- 1 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ಆಳ್ವಿಕೆ ಯ ಪ್ರಾರಂಭದಲ್ಲಿ ಈ ವಾಕ್ಯವು ಕರ್ತನಿಂದ ಉಂಟಾ ಯಿತು.
- 2 ಕರ್ತನು ಹೀಗೆ ಹೇಳುತ್ತಾನೆ--ಕರ್ತನ ಆಲಯದ ಅಂಗಳದಲ್ಲಿ ನಿಂತುಕೊಂಡು ಕರ್ತನ ಆಲಯದಲ್ಲಿ ಆರಾಧಿಸುವದಕ್ಕೆ ಬರುವ ಯೆಹೂದದ ಪಟ್ಟಣದವರೆಲ್ಲರಿಗೆ ಹೇಳಬೇಕೆಂದು ನಾನು ನಿನಗೆ ಆಜ್ಞಾಪಿಸಿದ ವಾಕ್ಯಗಳನ್ನೆಲ್ಲಾ ಹೇಳು; ಒಂದು ಮಾತಾದರೂ ಕಡಿಮೆ ಮಾಡಬೇಡ;
- 3 ಒಂದು ವೇಳೆ ಅವರು ಕೇಳಿ ನಾನು ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರಿಗೆ ಮಾಡುವದಕ್ಕೆ ಆಲೋಚಿಸಿದ ಕೇಡಿನ ವಿಷಯ ಪಶ್ಚಾತ್ತಾಪಪಡುವ ಹಾಗೆ ತಮ್ಮ ತಮ್ಮ ಕೆಟ್ಟ ಮಾರ್ಗ ವನ್ನು ಬಿಟ್ಟು ತಿರುಗಿಕೊಂಡಾರು.
- 4 ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳು ತ್ತಾನೆ--ನೀವು ನನಗೆ ಕಿವಿಗೊಡದೆ ನಾನು ನಿಮ್ಮ ಮುಂದೆ ಇಟ್ಟ ನನ್ನ ನ್ಯಾಯಪ್ರಮಾಣದಂತೆ ನಡ ಕೊಳ್ಳದೆ
- 5 ನಾನು ಬೆಳಿಗ್ಗೆ ನಿಮ್ಮ ಬಳಿಗೆ ಕಳುಹಿಸಿದಂಥ ನೀವು ಕೇಳದಂಥ ನನ್ನ ಸೇವಕರಾದ ಪ್ರವಾದಿಗಳ ವಾಕ್ಯಗಳನ್ನು ಕೇಳದೆಹೋದರೆ
- 6 ಆಗ ನಾನು ಈ ಮನೆಯನ್ನು ಶಿಲೋವಿನ ಹಾಗೆ ಮಾಡುತ್ತೇನೆ; ಈ ಪಟ್ಟಣವನ್ನು ಭೂಮಿಯ ಎಲ್ಲಾ ಜನಾಂಗಗಳಿಗೆ ಶಾಪಕ್ಕೆ ಗುರಿಯಾಗುವಂತೆ ಮಾಡುತ್ತೇನೆ ಅಂದನು.
- 7 ಹೀಗೆ ಯೆರೆವಿಾಯನು ಈ ವಾಕ್ಯಗಳನ್ನು ಕರ್ತನ ಆಲಯದಲ್ಲಿ ಹೇಳುತ್ತಿರಲಾಗಿ ಯಾಜಕರೂ ಪ್ರವಾದಿಗಳೂ ಜನ ರೆಲ್ಲರೂ ಕೇಳುತ್ತಿದ್ದರು.
- 8 ಯೆರೆವಿಾಯನು ತಾನು ಜನರೆಲ್ಲರಿಗೆ ಹೇಳಬೇಕೆಂದು ಕರ್ತನು ಆಜ್ಞಾಪಿಸಿ ದ್ದನ್ನೆಲ್ಲಾ ಹೇಳಿ ತೀರಿಸಿದ ಮೇಲೆ ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಅವನನ್ನು ಹಿಡಿದು--ನೀನು ನಿಶ್ಚಯವಾಗಿ ಸಾಯಬೇಕು ಅಂದರು.
- 9 ಈ ಮನೆಯು ಶಿಲೋವಿನ ಹಾಗೆ ಆಗುವದೆಂದೂ ಈ ಪಟ್ಟಣವು ನಿವಾಸಿಗಳಿಲ್ಲದೆ ಹಾಳಾಗುವದೆಂದೂ ಕರ್ತನ ಹೆಸರಿನಲ್ಲಿ ಯಾಕೆ ನೀನು ಪ್ರವಾದಿಸಿದ್ದೀ ಅಂದರು. ಆಗ ಜನರೆಲ್ಲರೂ ಕರ್ತನ ಆಲಯದಲ್ಲಿ ಯೆರೆವಿಾಯನಿಗೆ ವಿರೋಧವಾಗಿ ಕೂಡಿಕೊಂಡರು.
- 10 ಯೆಹೂದದ ಪ್ರಧಾನರು ಈ ಸಂಗತಿಗಳನ್ನು ಕೇಳಿ ಅರಸನ ಮನೆಯಿಂದ ಕರ್ತನ ಆಲಯಕ್ಕೆ ಬಂದು ಕರ್ತನ ಆಲಯದ ಹೊಸ ಬಾಗಲಿನ ಪ್ರವೇಶದಲ್ಲಿ ಕೂತುಕೊಂಡರು.
- 11 ಆಗ ಯಾಜಕರೂ ಪ್ರವಾದಿ ಗಳೂ ಪ್ರಧಾನರಿಗೂ ಜನರೆಲ್ಲರಿಗೂ ಹೇಳಿದ್ದೇನಂದರೆ --ಈ ಮನುಷ್ಯನು ಮರಣಕ್ಕೆ ತಕ್ಕವನು. ಯಾಕಂದರೆ ನಿಮ್ಮ ಕಿವಿಗಳಿಂದಲೇ ನೀವು ಕೇಳಿದ ಪ್ರಕಾರ ಅವನು ಈ ಪಟ್ಟಣಕ್ಕೆ ವಿರೋಧವಾಗಿ ಪ್ರವಾದಿಸಿದ್ದಾನೆ ಎಂಬದೇ.
- 12 ಆಗ ಯೆರೆವಿಾಯನು ಪ್ರಧಾನರೆಲ್ಲ ರಿಗೂ ಜನರೆಲ್ಲರಿಗೂ ಹೇಳಿದ್ದೇನಂದರೆ--ನೀವು ಕೇಳಿದ ವಾಕ್ಯಗಳನ್ನೆಲ್ಲಾ ಈ ಮನೆಗೆ ವಿರೋಧವಾ ಗಿಯೂ ಈ ಪಟ್ಟಣಕ್ಕೆ ವಿರೋಧವಾಗಿಯೂ ಪ್ರವಾದಿ ಸುವದಕ್ಕೆ ಕರ್ತನು ನನ್ನನ್ನು ಕಳುಹಿಸಿದ್ದಾನೆ.
- 13 ಹೀಗಿ ರುವದರಿಂದ ನಿಮ್ಮ ಮಾರ್ಗಗಳನ್ನೂ ಕೃತ್ಯಗಳನೂ ತಿದ್ದಿಕೊಳ್ಳಿರಿ; ನಿಮ್ಮ ದೇವರಾದ ಕರ್ತನ ಸ್ವರಕ್ಕೆ ವಿಧೇಯರಾಗಿರಿ; ಆಗ ಕರ್ತನು ನಿಮಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯಕ್ಕಾಗಿ ಪಶ್ಚಾತ್ತಾಪಪಡು ವನು.
- 14 ನಾನಾದರೋ, ಇಗೋ, ನಿಮ್ಮ ಕೈಯಲ್ಲಿ ಇದ್ದೇನೆ; ನಿಮಗೆ ಒಳ್ಳೇದಾಗಿಯೂ ನ್ಯಾಯವಾಗಿಯೂ ತೋರುವ ಪ್ರಕಾರ ನನಗೆ ಮಾಡಿರಿ.
- 15 ಆದರೂ ನೀವು ನನ್ನನ್ನು ಕೊಂದುಹಾಕಿದರೆ ನಿಮ್ಮ ಮೇಲೆಯೂ ಈ ಪಟ್ಟಣದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಅಪರಾಧವಿಲ್ಲದ ರಕ್ತವನ್ನು ಬರಮಾಡು ತ್ತೀರೆಂದು ನಿಶ್ಚಯವಾಗಿ ತಿಳುಕೊಳ್ಳಿರಿ, ಈ ವಾಕ್ಯಗಳ ನ್ನೆಲ್ಲಾ ನಿಮ್ಮ ಕಿವಿಗಳಲ್ಲಿ ಹೇಳುವ ಹಾಗೆ ಸತ್ಯವಾಗಿ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಅಂದನು.
- 16 ಆಗ ಪ್ರಧಾನರೂ ಜನರೆಲ್ಲರೂ ಯಾಜಕರಿಗೂ ಪ್ರವಾದಿಗಳಿಗೂ--ಈ ಮನುಷ್ಯನು ಮರಣದ ನಿರ್ಣ ಯಕ್ಕೆ ತಕ್ಕವನಲ್ಲ; ನಮ್ಮ ದೇವರಾದ ಕರ್ತನ ಹೆಸರಿ ನಲ್ಲಿ ನಮ್ಮ ಸಂಗಡ ಮಾತನಾಡಿದ್ದಾನೆ ಅಂದರು.
- 17 ದೇಶದ ಹಿರಿಯರಲ್ಲಿ ಕೆಲವರು ಎದ್ದು ಜನರ ಕೂಟ ಕ್ಕೆಲ್ಲಾ ಹೇಳಿದ್ದೇನಂದರೆ--
- 18 ಮೋರೇಷೆತಿನವನಾದ ವಿಾಕಾಯನು ಯೆಹೂದದ ಅರಸನಾದ ಹಿಜ್ಕೀಯನ ದಿನಗಳಲ್ಲಿ ಪ್ರವಾದಿಸಿ ಯೆಹೂದದ ಜನರಿಗೆಲ್ಲಾ ಹೇಳಿದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಚೀಯೋನು ಹೊಲದ ಹಾಗೆ ಉಳಲ್ಪಡು ವದು; ಯೆರೂಸಲೇಮು ದಿಬ್ಬಗಳಾಗುವದು; ಮಂದಿ ರದ ಬೆಟ್ಟವು ಅಡವಿಯ ಉನ್ನತ ಸ್ಥಳವಾಗುವದು.
- 19 ಅವನನ್ನು ಯೆಹೂದ ಅರಸನಾದ ಹಿಜ್ಕೀಯನೂ ಸಮಸ್ತ ಯೆಹೂದವೂ ಕೊಂದುಹಾಕಿದರೋ? ಅವನು ಕರ್ತನಿಗೆ ಭಯಪಟ್ಟು ಕರ್ತನ ಸಮ್ಮುಖದಲ್ಲಿ ಮೊರೆ ಯಿಟ್ಟನಲ್ಲವೋ? ಆ ಮೇಲೆ ಕರ್ತನು ಅವರಿಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪಪಡಲಿಲ್ಲವೋ? ಆದರೆ ನಾವು ದೊಡ್ಡ ಕೇಡನ್ನು ನಮ್ಮ ಪ್ರಾಣಗಳ ಮೇಲೆ ತಂದುಕೊಳ್ಳಬಹುದು.
- 20 ಇದಲ್ಲದೆ ಕಿರ್ಯತ್‌ಯಾರೀಮಿನವನಾದ ಶೆಮಾ ಯನ ಮಗನಾದ ಊರೀಯನೆಂಬವನು ಸಹ ಕರ್ತನ ಹೆಸರಿನಲ್ಲಿ ಪ್ರವಾದಿಸುತ್ತಿರಲಾಗಿ ಯೆರೆವಿಾಯನ ಎಲ್ಲಾ ಮಾತುಗಳ ಪ್ರಕಾರ ಈ ಪಟ್ಟಣಕ್ಕೂ ಈ ದೇಶಕ್ಕೂ ವಿರೋಧವಾಗಿ ಪ್ರವಾದಿಸಿದನು.
- 21 ಆಗ ಅರಸನಾದ ಯೆಹೋಯಾಕೀಮನೂ ಅವನ ಪರಾಕ್ರಮಶಾಲಿಗಳೆ ಲ್ಲರೂ ಪ್ರಧಾನರೆಲ್ಲರೂ ಅವನ ಮಾತುಗಳನ್ನು ಕೇಳಿ ದಾಗ ಅರಸನು ಅವನನ್ನು ಕೊಂದುಹಾಕುವದಕ್ಕೆ ಹುಡುಕಿದನು; ಅದರೆ ಊರೀಯನು ಅದನ್ನು ಕೇಳಿ ಭಯಪಟ್ಟು ಓಡಿಹೋಗಿ ಐಗುಪ್ತಕ್ಕೆ ಸೇರಿಕೊಂಡನು.
- 22 ಆದರೆ ಅರಸನಾದ ಯೆಹೋಯಾಕೀಮನು ಐಗು ಪ್ತಕ್ಕೆ ಜನರನ್ನು, ಅಂದರೆ ಅಕ್ಬೋರನ ಮಗನಾದ ಎಲ್ನಾಥಾನನನ್ನೂ ಅವನ ಸಂಗಡ ಇನ್ನೂ ಕೆಲವರನ್ನೂ ಐಗುಪ್ತಕ್ಕೆ ಕಳುಹಿಸಿದನು.
- 23 ಅವರು ಊರೀಯನನ್ನು ಐಗುಪ್ತದಿಂದ ತಕ್ಕೊಂಡು ಅರಸನಾದ ಯೆಹೋಯಾ ಕೀಮನ ಬಳಿಗೆ ತಂದರು; ಇವನು ಅವನನ್ನು ಕತ್ತಿ ಯಿಂದ ಹೊಡೆದು ಅವನ ಹೆಣವನ್ನು ಸಾಧಾರಣವಾದ ಜನರ ಸಮಾಧಿಗಳಲ್ಲಿ ಹಾಕಿಸಿದನು.
- 24 ಆದಾಗ್ಯೂ ಅವರು ಯೆರೆವಿಾಯನನ್ನು ಜನರ ಕೈಗೆ ಒಪ್ಪಿಸಿ ಕೊಂದು ಹಾಕಿಸದ ಹಾಗೆ ಶಾಫಾನನ ಮಗನಾದ ಅಹೀಕಾಮನ ಸಹಾಯವು ಅವನಿಗೆ ಇತ್ತು.
Jeremiah 26
- Details
- Parent Category: Old Testament
- Category: Jeremiah
ಯೆರೆಮಿಯ ಅಧ್ಯಾಯ 26