- 1 ಅಷ್ಟರಲ್ಲಿ ಅಸಂಖ್ಯವಾದ ಜನಸಮೂಹವು ಒಬ್ಬರ ಮೇಲೊಬ್ಬರು ತುಳಿದಾಡುವಷ್ಟು ಒಟ್ಟುಗೂಡಿ ಬಂದಿರಲಾಗಿ ಆತನು ಎಲ್ಲಾದಕ್ಕಿಂತ ಮೊದಲು ತನ್ನ ಶಿಷ್ಯರಿಗೆ--ಫರಿಸಾಯರ ಕಪಟವೆಂಬ ಹುಳಿಯ ವಿಷಯದಲ್ಲಿ ನೀವು ಎಚ್ಚರವಾಗಿರ್ರಿ.
- 2 ಪ್ರಕಟವಾಗದಂತೆ ಯಾವದೂ ಮರೆಯಾಗಿರು ವದಿಲ್ಲ; ಇಲ್ಲವೆ ತಿಳಿಯುವದಕ್ಕಾಗದಂತೆ ಯಾವದೂ ಗುಪ್ತವಾಗಿರುವದಿಲ್ಲ.
- 3 ಆದದರಿಂದ ನೀವು ಕತ್ತಲೆಯಲ್ಲಿ ಯಾವದನ್ನು ಮಾತನಾಡಿದ್ದೀರೋ ಅದು ಬೆಳಕಿನಲ್ಲಿ ಕೇಳಲ್ಪಡುವದು; ಕೋಣೆಗಳೊಳಗೆ ನೀವು ಕಿವಿಯಲ್ಲಿ ಮಾತನಾಡಿದ್ದು ಮಾಳಿಗೆಗಳ ಮೇಲೆ ಪ್ರಕಟಿಸ ಲ್ಪಡುವದು ಎಂದು ಹೇಳಲಾರಂಭಿಸಿದನು.
- 4 ನನ್ನ ಸ್ನೇಹಿತರಾದ ನಿಮಗೆ ನಾನು ಹೇಳುವದೇನಂದರೆ--ದೇಹವನ್ನು ಕೊಂದು ಅದಕ್ಕಿಂತ ಹೆಚ್ಚೇನೂ ಮಾಡಲಾರ ದವರಿಗೆ ಹೆದರಬೇಡಿರಿ.
- 5 ಆದರೆ ಯಾರಿಗೆ ನೀವು ಭಯಪಡಬೇಕೆಂದು ಮುಂದಾಗಿ ನಾನು ನಿಮ್ಮನ್ನು ಎಚ್ಚರಿಸುತ್ತೇನೆ; ಕೊಂದಮೇಲೆ ನರಕದಲ್ಲಿ ಹಾಕುವದಕ್ಕೆ ಅಧಿಕಾರವಿರುವಾತನಿಗೇ ಭಯಪಡಿರಿ; ಹೌದು, ಆತನಿಗೆ ಭಯಪಡಿರಿ ಎಂದು ನಾನು ನಿಮಗೆ ಹೇಳುತ್ತೇನೆ.
- 6 ಎರಡು ಕಾಸುಗಳಿಗೆ ಐದು ಗುಬ್ಬಿಗಳು ಮಾರಲ್ಪಡುತ್ತವಲ್ಲಾ? ಅವುಗಳಲ್ಲಿ ಒಂದಾದರೂ ದೇವರ ಮುಂದೆ ಮರೆತುಹೋಗುವದಿಲ್ಲ.
- 7 ನಿಮ್ಮ ತಲೆಯ ಕೂದಲುಗಳು ಸಹ ಲೆಕ್ಕಿಸಲ್ಪಟ್ಟಿವೆ. ಆದದರಿಂದ ಭಯಪಡಬೇಡಿರಿ; ನೀವು ಬಹಳ ಗುಬ್ಬಿಗಳಿಗಿಂತಲೂ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.
- 8 ಇದಲ್ಲದೆ ನಾನೂ ನಿಮಗೆ ಹೇಳುವದೇನಂದರೆ--ಯಾವನಾದರೂ ಮನು ಷ್ಯರ ಮುಂದೆ ನನ್ನನ್ನು ಒಪ್ಪಿಕೊಂಡರೆ ಮನುಷ್ಯ ಕುಮಾರನು ಸಹ ದೇವದೂತರ ಮುಂದೆ ಅವನನ್ನು ಒಪ್ಪಿಕೊಳ್ಳುವನು.
- 9 ಆದರೆ ಯಾವನು ಮನುಷ್ಯರ ಮುಂದೆ ನನ್ನನ್ನು ಅಲ್ಲಗಳೆಯುವನೋ ಅವನು ದೇವದೂತರ ಮುಂದೆ ಅಲ್ಲಗಳೆಯಲ್ಪಡುವನು.
- 10 ಯಾವನಾದರೂ ಮನುಷ್ಯಕುಮಾರನಿಗೆ ವಿರೋಧ ವಾಗಿ ಮಾತನಾಡಿದರೆ ಅದು ಅವನಿಗೆ ಕ್ಷಮಿಸ ಲ್ಪಡುವದು; ಆದರೆ ಪರಿಶುದ್ಧಾತ್ಮನಿಗೆ ವಿರೋಧವಾಗಿ ದೂಷಣೆ ಮಾಡಿದರೆ ಅದು ಅವನಿಗೆ ಕ್ಷಮಿಸಲ್ಪ ಡುವದಿಲ್ಲ.
- 11 ಅವರು ನಿಮ್ಮನ್ನು ಸಭಾ ಮಂದಿರಗಳಿಗೂ ನ್ಯಾಯಾಧಿಪತಿಗಳ ಮುಂದೆಯೂ ಅಧಿಕಾರಿಗಳ ಮುಂದೆಯೂ ತಂದಾಗ ಹೇಗೆ ಇಲ್ಲವೆ ಯಾವದನ್ನು ಉತ್ತರಕೊಡಬೇಕೆಂದು ಇಲ್ಲವೆ ಏನು ಹೇಳಬೇಕೆಂದು ಯೋಚಿಸಬೇಡಿರಿ.
- 12 ಯಾಕಂದರೆ ಅದೇ ಗಳಿಗೆಯಲ್ಲಿ ನೀವು ಹೇಳಬೇಕಾದದ್ದನ್ನು ಪರಿಶುದ್ಧಾತ್ಮನು ನಿಮಗೆ ಕಲಿಸುವನು ಅಂದನು.
- 13 ಆಗ ಗುಂಪಿನಲ್ಲಿದ್ದ ಒಬ್ಬನು ಆತನಿಗೆ--ಬೋಧ ಕನೇ, ಆಸ್ತಿಯನ್ನು ಪಾಲುಮಾಡಿ ನನಗೆ ಕೊಡುವಂತೆ ನನ್ನ ಸಹೋದರನಿಗೆ ಹೇಳು ಅಂದನು.
- 14 ಅದಕ್ಕೆ ಆತನು ಅವನಿಗೆ--ಮನುಷ್ಯನೇ, ನಿಮ್ಮ ಮೇಲೆ ನ್ಯಾಯಾಧಿಪತಿಯನ್ನಾಗಿ ಇಲ್ಲವೆ ಪಾಲುಮಾಡುವ ವನನ್ನಾಗಿ ನನ್ನನ್ನು ಯಾರು ಮಾಡಿದರು ಎಂದು ಕೇಳಿದನು.
- 15 ಇದಲ್ಲದೆ ಆತನು ಅವರಿಗೆ--ಜಾಗ್ರತೆ ಯಾಗಿದ್ದು ಲೋಭಕ್ಕೆ ಎಚ್ಚರಿಕೆಯಾಗಿರ್ರಿ; ಯಾಕಂದರೆ ಒಬ್ಬ ಮನುಷ್ಯನಿಗೆ ಸಮೃದ್ಧಿಯಾದ ಆಸ್ತಿಯು ಅವನಿಗೆ ಜೀವಾಧಾರವಲ್ಲ ಅಂದನು.
- 16 ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದ್ದೇನಂದರೆ--ಒಬ್ಬಾ ನೊಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆಯಿತು.
- 17 ಆಗ ಅವನು ತನ್ನೊಳಗೆ--ನಾನೇನು ಮಾಡಲಿ? ನನಗಿರುವ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲ ಎಂದು ಆಲೋಚಿಸಿ ಅವನು--
- 18 ನಾನು ಹೀಗೆ ಮಾಡುತ್ತೇನೆ; ನನ್ನ ಕಣಜಗಳನ್ನು ಕೆಡವಿ ದೊಡ್ಡವನ್ನಾಗಿ ಕಟ್ಟಿಸುತ್ತೇನೆ; ಅಲ್ಲಿ ನನ್ನ ಎಲ್ಲಾ ಬೆಳೆಯನ್ನೂ ನನ್ನ ಸರಕುಗಳನ್ನೂ ಕೂಡಿಸಿಟು
- 19 ನಾನು ನನ್ನ ಆತ್ಮಕ್ಕೆ--ಆತ್ಮವೇ, ಅನೇಕ ವರುಷ ಗಳಿಗಾಗಿ ನಿನಗೆ ಬಹಳ ಸರಕು ಇಡಲ್ಪಟ್ಟಿದೆ; ನೀನು ವಿಶ್ರಮಿಸಿಕೋ, ತಿನ್ನು, ಕುಡಿ ಆನಂದವಾಗಿರು ಎಂದು ಹೇಳುವೆನು ಎಂದು ಅಂದುಕೊಂಡನು.
- 20 ಆದರೆ ದೇವರು ಅವನಿಗೆ--ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ಕೇಳಲ್ಪಡುವದು; ಆಗ ನೀನು ಕೂಡಿಸಿಕೊಂಡವುಗಳು ಯಾರಿಗಾಗುವವು ಎಂದು ಹೇಳಿದನು.
- 21 ತನಗೋಸ್ಕರ ಸಂಪತ್ತನ್ನು ಕೂಡಿಸಿಟ್ಟು ಕೊಂಡು ದೇವರ ಕಡೆಗೆ ಐಶ್ವರ್ಯವಂತನಾಗ ದಿರುವವನು ಇವನಂತೆಯೇ ಇರುವನು ಅಂದನು.
- 22 ಆತನು ತನ್ನ ಶಿಷ್ಯರಿಗೆ--ನೀವು ನಿಮ್ಮ ಪ್ರಾಣಕ್ಕೆ ಏನು ತಿನ್ನಬೇಕು ಇಲ್ಲವೆ ನಿಮ್ಮ ದೇಹಕ್ಕೆ ಏನು ಹೊದ್ದು ಕೊಳ್ಳಬೇಕು ಎಂದು ಚಿಂತೆ ಮಾಡಬೇಡಿರಿ ಎಂದು ನಾನು ನಿಮಗೆ ಹೇಳುತ್ತೇನೆ.
- 23 ಊಟಕ್ಕಿಂತ ಪ್ರಾಣವೂ ವಸ್ತ್ರಕ್ಕಿಂತ ದೇಹವೂ ಹೆಚ್ಚಿನದು.
- 24 ಕಾಗೆಗಳನ್ನು ಗಮನಿಸಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ; ಅವುಗಳಿಗೆ ಉಗ್ರಾಣವಾಗಲೀ ಕಣಜವಾಗಲೀ ಇಲ್ಲ; ಆದಾಗ್ಯೂ ದೇವರು ಅವುಗಳಿಗೆ ಆಹಾರ ಕೊಡುತ್ತಾನೆ; ನೀವು ಪಕ್ಷಿಗಳಿಗಿಂತ ಎಷ್ಟೋ ಹೆಚ್ಚಿನವರಾಗಿದ್ದೀರಲ್ಲಾ.
- 25 ನಿಮ್ಮಲ್ಲಿ ಯಾವನು ಚಿಂತೆ ಮಾಡಿ ತನ್ನ ನೀಳಕ್ಕೆ ಒಂದು ಮೊಳವನ್ನು ಕೂಡಿಸಿ ಯಾನು?
- 26 ಹಾಗಾದರೆ ಅತ್ಯಲ್ಪವಾಗಿರುವದನ್ನು ನೀವು ಮಾಡಲಾರದವರಾಗಿದ್ದರೆ ಉಳಿದವುಗಳಿಗೋಸ್ಕರ ನೀವು ಚಿಂತೆಮಾಡುವದೇನು?
- 27 ಹೂವುಗಳು ಹೇಗೆ ಬೆಳೆಯುತ್ತವೆ ಯೋಚಿಸಿರಿ; ಅವು ಕಷ್ಟಪಡು ವದಿಲ್ಲ, ನೂಲುವದಿಲ್ಲ; ಆದಾಗ್ಯೂ ಸೊಲೊಮೋ ನನು ತನ್ನ ಎಲ್ಲಾ ವೈಭವದಲ್ಲಿ ಸಹ ಇವುಗಳಲ್ಲಿ ಒಂದರಂತೆಯಾದರೂ ಧರಿಸಿರಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ.
- 28 ಓ ಅಲ್ಪ ವಿಶ್ವಾಸಿಗಳೇ, ಹಾಗಾದರೆ ಈಹೊತ್ತು ಹೊಲದಲ್ಲಿದ್ದು ನಾಳೆ ಒಲೆಯಲ್ಲಿ ಹಾಕಲ್ಪಡುವ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವನಲ್ಲವೇ?
- 29 ನೀವು ಏನು ತಿನ್ನಬೇಕು ಇಲ್ಲವೆ ನೀವು ಏನು ಕುಡಿಯಬೇಕು ಎಂದು ತವಕಪಡಬೇಡಿರಿ; ನೀವು ಅನುಮಾನದ ಮನಸ್ಸಿನವ ರಾಗಿರಬೇಡಿರಿ.
- 30 ಯಾಕಂದರೆ ಇವೆಲ್ಲವುಗಳಿಗಾಗಿ ಲೋಕದ ಜನಾಂಗಗಳು ಬಹಳವಾಗಿ ತವಕಪಡುತ್ತಾರೆ; ಆದರೆ ಇವುಗಳು ನಿಮಗೆ ಅಗತ್ಯವೆಂದು ನಿಮ್ಮ ತಂದೆಯು ಬಲ್ಲನು.
- 31 ಆದರೆ ನೀವು ದೇವರ ರಾಜ್ಯವನ್ನೇ ಹುಡುಕಿರಿ. ಆಗ ಇವೆಲ್ಲವುಗಳು ನಿಮಗೆ ಕೂಡಿಸಲ್ಪಡುವವು.
- 32 ಚಿಕ್ಕ ಹಿಂಡೇ, ಭಯಪಡಬೇಡ; ಯಾಕಂದರೆ ನಿಮಗೆ ರಾಜ್ಯವನ್ನು ಕೊಡುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
- 33 ನಿಮಗಿರು ವದನ್ನು ಮಾರಿ ದಾನಮಾಡಿರಿ; ನಿಮಗೋಸ್ಕರ ಹಳೇದಾಗದಂಥ ಚೀಲಗಳನ್ನೂ ಅಳಿದುಹೋಗದಂಥ ಸಂಪತ್ತನ್ನೂ ಪರಲೋಕದಲ್ಲಿ ಮಾಡಿಕೊಳ್ಳಿರಿ; ಅಲ್ಲಿ ಕಳ್ಳನು ಸವಿಾಪಕ್ಕೆ ಬರುವದಿಲ್ಲ, ನುಸಿಯು ಕೆಡಿಸು ವದಿಲ್ಲ.
- 34 ಯಾಕಂದರೆ ನಿಮ್ಮ ಸಂಪತ್ತು ಇರುವಲ್ಲಿಯೇ ನಿಮ್ಮ ಹೃದಯವು ಸಹ ಇರುವದು.
- 35 ನಿಮ್ಮ ನಡುಗಳು ಕಟ್ಟಿರಲಿ; ನಿಮ್ಮ ದೀಪಗಳು ಉರಿಯುತ್ತಿರಲಿ.
- 36 ನೀವಂತೂ ತಮ್ಮ ಒಡೆಯನು ಮದುವೆಯಿಂದ ಯಾವಾಗ ಹಿಂದಿರುಗುವನೋ ಎಂದು ಕಾಯುವ ಮತ್ತು ಅವನು ಬಂದು ತಟ್ಟಿದಾಗ ತಕ್ಷಣವೇ ಅವನಿಗೆ ತೆರೆಯುವ ಮನುಷ್ಯರಂತೆ ಇರ್ರಿ.
- 37 ಒಡೆಯನು ಬಂದಾಗ ಯಾರು ಎಚ್ಚರವಾಗಿರುವದನ್ನು ಅವನು ಕಾಣುವನೋ ಆ ಸೇವಕರು ಧನ್ಯರು; ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಅವನು ಬಂದು ನಡುಕಟ್ಟಿಕೊಂಡು ಅವರನ್ನು ಊಟಕ್ಕೆ ಕೂಡ್ರಿಸಿ ಅವರಿಗೆ ತಾನೇ ಉಪಚರಿಸುವನು.
- 38 ಅವನು ಎರಡನೇ ಜಾವದಲ್ಲಿ ಇಲ್ಲವೇ ಮೂರನೇ ಜಾವದಲ್ಲಿ ಬಂದು ಅವರನ್ನು ಹಾಗೆಯೇ ಕಂಡರೆ ಆ ಸೇವಕರು ಧನ್ಯರು.
- 39 ಕಳ್ಳನು ಯಾವಗಳಿಗೆಯಲ್ಲಿ ಬರುವ ನೆಂಬದು ಮನೇ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಯನ್ನು ಕನ್ನಾಕೊರೆಯ ಗೊಡಿಸುತ್ತಿರಲಿಲ್ಲವೆಂಬದನ್ನು ತಿಳುಕೊಳ್ಳಿರಿ.
- 40 ಆದ ಕಾರಣ ನೀವು ಸಹ ಸಿದ್ಧವಾಗಿರ್ರಿ; ಯಾಕಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ ಎಂದು ಹೇಳಿದನು.
- 41 ಆಗ ಪೇತ್ರನು ಆತನಿಗೆ--ಕರ್ತನೇ, ನೀನು ಈ ಸಾಮ್ಯವನ್ನು ನಮಗೆ ಹೇಳುತ್ತೀಯೋ ಇಲ್ಲವೆ ಎಲ್ಲರಿಗೂ ಹೇಳುತ್ತೀಯೋ ಎಂದು ಕೇಳಿದ್ದಕ್ಕೆ
- 42 ಕರ್ತನು--ಹಾಗಾದರೆ ತಕ್ಕಕಾಲದಲ್ಲಿ ಅವರ ಪಾಲಿನ ಆಹಾರವನ್ನು ಕೊಡುವದಕ್ಕಾಗಿ ಒಡೆಯನು ತನ್ನ ಮನೆಯಮೇಲೆ ನೇಮಿಸುವ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೇವಾರ್ತೆಯವನು ಯಾರು?
- 43 ತನ್ನ ಒಡೆಯನು ಬಂದಾಗ ಯಾವನು ಹೀಗೆ ಮಾಡುವದನ್ನು ಕಾಣುವನೋ ಆ ಸೇವಕನು ಧನ್ಯನು;
- 44 ಅವನು ತನಗಿರುವ ಎಲ್ಲಾದರ ಮೇಲೆ ಅವನನ್ನು ಅಧಿಕಾರಿಯನ್ನಾಗಿ ನೇಮಿಸುವನು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
- 45 ಆದರೆ ಆ ಸೇವಕನು--ನನ್ನ ಒಡೆಯನು ಬರುವದಕ್ಕೆ ತಡಮಾಡುತ್ತಾನೆ ಎಂದು ತನ್ನ ಹೃದಯದಲ್ಲಿ ಅಂದು ಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯು ವದಕ್ಕೂ ತಿಂದು ಕುಡಿದು ಮತ್ತನಾಗುವದಕ್ಕೂ ಆರಂಭಿಸಿದರೆ
- 46 ಅವನು ನಿರೀಕ್ಷಿಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಸೇವಕನ ಒಡೆಯನು ಬಂದು ಅವನನ್ನು ಕಠಿಣವಾಗಿ ಛೇದಿಸಿ ಅವನಿಗೆ ನಂಬಿಕೆಯಿಲ್ಲದವರ ಕೂಡ ಪಾಲನ್ನು ನೇಮಕ ಮಾಡುವನು.
- 47 ಇದಲ್ಲದೆ ತನ್ನ ಒಡೆಯನ ಚಿತ್ತವನ್ನು ತಿಳಿದು ತನ್ನನ್ನು ಸಿದ್ಧಮಾಡಿಕೊಳ್ಳದೆ ಇಲ್ಲವೆ ಅವನ ಚಿತ್ತಕ್ಕೆ ಅನುಸಾರವಾಗಿ ಮಾಡದೆ ಇದ್ದ ಸೇವಕನು ಬಹಳ ಪೆಟ್ಟುಗಳನ್ನು ತಿನ್ನುವನು.
- 48 ಆದರೆ ಪೆಟ್ಟುಗಳಿಗೆ ಯೋಗ್ಯವಾದವುಗಳನ್ನು ತಿಳಿಯದೆ ಮಾಡಿದವನು ಸ್ವಲ್ಪ ಪೆಟ್ಟುಗಳನ್ನು ತಿನ್ನುವನು. ಯಾಕಂದರೆ ಯಾವನಿಗೆ ಹೆಚ್ಚುಕೊಡಲ್ಪಟ್ಟಿದೆಯೋ ಅವನಿಂದ ಹೆಚ್ಚು ಕೇಳಲ್ಪಡು ವದು; ಯಾವನಿಗೆ ಮನುಷ್ಯರು ಹೆಚ್ಚಾಗಿ ಒಪ್ಪಿಸಿರುವರೋ ಅವನಿಂದ ಅವರು ಹೆಚ್ಚಾಗಿ ಕೇಳುವ
- 49 ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕುವದಕ್ಕಾಗಿ ಬಂದೆನು; ಅದು ಈಗಾಗಲೇ ಹೊತ್ತಿಕೊಂಡಿದ್ದರೆ ಮತ್ತೇನು ನನಗೆ ಬೇಕು?
- 50 ಆದರೆ ನಾನು ಬಾಪ್ತಿಸ್ಮ ಮಾಡಿಸಿಕೊಳ್ಳುವ ಒಂದು ಬಾಪ್ತಿಸ್ಮ ಉಂಟು; ಅದು ನೆರವೇರುವ ತನಕ ನಾನು ಎಷ್ಟೋ ಇಕ್ಕಟ್ಟಿನಲ್ಲಿದ್ದೇನೆ!
- 51 ನಾನು ಭೂಮಿಯ ಮೇಲೆ ಸಮಾಧಾನವನ್ನು ಕೊಡುವದಕ್ಕಾಗಿ ಬಂದಿದ್ದೇ ನೆಂದು ನೀವು ಭಾವಿಸುತ್ತೀರೋ? ಇಲ್ಲ, ಭೇದವನ್ನು ಉಂಟುಮಾಡುವದಕ್ಕೆ ಬಂದಿದ್ದೇನೆಂದು ನಾನು ನಿಮಗೆ ಹೇಳುತ್ತೇನೆ.
- 52 ಇಂದಿನಿಂದ ಒಂದು ಮನೆಯಲ್ಲಿ ಐದುಮಂದಿ ಭೇದವಾಗಿ ಇಬ್ಬರಿಗೆ ವಿರೋಧವಾಗಿ ಮೂವರು ಮೂವರಿಗೆ ವಿರೋಧವಾಗಿ ಇಬ್ಬರು ಇರುವರು.
- 53 ಮಗನಿಗೆ ವಿರೋಧವಾಗಿ ತಂದೆಯೂ ತಂದೆಗೆ ವಿರೋಧವಾಗಿ ಮಗನೂ ಮಗಳಿಗೆ ವಿರೋಧವಾಗಿ ತಾಯಿಯೂ ತಾಯಿಗೆ ವಿರೋಧವಾಗಿ ಮಗಳೂ ತನ್ನ ಸೊಸೆಗೆ ವಿರೋಧವಾಗಿ ಅತ್ತೆಯೂ ತನ್ನ ಅತ್ತೆಗೆ ವಿರೋಧವಾಗಿ ಸೊಸೆಯೂ ವಿಭಾಗಿಸ ಲ್ಪಡುವರು.
- 54 ಆತನು ಇನ್ನು ಜನರಿಗೆ--ನೀವು ಪಶ್ಚಿಮದ ಕಡೆಯಿಂದ ಏಳುವ ಮೋಡವನ್ನು ನೋಡು ವಾಗ--ಮಳೆ ಬರುವದೆಂದು ತಕ್ಷಣವೇ ಅನ್ನುತ್ತೀರಿ; ಹಾಗೆಯೇ ಆಗುವದು.
- 55 ದಕ್ಷಿಣಗಾಳಿ ಬೀಸುವದನ್ನು ನೀವು ನೋಡುವಾಗ--ಸೆಕೆಯಾಗುವದು ಎಂದು ನೀವು ಅನ್ನುತ್ತೀರಿ, ಅದು ಹಾಗೆಯೇ ಆಗುತ್ತದೆ.
- 56 ಕಪಟಿಗಳೇ, ಭೂಮ್ಯಾಕಾಶಗಳ ಭಾವವನ್ನು ಅರಿತು ಕೊಳ್ಳುತ್ತೀರಿ; ಆದರೆ ಈ ಕಾಲವನ್ನು ನೀವು ಅರಿತು ಕೊಳ್ಳದಿರುವದು ಹೇಗೆ?
- 57 ಹೌದು, ನಿಮ್ಮಷ್ಟಕ್ಕೆ ನೀವು ಸರಿಯಾದದ್ದನ್ನು ಯಾಕೆ ನಿರ್ಣಯಿಸಿಕೊಳ್ಳುವದಿಲ್ಲ?
- 58 ನೀನು ನಿನ್ನ ಎದುರಾಳಿಯ ಸಂಗಡ ನ್ಯಾಯಾ ಧಿಪತಿಯ ಎದುರಿಗೆ ಹೋಗುವಾಗ ಮಾರ್ಗದಲ್ಲಿಯೇ ಅವನಿಂದ ಬಿಡಿಸಿಕೊಳ್ಳುವದಕ್ಕೆ ಪ್ರಯತ್ನಮಾಡು; ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಬಲವಂತವಾಗಿ ಎಳೆದಾನು; ಆಗ ನ್ಯಾಯಾಧಿ ಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸಾನು ಮತ್ತು ಅಧಿಕಾರಿಯು ನಿನ್ನನ್ನು ಸೆ
- 59 ನೀನು ಕೊನೆಯ ಕಾಸನ್ನು ಸಲ್ಲಿಸುವವರೆಗೂ ಅಲ್ಲಿಂದ ಬರುವದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ ಅಂದನು.
Luke 12
- Details
- Parent Category: New Testament
- Category: Luke
ಲೂಕನು ಅಧ್ಯಾಯ 12