- 1 ಇದಲ್ಲದೆ ಪಿಲಾತನು ಗಲಿಲಾಯದವರ ರಕ್ತವನ್ನು ಅವರ ಬಲಿಗಳೊಂದಿಗೆ ಬೆರಸಿದ ವಿಷಯವನ್ನು ಆತನಿಗೆ ತಿಳಿಸಿದ ಕೆಲವರು ಆ ಸಮಯ ದಲ್ಲಿ ಅಲ್ಲಿದ್ದರು.
- 2 ಆಗ ಯೇಸು ಅವರಿಗೆ--ಈ ಗಲಿ ಲಾಯದವರು ಇಂಥವುಗಳನ್ನು ಅನುಭವಿಸಿದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ನೀವು ಭಾವಿಸುತ್ತೀರೋ?
- 3 ಆದರೆ--ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನಸಾಂತರ ಪಡದೆಹೋದರೆ ನೀವೆಲ್ಲರೂ ಅವರಂತೆಯೇ ನಾಶವಾ ಗುವಿರಿ.
- 4 ಇಲ್ಲವೆ ಸಿಲೊವಾಮಿನಲ್ಲಿ ಗೋಪುರವು ಬಿದ್ದು ಸತ್ತ ಆ ಹದಿನೆಂಟು ಜನರು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಪಾಪಿಷ್ಠ ರೆಂದು ಯೋಚಿಸುತ್ತೀರೋ?
- 5 ಆದರೆ--ಹಾಗಲ್ಲ ವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನ ಸಾಂತರಪಡದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ ಅಂದನು.
- 6 ಆತನು ಈ ಸಾಮ್ಯವನ್ನು ಕೂಡ ಹೇಳಿದನು: ಒಬ್ಬಾನೊಬ್ಬ ಮನುಷ್ಯನಿಗೆ ತನ್ನ ದ್ರಾಕ್ಷೇತೋಟದಲ್ಲಿ ನೆಡಲ್ಪಟ್ಟಿದ್ದ ಒಂದು ಅಂಜೂರದ ಮರವಿತ್ತು; ಅವನು ಬಂದು ಅದರಲ್ಲಿ ಫಲವನ್ನು ಹುಡುಕಿದಾಗ ಒಂದೂ ಸಿಕ್ಕಲಿಲ್ಲ.
- 7 ಆಗ ಅವನು ತನ್ನ ದ್ರಾಕ್ಷೇತೋಟ ಮಾಡು ವವನಿಗೆ--ಇಗೋ, ಈ ಮೂರು ವರುಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕಿದರೂ ಒಂದನ್ನೂ ಕಂಡುಕೊಳ್ಳಲಿಲ್ಲ; ಇದನ್ನು ಕಡಿದುಹಾಕು; ಭೂಮಿಗೆ ಇದು ಯಾಕೆ ಭಾರವಾಗಿರಬೇಕು ಎಂದು ಹೇಳಿದನು.
- 8 ಆದರೆ ಅವನು ಪ್ರತ್ಯುತ್ತರವಾಗಿ ಅವ ನಿಗೆ--ಒಡೆಯನೇ, ನಾನು ಅದರ ಸುತ್ತಲೂ ಅಗೆದು ಗೊಬ್ಬರ ಹಾಕುವ ವರೆಗೆ ಈ ವರುಷವೂ ಇದನ್ನು ಬಿಡು;
- 9 ಇದು ಫಲ ಫಲಿಸಿದರೆ ಸರಿ; ಇಲ್ಲವಾದರೆ ನೀನು ಇದನ್ನು ಕಡಿದುಹಾಕಬಹುದು ಅಂದನು.
- 10 ಆತನು ಸಬ್ಬತ್ತಿನಲ್ಲಿ ಸಭಾಮಂದಿರದಲ್ಲಿ ಬೋಧಿ ಸುತ್ತಾ ಇದ್ದನು.
- 11 ಆಗ ಇಗೋ, ಹದಿನೆಂಟು ವರುಷ ಗಳಿಂದಲೂ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬೊಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು; ಅವಳು ಯಾವ ರೀತಿಯಲ್ಲಿಯೂ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು.
- 12 ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ--ಸ್ತ್ರೀಯೇ, ನೀನು ಈ ನಿನ್ನ ರೋಗದಿಂದ ಬಿಡುಗಡೆಯಾಗಿದ್ದೀ ಎಂದು ಹೇಳಿ
- 13 ಆತನು ಆಕೆಯ ಮೇಲೆ ತನ್ನ ಕೈಗಳನ್ನು ಇಟ್ಟನು; ಕೂಡಲೆ ಆಕೆಯು ನೆಟ್ಟಗಾಗಿ ದೇವರನ್ನು ಮಹಿಮೆಪಡಿಸಿದಳು.
- 14 ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ--ಆರು ದಿವಸಗಳಲ್ಲಿ ಮನು ಷ್ಯರು ಕೆಲಸ ಮಾಡತಕ್ಕದ್ದು. ಆದದರಿಂದ ಅವುಗಳಲ್ಲಿ ಅವರು ಬಂದು ಸ್ವಸ್ಥತೆ ಹೊಂದಲಿ; ಸಬ್ಬತ್ ದಿನದಲ್ಲಿ ಬೇಡ ಅಂದನು.
- 15 ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ ಅವನಿಗೆ--ಕಪಟಿಯೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ತಿನಲ್ಲಿ ತನ್ನ ಎತ್ತನ್ನಾಗಲಿ ಇಲ್ಲವೆ ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವದಕ್ಕಾಗಿ ಹೋಗುವನಲ್ಲವೇ?
- 16 ಹಾಗಾದರೆ ಇಗೋ, ಅಬ್ರ ಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರುಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನ ದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೋ ಅಂದನು.
- 17 ಆತನು ಇವುಗಳನ್ನು ಹೇಳುತ್ತಿರುವಾಗ ಆತನ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು; ಆದರೆ ಜನರೆಲ್ಲಾ ಆತನಿಂದ ನಡೆದ ಎಲ್ಲಾ ಮಹತ್ತಾದ ಕಾರ್ಯಗಳಿಗಾಗಿ ಸಂತೋಷಪಟ್ಟರು.
- 18 ಇದಲ್ಲದೆ ಆತನು--ದೇವರ ರಾಜ್ಯವು ಯಾವ ದಕ್ಕೆ ಹೋಲಿಕೆಯಾಗಿದೆ? ನಾನು ಯಾವದಕ್ಕೆ ಅದನ್ನು ಹೋಲಿಸಲಿ?
- 19 ಅದು ಒಬ್ಬ ಮನುಷ್ಯನು ಸಾಸಿವೆಕಾಳನ್ನು ತೆಗೆದುಕೊಂಡು ಹೋಗಿ ತನ್ನ ತೋಟ ದಲ್ಲಿ ಹಾಕಿದ್ದಕ್ಕೆ ಹೋಲಿಕೆಯಾಗಿದೆ; ಅದು ಬೆಳೆದು ಒಂದು ದೊಡ್ಡ ಮರವಾಯಿತು; ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡಿದವು ಅಂದನು.
- 20 ಆತನು ತಿರಿಗಿ--ದೇವರ ರಾಜ್ಯವನ್ನು ಯಾವದಕ್ಕೆ ಹೋಲಿಸಲಿ?
- 21 ಒಬ್ಬ ಸ್ತ್ರೀಯು ಹುಳಿಯನ್ನು ತಕ್ಕೊಂಡು ಮೂರು ಸೇರು ಹಿಟ್ಟೆಲ್ಲವೂ ಹುಳಿಯಾಗುವ ತನಕ ಅದರಲ್ಲಿ ಅಡಗಿಸಿಟ್ಟ ಹುಳಿಗೆ ಅದು ಹೋಲಿಕೆ ಯಾಗಿದೆ ಅಂದನು.
- 22 ಆತನು ಪಟ್ಟಣಗಳನ್ನೂ ಹಳ್ಳಿಗಳನ್ನೂ ಹಾದು, ಬೋಧಿಸುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣ ಮಾಡಿದನು.
- 23 ಆಗ ಒಬ್ಬನು ಆತನಿಗೆ--ಕರ್ತನೇ, ರಕ್ಷಣೆ ಹೊಂದುವವರು ಸ್ವಲ್ಪ ಜನರೋ ಎಂದು ಕೇಳಲು ಆತನು ಅವರಿಗೆ--
- 24 ಇಕ್ಕಟ್ಟಾದ ಬಾಗಲಿನಿಂದ ಒಳಗೆ ಪ್ರವೇಶಿಸುವದಕ್ಕೆ ಪ್ರಯಾಸಪಡಿರಿ; ಯಾಕಂ ದರೆ ಅನೇಕರು ಒಳಗೆ ಪ್ರವೇಶಿಸುವದಕ್ಕೆ ಪ್ರಯತ್ನಿಸಿ ದರೂ ಆಗುವದಿಲ್ಲ ಎಂದು ನಾನು ನಿಮಗೆ ಹೇಳು ತ್ತೇನೆ.
- 25 ಮನೇಯಜಮಾನನು ಒಂದು ಸಾರಿ ಎದ್ದು ಬಾಗಲನ್ನು ಮುಚ್ಚಿಕೊಂಡರೆ ನೀವು ಹೊರಗೆ ನಿಂತು ಕೊಂಡು ಬಾಗಲನ್ನು ತಟ್ಟುತ್ತಾ--ಕರ್ತನೇ, ಕರ್ತನೇ, ನಮಗಾಗಿ ತೆರೆ ಎಂದು ಹೇಳುವದಕ್ಕೆ ಆರಂಭಿಸಿದಾಗ ಆತನು ನಿಮಗೆ ಪ್ರತ್ಯುತ್ತರವಾಗಿ--ನೀವು ಎಲ್ಲಿಯ ವರೋ ನಾನರಿಯೆ ಎಂದು ಹೇಳುವನು.
- 26 ಆಗ ನೀವು--ನಿನ್ನ ಸನ್ನಿಧಿಯಲ್ಲಿ ನಾವು ತಿಂದು ಕುಡಿದೆವು; ಮತ್ತು ನೀನು ನಮ್ಮ ಬೀದಿಗಳಲ್ಲಿ ಬೋಧಿಸಿದಿ ಎಂದು ಹೇಳಲಾರಂಭಿಸುವಿರಿ.
- 27 ಆದರೆ ಆತನು--ನೀವು ಎಲ್ಲಿ ಯವರೋ ನಾನರಿಯೆ; ಅಕ್ರಮ ಮಾಡುವವರಾದ ನೀವೆಲ್ಲರೂ ನನ್ನಿಂದ ಹೊರಟುಹೋಗಿರಿ ಎಂದು ಹೇಳುವನೆಂದು ನಾನು ನಿಮಗೆ ಹೇಳುತ್ತೇನೆ.
- 28 ಆದರೆ ನೀವು ಅಬ್ರಹಾಮ ಇಸಾಕ ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರರಾಜ್ಯದಲ್ಲಿ ಇರುವದನ್ನೂ ನೀವು ಮಾತ್ರ ಹೊರಗೆ ದೊಬ್ಬಲ್ಪಟ್ಟಿರುವದನ್ನೂ ನೋಡು ವಾಗ ಅಲ್ಲಿ ನಿಮಗೆ ಗೋಳಾಟವೂ ಹಲ್ಲುಕಡಿ ಯೋಣವೂ ಇರುವವು.
- 29 ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಅವರು ಬಂದು ದೇವರ ರಾಜ್ಯದಲ್ಲಿ ಕೂತುಕೊಳ್ಳುವರು.
- 30 ಆಗ ಇಗೋ, ಕೊನೆಯವರು ಮೊದಲನೆಯವರಾಗುವರು; ಮೊದ ಲನೆಯವರು ಕೊನೆಯವರಾಗುವರು ಎಂದು ಹೇಳಿದನು.
- 31 ಅದೇ ದಿನದಲ್ಲಿ ಫರಿಸಾಯರಲ್ಲಿ ಕೆಲವರು ಆತನ ಬಳಿಗೆ ಬಂದು--ನೀನು ಇಲ್ಲಿಂದ ಹೊರಟುಹೋಗು; ಯಾಕಂದರೆ ಹೆರೋದನು ನಿನ್ನನ್ನು ಕೊಲ್ಲುವನು ಎಂದು ಆತನಿಗೆ ಹೇಳಿದರು.
- 32 ಅದಕ್ಕೆ ಆತನು ಅವರಿಗೆ--ಇಗೋ, ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಬಿಡಿಸಿ ಸ್ವಸ್ಥಮಾಡುತ್ತೇನೆ; ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.
- 33 ಆದಾಗ್ಯೂ ಈ ದಿವಸ ನಾಳೆ ಮತ್ತು ನಾಡದ್ದು ನಾನು ಸಂಚರಿಸಲೇಬೇಕು; ಯಾಕಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲ್ಲಲ್ಪಡಲಾರನು.
- 34 ಓ ಯೆರೂಸಲೇಮೇ,ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಲ್ಪಟ್ಟವರಿಗೆ ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಎಷ್ಟೋ ಸಾರಿ ಕೂಡಿಸಬೇಕೆಂದಿದ್ದೆನು; ಆದರೆ ನಿನಗೆ ಅದು ಮನಸ್ಸಿ
- 35 ಇಗೋ, ನಿಮ್ಮ ಮನೆಯು ಹಾಳಾಗಿ ನಿಮಗೆ ಬಿಡಲ್ಪಟ್ಟಿದೆ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
Luke 13
- Details
- Parent Category: New Testament
- Category: Luke
ಲೂಕನು ಅಧ್ಯಾಯ 13