- 1 ರಾಹೇಲಳು ತಾನು ಯಾಕೋಬನಿಗೆ ಇನ್ನು ಹೆರುವದಿಲ್ಲವೆಂದು ತಿಳಿದಾಗ ಆಕೆಯು ತನ್ನ ಸಹೋದರಿಯ ಮೇಲೆ ಹೊಟ್ಟೇಕಿಚ್ಚು ಪಟ್ಟು ಯಾಕೋಬನಿಗೆ--ನನಗೆ ಮಕ್ಕಳನ್ನು ಕೊಡು, ಇಲ್ಲದಿದ್ದರೆ ನಾನು ಸಾಯುತ್ತೇನೆ ಅಂದಳು.
- 2 ಅದಕ್ಕೆ ಯಾಕೋಬನು ರಾಹೇಲಳ ಮೇಲೆ ಕೋಪಿಸಿ ಕೊಂಡು--ನಿನಗೆ ಗರ್ಭ ಫಲವನ್ನು ಕೊಡದ ದೇವರ ಸ್ಥಾನದಲ್ಲಿ ನಾನಿದ್ದೇನೋ ಅಂದನು.
- 3 ಅದಕ್ಕೆ ಆಕೆಯು--ಇಗೋ, ನನ್ನ ದಾಸಿಯಾದ ಬಿಲ್ಹಳು ಇದ್ದಾಳೆ. ಅವಳ ಬಳಿಗೆ ಹೋಗು; ಅವಳು ನನ್ನ ಮೊಣಕಾಲಿನ ಮೇಲೆ ಹೆರುವಳು, ಅವಳಿಂದ ನನಗೆ ಮಕ್ಕಳಾಗುವರು ಅಂದಳು.
- 4 ಹೀಗೆ ಅವನಿಗೆ ತನ್ನ ದಾಸಿಯಾದ ಬಿಲ್ಹಳನ್ನು ಕೊಟ್ಟಳು. ಯಾಕೋಬನು ಅವಳ ಬಳಿಗೆ ಹೋದನು.
- 5 ಆಗ ಬಿಲ್ಹಳು ಗರ್ಭಿಣಿಯಾಗಿ ಯಾಕೋಬನಿಗೆ ಮಗನನ್ನು ಹೆತ್ತಳು.
- 6 ರಾಹೇಲಳು--ದೇವರು ನನಗೆ ನ್ಯಾಯತೀರಿಸಿ ನನ್ನ ಮೊರೆ ಕೇಳಿ ನನಗೆ ಮಗನನ್ನು ಕೊಟ್ಟಿದ್ದಾನೆ ಎಂದು ಹೇಳಿದಳು. ಆದದರಿಂದ ಆಕೆಯು ಅವನಿಗೆ ದಾನ್ ಎಂದು ಹೆಸರಿಟ್ಟಳು.
- 7 ರಾಹೇಲಳ ದಾಸಿಯಾದ ಬಿಲ್ಹಳು ತಿರಿಗಿ ಗರ್ಭಿಣಿ ಯಾಗಿ ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು.
- 8 ಆಗ ರಾಹೇಲಳು--ಅಧಿಕವಾದ ಹೋರಾಟ ಗಳಿಂದ ನನ್ನ ಸಹೋದರಿಯ ಸಂಗಡ ಹೋರಾಡಿ ಜಯಿಸಿದ್ದೇನೆ ಎಂದು ಹೇಳಿ ಅವನಿಗೆ ನಫ್ತಾಲಿ ಎಂದು ಹೆಸರಿಟ್ಟಳು.
- 9 ಲೇಯಳು ತಾನು ಹೆರುವದು ನಿಂತಿತೆಂದು ತಿಳಿದು ತನ್ನ ದಾಸಿಯಾದ ಜಿಲ್ಪಳನ್ನು ತಕ್ಕೊಂಡು ಯಾಕೋಬ ನಿಗೆ ಹೆಂಡತಿಯಾಗಿ ಕೊಟ್ಟಳು.
- 10 ಲೇಯಳ ದಾಸಿ ಯಾದ ಜಿಲ್ಪಳು ಯಾಕೋಬನಿಗೆ ಮಗನನ್ನು ಹೆತ್ತಳು.
- 11 ಆಗ ಲೇಯಳು--ಒಂದು ಸೈನ್ಯ ಬರುತ್ತದೆ ಎಂದು ಹೇಳಿ ಅವನಿಗೆ ಗಾದ್ ಎಂದು ಹೆಸರಿಟ್ಟಳು.
- 12 ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು.
- 13 ಆಗ ಲೇಯಳು--ನಾನು ಧನ್ಯಳಾದೆನು. ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯು ವರು ಎಂದು ಹೇಳಿ ಅವನಿಗೆ ಆಶೇರ್ ಎಂದು ಹೆಸರಿಟ್ಟಳು.
- 14 ರೂಬೇನನು ಗೋದಿ ಕೊಯ್ಯುವ ಕಾಲದಲ್ಲಿ ಹೋಗಿ ಹೊಲದಲ್ಲಿ ದುದಾಯಗಳನ್ನು ಕಂಡು ತಾಯಿಯಾದ ಲೇಯಳ ಬಳಿಗೆ ತಂದಾಗ ರಾಹೇಲಳು ಲೇಯಳಿಗೆ--ನಿನ್ನ ಮಗನ ದುದಾಯಗಳಲ್ಲಿ ಕೆಲವನ್ನು ನನಗೆ ಕೊಡು ಅಂದಳು.
- 15 ಅದಕ್ಕೆ ಆಕೆಯು--ನೀನು ನನ್ನ ಗಂಡನನ್ನು ತಕ್ಕೊಂಡದ್ದು ಅಲ್ಪಕಾರ್ಯವೋ? ನೀನು ಈಗ ನನ್ನ ಮಗನು ತಂದ ದುದಾಯಗಳನ್ನು ಸಹ ತಕ್ಕೊಳ್ಳುವಿಯೋ ಅಂದಾಗ ರಾಹೇಲಳು--ಆದದರಿಂದ ನಿನ್ನ ಮಗನು ತಂದ ದುದಾಯಗಳಿ ಗೋಸ್ಕರ ಯಾಕೋಬನು ಈ ರಾತ್ರಿ ನಿನ್ನ ಸಂಗಡ ಮಲಗಲಿ ಅಂದಳು.
- 16 ಯಾಕೋಬನು ಸಾಯಂಕಾಲ ದಲ್ಲಿ ಹೊಲದಿಂದ ಬಂದಾಗ ಲೇಯಳು ಅವನೆದುರಿಗೆ ಹೊರಟುಹೋಗಿ--ನೀನು ನನ್ನ ಬಳಿಗೆ ಬರಬೇಕು; ನನ್ನ ಮಗನ ದುದಾಯಗಳ ಬಾಡಿಗೆಯಿಂದ ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ ಅಂದಳು. ಆದದರಿಂದ ಅವನು ಆ ರಾತ್ರಿಯಲ್ಲಿ ಆಕೆಯ ಸಂಗಡ ಮಲಗಿದನು.
- 17 ಆಗ ದೇವರು ಲೇಯಳನ್ನು ಆಲೈಸಿದ್ದರಿಂದ ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಮಗನನ್ನು ಹೆತ್ತಳು.
- 18 ಆಗ ಲೇಯಳು--ನಾನು ನನ್ನ ಗಂಡನಿಗೆ ನನ್ನ ದಾಸಿಯನ್ನು ಕೊಟ್ಟದ್ದರಿಂದ ದೇವರು ನನಗೆ ಕೂಲಿಯನ್ನು ಕೊಟ್ಟಿದ್ದಾನೆ ಎಂದು ಹೇಳಿ ಅವನಿಗೆ ಇಸ್ಸಾಕಾರ ಎಂದು ಹೆಸರಿಟ್ಟಳು.
- 19 ಮತ್ತೊಂದು ಸಾರಿ ಲೇಯಳು ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಮಗನನ್ನು ಹೆತ್ತಳು;
- 20 ಲೇಯಳು--ದೇವರು ನನಗೆ ಒಳ್ಳೇ ಬಳುವಳಿಯನ್ನು ಕೊಟ್ಟಿದ್ದಾನೆ; ಈಗ ನಾನು ಅವನಿಗೆ ಆರು ಮಕ್ಕಳನ್ನು ಹೆತ್ತದ್ದರಿಂದ ನನ್ನ ಗಂಡನು ನನ್ನ ಸಂಗಡ ವಾಸಿಸುವನು ಎಂದು ಹೇಳಿ ಅವನಿಗೆ ಜೆಬುಲೂನ್ ಎಂದು ಹೆಸರಿಟ್ಟಳು.
- 21 ತರುವಾಯ ಆಕೆಯು ಒಬ್ಬ ಮಗಳನ್ನು ಹೆತ್ತು ಆಕೆಗೆ ದೀನಾ ಎಂದು ಹೆಸರಿಟ್ಟಳು.
- 22 ಆಗ ದೇವರು ರಾಹೇಲಳನ್ನು ಜ್ಞಾಪಕಮಾಡಿ ಕೊಂಡನು. ದೇವರು ಆಕೆಯನ್ನು ಆಲೈಸಿ ಆಕೆಯ ಗರ್ಭವನ್ನು ತೆರೆದನು.
- 23 ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು--ದೇವರು ನನ್ನ ನಿಂದೆಯನ್ನು ತೆಗೆದುಬಿಟ್ಟಿದ್ದಾನೆ ಅಂದಳು.
- 24 ಆಕೆಯು--ಕರ್ತನು ನನಗೆ ಮತ್ತೊಬ್ಬ ಮಗನನ್ನು ಕೂಡಿಸುವನೆಂದು ಹೇಳಿ ಅವನಿಗೆ ಯೋಸೇಫ ಎಂದು ಹೆಸರಿಟ್ಟಳು.
- 25 ರಾಹೇಲಳು ಯೋಸೇಫನನ್ನು ಹೆತ್ತಾಗ ಯಾಕೋಬನು ಲಾಬಾನನಿಗೆ--ನಾನು ನನ್ನ ಸ್ಥಳಕ್ಕೂ ಸ್ವದೇಶಕ್ಕೂ ಹೋಗುವ ಹಾಗೆ ನನ್ನನ್ನು ಕಳುಹಿಸಿ ಕೊಡು.
- 26 ನಾನು ಯಾರಿಗೊಸ್ಕರ ನಿನಗೆ ಸೇವೆ ಮಾಡಿದೆನೋ ಆ ನನ್ನ ಹೆಂಡತಿಯರನ್ನೂ ನನ್ನ ಮಕ್ಕಳನ್ನೂ ನನ್ನೊಂದಿಗೆ ಕಳುಹಿಸಿಕೊಡು. ನಾನು ನಿನಗೆ ಮಾಡಿದ ಸೇವೆಯನ್ನು ನೀನು ಬಲ್ಲವನಾಗಿದ್ದೀ ಅಂದನು.
- 27 ಲಾಬಾನನು ಅವನಿಗೆ--ನಾನು ನಿನ್ನ ದೃಷ್ಟಿಯಲ್ಲಿ ದಯೆಹೊಂದಿದವನಾಗಿದ್ದರೆ ನನ್ನ ಬಳಿ ಯಲ್ಲಿಯೇ ಇರು. ಕರ್ತನು ನಿನಗೋಸ್ಕರ ನನ್ನನ್ನು ಆಶೀರ್ವದಿಸಿದ್ದಾನೆಂದು ನಾನು ಅನುಭವದಿಂದ ಕಲಿತುಕೊಂಡಿದ್ದೇನೆ.
- 28 ನೀನು ನಿನ್ನ ಸಂಬಳವನ್ನು ನಿರ್ಣಯಿಸು; ಆಗ ಅದನ್ನು ನಾನು ನಿನಗೆ ಕೊಡುವೆನು ಅಂದನು.
- 29 ಅದಕ್ಕೆ ಯಾಕೋಬನು ಅವನಿಗೆ--ನಾನು ನಿನಗೆ ಮಾಡಿದ ಸೇವೆಯನ್ನೂ ನಿನ್ನ ಮಂದೆಯು ನನ್ನ ಬಳಿಯಲ್ಲಿ ಹೇಗೆ ಇತ್ತೆಂಬದ್ದನ್ನೂ ನೀನು ಬಲ್ಲೆ.
- 30 ನಾನು ಬರುವದಿಕ್ಕಿಂತ ಮುಂಚೆ ನಿನಗಿದ್ದದ್ದು ಸ್ವಲ್ಪವೇ; ಈಗ ಅದು ಬಹಳವಾಗಿ ಹೆಚ್ಚಿದೆ. ನಾನು ಬಂದಂದಿನಿಂದ ಕರ್ತನು ನಿನ್ನನ್ನು ಆಶೀರ್ವದಿಸಿದ್ದಾನೆ. ಈಗ ನಾನು ನನ್ನ ಸ್ವಂತ ಮನೆಗೋಸ್ಕರ ಯಾವಾಗ ಸಂಪಾದಿಸಲಿ ಅಂದನು.
- 31 ಅದಕ್ಕೆ ಲಾಬಾನನು--ನಿನಗೆ ನಾನು ಏನು ಕೊಡಲಿ ಅಂದಾಗ ಯಾಕೋಬನು--ಏನೂ ಕೊಡ ಬೇಡ, ಇದು ಮಾತ್ರ ನೀನು ನನಗಾಗಿ ಮಾಡಿದರೆ ನಾನು ತಿರಿಗಿ ನಿನ್ನ ಮಂದೆಯನ್ನು ಮೇಯಿಸಿ ಕಾಯುವೆನು;
- 32 ಈ ಹೊತ್ತು ನಾನು ನಿನ್ನ ಎಲ್ಲಾ ಮಂದೆಯ ಮಧ್ಯದಲ್ಲಿ ಹಾದುಹೋಗುವೆನು; ಅದ ರಲ್ಲಿ ಚುಕ್ಕೆ ಮಚ್ಚೆ ಉಳ್ಳವುಗಳನ್ನೆಲ್ಲಾ ಕುರಿಗಳಲ್ಲಿ ಕಂದು ಬಣ್ಣದವುಗಳನ್ನೆಲ್ಲಾ ಮೇಕೆಗಳಲ್ಲಿ ಚುಕ್ಕೆ ಮಚ್ಚೆ ಉಳ್ಳವುಗಳನ್ನೆಲ್ಲಾ ಬೇರೆ ಮಾಡುವೆನು. ಅವೇ ನನ್ನ ಕೂಲಿಯಾಗಿರಲಿ.
- 33 ಹೀಗಿದ್ದರೆ ಬರುವ ಕಾಲದಲ್ಲಿ ನನ್ನ ಸಂಬಳಕ್ಕಾಗಿ ನಾನು ನಿನ್ನ ಮುಂದೆ ಬಂದಾಗ ನನ್ನ ನೀತಿಯು ನನಗಾಗಿ ಉತ್ತರ ಕೊಡುವದು. ಮೇಕೆಗಳಲ್ಲಿ ಚುಕ್ಕೆ ಮಚ್ಚೆ ಕುರಿಗಳಲ್ಲಿ ಕಂದು ಬಣ್ಣವಿಲ್ಲದವುಗಳೂ ನನ್ನ ಬಳಿಯಲ್ಲಿದ್ದರೆ ಅವು ಕದ್ದವುಗಳಾಗಿ ಎಣಿಕೆಯಾಗಿರಲಿ ಅಂದನು.
- 34 ಲಾಬಾನನು--ಇಗೋ, ನೀನು ಹೇಳಿದಂತೆಯೇ ಆಗಲಿ ಅಂದನು.
- 35 ಅದೇ ದಿನದಲ್ಲಿ ಲಾಬಾನನು ಹೋತಗಳಲ್ಲಿ ರೇಖೆ ಮಚ್ಚೆ ಇದ್ದವುಗಳನ್ನೂ ಮೇಕೆ ಗಳಲ್ಲಿ ಚುಕ್ಕೆ ಮಚ್ಚೆ ಇದ್ದವುಗಳನ್ನೂ ಮತ್ತು ಸ್ವಲ್ಪ ಬಿಳುಪಾದ ಬಣ್ಣವಿದ್ದ ಎಲ್ಲವುಗಳನ್ನೂ ಕುರಿ ಗಳಲ್ಲಿ ಕಂದುಬಣ್ಣವಿದ್ದವುಗಳನ್ನೂ ವಿಂಗಡಿಸಿ ತನ್ನ ಕುಮಾರರ ಕೈಗೆ ಕೊಟ್ಟನು.
- 36 ತನಗೂ ಯಾಕೋಬ ನಿಗೂ ಮಧ್ಯದಲ್ಲಿ ಮೂರು ದಿನದ ಪ್ರಯಾಣದಷ್ಟು ಅಂತರವನ್ನು ಬಿಟ್ಟನು. ಯಾಕೋಬನು ಲಾಬಾನನ ಮಿಕ್ಕ ಮಂದೆಗಳನ್ನು ಮೇಯಿಸಿದನು.
- 37 ಹೀಗಿರುವಲ್ಲಿ ಯಾಕೋಬನು ಲಿಬ್ನೆ, ಲೂಜು, ಅರ್ಮೋನ್ ಎಂಬ ಮರಗಳ ಹಸಿಕೋಲುಗಳನ್ನು ತೆಗೆದುಕೊಂಡು ಪಟ್ಟೆಪಟ್ಟೆಯಾಗಿ ತೊಗಟೆಯನ್ನು ಸುಲಿದು ಅವುಗಳ ಲ್ಲಿರುವ ಬಿಳೀ ಬಣ್ಣವು ಕಾಣಿಸುವಂತೆ ಮಾಡಿ
- 38 ಮಂದೆಗಳು ನೀರು ಕುಡಿಯುವದಕ್ಕೆ ಬಂದ ಸಮಯವೇ ಅವುಗಳಿಗೆ ಸಂಗಮಕಾಲವಾಗಿತ್ತು. ಅವು ಕೋಲುಗಳನ್ನು ನೋಡುತ್ತಾ ಸಂಗಮಮಾಡಿ ದ್ದರಿಂದ
- 39 ಚುಕ್ಕೆ ಮಚ್ಚೆ ರೇಖೆಗಳುಳ್ಳ ಮರಿಗಳನ್ನು ಈಯುತ್ತಿದ್ದವು.
- 40 ಯಾಕೋಬನು ಕುರಿಗಳನ್ನು ಬೇರೆ ಮಾಡಿ ಲಾಬಾನನ ಮಂದೆಯಲ್ಲಿರುವ ರೇಖೆಗಳು ಳ್ಳವುಗಳೆದುರಾಗಿಯೂ ಕಂದು ಬಣ್ಣ ಉಳ್ಳವು ಗಳಿಗೆದುರಾಗಿಯೂ ಕುರಿಗಳನ್ನು ಇರಿಸಿದನು. ಅವನು ತನ್ನ ಮಂದೆಯನ್ನು ಲಾಬಾನನ ಮಂದೆಗಳೊಂದಿಗೆ ಸೇರಿಸದೆ ಅವುಗಳನ್ನು ಬೇರೆ ಇಟ್ಟುಕೊಂಡನು.
- 41 ಇದಲ್ಲದೆ ಬಲಿಷ್ಠವಾದ ಆಡು ಕುರಿಗಳು ಸಂಗಮ ಮಾಡುವಾಗ ಆ ಕೋಲುಗಳನ್ನು ನೋಡುತ್ತಾ ಸಂಗಮಮಾಡಲಿ ಎಂದು ಯಾಕೋಬನು ದೋಣಿ ಗಳಲ್ಲಿ ಕೋಲುಗಳನ್ನಿಟ್ಟನು.
- 42 ಆದರೆ ಕುರಿಗಳು ಬಲಹೀನವಾಗಿದ್ದಾಗ ಅವನು ಕೋಲುಗಳನ್ನು ದೋಣಿಗಳಲ್ಲಿ ಇಡಲಿಲ್ಲ. ಹೀಗಾಗಿ ಬಲಹೀನ ವಾದವುಗಳು ಲಾಬಾನನಿಗೂ ಬಲವಾದವುಗಳು ಯಾಕೋಬನಿಗೂ ಆದವು.
- 43 ಈ ಪ್ರಕಾರ ಯಾಕೋಬನು ಅತ್ಯಧಿಕವಾಗಿ ಅಭಿವೃದ್ಧಿಯಾದದ್ದರಿಂದ ಬಹು ಕುರಿಗಳೂ ದಾಸದಾಸಿ ಯರೂ ಒಂಟೆಗಳೂ ಕತ್ತೆಗಳೂ ಅವನಿಗೆ ದೊರೆತವು.
Genesis 30
- Details
- Parent Category: Old Testament
- Category: Genesis
ಆದಿಕಾಂಡ ಅಧ್ಯಾಯ 30