- 1 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮೊದಲನೇ ವರುಷವಾಗಿದ್ದ ಯೆಹೂ ದದ ಅರಸನಾದ ಯೋಷೀಯನ ಮಗನಾದ ಯೆಹೋ ಯಾಕೀಮನ ನಾಲ್ಕನೇ ವರುಷದಲ್ಲಿ ಯೆಹೂದದ ಸಮಸ್ತ ಜನರ ವಿಷಯ ಯೆರೆವಿಾಯನಿಗೆ ಉಂಟಾದ ವಾಕ್ಯವು.
- 2 ಪ್ರವಾದಿಯಾದ ಯೆರೆವಿಾಯನು ಯೆಹೂ ದದ ಸಮಸ್ತ ಜನರಿಗೂ ಯೆರೂಸಲೇಮಿನ ಎಲ್ಲಾ ನಿವಾಸಿಗಳಿಗೂ ತಿಳಿಸಿದ್ದು ಏನಂದರೆ--
- 3 ಯೆಹೂದದ ಅರಸನಾದ ಅಮ್ಮೋನನ ಮಗನಾದ ಯೋಷೀಯನ ಹದಿಮೂರನೇ ವರುಷ ಮೊದಲ್ಗೊಂಡು ಇಂದಿನ ವರೆಗೂ ಈ ಇಪ್ಪತ್ತು ಮೂರು ವರುಷ ಕರ್ತನ ವಾಕ್ಯವು ನನಗೆ ಉಂಟಾಗಿ ನಾನು ಅದನ್ನು ನಿಮಗೆ ಹೇಳಿದ್ದೇನೆ, ಬೆಳಿಗ್ಗೆ ಎದ್ದು ಹೇಳಿದ್ದೇನೆ; ಆದರೆ ನೀವು ಕೇಳಲಿಲ್ಲ.
- 4 ಇದಲ್ಲದೆ ಕರ್ತನು ತನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ಕಳುಹಿಸಿದ್ದಾನೆ, ಬೆಳಿಗ್ಗೆ ಎದ್ದು ಕಳುಹಿಸಿದ್ದಾನೆ; ಆದರೆ ನೀವು ಕೇಳಲಿಲ್ಲ, ಕೇಳು ವದಕ್ಕೆ ನಿಮ್ಮ ಕಿವಿಗೊಡಲಿಲ್ಲ.
- 5 ಅವರು ಹೇಳಿದ್ದೇ ನಂದರೆ--ನಿಮ್ಮ ನಿಮ್ಮ ಕೆಟ್ಟ ಮಾರ್ಗವನ್ನು ನಿಮ್ಮ ಕೆಟ್ಟ ದೃಶ್ಯಗಳ ಕೆಟ್ಟತನವನ್ನೂ ಬಿಟ್ಟು ಮತ್ತೆ ತಿರುಗಿಕೊಳ್ಳಿರಿ. ಆಗ ಕರ್ತನು ನಿಮಗೂ ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ಎಂದೆಂದಿಗೂ ವಾಸಿಸುವಿರಿ.
- 6 ಬೇರೆ ದೇವರುಗಳನ್ನು ಸೇವಿಸುವದಕ್ಕೂ ಆರಾಧಿಸುವದಕ್ಕೂ ಹಿಂಬಾಲಿಸಬೇಡಿರಿ; ನಿಮ್ಮ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸಬೇಡಿರಿ; ಆಗ ನಿಮಗೆ ಯಾವ ಕೇಡೂ ಮಾಡೆನು.
- 7 ಆದಾಗ್ಯೂ ನೀವು ನನಗೆ ಕಿವಿಗೊಡದೆ ನಿಮಗೆ ಕೇಡು ಬರುವ ಹಾಗೆ ನಿಮ್ಮ ಕೈ ಕೆಲಸಗಳಿಂದ ನನಗೆ ಕೋಪವನ್ನೆಬ್ಬಿಸಿದ್ದೀರಿ ಎಂದು ಕರ್ತನು ಅನ್ನುತ್ತಾನೆ.
- 8 ಆದದರಿಂದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--
- 9 ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ಕರ್ತನು ಹೇಳುವದೇನಂದರೆ--ನಾನು ಕಳು ಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ ನನ್ನ ಸೇವಕ ನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನೂ ತಕ್ಕೊಂಡು, ಈ ದೇಶಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ಕರೆಯಿಸಿ ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ವಿಸ್ಮ ಯಕ್ಕೂ ಸಿಳ್ಳಿಡುವಿಕೆಗೂ ಗುರಿಯಾಗಿಯೂ ನಿತ್ಯ ಹಾಳಾಗಿಯೂ ಮಾಡುತ್ತೇನೆ.
- 10 ಇದಲ್ಲದೆ ಉಲ್ಲಾಸದ ಶಬ್ದವನ್ನೂ ಸಂತೋಷದ ಸ್ವರವನ್ನೂ ಮದಲಿಂಗನ ಸ್ವರವನ್ನೂ ಮದಲಗಿತ್ತಿಯ ಸ್ವರವನ್ನೂ ಬೀಸುವ ಕಲ್ಲಿನ ಶಬ್ದವನ್ನೂ ದೀಪದ ಬೆಳಕನ್ನೂ ಅವರೊಳಗಿಂದ ತೆಗೆದುಹಾಕುತ್ತೇನೆ.
- 11 ಈ ದೇಶವೆಲ್ಲಾ ಹಾಳಾಗಿ ವಿಸ್ಮಯಕ್ಕೆ ಗುರಿಯಾಗುವದು; ಈ ಜನಾಂಗಗಳು ಬಾಬೆಲಿನ ಅರಸನನ್ನು ಎಪ್ಪತ್ತು ವರುಷ ಸೇವಿಸುವರು.
- 12 ಎಪ್ಪತ್ತು ವರುಷ ತುಂಬಿದ ಮೇಲೆ ನಾನು ಬಾಬೆಲಿನ ಅರಸನನ್ನೂ ಆ ಜನಾಂಗವನ್ನೂ ಕಸ್ದೀಯರ ದೇಶವನ್ನೂ ಅವರ ಅಕ್ರಮಕ್ಕಾಗಿ ವಿಚಾರಿಸಿ ದಂಡಿಸುವೆನು. ಅದನ್ನು ನಿತ್ಯವಾಗಿ ಹಾಳುಮಾಡುವೆನು.
- 13 ನಿಶ್ಚಯವಾಗಿ ಆ ದೇಶದ ಮೇಲೆ ನಾನು ಅದಕ್ಕೆ ವಿರೋಧವಾಗಿ ಹೇಳಿದ ನನ್ನ ಎಲ್ಲಾ ವಾಕ್ಯಗಳನ್ನೂ ಯೆರವಿಾಯನು ಜನಾಂಗ ಗಳಿಗೆ ವಿರೋಧವಾಗಿ ಪ್ರವಾದಿಸಿ ಈ ಪುಸ್ತಕದಲ್ಲಿ ಬರೆದಿರುವ ಎಲ್ಲವನ್ನೂ ಅವರ ಮೇಲೆ ಬರಮಾಡು ವೆನು.
- 14 ಅನೇಕ ಜನಾಂಗಗಳೂ ದೊಡ್ಡ ಅರಸರೂ ಅವರಿಂದ ಸೇವೆ ಮಾಡಿಸಿಕೊಳ್ಳುವರು. ಅವರ ಕ್ರಿಯೆ ಗಳ ಪ್ರಕಾರವೂ ಅವರ ಕೈ ಕೆಲಸದ ಪ್ರಕಾರವೂ ನಾನು ಅವರಿಗೆ ಪ್ರತಿಫಲ ಕೊಡುವೆನು ಎಂದು ಕರ್ತನು ಅನ್ನುತ್ತಾನೆ.
- 15 ಇಸ್ರಾಯೇಲಿನ ದೇವರಾದ ಕರ್ತನು ನನಗೆ ಹೀಗೆ ಹೇಳುತ್ತಾನೆ--ಈ ರೌದ್ರದ ದ್ರಾಕ್ಷಾರಸ ಪಾತ್ರೆ ಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತಕ್ಕೋ.
- 16 ಆಗ ಅವರು ಕುಡಿದು ನಾನು ಅವರ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತ ಕದಲಿ ಹುಚ್ಚರಾಗುವರು ಅಂದನು.
- 17 ಆಗ ನಾನು ಪಾತ್ರೆಯನ್ನು ಕರ್ತನ ಕೈಯಿಂದ ತಕ್ಕೊಂಡು ಕರ್ತನು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು.
- 18 ಯೆರೂಸ ಲೇಮಿಗೂ ಯೆಹೂದದ ಪಟ್ಟಣಗಳಿಗೂ ಅದರ ಅರಸುಗಳಿಗೂ ಪ್ರಭುಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳುಮಾಡಿ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ಶಾಪಕ್ಕೂ ಗುರಿಮಾಡುವ ಹಾಗೆ ಕುಡಿಸಿದೆನು.
- 19 ಐಗುಪ್ತದ ಅರಸನಾದ ಫರೋಹನಿಗೂ ಅವನ ಸೇವಕರಿಗೂ ಅವನ ಪ್ರಭುಗಳಿಗೂ
- 20 ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ
- 21 ಎದೋಮಿಗೂ ಮೋವಾ ಬಿಗೂ ಅಮ್ಮೋನನ ಮಕ್ಕಳಿಗೂ
- 22 ತೂರಿನ ಅರಸರೆ ಲ್ಲರಿಗೂ ಚೀದೋನಿನ ಅರಸರೆಲ್ಲರಿಗೂ ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ
- 23 ದೆದಾನಿಗೂ ತೇಮಾಗೂ ಬೂಜಿಗೂ ಕಟ್ಟಕಡೆಯ ಮೂಲೆಯ ವರೆಗೂ
- 24 ಅರಬಿಯದ ಅರಸರೆಲ್ಲರಿಗೂ ಅರಣ್ಯದಲ್ಲಿ ವಾಸಿಸುವ ಮಿಶ್ರವಾದ ಜನರ ಅರಸರೆಲ್ಲರಿಗೂ
- 25 ಜಿಮ್ರಿಯ ಅರಸರೆಲ್ಲರಿಗೂ ಏಲಾಮಿನ ಅರಸರೆ ಲ್ಲರಿಗೂ ಮೇದ್ಯದ ಅರಸರೆಲ್ಲರಿಗೂ
- 26 ಹತ್ತಿರದ ಲ್ಲಿಯೂ ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿ ರುವ ಉತ್ತರದಿಕ್ಕಿನ ಅರಸರೆಲ್ಲರಿಗೂ ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯ ಗಳಿಗೂ ಕುಡಿಸಿದೆನು; ಶೇಷಕಿನ ಅರಸನು ಅವರ ತರುವಾಯ ಕುಡಿಯುವನು.
- 27 ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರ್ರಿ.
- 28 ಅವರು ಪಾತ್ರೆಯನ್ನು ನಿನ್ನ ಕೈಯಿಂದ ತಕ್ಕೊಂಡು ಕುಡಿಯಲು ತಿರಸ್ಕರಿಸಿದರೆ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀವು ನಿಶ್ಚಯವಾಗಿ ಕುಡಿಯಬೇಕು.
- 29 ಇಗೋ, ನನ್ನ ಹೆಸರಿನಿಂದ ಕರೆಯಲ್ಪಟ್ಟಿರುವ ಪಟ್ಟಣದ ಮೇಲೆ ನಾನು ಕೇಡನ್ನು ತರಿಸುವದಕ್ಕೆ ಆರಂಭಮಾಡುತ್ತೇನೆ; ಹಾಗಾದರೆ ನೀವು ಸಂಪೂರ್ಣ ದಂಡನೆಗೆ ತಪ್ಪಿಸಿಕೊಂಡೀರೋ? ತಪ್ಪಿಸಿ ಕೊಳ್ಳುವದಿಲ್ಲ: ನಾನು ಭೂನಿವಾಸಿಗಳೆಲ್ಲರ ಮೇಲೆ ಕತ್ತಿಯನ್ನು ಕರೆಯುತ್ತೇನೆಂದು ಸೈನ್ಯಗಳ ಕರ್ತನು ಅನ್ನು ತ್ತಾನೆ.
- 30 ಆದದರಿಂದ ನೀನು ಅವರಿಗೆ ವಿರೋಧವಾಗಿ ಈ ವಾಕ್ಯಗಳನ್ನೆಲ್ಲಾ ಪ್ರವಾದಿಸಿ ಅವರಿಗೆ ಹೇಳತಕ್ಕದ್ದೇ ನಂದರೆ--ಕರ್ತನು ಉನ್ನತದಿಂದ ಘರ್ಜಿಸಿ ತನ್ನ ಪರಿಶುದ್ಧ ನಿವಾಸದೊಳಗಿಂದ ತನ್ನ ಶಬ್ದವನ್ನು ಕೊಡು ವನು ತನ್ನ ನಿವಾಸದ ಮೇಲೆ ಗಟ್ಟಿಯಾಗಿ ಘರ್ಜಿಸಿ ದ್ರಾಕ್ಷೇ ತುಳಿಯುವವರ ಹಾಗೆ ಆರ್ಭಟವನ್ನು ಭೂನಿವಾಸಿಗಳೆಲ್ಲರಿಗೆ ವಿರೋಧವಾಗಿ ಎತ್ತುವನು.
- 31 ಭೂಮಿಯ ಅಂತ್ಯಗಳ ವರೆಗೆ ಘೋಷವು ಬರು ವದು; ಕರ್ತನಿಗೆ ಜನಾಂಗಗಳ ಸಂಗಡ ವ್ಯಾಜ್ಯವದೆ; ಆತನು ಎಲ್ಲಾ ಮನುಷ್ಯರ ಸಂಗಡ ವಾದಿಸುವನು; ದುಷ್ಟರನ್ನು ಕತ್ತಿಗೆ ಒಪ್ಪಿಸುವೆನೆಂದು ಕರ್ತನು ಅನ್ನುತ್ತಾನೆ.
- 32 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಜನಾಂಗದಿಂದ ಜನಾಂಗಕ್ಕೆ ಕೇಡು ಹೊರಡುವದು; ಭೂಮಿಯ ಮೇರೆಗಳಿಂದ ಮಹಾಬಿರುಗಾಳಿ ಎಬ್ಬಿಸ ಲ್ಪಡುವದು.
- 33 ಆ ದಿವಸದಲ್ಲಿ ಭೂಮಿಯ ಈ ಮೇರೆಯಿಂದ ಭೂಮಿಯ ಆ ಮೇರೆಯ ವರೆಗೆ ಕರ್ತ ನಿಂದ ಕೊಂದುಹಾಕಲ್ಪಟ್ಟವರು ಇರುವರು; ಅವರಿ ಗೋಸ್ಕರ ಗೋಳಾಡುವದಿಲ್ಲ; ಅವರನ್ನು ಕೂಡಿಸುವ ದಿಲ್ಲ; ಅವರನ್ನು ಹೂಣಿಡುವದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು.
- 34 ಓ ಕುರುಬರೇ, ಗೋಳಿಟ್ಟುಕೂಗಿರಿ; ಮಂದೆಯಲ್ಲಿ ಪ್ರಮುಖರೇ, ಧೂಳಿನಲ್ಲಿ ಹೊರಳಾಡಿರಿ; ನಿಮ್ಮನ್ನು ಕೊಲ್ಲುವದಕ್ಕೂ ಚದರಿಸುವದಕ್ಕೂ ದಿನಗಳು ತುಂಬಿ ಅವೆ; ಆಗ ನೀವು ರಮ್ಯವಾದ ಪಾತ್ರೆಯ ಹಾಗೆ ಬೀಳುವಿರಿ.
- 35 ಆಗ ಕುರುಬರಿಗೆ ಓಡಿಹೋಗುವದಕ್ಕೂ ಮಂದೆಯ ಪ್ರಮುಖರಿಗೆ ತಪ್ಪಿಸಿಕೊಳ್ಳುವದಕ್ಕೂ ಮಾರ್ಗವಿಲ್ಲದೆ ಹೋಗುವದು.
- 36 ಕುರುಬರ ಕೂಗಿನ ಶಬ್ದವೂ ಮಂದೆಯ ಗೋಳಾಡುವಿಕೆಯೂ ಪ್ರಮುಖರಿಗೆ ಕೇಳ ಲ್ಪಡುವದು.
- 37 ಕರ್ತನು ಅವರ ಮೇವಿನ ಸ್ಥಳವನ್ನು ಹಾಳುಮಾಡಿದ್ದಾನೆ. ಸಮಾಧಾನವುಳ್ಳ ನಿವಾಸಗಳು ಕರ್ತನ ಕೋಪದ ಉರಿಯಿಂದ ಕೆಡವಲ್ಪಟ್ಟವು.
- 38 ಆತನು ಸಿಂಹದಂತೆ ತನ್ನ ಮರೆಯನ್ನು ತೊರೆದು ಬಿಟ್ಟಿದ್ದಾನೆ; ಉಪದ್ರಪಡಿಸುವವನ ಉರಿಯ ನಿಮಿ ತ್ತವೂ ಆತನ ಕೋಪದ ಉರಿಯ ನಿಮಿತ್ತವೂ ಅವರ ದೇಶವು ಹಾಳಾಯಿತು.
Jeremiah 25
- Details
- Parent Category: Old Testament
- Category: Jeremiah
ಯೆರೆಮಿಯ ಅಧ್ಯಾಯ 25