- 1 ಆಮೇಲೆ ಅವನು ಸ್ಫಟಿಕದಂತೆ ಸ್ವಚ್ಛವಾದ ಮತ್ತು ಶುದ್ಧವಾದ ಜೀವಜಲದ ನದಿ ಯನ್ನು ನನಗೆ ತೋರಿಸಿದನು; ಅದು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಹೊರಡುವ ದಾಗಿತ್ತು.
- 2 ಅದರ ಬೀದಿಯ ಮಧ್ಯದಲ್ಲಿಯೂ ಆ ನದಿಯ ಉಭಯ ಪಾರ್ಶ್ವಗಳಲ್ಲಿಯೂ ಜೀವವೃಕ್ಷವಿತ್ತು; ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವದಕ್ಕೆ ಇದ್ದವು.
- 3 ಇನ್ನು ಮೇಲೆ ಶಾಪವೇನೂ ಇರುವದಿಲ್ಲ; ಅದರಲ್ಲಿ ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನವಿರುವದು. ಆತನ ಸೇವಕರು ಆತನನ್ನು ಸೇವಿಸುವರು.
- 4 ಅವರು ಆತನ ಮುಖವನ್ನು ನೋಡುವರು; ಅವರ ಹಣೆಗಳ ಮೇಲೆ ಆತನ ಹೆಸರು ಇರುವದು.
- 5 ಅಲ್ಲಿ ಇನ್ನು ರಾತ್ರಿ ಇರುವದಿಲ್ಲ; ಅವರಿಗೆ ದೀಪವಾಗಲಿ ಸೂರ್ಯನ ಬೆಳಕಾಗಲಿ ಬೇಕಾಗಿರುವ ದಿಲ್ಲ; ಯಾಕಂದರೆ ದೇವರಾದ ಕರ್ತನೇ ಅವರಿಗೆ ಬೆಳಕನ್ನು ಕೊಡುವನು. ಅವರು ಯುಗಯುಗಾಂತರ ಗಳಲ್ಲಿಯೂ ಆಳುವರು.
- 6 ಆಮೇಲೆ ಅವನು ನನಗೆ--ಈ ಮಾತುಗಳು ನಂಬತಕ್ಕದ್ದೂ ಸತ್ಯವಾದದ್ದೂ ಆಗಿವೆ; ಪರಿಶುದ್ಧ ಪ್ರವಾದಿಗಳ ದೇವರಾದ ಕರ್ತನು ಬೇಗನೆ ಸಂಭವಿಸ ತಕ್ಕವುಗಳನ್ನು ತನ್ನ ಸೇವಕರಿಗೆ ತೋರಿಸುವದಕ್ಕಾಗಿ ತನ್ನ ದೂತನನ್ನು ಕಳುಹಿಸಿದನು.
- 7 ಇಗೋ, ನಾನು ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನೆಗಳನ್ನು ಕಾಪಾಡುವವನು ಧನ್ಯನು ಎಂದು ಹೇಳಿದನು.
- 8 ಯೋಹಾನನೆಂಬ ನಾನೇ ಈ ಸಂಗತಿಗಳನ್ನು ಕೇಳಿ ಕಂಡವನು. ನಾನು ಕೇಳಿ ಕಂಡಾಗ ಈ ವಿಷಯಗಳನು ನನಗೆ ತೋರಿಸಿದ ದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.
- 9 ಆಗ ಅವನು ನನಗೆ--ಇದನ್ನು ಮಾಡಬೇಡ ನೋಡು; ಯಾಕಂದರೆ ನಾನು ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕ ದಲ್ಲಿ ಹೇಳಿರುವವುಗಳನ್ನು ಕೈಕೊಂಡು ನಡೆಯುವವ ರಿಗೂ ಜೊತೆಯ ಸೇವಕನಾಗಿದ್ದೇನೆ; ದೇವರನ್ನು ಆರಾಧಿಸು ಎಂದು ನನಗೆ ಹೇಳಿದನು.
- 10 ಇದಲ್ಲದೆ ಅವನು ನನಗೆ--ಈ ಪುಸ್ತಕದಲ್ಲಿರುವ ಪ್ರವಾದನೆಯ ಹೇಳಿಕೆಗಳಿಗೆ ಮುದ್ರೆಹಾಕಬೇಡ; ಯಾಕಂದರೆ ಸಮಯವು ಸವಿಾಪವಾಗಿದೆ.
- 11 ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ; ಮೈಲಿಗೆಯಾದವನು ಇನ್ನೂ ತನ್ನನ್ನು ಮೈಲಿಗೆ ಮಾಡಿಕೊಳ್ಳಲಿ; ನೀತಿವಂತನು ಇನ್ನೂ ನೀತಿವಂತ ನಾಗಲಿ; ಪವಿತ್ರನು ತಾನು ಇನ್ನೂ ಪವಿತ್ರನಾಗಿರಲಿ;
- 12 ಇಗೋ, ನಾನು ಬೇಗ ಬರುತ್ತೇನೆ; ನಾನು ಪ್ರತಿಯೊಬ್ಬನಿಗೆ ಅವನವನ ಕೆಲಸದ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನಲ್ಲಿದೆ.
- 13 ನಾನೇ ಅಲ್ಫಾಯೂ ಓಮೆಗವೂ ಆದಿಯೂ ಅಂತ್ಯವೂ ಮೊದಲನೆಯ ವನೂ ಕಡೆಯವನೂ ಆಗಿದ್ದೇನೆ.
- 14 ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವರು ಧನ್ಯರು; ಅವರಿಗೆ ಜೀವವೃಕ್ಷದ ಹಕ್ಕು ಇರುವದು; ಅವರು ಹೆಬ್ಬಾಗಿಲು ಗಳಿಂದ ಆ ಪಟ್ಟಣದೊಳಕ್ಕೆ ಸೇರುವರು.
- 15 ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆ ಗಾರರೂ ವಿಗ್ರಹಾರಾಧಕರೂ ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು ಎಂದು ಹೇಳಿದನು.
- 16 ಯೇಸುವೆಂಬ ನಾನು ಸಭೆಗಳಲ್ಲಿ ಇವುಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವದಕ್ಕೋಸ್ಕರ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ಬೇರೂ ಸಂತತಿಯೂ ಉದಯದ ಪ್ರಕಾಶವುಳ್ಳ ನಕ್ಷತ್ರವೂ ಆಗಿದ್ದೇನೆ.
- 17 ಆತ್ಮನೂ ಮದಲಗಿತ್ತಿಯೂ--ಬಾ, ಅನ್ನುತ್ತಾರೆ. ಕೇಳುವವನು--ಬಾ, ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.
- 18 ಈ ಪುಸ್ತಕದ ಪ್ರವಾದನಾವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನಂ ದರೆ--ಯಾವನಾದರೂ ಇವುಗಳಿಗೆ ಕೂಡಿಸಿದರೆ ದೇವರು ಅವನಿಗೆ ಈ ಪುಸ್ತಕದಲ್ಲಿ ಬರೆದಿರುವ ಉಪ ದ್ರವಗಳನ್ನು ಕೂಡಿಸುವನು.
- 19 ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ವಾಕ್ಯಗಳಿಂದ ತೆಗೆದು ಬಿಟ್ಟರೆ ಜೀವಗ್ರಂಥದಿಂದಲೂ ಪರಿಶುದ್ಧ ಪಟ್ಟಣ ದಿಂದಲೂ ಈ ಪುಸ್ತಕದಲ್ಲಿ ಬರೆದಿರುವವುಗಳಿಂದಲೂ ಅವನ ಪಾಲನ್ನು ದೇವರು ತೆಗೆದುಬಿಡುವನು.
- 20 ಇವುಗಳನ್ನು ಸಾಕ್ಷೀಕರಿಸುವಾತನು--ಖಂಡಿತ ವಾಗಿ ನಾನು ಬೇಗ ಬರುತ್ತೇನೆ ಎಂದು ಹೇಳುತ್ತಾನೆ. ಆಮೆನ್. ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ.
- 21 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್.
Revelation 22
- Details
- Parent Category: New Testament
- Category: Revelation
ಪ್ರಕಟನೆ ಅಧ್ಯಾಯ 22