಮಿತ್ತವಾಗಿ ನೀನು ನನ್ನನ್ನು ಕಳುಹಿಸಿದ್ದೀ ಎಂದು ಅವರು ನಂಬುವಂತೆ ನಾನು ಅದನ್ನು ಹೇಳಿದೆನು ಅಂದನು.
- 43 ಆತನು ಹೀಗೆ ಮಾತನಾಡಿದ ಮೇಲೆ--ಲಾಜರನೇ, ಹೊರಗೆ ಬಾ ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು.
- 44 ಆಗ ಪ್ರೇತ ವಸ್ತ್ರಗಳಿಂದ ಕೈಕಾಲುಗಳನ್ನು ಕಟ್ಟಿದ್ದ ಆ ಸತ್ತವನು ಹೊರಗೆ ಬಂದನು. ಅವನ ಮುಖವು ವಸ್ತ್ರ ದಿಂದ ಸುತ್ತಲ್ಪಟ್ಟಿತ್ತು; ಯೇಸು ಅವರಿಗೆ--ಅವನನ್ನು ಬಿಚ್ಚಿರಿ, ಅವನು ಹೋಗಲಿ ಎಂದು ಹೇಳಿದನು.
- 45 ಆಗ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯ ರಲ್ಲಿ ಅನೇಕರು ಯೇಸು ಮಾಡಿದವುಗಳನ್ನು ನೋಡಿ ಆತನಲ್ಲಿ ನಂಬಿಕೆಯಿಟ್ಟರು.
- 46 ಆದರೆ ಅವರಲ್ಲಿ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದವುಗಳನ್ನು ಅವರಿಗೆ ಹೇಳಿದರು.
- 47 ಆಗ ಪ್ರಧಾನಯಾಜಕರೂ ಫರಿಸಾಯರೂ ಆಲೋಚನಾ ಸಭೆಯನ್ನು ಕೂಡಿಸಿ--ಈ ಮನುಷ್ಯನು ಅನೇಕ ಅದ್ಭುತಕಾರ್ಯಗಳನ್ನು ಮಾಡುತ್ತಾನಲ್ಲಾ, ನಾವು ಏನು ಮಾಡೋಣ?
- 48 ನಾವು ಅವನನ್ನು ಹಾಗೆಯೇ ಬಿಟ್ಟರೆ ಎಲ್ಲರೂ ಅವನ ಮೇಲೆ ನಂಬಿಕೆಯಿಡುವರು ಮತ್ತು ರೋಮಾಯರು ಬಂದು ನಮ್ಮ ಸ್ಥಳವನ್ನೂ ಜನಾಂಗವನ್ನೂ ತೆಗೆದುಕೊಂಡು ಬಿಟ್ಟಾರು ಅಂದರು.
- 49 ಆದರೆ ಅವರಲ್ಲಿ ಆ ವರುಷದ ಮಹಾಯಾಜಕ ನಾದ ಕಾಯಫನೆಂಬವನು ಅವರಿಗೆ--
- 50 ನಿಮಗೆ ಏನೂ ತಿಳಿಯದು; ಜನಾಂಗವೆಲ್ಲಾ ನಾಶವಾಗದ ಹಾಗೆ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವದು ನಮಗೆ ವಿಹಿತವಾಗಿದೆ ಎಂದು ನೀವು ಯೋಚಿಸುವದೂ ಇಲ್ಲ ಅಂದನು.
- 51 ಈ ಮಾತನ್ನು ತನ್ನಷ್ಟಕ್ಕೆ ತಾನೇ ಮಾತನಾಡಲಿಲ್ಲ; ಆದರೆ ಅವನು ಆ ವರುಷದಲ್ಲಿ ಮಹಾಯಾಜಕನಾಗಿದ್ದು ಯೇಸು ಆ ಜನಾಂಗಕ್ಕೋಸ್ಕರ ಮಾತ್ರವಲ್ಲದೆ
- 52 ಚದರಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸುವದಕ್ಕೂ ಆತನು ಸಾಯಬೇಕಾಗಿದೆ ಎಂದು ಅವನು ಪ್ರವಾದಿಸಿದನು.
- 53 ಅವರು ಕೂಡಿ ಕೊಂಡು ಆ ದಿನದಿಂದ ಆತನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
- 54 ಹೀಗಿರುವದರಿಂದ ಯೇಸು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ತಿರುಗಾಡಲಿಲ್ಲ. ಆದರೆ ಅಲ್ಲಿಂದ ಅಡವಿಗೆ ಸವಿಾಪ ದಲ್ಲಿದ್ದ ಪ್ರದೇಶದ ಎಫ್ರಾಯಿಮ್ ಎಂಬ ಪಟ್ಟಣಕ್ಕೆ ಹೋಗಿ ಅಲ್ಲಿ ತನ್ನ ಶಿಷ್ಯರ ಸಂಗಡ ಇದ್ದನು.
- 55 ಆಗ ಯೆಹೂದ್ಯರ ಪಸ್ಕವು ಹತ್ತಿರವಾಗಿತ್ತು; ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವದಕ್ಕೋಸ್ಕರ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು.
- 56 ಆಗ ಅವರು ಯೇಸುವನ್ನು ಹುಡುಕು ವವರಾಗಿ ದೇವಾಲಯದಲ್ಲಿ ನಿಂತುಕೊಂಡಿದ್ದಾಗ--ಆತನು ಹಬ್ಬಕ್ಕೆ ಬರುವದಿಲ್ಲವೋ? ನಿಮಗೆ ಹೇಗೆ ಕಾಣುತ್ತದೆ ಎಂದು ತಮ್ಮತಮ್ಮೊಳಗೆ ಮಾತನಾಡಿ ಕೊಂಡರು.
- 57 ಆಗ ಪ್ರಧಾನಯಾಜಕರೂ ಫರಿಸಾಯ ರೂ ಆತನನ್ನು ಹಿಡಿಯುವಂತೆ ಆತನಿರುವ ಸ್ಥಳವು ಯಾರಿಗಾದರೂ ತಿಳಿದರೆ ಅವರು ತಮಗೆ ತೋರಿಸ ಬೇಕೆಂದು ಅಪ್ಪಣೆ ಕೊಟ್ಟಿದ್ದರು.
John 11
- Details
- Parent Category: New Testament
- Category: John
ಯೋಹಾನನು ಅಧ್ಯಾಯ 11