wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಯೆರೆಮಿಯ ಅಧ್ಯಾಯ 19
  • 1 ಕರ್ತನು ಹೀಗೆ ಹೇಳುತ್ತಾನೆ--ಹೋಗಿ, ಕುಂಬಾರನ ಮಣ್ಣಿನ ಕೂಜೆಯನ್ನು ತಕ್ಕೊಂಡು, ಜನರ ಹಿರಿಯರಿಂದಲೂ ಯಾಜಕರ ಹಿರಿಯರಿಂದಲೂ ಕೆಲವರನ್ನು ಕರಕೊಂಡು
  • 2 ಮೂಡಣ ಬಾಗಿಲಿನ ಪ್ರವೇಶದ ಬಳಿಯಲ್ಲಿ ಹಿನ್ನೋಮನ ಮಗನ ತಗ್ಗಿಗೆ ಹೋಗಿ, ನಾನು ನಿನಗೆ ಹೇಳುವ ಮಾತುಗಳನ್ನು ಅಲ್ಲಿ ಸಾರಿ ಹೇಳು.
  • 3 ಓ ಯೆಹೂದದ ಅರಸರೇ, ಯೆರೂಸಲೇಮಿನ ನಿವಾಸಿಗಳೇ, ಕರ್ತನ ವಾಕ್ಯವನ್ನು ಕೇಳಿರಿ. ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನು ಹೀಗನ್ನುತ್ತಾನೆ--ಇಗೋ, ನಾನು ಈ ಸ್ಥಳದ ಮೇಲೆ ಕೇಡನ್ನು ಬರಮಾಡುತ್ತೇನೆ; ಅದನ್ನು ಕೇಳುವವ ರೆಲ್ಲರ ಕಿವಿಗಳು ಗುಂಯ್‌ಗುಟ್ಟುವವು.
  • 4 ಅವರು ನನ್ನನ್ನು ಬಿಟ್ಟು ಈ ಸ್ಥಳವನ್ನು ಪರಸ್ಥಳ ಮಾಡಿ, ಅವರೂ ಅವರ ತಂದೆಗಳೂ ಯೆಹೂದದ ಅರಸರೂ ಅರಿಯದ ಬೇರೆ ದೇವರುಗಳಿಗೆ ಅಲ್ಲಿ ಧೂಪಸುಟ್ಟು ಈ ಸ್ಥಳವನ್ನು ಅಪರಾಧವಿಲ್ಲದವರ ರಕ್ತ ದಿಂದ ತುಂಬಿಸಿ
  • 5 ತಮ್ಮ ಮಕ್ಕಳನ್ನು ಬಾಳನಿಗೆ ದಹನ ಬಲಿಗಳಾಗಿ ಬೆಂಕಿಯಲ್ಲಿ ಸುಡುವದಕ್ಕೆ ಬಾಳನ ಉನ್ನತ ಸ್ಥಳಗಳನ್ನು ಕಟ್ಟಿದ್ದಾರೆ. ಇಂಥದ್ದನ್ನು ನಾನು ಆಜ್ಞಾ ಪಿಸಲಿಲ್ಲ, ನಾನು ಹೇಳಲಿಲ್ಲ, ನನ್ನ ಮನಸ್ಸಿಗೆ ಬರಲಿಲ್ಲ.
  • 6 ಹೀಗಿರುವದರಿಂದ ಕರ್ತನು ಹೇಳುವದೇನಂದರೆ --ಇಗೋ, ದಿನಗಳು ಬರುವವು; ಆಗ ಈ ಸ್ಥಳವು ಇನ್ನು ತೋಫೆತೆಂದು, ಹಿನ್ನೋಮನ ಮಗನ ತಗ್ಗೆಂದು ಅಲ್ಲ, ಕೊಲೆಯ ತಗ್ಗೆಂದು ಕರೆಯಲ್ಪಡುವದು.
  • 7 ನಾನು ಈ ಸ್ಥಳದಲ್ಲಿ ಯೆಹೂದದ, ಯೆರೂಸಲೇಮಿನ ಆಲೋಚನೆಯನ್ನು ಶೂನ್ಯ ಮಾಡುವೆನು; ಅವರ ಶತ್ರುಗಳ ಮುಂದೆಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಿಂದಲೂ ಅವರನ್ನು ಕತ್ತಿಯಿಂದ ಬೀಳು ವಂತೆ ಮಾಡುವೆನು; ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು.
  • 8 ಈ ಪಟ್ಟಣಗಳನ್ನು ಹಾಳಾಗಿಯೂ ತಿರಸ್ಕರಿಸಲ್ಪಡುವಂತೆಯೂ ಮಾಡುವೆನು; ಅದನ್ನು ಹಾದುಹೋಗುವವರೆಲ್ಲರು ಅದರ ಎಲ್ಲಾ ಬಾಧೆಗಳ ನಿಮಿತ್ತ ವಿಸ್ಮಯಹೊಂದಿ ಸಿಳ್ಳು ಹಾಕುವರು.
  • 9 ಅವರು ತಮ್ಮ ಕುಮಾರರ ಕುಮಾರ್ತೆಯರ ಮಾಂಸವನ್ನೂ ತಿನ್ನುವಂತೆ ಮಾಡುವೆನು; ಮುತ್ತಿಗೆಯಲ್ಲಿ ಸಹ ಅವರ ಶತ್ರುಗಳೂ ಅವರ ಪ್ರಾಣವನ್ನು ಹುಡುಕುವವರೂ ಅವರಿಗೆ ಮಾಡುವ ಇಕ್ಕಟ್ಟಿನಲ್ಲಿಯೂ ಅವರು ತಮ್ಮ ತಮ್ಮ ಸ್ನೇಹಿತರ ಮಾಂಸವನ್ನು ತಿನ್ನುವರು.
  • 10 ಆಗ ನೀನು ನಿನ್ನ ಸಂಗಡ ಬಂದ ಮನುಷ್ಯರ ಮುಂದೆ ಆ ಕೂಜೆಯನ್ನು ಒಡೆದು, ಅವರಿಗೆ ಹೇಳಬೇಕಾದದ್ದೇ ನಂದರೆ,
  • 11 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ಯಾವ ಪ್ರಕಾರ ಒಬ್ಬನು ಕುಂಬಾರನ ಪಾತ್ರೆಯನ್ನು ಅದು ತಿರಿಗಿ ಒಂದುಗೂಡದ ಹಾಗೆ ಒಡೆಯುತ್ತಾನೋ ಅದೇ ಪ್ರಕಾರ ನಾನು ಈ ಜನವನ್ನೂ ಈ ಪಟ್ಟಣ ವನ್ನೂ ಒಡೆದು ಬಿಡುವೆನು; ಆಗ ಹೂಣಿಡುವದಕ್ಕೆ ಸ್ಥಳವಿಲ್ಲದೆ ತೋಫೆತಿನಲ್ಲಿ ಅವರು ಹೂಣಿಡುವರು.
  • 12 ಹೀಗೆ ಈ ಸ್ಥಳಕ್ಕೂ ಅದರ ನಿವಾಸಿಗಳಿಗೂ ಮಾಡು ವೆನೆಂದು ಕರ್ತನು ಹೇಳುತ್ತಾನೆ; ಈ ಪಟ್ಟಣವನ್ನು ತೋಫೆತಿನ ಹಾಗೆಯೇ ಮಾಡುವೆನು.
  • 13 ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ಸೈನ್ಯಕ್ಕೆಲ್ಲಾ ಧೂಪಸುಟ್ಟು ಬೇರೆ ದೇವರುಗಳಿಗೆ ಪಾನದ ಅರ್ಪಣೆ ಗಳನ್ನು ಹೊಯ್ದಿದ್ದಾರೋ ಆ ಎಲ್ಲಾ ಮನೆಗಳ ನಿಮಿತ್ತ ವಾಗಿ ಯೆರೂಸಲೇಮಿನ ಮನೆಗಳೂ ಯೆಹೂದದ ಅರಸರ ಮನೆಗಳೂ ತೋಫೆತಿನ ಸ್ಥಳದ ಹಾಗೆ ಅಶುದ್ಧವಾಗುವವು.
  • 14 ಆಗ ಕರ್ತನು ಯೆರೆವಿಾಯನನ್ನು ಪ್ರವಾದಿಸು ವದಕ್ಕೆ ಕಳುಹಿಸಿದ ತೋಫೆತಿನಿಂದ ಬಂದು ಕರ್ತನ ಆಲಯದ ಅಂಗಳದಲ್ಲಿ ನಿಂತುಕೊಂಡು ಜನರಿಗೆಲ್ಲಾ ಹೇಳಿದ್ದೇನಂದರೆ--
  • 15 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಪಟ್ಟಣದ ಮೇಲೆಯೂ ಅದರ ಎಲ್ಲಾ ಊರುಗಳ ಮೇಲೆಯೂ ನಾನು ಅದಕ್ಕೆ ವಿರೋಧವಾಗಿ ಹೇಳಿದ ಕೇಡನ್ನೆಲ್ಲಾ ಬರ ಮಾಡುತ್ತೇನೆ; ಅವರು ನನ್ನ ಮಾತುಗಳನ್ನು ಕೇಳದ ಹಾಗೆ ತಮ್ಮ ಕುತ್ತಿಗೆಗಳನ್ನು ಕಠಿಣ ಮಾಡಿಕೊಂಡಿದ್ದಾರೆ.