- 1 ಯೋಬನು ಇನ್ನೂ ತನ್ನ ಸಾಮತಿ ಎತ್ತಿ ಹೇಳಿದ್ದೇನಂದರೆ--
- 2 ನನ್ನ ನ್ಯಾಯವನ್ನು ತೊಲಗಿಸಿದ ದೇವರ ಜೀವದೊಂದಿಗೆ ನನ್ನ ಜೀವವನ್ನು ಕಹಿಮಾಡಿದ ಸರ್ವಶಕ್ತನ ಜೀವದೊಂದಿಗೆ
- 3 ನನ್ನ ಶ್ವಾಸವು ನನ್ನಲ್ಲಿಯೂ ದೇವರ ಆತ್ಮವು ನನ್ನ ಮೂಗಿ ನಲ್ಲಿಯೂ ಇರುವ ಸರ್ವಕಾಲದ ವರೆಗೂ
- 4 ನನ್ನ ತುಟಿಗಳು ದುಷ್ಟತ್ವವನ್ನು ಮಾತನಾಡವು; ನನ್ನ ನಾಲಿಗೆ ಮೋಸ ನುಡಿಯದು.
- 5 ನಿಮ್ಮನ್ನು ನೀತಿವಂತರೆನ್ನುವದು ನನಗೆ ದೂರವಿರಲಿ; ನಾನು ಸತ್ತು ಹೋಗುವ ವರೆಗೂ ನನ್ನ ಯಥಾರ್ಥತ್ವವನ್ನು ನನ್ನಿಂದ ತೊಲ ಗಿಸುವದಿಲ್ಲ.
- 6 ನನ್ನ ನೀತಿಯನ್ನು ದೃಢವಾಗಿ ಹಿಡು ಕೊಂಡಿದ್ದೇನೆ. ಅದನ್ನು ನಾನು ಹೋಗಗೊಡಿಸು ವದಿಲ್ಲ; ನಾನು ಇರುವ ವರೆಗೂ ನನ್ನ ಹೃದಯವು ನನ್ನನ್ನು ನಿಂದಿಸುವದಿಲ್ಲ.
- 7 ನನ್ನ ಶತ್ರು ದುಷ್ಟನ ಹಾಗಿರಲಿ; ನನಗೆ ವಿರೋಧ ವಾಗಿ ಏಳುವವನು ಅನ್ಯಾಯವಂತನ ಹಾಗಿರಲಿ.
- 8 ದೇವರು ಕಪಟಿಯ ಪ್ರಾಣವನ್ನು ತಕ್ಕೊಂಡರೆ ಅವನು ಲಾಭ ಮಾಡುವದರಲ್ಲಿ ನಿರೀಕ್ಷೆ ಏನು?
- 9 ಅವನ ಮೇಲೆ ಇಕ್ಕಟ್ಟು ಬಂದರೆ ಅವನ ಮೊರೆಯನ್ನು ದೇವರು ಕೇಳುವನೋ?
- 10 ಇಲ್ಲವೆ ಸರ್ವಶಕ್ತನಲ್ಲಿ ಆನಂದವಾಗಿರುವನೋ? ಸರ್ವಕಾಲದಲ್ಲಿ ದೇವರನ್ನು ಕರೆಯುವನೋ?
- 11 ದೇವರ ಸಹಾಯದಿಂದ ನಿಮಗೆ ಬೋಧಿಸು ವೆನು; ಸರ್ವಶಕ್ತನಲ್ಲಿ ಇರುವವುಗಳನ್ನು ಮರೆ ಮಾಡೆನು.
- 12 ಇಗೋ, ನೀವೆಲ್ಲರೂ ದೃಷ್ಟಿಸಿದ್ದೀರಿ; ಯಾಕೆ ಈ ಪ್ರಕಾರ ಕೇವಲ ವ್ಯರ್ಥವಾಗಿ ಹೋಗಿ ದ್ದೀರಿ?
- 13 ಇದು ದುಷ್ಟ ಮನುಷ್ಯನಿಗೆ ದೇವರಿಂದ ಬಂದ ಪಾಲಾಗಿದೆ; ಬಲಾತ್ಕಾರಿಗಳು ಸರ್ವ ಶಕ್ತನಿಂದ ಹೊಂದುವ ಬಾಧ್ಯತೆ ಇದೇ.
- 14 ಅವನ ಮಕ್ಕಳು ಹೆಚ್ಚಿದರೆ ಖಡ್ಗಕ್ಕೆ ಗುರಿಯಾಗುವರು; ಅವನ ಸಂತ ತಿಯವರು ರೊಟ್ಟಿಯಿಂದ ತೃಪ್ತಿಹೊಂದರು.
- 15 ಅವ ನಿಗೆ ಉಳಿದವರು ಮರಣದಲ್ಲಿ ಹೂಣಲ್ಪಡುವರು; ಅವನ ವಿಧವೆಗಳು ಅಳದೆ ಇರುವರು.
- 16 ಅವನು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟು ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿ ಕೊಂಡಾಗ್ಯೂ
- 17 ಸಿದ್ಧ ಮಾಡಿಕೊಳ್ಳುತ್ತಾನಷ್ಟೇ; ನೀತಿವಂತನು ಉಟ್ಟುಕೊಳ್ಳು ತ್ತಾನೆ; ಬೆಳ್ಳಿಯನ್ನು ನಿರಪರಾಧಿಯು ಪಾಲಿಡುತ್ತಾನೆ.
- 18 ಹುಳದ ಹಾಗೆ ಮನೆಯನ್ನೂ ಕಾವಲುಗಾರನು ಮಾಡಿದ್ದರ ಹಾಗೆ ತನ್ನ ಗುಡಿಸಲನ್ನೂ ಕಟ್ಟಿದ್ದಾನೆ.
- 19 ಐಶ್ವರ್ಯವಂತನು ಮಲಗುತ್ತಾನೆ; ಕೂಡಿಸಲ್ಪಡು ವದಿಲ್ಲ; ಕಣ್ಣು ತೆರೆದರೆ ಅವನು ಇಲ್ಲ.
- 20 ದಿಗಿಲು ಗಳು ನೀರಿನಂತೆ ಅವನನ್ನು ಹಿಡಿಯುತ್ತವೆ. ರಾತ್ರಿ ಯಲ್ಲಿ ಬಿರುಗಾಳಿ ಅವನನ್ನು ಸುಲುಕೊಳ್ಳುತ್ತದೆ.
- 21 ಮೂಡಣಗಾಳಿ ಅವನನ್ನು ಎತ್ತಿಕೊಂಡು ಹೋಗು ತ್ತದೆ; ಅವನು ಹೋಗಿಬಿಡುತ್ತಾನೆ; ಬಿರುಗಾಳಿ ಅವನನ್ನು ಅವನ ಸ್ಥಳದಿಂದ ಹಾರಿಸಿ ಬಿಡುತ್ತದೆ.
- 22 ಆತನು ಕರುಣೆ ಇಲ್ಲದೆ ಅವನ ಮೇಲೆ ಹಾಕು ತ್ತಾನೆ. ಆತನ ಕೈಯಲ್ಲಿಂದ ಅವನು ಓಡಿಯೇ ಓಡುತ್ತಾನೆ.
- 23 ಜನರು ಅವನ ಕಡೆಗೆ ಚಪ್ಪಾಳೆ ತಟ್ಟುತ್ತಾರೆ. ಅವನ ಸ್ಥಳದೊಳಗಿಂದ ಅವನನ್ನು ಛೇ ಎಂದು ಹೊರಡಿಸುತ್ತಾರೆ.
Job 27
- Details
- Parent Category: Old Testament
- Category: Job
ಯೋಬನು ಅಧ್ಯಾಯ 27