- 1 ಇದಾದ ಮೇಲೆ ಪಸ್ಕಕ್ಕೆ ಆರು ದಿನಗಳ ಮುಂಚೆ ಸತ್ತವರೊಳಗಿಂದ ಎಬ್ಬಿಸಿದ ಲಾಜರನು ಇದ್ದ ಬೇಥಾನ್ಯಕ್ಕೆ ಯೇಸು ಬಂದನು.
- 2 ಅಲ್ಲಿ ಅವರು ಆತನಿಗಾಗಿ ಔತಣವನ್ನು ಸಿದ್ಧ ಮಾಡಿದರು; ಮಾರ್ಥಳು ಉಪಚಾರ ಮಾಡಿದಳು. ಆತನೊಂದಿಗೆ ಊಟಕ್ಕೆ ಕೂತವರಲ್ಲಿ ಲಾಜರನೂ ಒಬ್ಬನಾಗಿದ್ದನು.
- 3 ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೆಯ ಕೂದಲಿನಿಂದ ಆತನ ಪಾದಗಳನ್ನು ಒರಸಿದಳು; ಆ ತೈಲದ ಪರಿ ಮಳವು ಮನೆಯಲ್ಲಿ ತುಂಬಿಕೊಂಡಿತ್ತು.
- 4 ಆಗ ಆತನ ಶಿಷ್ಯರಲ್ಲಿ ಒಬ್ಬನು ಅಂದರೆ ಆತನನ್ನು ಹಿಡಿದು ಕೊಡುವದಕ್ಕಿದ್ದ ಸೀಮೋನನ ಮಗನಾದ ಯೂದ ಇಸ್ಕರಿಯೋತನು--
- 5 ಈ ತೈಲವನ್ನು ಯಾಕೆ ಮುನ್ನೂರು ನಾಣ್ಯಗಳಿಗೆ ಮಾರಿ ಬಡವರಿಗೆ ಕೊಡಲಿಲ್ಲ ಅಂದನು.
- 6 ಅವನು ಬಡವರಿಗೋಸ್ಕರ ಚಿಂತಿಸಿದ್ದಕ್ಕಾಗಿ ಅಲ್ಲ , ಅವನು ಕಳ್ಳನಾಗಿದ್ದು ಹಣದ ಚೀಲವನ್ನು ಇಟ್ಟು ಕೊಂಡು ಅದರಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದ ದರಿಂದಲೇ ಇದನ್ನು ಹೇಳಿದನು.
- 7 ಆಗ ಯೇಸು--ಈಕೆಯನ್ನು ಬಿಟ್ಟುಬಿಡಿರಿ; ನನ್ನನ್ನು ಹೂಣಿಡುವ ದಿವಸಕ್ಕಾಗಿ ಈಕೆಯು ಇದನ್ನು ಇಟ್ಟುಕೊಂಡಿದ್ದಾಳೆ.
- 8 ಯಾಕಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ ಅಂದನು.
- 9 ಆದಕಾರಣ ಯೇಸು ಅಲ್ಲಿದ್ದಾನೆಂದು ಯೆಹೂದ್ಯ ರಲ್ಲಿ ಬಹಳ ಜನರು ತಿಳಿದು ಆತನನ್ನು ಮಾತ್ರವಲ್ಲದೆ ಆತನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನೂ ನೋಡುವದಕ್ಕಾಗಿ ಬಂದರು.
- 10 ಆದರೆ ಪ್ರಧಾನ ಯಾಜಕರು ಲಾಜರನನ್ನು ಸಹ ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
- 11 ಯಾಕಂದರೆ ಅವನ ನಿಮಿತ್ತ ಅನೇಕ ಯೆಹೂದ್ಯರು ಹೋಗಿ ಯೇಸುವಿನಲ್ಲಿ ನಂಬಿಕೆಯಿಟ್ಟರು.
- 12 ಮರುದಿನ ಹಬ್ಬಕ್ಕೆ ಬಂದ ಬಹಳ ಜನರು ಯೇಸು ಯೆರೂಸಲೇಮಿಗೆ ಬರುತ್ತಾನೆಂದು ಕೇಳಿದಾಗ
- 13 ಖರ್ಜೂರದ ಗರಿಗಳನ್ನು ತಕ್ಕೊಂಡು ಆತನನ್ನು ಎದುರುಗೊಳ್ಳುವದಕ್ಕೆ ಹೊರಗೆ ಬಂದು--ಹೊಸನ್ನ, ಕರ್ತನ ಹೆಸರಿನಲ್ಲಿ ಬರುವ ಇಸ್ರಾಯೇಲಿನ ಅರಸನು ಆಶೀರ್ವದಿಸಲ್ಪಡಲಿ ಎಂದು ಕೂಗಿದರು.
- 14 ಯೇಸು ಪ್ರಾಯದ ಕತ್ತೆಯನ್ನು ಕಂಡುಕೊಂಡು ಅದರ ಮೇಲೆ ಕೂತುಕೊಂಡನು;
- 15 ಹೀಗೆ--ಚೀಯೋನ್ಕುಮಾ ರಿಯೇ, ಭಯಪಡಬೇಡ; ಇಗೋ, ನಿನ್ನ ಅರಸನು ಪ್ರಾಯದ ಕತ್ತೆಯ ಮೇಲೆ ಕೂತುಕೊಂಡು ಬರುತ್ತಾನೆ ಎಂದು ಬರೆದಿರುವ ಪ್ರಕಾರ ನೆರವೇರಿತು.
- 16 ಇವು ಗಳನ್ನು ಆತನ ಶಿಷ್ಯರು ಮೊದಲು ತಿಳಿದಿರಲಿಲ್ಲ; ಆದರೆ ಯೇಸು ಮಹಿಮೆ ಹೊಂದಿದಾಗ ಇವು ಆತನ ವಿಷಯವಾಗಿ ಬರೆಯಲ್ಪಟ್ಟಿವೆಯೆಂದೂ ಇವುಗಳನ್ನು ಅವರು ಆತನಿಗೆ ಮಾಡಿದರೆಂದೂ ಜ್ಞಾಪಕಮಾಡಿ ಕೊಂಡರು.
- 17 ಇದಲ್ಲದೆ ಆತನು ಲಾಜರನನ್ನು ಸಮಾ ಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಎಬ್ಬಿಸಿದಾಗ ಆತನ ಸಂಗಡ ಇದ್ದ ಜನರು ಸಾಕ್ಷಿಕೊಟ್ಟರು.
- 18 ಆತನು ಈ ಅದ್ಭುತಕಾರ್ಯವನ್ನು ಮಾಡಿದನೆಂದು ಕೇಳಿದ ಜನರು ಸಹ ಆತನನ್ನು ಎದುರುಗೊಂಡರು.
- 19 ಆದದರಿಂದ ಫರಿಸಾಯರು ತಮ್ಮತಮ್ಮೊಳಗೆ--ನಿಮ್ಮ ಯತ್ನವೇನೂ ಸಾಗಲಿಲ್ಲವೆಂದು ನೀವು ತಿಳಿಯುವದಿಲ್ಲವೋ? ಇಗೋ, ಲೋಕವು ಆತನ ಹಿಂದೆ ಹೋಯಿತು ಎಂದು ಅಂದುಕೊಂಡರು.
- 20 ಹಬ್ಬದಲ್ಲಿ ಆರಾಧಿಸುವದಕ್ಕೆ ಬಂದವರಲ್ಲಿ ಕೆಲ ವರು ಗ್ರೀಕರಿದ್ದರು.
- 21 ಇವರು ಗಲಿಲಾಯ ಬೇತ್ಸಾಯಿದವನಾದ ಫಿಲಿಪ್ಪನ ಬಳಿಗೆ ಬಂದು--ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ ಅಂದರು.
- 22 ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿ ದನು; ಅಂದ್ರೆಯನೂ ಫಿಲಿಪ್ಪನೂ ತಿರಿಗಿ ಯೇಸುವಿಗೆ ಹೇಳಿದರು.
- 23 ಯೇಸು ಪ್ರತ್ಯುತ್ತರವಾಗಿ ಅವರಿಗೆ--ಮನುಷ್ಯಕುಮಾರನು ಮಹಿಮೆ ಹೊಂದುವ ಗಳಿಗೆ ಬಂದದೆ.
- 24 ನಾನು ನಿಮಗೆ ನಿಜನಿಜವಾಗಿ ಹೇಳು ತ್ತೇನೆ--ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯ ದಿದ್ದರೆ ಅದು ಒಂದೇ ಆಗಿ ಉಳಿಯುವದು; ಅದು ಸತ್ತಮೇಲೆ ಬಹಳ ಫಲಕೊಡುವದು.
- 25 ತನ್ನ ಪ್ರಾಣ ವನ್ನು ಪ್ರೀತಿಸುವವನು ಅದನ್ನು ಕಳಕೊಳ್ಳುವನು; ಈ ಲೋಕದಲ್ಲಿ ತನ್ನ ಪ್ರಾಣವನ್ನು ಹಗೆಮಾಡುವವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು.
- 26 ಯಾವನಾದರೂ ನನ್ನನ್ನು ಸೇವಿಸುವವನಾದರೆ ಅವನು ನನ್ನನ್ನು ಹಿಂಬಾಲಿಸಲಿ; ನಾನು ಇರುವಲ್ಲಿಯೇ ನನ್ನ ಸೇವಕನೂ ಇರುವನು; ಯಾವನಾದರೂ ನನ್ನನ್ನು ಸೇವಿಸುವವನಾದರೆ ನನ್ನ ತಂದೆಯು ಅವನನ್ನು ಸನ್ಮಾನಿಸುವನು.
- 27 ಈಗ ನನ್ನ ಪ್ರಾಣವು ತತ್ತರಿಸುತ್ತದೆ. ನಾನು ಏನು ಹೇಳಲಿ? ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸು; ಆದರೆ ಇದಕ್ಕಾಗಿಯೇ ನಾನು ಈ ಗಳಿಗೆಗೆ ಬಂದೆನು.
- 28 ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ ಅಂದನು. ಆಗ--ನಾನು ಮಹಿ ಮೆಪಡಿಸಿದ್ದೇನೆ, ತಿರಿಗಿ ಅದನ್ನು ಮಹಿಮೆಪಡಿಸುವೆನು ಎಂದು ಹೇಳುವ ಧ್ವನಿಯು ಪರಲೋಕದಿಂದ ಬಂತು.
- 29 ಆಗ ಅಲ್ಲಿ ನಿಂತಿದ್ದ ಜನರು ಅದನ್ನು ಕೇಳಿ--ಗುಡುಗಿತು ಅಂದರು. ಬೇರೆಯವರು--ದೂತ ನೊಬ್ಬನು ಈತನ ಸಂಗಡ ಮಾತನಾಡಿದನು ಅಂದರು.
- 30 ಯೇಸು ಪ್ರತ್ಯುತ್ತರವಾಗಿ--ಈ ಧ್ವನಿಯು ನನಗೋ ಸ್ಕರವಲ್ಲ, ನಿಮಗೋಸ್ಕರವೇ ಬಂದಿದೆ.
- 31 ಈಗ ಈ ಲೋಕಕ್ಕೆ ನ್ಯಾಯತೀರ್ಪು ಆಗುತ್ತದೆ; ಇಹಲೋಕದ ಅಧಿಪತಿಯು ಈಗ ಹೊರಗೆ ಹಾಕಲ್ಪಡುವನು.
- 32 ನಾನು ಭೂಮಿಯಿಂದ ಮೇಲಕ್ಕೆ ಎತ್ತಲ್ಪಟ್ಟರೆ ಎಲ್ಲ ರನ್ನೂ ನನ್ನ ಬಳಿಗೆ ಎಳಕೊಳ್ಳುವೆನು ಅಂದನು.
- 33 ತಾನು ಎಂಥಾ ಮರಣದಿಂದ ಸಾಯಬೇಕಾಗಿತ್ತೆಂದು ಸೂಚಿಸಿ ಇದನ್ನು ಹೇಳಿದನು.
- 34 ಜನರು ಆತ ನಿಗೆ--ಕ್ರಿಸ್ತನು ಸದಾಕಾಲವೂ ಇರುತ್ತಾನೆಂದು ನಾವು ನ್ಯಾಯಪ್ರಮಾಣದಲ್ಲಿ ಕೇಳಿದ್ದೇವೆ; ಹಾಗಾದರೆ ಮನುಷ್ಯಕುಮಾರನು ಎತ್ತಲ್ಪಡಬೇಕೆಂದು ನೀನು ಹೇಳುವದು ಹೇಗೆ? ಈ ಮನುಷ್ಯಕುಮಾರನು ಯಾರು ಎಂದು ಕೇಳಿದರು.
- 35 ಆಗ ಯೇಸು ಅವ ರಿಗೆ--ಇನ್ನು ಸ್ವಲ್ಪಕಾಲವೇ ಬೆಳಕು ನಿಮ್ಮೊಂದಿಗೆ ಇರು ತ್ತದೆ. ಕತ್ತಲೆ ನಿಮ್ಮನ್ನು ಮುಸುಕಿಕೊಳ್ಳದಂತೆ ನಿಮಗೆ ಬೆಳಕಿರುವಾಗಲೇ ನಡೆಯಿರಿ; ಯಾಕಂದರೆ ಕತ್ತಲೆಯಲ್ಲಿ ನಡೆಯುವವನು ತಾನು ಎಲ್ಲಿಗೆ ಹೋಗುತ್ತಾನೆಂದು ತಿಳಿಯನು.
- 36 ನೀವು ಬೆಳಕಿನ ಮಕ್ಕಳಾಗುವಂತೆ ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ ಅಂದನು. ಯೇಸು ಇವುಗಳನ್ನು ಹೇಳಿದ ಮೇಲೆ ಹೊರಟುಹೋಗಿ ಅವರಿಂದ ಅಡಗಿಕೊಂಡನು.
- 37 ಆದರೆ ಆತನು ಅನೇಕ ಅದ್ಭುತಕಾರ್ಯಗಳನ್ನು ಅವರ ಮುಂದೆ ಮಾಡಿದಾಗ್ಯೂ ಅವರು ಆತನನ್ನು ನಂಬಲಿಲ್ಲ.
- 38 ಇದರಿಂದ--ಕರ್ತನೇ, ನಮ್ಮ ವರ್ತ ಮಾನವನ್ನು ಯಾರು ನಂಬಿದ್ದಾರೆ? ಕರ್ತನ ಬಾಹುವು ಯಾರಿಗೆ ಪ್ರಕಟವಾಯಿತು ಎಂದು ಪ್ರವಾದಿಯಾದ ಯೆಶಾಯನು ನುಡಿದದ್ದು ನೆರವೇರುವ ಹಾಗೆ ಇದಾಯಿತು.
- 39 ಅವರು ನಂಬಲಾರದೆ ಇದ್ದದರಿಂದ ಯೆಶಾಯನು ತಿರಿಗಿ ಹೇಳಿದ್ದೇನಂದರೆ--
- 40 ಅವರು ಕಣ್ಣಿನಿಂದ ಕಾಣದೆ ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ಆತನು ಅವರ ಕಣ್ಣುಗಳನ್ನು ಕುರುಡು ಮಾಡಿ ಅವರ ಹೃದಯವನ್ನು ಕಠಿಣ ಮಾಡಿದನು ಎಂಬದು.
- 41 ಯೆಶಾಯನು ಆತನ ಮಹಿಮೆಯನ್ನು ನೋಡಿದ್ದರಿಂದ ಆತನ ವಿಷಯವಾಗಿ ಇವುಗಳನ್ನು ಹೇಳಿದನು.
- 42 ಆದಾಗ್ಯೂ ಮುಖ್ಯಾಧಿಕಾರಿಗಳಲ್ಲಿ ಅನೇಕರು ಆತನ ಮೇಲೆ ನಂಬಿಕೆಯಿಟ್ಟರು. ಆದರೆ ಫರಿಸಾಯರ ನಿಮಿತ್ತ ತಾವು ಸಭಾಮಂದಿರದಿಂದ ಬಹಿಷ್ಕರಿಸಲ್ಪಡಬಾರದೆಂದು ಅವರು ಆತನನ್ನು ಒಪ್ಪಿ ಕೊಳ್ಳಲಿಲ್ಲ.
- 43 ಯಾಕಂದರೆ ಅವರು ದೇವರ ಹೊಗಳಿ ಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
- 44 ಆಗ ಯೇಸು--ನನ್ನನ್ನು ನಂಬುವವನು ನನ್ನನ್ನಲ್ಲ. ನನ್ನನ್ನು ಕಳುಹಿಸಿಕೊಟ್ಟಾತನನ್ನೇ ನಂಬಿದ್ದಾನೆ.
- 45 ನನ್ನನ್ನು ನೋಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ನೋಡುತ್ತಾನೆ.
- 46 ನನ್ನಲ್ಲಿ ನಂಬಿಕೆಯಿಟ್ಟ ಯಾವನೂ ಕತ್ತಲೆಯಲ್ಲಿ ಇರಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.
- 47 ಯಾವನಾದರೂ ನನ್ನ ಮಾತುಗಳನ್ನು ಕೇಳಿ ನಂಬದೆಹೋದರೆ ನಾನು ಅವ ನಿಗೆ ತೀರ್ಪು ಮಾಡುವದಿಲ್ಲ; ಲೋಕಕ್ಕೆ ತೀರ್ಪು ಮಾಡುವದಕ್ಕಾಗಿ ಅಲ್ಲ, ಲೋಕವನ್ನು ರಕ್ಷಿಸುವದ ಕ್ಕಾಗಿಯೇ ನಾನು ಬಂದೆನು.
- 48 ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದಿರುವವನಿಗೆ ತೀರ್ಪು ಮಾಡುವಂಥದು ಒಂದು ಇದೆ; ಅದು ನಾನು ಹೇಳಿದ ಮಾತೇ; ಅದು ಕಡೇ ದಿನದಲ್ಲಿ ಅವನಿಗೆ ತೀರ್ಪು ಮಾಡುವದು.
- 49 ನನ್ನಷ್ಟಕ್ಕೆ ನಾನೇ ಮಾತನಾಡಲಿಲ್ಲ; ಆದರೆ ನಾನು ಏನು ಹೇಳಬೇಕು ಮತ್ತು ನಾನು ಏನು ಮಾತನಾಡಬೇಕೆಂಬದನ್ನು ನನ್ನನ್ನು ಕಳುಹಿಸಿದ ತಂದೆಯೇ ನನಗೆ ಆಜ್ಞಾಪಿಸಿದ್ದಾನೆ.
- 50 ಆತನ ಆಜ್ಞೆಯು ನಿತ್ಯಜೀವವಾಗಿದೆ ಎಂದು ನಾನು ಬಲ್ಲೆನು; ಆದದರಿಂದ ನಾನು ಮಾತನಾಡುವವುಗಳನ್ನು ತಂದೆಯು ನನಗೆ ಹೇಳಿದಂತೆಯೇ ನಾನು ಮಾತನಾಡು ತ್ತೇನೆ ಎಂದು ಹೇಳಿದನು.
John 12
- Details
- Parent Category: New Testament
- Category: John
ಯೋಹಾನನು ಅಧ್ಯಾಯ 12