- 1 ಬೆಚಲೇಲನು ಜಾಲೀ ಮರದಿಂದಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ, ಒಂದುವರೆ ಮೊಳ ಎತ್ತರವಾಗಿರುವ ಮಂಜೂಷವನ್ನು ಮಾಡಿದನು.
- 2 ಅದನ್ನು ಚೊಕ್ಕ ಬಂಗಾರದಿಂದ ಒಳಗೂ ಹೊರಗೂ ಹೊದಿಸಿ ಅದರ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು.
- 3 ಅವನು ಅದರ ನಾಲ್ಕು ಮೂಲೆಗಳಿಗೆ ನಾಲ್ಕು ಉಂಗುರಗಳನ್ನು ಎರಕ ಹೊಯ್ದನು; ಇದಲ್ಲದೆ ಅದರ ಒಂದು ಮಗ್ಗಲಿಗೆ ಎರಡು ಇನ್ನೊಂದು ಮಗ್ಗಲಿಗೆ ಎರಡು ಉಂಗುರಗಳನ್ನು ಎರಕ ಹೊಯ್ದನು.
- 4 ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಚಿನ್ನದಿಂದ ಅವುಗಳನ್ನು ಹೊದಿ ಸಿದನು.
- 5 ಮಂಜೂಷವನ್ನು ಹೊರುವದಕ್ಕಾಗಿ ಕೋಲು ಗಳನ್ನು ಮಂಜೂಷದ ಭಾಗಗಳಲ್ಲಿರುವ ಉಂಗುರ ಗಳಲ್ಲಿ ಸೇರಿಸಿದನು.
- 6 ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಇರುವ ಕರುಣಾಸನವನ್ನು ಚೊಕ್ಕ ಬಂಗಾರ ದಿಂದ ಮಾಡಿದನು.
- 7 ಅವನು ಕರುಣಾಸನದ ಎರಡು ತುದಿಗಳಲ್ಲಿ ಎರಡು ಚಿನ್ನದ ಕೆರೂಬಿಗಳನ್ನು ಮಾಡಿದನು. ಅವು ಒಂದೇ ತುಂಡಿನಲ್ಲಿ ಹೊಡೆದು ಮಾಡಿದ್ದಾಗಿದ್ದವು.
- 8 ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನು ಇನ್ನೊಂದು ಬದಿಯ ಕೊನೆಯಲ್ಲಿ ಇನ್ನೊಂದು ಕೆರೂಬಿ ಯನ್ನು ಮಾಡಿದನು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯರನ್ನು ಮಾಡಿದನು.
- 9 ಆ ಕೆರೂಬಿ ಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಹರಡಿಕೊಂಡು ಕರುಣಾಸನವನ್ನು ಮುಚ್ಚಿದಂತಿದ್ದವು, ಆ ಕೆರೂಬಿಯರ ಮುಖಗಳು ಒಂದನ್ನೊಂದು ನೋಡುತ್ತಿರುವಂತೆಯೂ ಕರುಣಾಸನವನ್ನು ನೋಡುತ್ತಿರುವಂತೆಯೂ ಇದ್ದವು.
- 10 ಅವನು ಜಾಲೀ ಮರದಿಂದ ಒಂದು ಮೇಜನ್ನು ಮಾಡಿದನು; ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.
- 11 ಅವನು ಅದನ್ನು ಚೊಕ್ಕ ಬಂಗಾರದಿಂದ ಹೊದಿಸಿ ಅದರ ಸುತ್ತಲೂ ಚಿನ್ನದ ಕೀರೀಟವನ್ನು ಮಾಡಿದನು.
- 12 ಅವನು ಅದರ ಸುತ್ತಲೂ ಗೇಣಗಲವಾದ ಅಂಚನ್ನು ಮಾಡಿದನು; ಆ ಅಂಚಿನ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು.
- 13 ಅವನು ಅದಕ್ಕೆ ನಾಲ್ಕು ಚಿನ್ನದ ಉಂಗುರಗಳನ್ನು ಎರಕಹೊಯ್ದು ಆ ಉಂಗುರಗಳನ್ನು ಅದರ ನಾಲ್ಕು ಕಾಲುಗಳಿರುವ ನಾಲ್ಕು ಮೂಲೆಗಳಲ್ಲಿಟ್ಟನು.
- 14 ಮೇಜನ್ನು ಹೊರುವದಕ್ಕೆ ಕೋಲನ್ನು ಸಿಕ್ಕಿಸುವ ಸ್ಥಳಗಳಲ್ಲಿ ಆ ಉಂಗುರಗಳು ಮೇಜಿನ ಅಂಚಿನ ಮೇಲಿದ್ದವು.
- 15 ಮೇಜನ್ನು ಹೊರು ವದಕ್ಕೆ ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಚಿನ್ನದಿಂದ ಹೊದಿಸಿದನು.
- 16 ಅನಂತರ ಅವನು ಮೇಜಿನ ಮೇಲಿರುವ ಪಾತ್ರೆಗಳನ್ನು ಮಾಡಿ ದನು. ಅದರ ಹರಿವಾಣಗಳು, ಅದರ ಚಮಚಗಳು, ಅದರ ಬಟ್ಟಲುಗಳು ಅದೇ ರೀತಿಯಲ್ಲಿ ಅವುಗಳ ಮುಚ್ಚಳಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು.
- 17 ಅವನು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು; ಆ ದೀಪಸ್ತಂಭವನ್ನು ಅವನು ನಕ್ಷೆಯ ಕೆಲಸಮಾಡಿದ ಅಚ್ಚಿನ ಮೇಲೆ ಬಡಿದು ತಯಾರಿಸಿದನು.
- 18 ಆ ದೀಪ ಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಒಂದು ಭಾಗದಿಂದ ಮೂರು ಮತ್ತೊಂದು ಭಾಗದಿಂದ ಮೂರು.
- 19 ಒಂದು ಕೊಂಬೆಯಲ್ಲಿ ಬಾದಾ ಮಿಯ ಹೂವುಳ್ಳ ಮೂರು ಹಣತೆಗಳೂ, ಗುಂಡೂ ಹೂವೂ, ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಹೂವುಳ್ಳ ಮೂರು ಹಣತೆಗಳೂ ಗುಂಡೂ ಹೂವೂ; ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇದ್ದವು.
- 20 ದೀಪಸ್ತಂಭದಲ್ಲಿ ಗೂಡುಗಳೂ ಹೂವುಗಳೂ ಕೂಡಿದ ಬಾದಾವಿ ಹೂವುಳ್ಳ ನಾಲ್ಕು ಹಣತೆಗಳು.
- 21 ದೀಪಸ್ತಂಭದೊಳ ಗಿಂದ ಹೊರಗೆ ಬರುವ ಆರು ಕೊಂಬೆಗಳಿಗೆ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗೂಡು.
- 22 ಅದರ ಗೂಡುಗಳೂ ಕೊಂಬೆಗಳೂ ಅದರಿಂದಲೇ ಉಂಟಾಗಿದ್ದವು; ಅದೆಲ್ಲಾ ಚೊಕ್ಕ ಬಂಗಾರದ ಒಂದೇ ಕಲಾಕೃತಿಯಾಗಿತ್ತು.
- 23 ಅವನು ಏಳು ಬತ್ತಿಯ ದೀವಿಗೆಗಳನ್ನೂ ಕುಡಿ ಕತ್ತರಿಸಲು ಕತ್ತರಿ ಗಳನ್ನೂ ಕುಡಿ ಹಾಕಲು ಪಾತ್ರೆಗಳನ್ನೂ ಚೊಕ್ಕ ಬಂಗಾರ ದಿಂದ ಮಾಡಿದನು.
- 24 ಇವೆಲ್ಲವುಗಳನ್ನೂ ಸಮಸ್ತ ಪಾತ್ರೆಗಳನ್ನೂ ಅವನು ಒಂದು ತಲಾಂತು ಚೊಕ್ಕ ಬಂಗಾರದಿಂದ ಮಾಡಿದನು.
- 25 ಅವನು ಜಾಲೀ ಮರದಿಂದ ಧೂಪಪೀಠವನ್ನು ಮಾಡಿದನು; ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲವಾಗಿ ಚಚ್ಚೌಕವಾಗಿತ್ತು; ಅದು ಎರಡು ಮೊಳ ಎತ್ತರವಾಗಿತ್ತು. ಅದರ ಕೊಂಬುಗಳು ಸಹ ಜಾಲೀ ಮರದಿಂದಲೇ ಮಾಡಲ್ಪಟ್ಟಿದ್ದವು.
- 26 ಅವನು ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಅದರ ಕೊಂಬುಗಳನ್ನೂ ಚೊಕ್ಕ ಬಂಗಾರದಿಂದ ಹೊದಿಸಿದನು; ಅದರ ಸುತ್ತಲೂ ಬಂಗಾರದ ಕಿರೀಟ ವನ್ನಿಟ್ಟನು.
- 27 ಅದನ್ನು ಹೊರುವದಕ್ಕೆ ಕೋಲುಗಳನ್ನು ಸಿಕ್ಕಿಸುವದಕ್ಕೋಸ್ಕರ ಅದರ ಕಿರೀಟದ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಚಿನ್ನದ ಎರಡು ಉಂಗುರಗಳನ್ನು ಮಾಡಿದನು.
- 28 ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಚಿನ್ನದಿಂದ ಹೊದಿಸಿದನು.
- 29 ಅನಂತರ ಅವನು ವೈದ್ಯನ ಪದ್ಧತಿಯ ಪ್ರಕಾರ ಪವಿತ್ರವಾದ ಅಭಿಷೇಕ ತೈಲವನ್ನೂ ಪರಿಮಳ ದ್ರವ್ಯ ದಿಂದ ಶುದ್ಧವಾದ ಧೂಪವನ್ನೂ ತಯಾರಿಸಿದನು.
Exodus 37
- Details
- Parent Category: Old Testament
- Category: Exodus
ವಿಮೋಚನಕಾಂಡ ಅಧ್ಯಾಯ 37