- 1 ಅವನು ಜಾಲೀ ಮರದಿಂದ ದಹನ ಬಲಿಪೀಠವನ್ನು ಮಾಡಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾ ಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರ ಮೂರು ಮೊಳವಾಗಿತ್ತು.
- 2 ಇದಲ್ಲದೆ ಅವನು ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಿದನು; ಅದರ ಕೊಂಬುಗಳು ಜಾಲೀ ಮರದ್ದೇ ಆಗಿದ್ದವು; ಅವನು ಅವುಗಳನ್ನು ಹಿತ್ತಾಳೆಯಿಂದ ಹೊದಿಸಿದನು.
- 3 ಅನಂತರ ಅವನು ಬಲಿಪೀಠದ ಎಲ್ಲಾ ಸಾಮಾನುಗಳನ್ನು ಮಾಡಿ ದನು: ಕೊಡಗಳು, ಸಲಿಕೆಗಳು, ಬೋಗುಣಿಗಳು, ಮಾಂಸ ಸಿಕ್ಕಿಸುವ ಕೊಂಡಿಗಳು, ಅಗ್ಗಿಷ್ಟಿಗೆಗಳು; ಇವೆಲ್ಲ ವುಗಳನ್ನು ಅವನು ಹಿತ್ತಾಳೆಯಿಂದ ಮಾಡಿದನು.
- 4 ಬಲಿಪೀಠದ ಕೆಳಗಿನ ಆವರಣದಲ್ಲಿ ನೆಲದಿಂದ ಪೀಠದ ಮಧ್ಯದ ವರೆಗೆ ಬರುವಂತೆ ಜಾಲರೀ ಕೆಲಸದಿಂದ ಹಿತ್ತಾಳೆಯ ಬೆಂಕಿಗೂಡನ್ನು ಮಾಡಿದನು.
- 5 ಆ ಹಿತ್ತಾಳೆ ಯ ಬೆಂಕಿಯ ಗೂಡನ್ನು ಹೊರುವಾಗ ಕೋಲು ಸಿಕ್ಕಿಸುವದಕ್ಕೋಸ್ಕರ ಅದರ ನಾಲ್ಕು ತುದಿಗಳಲ್ಲಿ ನಾಲ್ಕು ಉಂಗುರಗಳನ್ನು ಎರಕಹೊಯ್ದನು.
- 6 ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳಿಗೆ ಹಿತ್ತಾ ಳೆಯ ಹೊದಿಕೆಯನ್ನು ಹೊದಿಸಿದನು.
- 7 ಬಲಿಪೀಠವನ್ನು ಹೊರುವದಕ್ಕೆ ಅದರ ಬದಿಯಲ್ಲಿ ಮಾಡಿದ ಉಂಗುರ ಗಳಲ್ಲಿ ಆ ಕೋಲುಗಳನ್ನು ಸಿಕ್ಕಿಸಿದನು; ಅವನು ಆ ಬಲಿಪೀಠವನ್ನು ಹಲಗೆಗಳಿಂದ ಪೊಳ್ಳಾಗಿ ಮಾಡಿದನು.
- 8 ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಸೇರಿಬರು ತ್ತಿದ್ದ ಸ್ತ್ರೀಯರ ಕನ್ನಡಿಗಳಿಂದ ಅವನು ಹಿತ್ತಾಳೆಯ ಗಂಗಾಳವನ್ನೂ ಅದರ ಅಡ್ಡಣಿಗೆಯನ್ನು ಮಾಡಿದನು.
- 9 ಅವನು ಅಂಗಳವನ್ನು ಮಾಡಿದನು: ಅಂಗಳದ ದಕ್ಷಿಣ ದಿಕ್ಕಿನ ಭಾಗದಲ್ಲಿದ್ದ ತೆರೆಗಳು ನಯವಾಗಿ ಹೊಸೆದ ನೂಲಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದವು. ಅವು ನೂರು ಮೊಳ ಉದ್ದವಾಗಿದ್ದವು.
- 10 ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದವು, ಅವುಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು; ಆ ಸ್ತಂಭಗಳಿಗೆ ಇದ್ದ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯಿಂದ ಮಾಡಲ್ಪ ಟ್ಟಿದ್ದವು.
- 11 ಉತ್ತರ ದಿಕ್ಕಿನ ತೆರೆಗಳು ನೂರು ಮೊಳ ಉದ್ದವಾಗಿದ್ದವು; ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆ ಗಳಿದ್ದವು. ಆ ಸ್ತಂಭಗಳ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯದಾಗಿದ್ದವು.
- 12 ಪಶ್ಚಿಮ ದಿಕ್ಕಿನ ತೆರೆಗಳು ಐವತ್ತು ಮೊಳ ಉದ್ದವಾಗಿದ್ದವು; ಅವುಗಳಿಗೆ ಹತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಹತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು. ಆ ಸ್ತಂಭಗಳ ಕೊಂಡಿಗಳೂ ಮತ್ತು ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು.
- 13 ಪೂರ್ವ ದಿಕ್ಕಿನ ಬದಿಗೆ ಐವತ್ತು ಮೊಳ.
- 14 ದ್ವಾರದ ಒಂದು ಬದಿಯ ತೆರೆಗಳು ಹದಿನೈದು ಮೊಳ ಉದ್ದ ವಾಗಿದ್ದವು; ಅವುಗಳಿಗೆ ಮೂರು ಸ್ತಂಭಗಳೂ ಆ ಸ್ತಂಭಗಳಿಗೆ ಮೂರು ಕಾಲುಕುಣಿಕೆಗಳೂ ಇದ್ದವು.
- 15 ಅಂಗಳದ ಇನ್ನೊಂದು ಬದಿಯ ದ್ವಾರದ ಎರಡು ಕಡೆಗಳಲ್ಲಿ ಹದಿನೈದು ಮೊಳ ಉದ್ದವಾದ ತೆರೆಗಳಿದ್ದವು; ಅವುಗಳಿಗೆ ಮೂರು ಸ್ತಂಭಗಳೂ ಆ ಸ್ತಂಭಗಳಿಗೆ ಮೂರು ಕಾಲುಕುಣಿಕೆಗಳೂ ಇದ್ದವು.
- 16 ಅಂಗಳದ ಸುತ್ತಲಿದ್ದ ಎಲ್ಲ ತೆರೆಗಳು ನಯವಾಗಿ ಹೊಸೆದ ನೂಲಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದವು.
- 17 ಸ್ತಂಭಗಳ ಕಾಲು ಕುಣಿಕೆಗಳು ಹಿತ್ತಾಳೆಯವುಗಳು; ಆ ಸ್ತಂಭಗಳ ಕೊಂಡಿಯೂ ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾ ಗಿದ್ದವು; ಕಂಬದ ಬೋದಿಗಳು ಬೆಳ್ಳಿಯಿಂದ ಹೊದಿಸ ಲ್ಪಟ್ಟಿದ್ದವು; ಅಂಗಳದ ಎಲ್ಲಾ ಸ್ತಂಭಗಳು ಬೆಳ್ಳಿಯ ಅಲಂಕಾರದ ಪಟ್ಟಿಗಳಿಂದ ಸುತ್ತುವರಿಯಲ್ಪಟ್ಟಿದ್ದವು.
- 18 ಅಂಗಳ ದ್ವಾರದ ತೆರೆಯು ನಯವಾಗಿ ಹೊಸೆದ ನೂಲಿನ ಬಟ್ಟೆಯಾಗಿತ್ತು; ಅದರ ಮೇಲೆ ನೀಲಿ ಧೂಮ್ರ ರಕ್ತವರ್ಣ ದಾರಗಳಿಂದ ಕಸೂತಿ ಕೆಲಸ ಮಾಡಲಾಗಿತ್ತು; ಅವು ಇಪ್ಪತ್ತು ಮೊಳ ಉದ್ದವಾಗಿದ್ದು ಅಗಲ ಎತ್ತರಗಳಲ್ಲಿ ಅಂಗಳದ ಉಳಿದ ತೆರೆಗಳಿಗೆ ಸರಿಯಾಗುವಂತೆ ಐದು ಮೊಳ ಇತ್ತು.
- 19 ಅವುಗಳಿಗೆ ನಾಲ್ಕು ಸ್ತಂಭಗಳು, ಆ ಸ್ತಂಭಗಳಿಗೆ ನಾಲ್ಕು ಹಿತ್ತಾಳೆಯ ಕಾಲು ಕುಣಿಕೆಗಳು ಇದ್ದವು; ಅವುಗಳ ಕೊಂಡಿಗಳು ಬೆಳ್ಳಿಯದಾಗಿದ್ದವು, ಅವುಗಳ ಬೋದಿಗಳ ಹೊದಿಕೆಯೂ ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು.
- 20 ಗುಡಾರದ ಅಂಗಳ ಸುತ್ತಲೂ ಇರುವ ಗೂಟಗಳು ಹಿತ್ತಾಳೆಯದಾಗಿದ್ದವು.
- 21 ಮೋಶೆಯ ಆಜ್ಞೆಯ ಮೇರೆಗೆ ಲೇವಿಯ ಸೇವೆಗಾಗಿ ಯಾಜಕನಾದ ಆರೋನನ ಮಗ ಈತಾಮಾರನ ಕೈಗೆ ಒಪ್ಪಿಸಿದ ಸಾಕ್ಷಿ ಗುಡಾರವನ್ನೊಳಗೊಂಡ ಗುಡಾ ರವನ್ನು ನಿರ್ಮಿಸಲು ಮಾಡಬೇಕಾದ ಒಟ್ಟು ಏರ್ಪಾಡುಗಳು ಇವೇ.
- 22 ಕರ್ತನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಯೂದಾ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲೇಲನು ಮಾಡಿದನು.
- 23 ಅವನ ಜೊತೆಯಲ್ಲಿ ದಾನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನೂ ಇದ್ದನು. ಇವನು ಕೆತ್ತನೆ ಕೆಲಸ ಮಾಡುವವನೂ ಕುಶಲ ಕೆಲಸಗಾರನೂ ನೀಲಿ ಧೂಮ್ರ ರಕ್ತವರ್ಣ ನಯವಾದ ನೂಲು ಇವುಗಳಿಂದ ಕಸೂತಿ ಕೆಲಸ ಮಾಡುವವನೂ ಆಗಿದ್ದನು.
- 24 ಪರಿಶುದ್ಧಾಲಯ ನಿಯಮದ ಮೇರೆಗೆ ಪರಿಶುದ್ಧ ಕೆಲಸಕ್ಕೆ ಉಪಯೋಗಿಸಿದ ಎಲ್ಲಾ ಬಂಗಾರವು ಕಾಣಿಕೆಯ ಬಂಗಾರವನ್ನೊಳಗೊಂಡು ಒಟ್ಟು ಇಪ್ಪ ತ್ತೊಂಭತ್ತು ತಲಾಂತು ಮತ್ತು ಏಳುನೂರ ಮೂವತ್ತು ಶೆಕೆಲುಗಳಾಗಿತ್ತು.
- 25 ಪರಿಶುದ್ಧಾಲಯ ನಿಯಮದ ಮೇರೆಗೆ ಸಭೆ ಯವರು ಎಣಿಸಿದ ಬೆಳ್ಳಿಯು ಒಂದು ನೂರು ತಲಾಂತು, ಒಂದು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲು ಗಳಾಗಿತ್ತು.
- 26 ಪರಿಶುದ್ಧಾಲಯ ನಿಯಮದ ಮೇರೆಗೆ ತಲಾ ಒಂದು ಬೆಕಾ, ಅಂದರೆ ಅರ್ಧ ಶೆಕೆಲಿನಂತೆ ಇಪ್ಪತ್ತು ಮೊದಲುಗೊಂಡು ಅದಕ್ಕೆ ಮೇಲಿನ ಪ್ರಾಯ ದವರನ್ನು ಲೆಕ್ಕ ಮಾಡಲಾಗಿ ಆರು ಲಕ್ಷ ಮೂರು ಸಾವಿರದ ಐದು ನೂರ ಐವತ್ತು ಗಂಡಸರ ಸಂಖ್ಯೆ ಇತ್ತು.
- 27 ಪರಿಶುದ್ಧಾಲಯದ ಕುಣಿಕೆಗಳಿಗೆ ಮತ್ತು ತೆರೆಗಳ ಕುಣಿಕೆಗಳಿಗೆ ಎರಕ ಹೊಯ್ಯಲು ಒಂದು ನೂರು ತಲಾಂತು ಬೆಳ್ಳಿ ಹಿಡಿಯಿತು; ಒಂದು ಕುಣಿಕೆಗೆ ಒಂದು ತಲಾಂತಿನಂತೆ ನೂರು ಕುಣಿಕೆಗಳಿಗೆ ನೂರು ತಲಾಂತು ಬೆಳ್ಳಿ ಆಯಿತು.
- 28 ಒಂದು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲಿನಿಂದ ಅವನು ಕಂಬಗಳಿಗೆ ಕೊಂಡಿಗಳನ್ನೂ ಕಂಬದ ಬೋದಿಗೆ ಮೇಲ್ಹೊದಿಕೆ ಯನ್ನೂ ಅಲಂಕಾರದ ಪಟ್ಟಿಗಳನ್ನೂ ಮಾಡಿದನು.
- 29 ಕಾಣಿಕೆಯಾಗಿ ಬಂದ ಹಿತ್ತಾಳೆಯು ಎಪ್ಪತ್ತು ತಲಾಂತು ಮತ್ತು ಎರಡು ಸಾವಿರದ ನಾಲ್ಕುನೂರು ಶೆಕೆಲುಗಳಾಗಿತ್ತು.
- 30 ಆ ಹಿತ್ತಾಳೆಯಿಂದ ಅವನು ಸಭಾಗುಡಾರದ ದ್ವಾರಗಳಿಗೆ ಕುಣಿಕೆಗಳನ್ನೂ ಬಲಿ ಪೀಠವನ್ನೂ ಅದಕ್ಕೆ ಜಾಲರಿಯನ್ನೂ ಬಲಿಪೀಠದ ಸಮಸ್ತ ಪ್ರಾತ್ರೆಗಳನ್ನೂ ಮಾಡಿದನು.
- 31 ಸುತ್ತಲಿನ ಅಂಗಳದ ಕುಣಿಕೆಗಳನ್ನೂ ಗುಡಾರದ ಗೂಟಗಳನ್ನೂ ಅಂಗಳದ ಸುತ್ತಲಿನ ಎಲ್ಲಾ ಗೂಟಗಳನ್ನೂ ಮಾಡಿದನು.
Exodus 38
- Details
- Parent Category: Old Testament
- Category: Exodus
ವಿಮೋಚನಕಾಂಡ ಅಧ್ಯಾಯ 38