- 1 ಕರ್ತನಿಂದ ಯೆರೆವಿಾಯನಿಗೆ ಉಂಟಾದ ವಾಕ್ಯವೇನಂದರೆ--
- 2 ಎದ್ದು ಕುಂಬಾರನ ಮನೆಗೆ ಇಳಿದು ಹೋಗು; ಅಲ್ಲಿ ನಿನಗೆ ನನ್ನ ವಾಕ್ಯಗಳನ್ನು ಕೇಳಮಾಡುವೆನು ಎಂಬದೇ.
- 3 ಆಗ ನಾನು ಕುಂಬಾರನ ಮನೆಗೆ ಇಳಿದುಹೋದೆನು; ಇಗೋ, ಅವನು ಚಕ್ರದ ಮೇಲೆ ಕೆಲಸಮಾಡುತ್ತಿದ್ದನು.
- 4 ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟುಹೋಯಿತು; ಆಗ ಕುಂಬಾರನಿಗೆ ಒಳ್ಳೇದೆಂದು ತೋರುವ ಪ್ರಕಾರ ಅದನ್ನು ಮತ್ತೊಂದು ಪಾತ್ರೆ ಯನ್ನಾಗಿ ಮಾಡಿದನು.
- 5 ಆಗ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
- 6 ಓ ಇಸ್ರಾಯೇಲಿನ ಮನೆತನದ ವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡ ಕೂಡದೋ ಎಂದು ಕರ್ತನು ಅನ್ನುತ್ತಾನೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ.
- 7 ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿ ಮತ್ತು ಒಂದು ರಾಜ್ಯದ ವಿಷಯವಾಗಿ ಅದನ್ನು ಕೀಳುವದಕ್ಕೂ ಕೆಡವುವ ದಕ್ಕೂ ನಾಶಮಾಡುವದಕ್ಕೂ ಮಾತಾಡುತ್ತೇನೋ
- 8 ಆ ಜನಾಂಗಕ್ಕೆ ವಿರೋಧವಾಗಿ ನಾನು ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಪಶ್ಚಾ ತ್ತಾಪ ಪಡುವೆನು.
- 9 ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವದಕ್ಕೂ ನೆಡುವದಕ್ಕೂ ಮಾತನಾಡುತ್ತೇನೋ
- 10 ಅದು ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ ನಾನು ಅದಕ್ಕೆ ಮೇಲನ್ನು ಮಾಡುತ್ತೇನೆಂದು ಹೇಳಿದ ಒಳ್ಳೇದನ್ನು ಕುರಿತು ಪಶ್ಚಾತ್ತಾಪಪಡುವೆನು.
- 11 ಹೀಗಿರುವದರಿಂದ ಈಗ ಯೆಹೂದದ ಮನುಷ್ಯ ರಿಗೂ ಯೆರೂಸಲೇಮಿನ ನಿವಾಸಿಗಳಿಗೂ ನೀನು ಹೇಳಬೇಕಾದದ್ದೇನಂದರೆ, ಕರ್ತನು ಹೀಗೆ ಹೇಳುತ್ತಾನೆ --ಇಗೋ, ನಾನು ನಿಮಗೆ ವಿರೋಧವಾಗಿ ಕೆಟ್ಟದ್ದನ್ನು ಕಲ್ಪಿಸುತ್ತಾ ಇದ್ದೇನೆ; ನಿಮಗೆ ವಿರೋಧವಾಗಿ ಉಪಾಯವನ್ನು ಆಲೋಚಿಸುತ್ತಾ ಇದ್ದೇನೆ; ನಿಮ್ಮ ನಿಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ಹಿಂತಿರುಗಿರಿ, ನಿಮ್ಮ ಮಾರ್ಗಗಳನ್ನೂ ಕ್ರಿಯೆಗಳನ್ನೂ ಒಳ್ಳೇದಾಗ ಮಾಡಿರಿ ಎಂಬದು.
- 12 ಆದರೆ ಅವರು--ನಿರೀಕ್ಷೆಯಿಲ್ಲ; ಸ್ವಂತ ಆಲೋಚನೆಗಳ ಪ್ರಕಾರ ನಡೆದುಕೊಳ್ಳುವೆವು; ನಮ್ಮ ನಮ್ಮ ಕೆಟ್ಟ ಹೃದಯಗಳ ಕಲ್ಪನೆಯ ಪ್ರಕಾರ ಮಾಡುವೆವು ಅಂದರು.
- 13 ಆದದರಿಂದ ಕರ್ತನು ಹೇಳುವದೇ ನಂದರೆ--ಅನ್ಯಜನಾಂಗಗಳಲ್ಲಿ ವಿಚಾರಿಸಿರಿ; ಇಂಥವು ಗಳನ್ನು ಯಾರು ಕೇಳಿದ್ದಾರೆ? ಇಸ್ರಾಯೇಲೆಂಬ ಕನ್ಯೆಯು ಮಹಾಭಯಂಕರವಾದದ್ದನ್ನು ಮಾಡಿದ್ದಾಳೆ.
- 14 ಒಬ್ಬನು ಹೊಲದ ಬಂಡೆಯಿಂದ ಬರುವ ಲೆಬನೋನಿನ ಹಿಮ ವನ್ನು ಬಿಡುವನೋ? ಇಲ್ಲದೆ ಇನ್ನೊಂದು ಸ್ಥಳದಿಂದ ಬರುವ ತಂಪಾದ ಪ್ರವಾಹದ ನೀರು ತಳ್ಳಲ್ಪಡು ವದೋ?
- 15 ನನ್ನ ಜನರು ನನ್ನನ್ನು ಮರೆತುಬಿಟ್ಟಿದ್ದಾರೆ; ವ್ಯರ್ಥವಾದದ್ದಕ್ಕೆ ಧೂಪವನ್ನರ್ಪಿಸಿದ್ದಾರೆ; ಪುರಾತನ ಪದ್ಧತಿಯಾದ ಅವರ ಮಾರ್ಗಗಳಲ್ಲಿ ಅವರನ್ನು ಎಡವು ವಂತೆ ಮಾಡಿ ಮಾರ್ಗವಲ್ಲದ ಸೀಳು ದಾರಿಗಳಲ್ಲಿ ಅವರನ್ನು ನಡೆಯಮಾಡುತ್ತಾರೆ.
- 16 ಹೀಗೆ ತಮ್ಮ ದೇಶವನ್ನು ಹಾಳಾಗಿಯೂ ನಿತ್ಯವಾದ ಹಾಸ್ಯಾಸ್ಪದವಾ ಗಿಯೂ ಮಾಡಿದ್ದಾರೆ. ಅದನ್ನು ಹಾದು ಹೋಗುವವ ರೆಲ್ಲರು ವಿಸ್ಮಿತರಾಗಿ ತಲೆ ಅಲ್ಲಾಡಿಸುವರು.
- 17 ಮೂಡಣ ಗಾಳಿಯಿಂದಾದ ಹಾಗೆ ಅವರನ್ನು ಶತ್ರುವಿನ ಮುಂದೆ ಚದುರಿಸುವೆನು; ಅವರ ಆಪತ್ತಿನ ದಿನದಲ್ಲಿ ಅವರಿಗೆ ಮುಖವನ್ನಲ್ಲ, ಬೆನ್ನನ್ನು ತೋರಿಸುವೆನು.
- 18 ಆಗ ಅವರು--ಬನ್ನಿರಿ, ಯೆರೆವಿಾಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ; ಯಾಜಕ ನಿಂದ ನ್ಯಾಯಪ್ರಮಾಣವೂ ಜ್ಞಾನಿಯಿಂದ ಆಲೋಚ ನೆಯೂ ಪ್ರವಾದಿಯಿಂದ ವಾಕ್ಯವೂ ತಪ್ಪುವುದಿಲ್ಲ ಬನ್ನಿರಿ, ನಾಲಿಗೆಯಿಂದ ಅವನನ್ನು ಹೊಡೆಯೋಣ, ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ ಎಂದು ಅವರು ಹೇಳಿದರು.
- 19 ಓ ಕರ್ತನೇ, ನನ್ನನ್ನು ಆಲೈಸು; ನನ್ನ ಸಂಗಡ ವ್ಯಾಜ್ಯವಾಡುವವರ ಸ್ವರವನ್ನು ಕೇಳು.
- 20 ಒಳ್ಳೇದಕ್ಕೆ ಬದಲಾಗಿ ಕೆಟ್ಟದ್ದನ್ನು ಸಲ್ಲಿಸಬಹುದೇ? ಅವರು ನನ್ನ ಪ್ರಾಣಕ್ಕೆ ಕುಣಿಯನ್ನು ಅಗೆದಿದ್ದಾರೆ; ಅವರಿಗೋಸ್ಕರ ಒಳ್ಳೆಯದನ್ನು ಮಾತಾಡುವದಕ್ಕೂ ನಿನ್ನ ಉಗ್ರವನ್ನು ಅವರಿಂದ ತಿರುಗಿಸುವದಕ್ಕೂ ನಾನು ನಿನ್ನ ಮುಂದೆ ನಿಂತದ್ದನ್ನು ಜ್ಞಾಪಕಮಾಡಿಕೋ.
- 21 ಆದದರಿಂದ ಅವರ ಮಕ್ಕಳನ್ನು ಕ್ಷಾಮಕ್ಕೆ ಕೊಡು; ಕತ್ತಿಯ ಬಲದಿಂದ ಅವರ ರಕ್ತವನ್ನು ಸುರಿದುಬಿಡು; ಅವರ ಹೆಂಡತಿಯರು ಮಕ್ಕಳಿಲ್ಲದೆ ವಿಧವೆಯರಾಗಲಿ; ಅವರ ಗಂಡಸರು ಕೊಲ್ಲಲ್ಪಟ್ಟು ಸಾಯಲಿ; ಅವರ ಯೌವನಸ್ಥರು ಯುದ್ಧ ದಲ್ಲಿ ಕತ್ತಿಯಿಂದ ವಧಿಸಲ್ಪಡಲಿ.
- 22 ನೀನು ಅಕಸ್ಮಾತ್ತಾಗಿ ಅವರ ಮೇಲೆ ಸೈನ್ಯವನ್ನು ತರಿಸುವಾಗ ಕೂಗು ಅವರ ಮನೆಗಳೊಳಗಿಂದ ಕೇಳಬರಲಿ; ನನ್ನನ್ನು ಹಿಡಿಯು ವದಕ್ಕೆ ಕುಣಿ ಅಗೆದಿದ್ದಾರೆ; ನನ್ನ ಕಾಲುಗಳಿಗೆ ಉರ್ಲು ಗಳನ್ನು ಒಡ್ಡಿದ್ದಾರೆ.
- 23 ಆದಾಗ್ಯೂ ಕರ್ತನೇ, ಅವರು ನನ್ನನ್ನು ಸಾಯಿಸುವದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀನು ಬಲ್ಲೆ; ಅವರ ಅಕ್ರಮವನ್ನು ಮನ್ನಿಸಬೇಡ; ಪಾಪವನ್ನು ನಿನ್ನ ಸನ್ನಿಧಿ ಯೊಳಗಿಂದ ಅಳಿಸಿಬಿಡಬೇಡ; ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪದ ಕಾಲದಲ್ಲಿ ಅವರಿಗೆ ಹಾಗೆ ಮಾಡು.
Jeremiah 18
- Details
- Parent Category: Old Testament
- Category: Jeremiah
ಯೆರೆಮಿಯ ಅಧ್ಯಾಯ 18